Thursday, 8 July 2021

NMMS ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಬೃಹನ್ಮಠ ಪ್ರೌಢಶಾಲೆಗೆ ಕೀರ್ತಿತಂದ ಸಂಜನಾ.

 

ಚಿತ್ರದುರ್ಗ: ನಗರದ ಪಶ್ಚಿಮ ಕ್ಲಸ್ಟರ್ ನ ಬೃಹನ್ಮಠ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಂಜನಾ NMMS ಪರೀಕ್ಷೆಯಲ್ಲಿ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಆಯ್ಕೆ ಆದ ಏಕಮಾತ್ರ ವಿದ್ಯಾರ್ಥಿನಿ ಆಗಿರುತ್ತಾಳೆ .

2020ರ ಜೂನ್ ತಿಂಗಳಲ್ಲಿ ನಡೆದ NMMS ಪರೀಕ್ಷೆಯಲ್ಲಿ ಭಾಗವಹಿಸಿದ ಸಂಜನಾ. ಉತ್ತೀರ್ಣಳಾಗಿ, ವಿದ್ಯಾರ್ಥಿ ವೇತನಕ್ಕೆ ಅರ್ಹಳಾದ ಇವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಲಾ  ವತಿಯಿಂದ ಅಭಿನಂದಿಸಲಾಯಿತು.

 ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಸಿದ್ದಪ್ಪ ಅವರು ಅಭಿನಂದಿಸಿ, ಈ ವಿದ್ಯಾರ್ಥಿಯ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು 48000ರೂ ವಿದ್ಯಾರ್ಥಿ ವೇತನ ಪಡೆದಿರುತ್ತಾಳೆ ಎಂದರು.

ಅಭಿನಂದನಾ ಕಾರ್ಯಕ್ರಮದಲ್ಲಿ ಪಶ್ಚಿಮ ಕ್ಲಸ್ಟರ್ CRP ಅಜಯ್ ಕುಮಾರ್, IERT ರಾಜಣ್ಣ, BRP ದೇವರಾಜ್, ಮುಖ್ಯ ಶಿಕ್ಷಕರಾದ ಆಶಾರಾಣಿ, ತರಳಬಾಳು ಪ್ರಾಥಮಿಕ ಶಾಲೆ ಸಹ ಶಿಕ್ಷಕರಾದ ಮನು ಹಾಗೂ ಶಾಲೆಯ ಸಹ ಶಿಕ್ಷಕರು ಅಭಿನಂದಿಸಿದರು.

ಬಿ.ಆರ್.ಸಿ. ಈಶ್ವರಪ್ಪ ಸರ್ ಹಾಗೂ ಇ.ಸಿ.ಓ ಇನಾಯತ್ ಸರ್ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿದರು.


No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...