Monday 2 August 2021

ರಾಜ್ಯ ಮಟ್ಟದ ಆನ್ ಲೈನ್ ಹಿಂದಿ ಪದ್ಯಗಳ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾ ವಿಕಾಸ ವಿದ್ಯಾರ್ಥಿಗಳು.

 ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ವಿಕಾಸ ಸಂಸ್ಥೆಯ ವಿದ್ಯಾರ್ಥಿಗಳು, 2021 ನೇ ಸಾಲಿನ ರಾಜ್ಯಮಟ್ಟದ ಎಸ್ ಎಸ್ ಎಲ್ ಸಿ ಹಿಂದಿ ಠ್ಯಾದಾರಿತ ಪದ್ಯ ಆನ್ ಲೈನ್ ಗಾಯನ ಸ್ಪರ್ಧೆ(ವಾಟ್ಸಾಪ್ ಮುಖಾಂತರ ಸ್ಪರ್ಧೆ) ಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ.


10ನೇ ತರಗತಿಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ  2020-2021 ನೇ ಸಾಲಿನ ಎಸ್ ಎಸ್ ಎಲ್ ಸಿ ರಾಜ್ಯಮಟ್ಟದ ಹಿಂದಿ ಪದ್ಯದ ಗಾಯನ ಸ್ಪರ್ಧೆಯನ್ನು (ವಾಟ್ಸಾಪ್ ಮುಖಾಂತರವಾಗಿ ವಿಡಿಯೋಗಳನ್ನು ಕಳುಹಿಸುವ ಸ್ಪರ್ಧೆಯನ್ನು) ಏರ್ಪಡಿಸಲಾಗಿತ್ತು.  ಸ್ಪರ್ಧೆಯಲ್ಲಿ  ವಿದ್ಯಾವಿಕಾಸ ವಿದ್ಯಾಸಂಸ್ಥೆಯ 10ನೇ ತರಗತಿಯ  ವಿದ್ಯಾರ್ಥಿನಿಯರಾದ ಪ್ರೇರಣಾ. ಜಿ.ಎಸ್ , ಚಂದನಾ .ಕೆ.ಬಿ., ಚಂದನ . ಎ . ಆತ್ರೇಯಸ.,  ಶಹವಾನ ಕುಲ್ಸುಮ್ ನೂರಾಯಿನ್  ಹಾಗೂ ಮಾನ್ಯ . ಹೆಚ್. ಬಿ. ಭಾಗವಹಿಸಿ ಬಹುಮಾನ ಪಡೆಯುವುದರ ಮೂಲಕ  ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

 ಸ್ಪರ್ಧೆಯಲ್ಲಿ  ಪ್ರೇರಣಾ. ಜಿ.ಎಸ್. ಇವರು ದ್ವಿತೀಯ ಬಹುಮಾನವನ್ನು ಹಾಗೂ  ಉಳಿದ ವಿದ್ಯಾರ್ಥಿನಿಯರು ಸಮಾಧಾನಕರ ಬಹುಮಾನ  ಪಡೆದುಕೊಂಡಿರುತ್ತಾರೆ.

  ಮಕ್ಕಳು  ಸ್ಪರ್ಧೆಯಲ್ಲಿ  ಭಾಗವಹಿಸುವಲ್ಲಿ ಚಮನುದ್ದೀನ್ ಮಾರ್ಗದರ್ಶಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿರುತ್ತಾರೆ.

ಸಂಸ್ಥೆಯ ಕಾರ್ಯದರ್ಶಿ, ಬಿ ವಿಜಯ್ ಕುಮಾರ್, ಕ್ಯಾಂಪಸ್ ಇಂಚಾರ್ಜ್ ಪೃಥ್ವಿಶ್ ಎಸ್. ಎಮ್, ಮುಖ್ಯೋಪಾದ್ಯಾಯರಾದ ಸಂಪತ್ ಕುಮಾರ್ ಸಿ.ಡಿ. ಹೆಡ್ ಕೋಆರ್ಡಿನೇಟರ್ ಬಸವರಾಜಯ್ಯ ಪಿ ಹಾಗೂ ಶಿಕ್ಷಕ ವೃಂದದವರು ಮಕ್ಕಳಿಗೆ  ಅಭಿನಂದಿಸಿರುತ್ತಾರೆ.


No comments:

Post a Comment