Monday 28 June 2021

ಮಕ್ಕಳಲ್ಲಿನ ಕಿರಿಕಿರಿ ತೊಡೆದುಹಾಕಲು ಬೈಬೇಡಿ, ಹೊಡೆಯಬೇಡಿ, ಈ ಸಿಂಪಲ್ ವಿಧಾನಗಳನ್ನು ಅನುಸರಿಸಿ.

ಮಗುವಿನ ಕೆಟ್ಟ ಅಭ್ಯಾಸಗಳನ್ನು ಪೋಷಕರು ನಿರ್ಲಕ್ಷಿಸಬಾರದು. ಅದಕ್ಕೆ ಕಾರಣಗಳನ್ನು ತಿಳಿಯಲು ಪೋಷಕರು ಪ್ರಯತ್ನಿಸಬೇಕು ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಆಟವಾಡಲು ಸಾಧ್ಯವಾಗದ ಕಾರಣ ಅಥವಾ ಶಾಲೆಯಲ್ಲಿ ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳಲು ಆಗದ ಕಾರಣ  ಅಥವಾ ಸ್ನೇಹಿತರಲ್ಲಿ ಜಗಳ ಮತ್ತು ಅಸಮಾಧಾನದಿಂದಾಗಿ ಮಗು ಕಿರಿಕಿರಿಯಿಂದ ವರ್ತಿಸುವ ಸಾಧ್ಯತೆಯಿದೆ. 

ಮಕ್ಕಳಲ್ಲಿನ ಕಿರಿಕಿರಿ  ಮತ್ತು ಅವರ ಕೋಪ ಸ್ವಭಾವವನ್ನು ನಿರ್ಲಕ್ಷಿಸಬಾರದು. ಮಕ್ಕಳ ಈ ಅಭ್ಯಾಸವು ಸಮಯದೊಂದಿಗೆ ತಾನಾಗಿಯೇ ಹೋಗುತ್ತದೆ ಎಂದು ಅನೇಕ ಪೋಷಕರು ಭಾವಿಸುತ್ತಾರೆ, ಆದರೆ ಹಲವು ಸಮೀಕ್ಷೆಗಳ ಪ್ರಕಾರ, ಈ ಅಭ್ಯಾಸವು ನಂತರದ ದಿನಗಳಲ್ಲಿ ಮಕ್ಕಳಲ್ಲಿ ಬೆಳವಣಿಗೆಯಾಗುವ ಸಾಧ್ಯತೆ ಇರುತ್ತದೆ. ಇನ್ನೊಂದೆಡೆ ಅವರ ಈ ಅಭ್ಯಾಸ ಕೆಲವೊಮ್ಮೆ ಅವರ ವ್ಯಕ್ತಿತ್ವದ ಒಂದು ಭಾಗವಾಗುತ್ತದೆ. ಇಂತಹ ಪರಿಸ್ಥಿತಿ, ನೀವು ಸಣ್ಣ ಮಕ್ಕಳ ಪೋಷಕರಾಗಿದ್ದರೆ, ನೀವು ಕೆಲವು ವಿಷಯಗಳಿಗೆ ಗಮನ ಕೊಡಬೇಕು.

ಮಗುವಿನ ಕೆಟ್ಟ ಅಭ್ಯಾಸಗಳನ್ನು ಪೋಷಕರು ನಿರ್ಲಕ್ಷಿಸಬಾರದು. ಅದಕ್ಕೆ ಕಾರಣಗಳನ್ನು ತಿಳಿಯಲು ಪೋಷಕರು ಪ್ರಯತ್ನಿಸಬೇಕು ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಆಟವಾಡಲು ಸಾಧ್ಯವಾಗದ ಕಾರಣ ಅಥವಾ ಶಾಲೆಯಲ್ಲಿ ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳಲು ಆಗದ ಕಾರಣ  ಅಥವಾ ಸ್ನೇಹಿತರಲ್ಲಿ ಜಗಳ ಮತ್ತು ಅಸಮಾಧಾನದಿಂದಾಗಿ ಮಗು ಕಿರಿಕಿರಿಯಿಂದ ವರ್ತಿಸುವ ಸಾಧ್ಯತೆಯಿದೆ. ಹೆತ್ತವರ ಗಮನ ಸೆಳೆಯಲು, ಮಗು ಸಣ್ಣ  ಸಣ್ಣ ವಿಷಯಗಳ ಬಗ್ಗೆಯೂ ಕೋಪಿಸಿಕೊಳ್ಳಲು ಆರಂಭಿಸುತ್ತದೆ.

ಮಕ್ಕಳೊಂದಿಗೆ  ನಮ್ಮ ಒಡನಾಟ ಹೀಗಿರಲಿ: ಮಕ್ಕಳನ್ನು ಆಟೋಟದಲ್ಲಿ ಹಾಗೂ ಬಾಹ್ಯ ಚಟುವಟಿಕೆಗಳಲ್ಲಿ ತೊಡಗಿಸುವುದು ತುಂಬಾ ಆವಶ್ಯಕವಾಗಿದೆ. ಇದಕ್ಕಾಗಿ ನೀವು ಮಕ್ಕಳನ್ನು ನೃತ್ಯ ಹಾಗೂ ಕಲಾ ವರ್ಗಕ್ಕೆ ಕಳುಹಿಸಬಹುದು. ಕಾಲಕಾಲಕ್ಕೆ ಹೊರಗಿನ ಆಟಗಳನ್ನು ಆಡಲು ಅವರನ್ನು ಕರೆದೊಯ್ಯುವುದು ಸಹ ಒಳ್ಳೆಯ ಅಭ್ಯಾಸ. ಇದು ಮಗುವಿನಲ್ಲಿನ ಹೆಚ್ಚುವರಿ ದೈಹಿಕ ಶಕ್ತಿಯನ್ನು ಖರ್ಚು ಮಾಡುತ್ತದೆ ಮತ್ತು ಸ್ವಯಂ ಅಭಿವ್ಯಕ್ತಿ ಹಾಗೂ ಸಾಮಾಜಿಕ ನಡುವಳಿಕೆಯ ಬಗ್ಗೆ ತಿಳುವಳಿಕೆಯನ್ನು ಸಹ ಅವರಲ್ಲಿ ಬೆಳೆಸುತ್ತದೆ.

 ಮಗುವಿನ ಪ್ರತಿಯೊಂದು ಚಲನೆಯ ಮೇಲೆ ನಿಗಾ ಇಡುವುದು ತುಂಬಾ ಮುಖ್ಯ. ಮಗುವಿನ ಶಾಲಾ ಶಿಕ್ಷಕರನ್ನು ನಿಯಮಿತವಾಗಿ ಭೇಟಿಯಾಗುತ್ತಲೇ ಇರಿ. ಇದು ಮಗುವಿನ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಕಾರಣವನ್ನು ತಿಳಿಸಿ ಮಗುವನ್ನು ಮುಂದಿನ ಸೀಟಿನಲ್ಲಿ ಇರಿಸಲು ನೀವು ಶಿಕ್ಷಕರಿಗೆ ವಿನಂತಿಸಬಹುದು. ಕಪ್ಪು ಹಲಗೆಯಲ್ಲಿ ಏನನ್ನಾದರೂ ಬರೆಯುವ ಅಥವಾ ಇತರ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುವ ಕೆಲಸದಲ್ಲಿ ಮಗುವನ್ನು ನಿರತರಾಗಿರಿಸಿದರೆ, ಅವರ ಹೈಪರ್ಆಯ್ಕ್ಟಿವಿಟಿಯನ್ನು ನಿಯಂತ್ರಿಸಬಹುದು.

ಮಗು ಹೈಪರ್ಆಕ್ಟಿವ್ ಆಗಿದ್ದರೆ, ಮಗುವಿನ ಮನಸ್ಸಿನ ಸ್ಥಿತಿಯನ್ನು ವಿಶ್ಲೇಷಿಸಲು ಮನೋವೈದ್ಯರನ್ನು ಸಂಪರ್ಕಿಸಿ. ಹೈಪರ್ಆಕ್ಟಿವ್ ಮಕ್ಕಳ ಲಕ್ಷಣಗಳು ಎಡಿಎಚ್‌ಡಿ (ಅಟೆಷ್ಸನ್ ಡೆಫಿಸಿಟ್  ಹೈಪರ್ಆಯ್ಕ್ಟಿವಿಟಿ ಡಿಸಾರ್ಡರ್) ಗೆ ಹೋಲುತ್ತವೆ. ಎಡಿಎಚ್‌ಡಿ ಯ ಸಮಸ್ಯೆ 3-7% ಶಾಲೆಗೆ ಹೋಗುವ ಮಕ್ಕಳಲ್ಲಿ ಕಂಡುಬರುತ್ತದೆ. ಇದು ಮಗುವಿನ ಸ್ವಾಭಿಮಾನವನ್ನು ಮಾತ್ರವಲ್ಲ, ಸುತ್ತಮುತ್ತಲಿನ ಜನರೊಂದಿಗಿನ ಅವರ ಸಂಬಂಧದ ಮೇಲೂ ಸಹ ಪರಿಣಾಮ ಬೀರುತ್ತದೆ. ಎಡಿಎಚ್‌ಡಿ ಮೆದುಳಿನ ಜೈವಿಕ ಕಾಯಿಲೆಯಾಗಿದ್ದು, ಇದನ್ನು ಔಷಧಿಗಳನ್ನು ನೀಡುವ ಮೂಲಕ ಸರಿಪಡಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಮಗುವಿಗೆ ವಿಶೇಷವಾಗಿ ಶಿಕ್ಷಣ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ, ಇದರಿಂದಾಗಿ ಮಗುವು ತನ್ನ ಕೋಪ ಮತ್ತು ಹೈಪರ್ಆಯ್ಕ್ಟಿವಿಟಿಯನ್ನು ನಿಯಂತ್ರಿಸಲು ಕಲಿಯಬಹುದು.

No comments:

Post a Comment