Sunday 27 June 2021

POEM SONG: ಕೊರೋನಾ ಕಾಳಗ

ಕಾಣದ ಕರೋನಾದ ಮೇಲೊಂದು ಕವಿತೆ. ದೊಡ್ಡಅಬ್ಬಿಗೆರೆ. ಚನ್ನಗಿರಿ (ತಾ) ನಿವಾಸಿ ರಾಘವೇಂದ್ರ ಪಿ ವಿ ಇವರಿಂದ. ಇಡೀ ವಿಶ್ವವೇ, ಕರೋನಾದ ಕರಿನೆರಳಲ್ಲಿ ನೊಂದು ಬಳಲಿ, ಬೆಂಡಾಗುತ್ತಿದ್ದು, ಇದರ ಅಟ್ಟಹಾಸ ಯಾವಾಗ ಮುಗಿಯುವುದೋ, ಎಂದು ಜನತೆ, ಜಾತಕ ಪಕ್ಷಿಗಳಂತೆ ಕಾಯುವುದು ಬಿಟ್ಟರೆ. ಅನ್ಯ ಮಾರ್ಗವೇ ತಿಳಿಯದಂತಾಗಿದೆ. ಕವಿತೆಯ ಶೀರ್ಷಿಕೆ, ''ಕೊರೋನಾ ಕಾಳಗ"

******************************
ಕೊರೋನಾ ಕಾಳಗ

ಕಣ್ಣಿಗೆ ಕಾಣದ ಜೀವಿಯು ನೀನು, ಕಣ್ಣೀರಾಗಿ ಬಂದೆಯಲ್ಲ?

ದಿನಗೂಲಿ ಕಾರ್ಮಿಕರ ಗೋಳು, ಕೇಳೋರಿಲ್ಲ ನಿನ್ನ ಈ ಆಟದಲಿ!

ರೈತರು ಕಣ್ಣು ಕಣ್ಣು ಬಿಡುವಂತಾಗಿದೆ, ನಿನ್ನ ದಿನಚರಿಯಲ್ಲಿ.

ಆಟವಿಲ್ಲ, ಪಾಠವಿಲ್ಲ, ನಿನ್ನದೇ ನಾಗಾಲೋಟ ಮಾಧ್ಯಮಗಳಲಿ!

 

ತಟ್ಟೆ, ಚಪ್ಪಾಳೆಯ ಮೆರವಣಿಗೆ ಜರುಗಿದೆ.

ದೀಪಾವಳಿ ದೀಪೋತ್ಸವದ ಬೆಳಕು ಬೆಳಗದೆ?

ಲಾಕ್ ಡೌನ್, ಕ್ವಾರಂಟೈನ್, ಸರಪಣಿ ಸತಾಯಿಸಿದೆ!

ಮುಸುಕು ಮುಚ್ಚಿಕೊಂಡು, ಸಾಕು ಮಾಡುವೆಯ ನೀ ಇನ್ನೂ..ಉಸಿರು ಕಟ್ಟುತ್ತಿದೆ!.

 

ಯಾರನ್ನೂ ಕಾಣದೆ,ಸಾಮಾಜಿಕ ಅಂತರ ಕಾಯ್ದುಕೊಂಡು ಸಾಕಾಗಿದೆ.

ಮನೆಯೇ ಮಂತ್ರಾಲಯವೆಂಬ ಸೆರೆವಾಸ ಬಂಧನ ಬೇಸತ್ತಿದೆ.

ಕೆಮ್ಮು, ಕ್ಯಾಕರಿಸಿದರು, ನೆಗಡಿ, ಸೀನಿದರೂ ಭಯ! ನಿನ್ನದೇ?

ಮಹಾಮಾರಿ ಮಾರಣಹೋಮಕ್ಕೆ ಧರಣಿಯಾಗಿಸಿದೆ, ಸ್ಮಶಾನ!!

 

ಕೋವಿಡ್-19 ಅನ್ನೋ, ಕೋವಿ ಹಿಡಿದು ಕೊಲ್ಲಲು ಬಂದ ಕೊಲೆಗಾರ ನೀ

ಹೊರಗಡೆ ಬಂದರೆ ಪೋಲಿಸ್ ಮಾಮನ ಲಾಠಿ ಪ್ರಸಾದದ ಪಾಠವು ನೀ

ದೇಶದ ಆರ್ಥಿಕತೆಯೇ ಸ್ತಬ್ಧವಾದರೂ ತಲ್ಲಣಿಸುತ್ತಿರುವೆಯಲ್ಲ ನೀ

ಕಾಡುತ್ತಿದೆ ಕೊರೋನ ಇಳೆಯನು.

 

 ನಿನ್ನಯ, ಭಯದ ನಡುವೆ ಸಾಗಿದೆ ಈ ಜೀವನ.

ನಿನ್ನ ಮುನಿಸು, ಕೋಪಕೆ ಮುಗ್ಧ ಮಾನವರ ಬಲಿ! ತಲ್ಲಣ!

ಕಾಡುತ್ತಿದೆ ಕೋರೋನ ಇಳೆಯನು.


ರಾಘವೇಂದ್ರ ಪಿ ವಿ.

ದೊಡ್ಡಅಬ್ಬಿಗೆರೆ. ಚನ್ನಗಿರಿ (ತಾ)                                

ದಾವಣಗೆರೆ (ಜಿಲ್ಲೆ)

  

No comments:

Post a Comment