Showing posts with label Business. Show all posts
Showing posts with label Business. Show all posts

Monday, 12 September 2022

ಹಾಲಿನ ದರ ಲೀಟರ್ ಗೆ ಮೂರು ರೂಪಾಯಿ ಹೆಚ್ಚಳ ಸಾಧ್ಯತೆ.

ಬೆಂಗಳೂರು: ನಂದಿನಿ ಹಾಲಿನ ಮಾರಾಟ ದರವನ್ನು ಲೀಟರಿಗೆ 3ರೂ.  ಹೆಚ್ಚಿಸಲು ರಾಜ್ಯ ಹಾಲು ಮಹಾ ಮಂಡಳಿ (ಕೆಎಂಎಫ್) ನಿರ್ಧರಿಸಿದೆ. ವಾರ್ಷಿಕ ಸಭೆಯಲ್ಲಿ ಹಾಲಿನ ಮಾರಾಟ ದರ ಹೆಚ್ಚಿಸುವ ಸಂಬಂಧ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ. 



ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ದರ ಏರಿಕೆಗೆ ಒಲವು ವ್ಯಕ್ತಪಡಿಸಿದ್ದಾರೆ. ಎಂದು ಕೆಎಂಎಫ್ ನ ಉನ್ನತ ಮೂಲಗಳು ತಿಳಿಸಿವೆ. ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳ ಹಾಲು ಮಾರಾಟ ದರ ಹೆಚ್ಚಿಸುವಂತೆ ಕಳೆದ 8 ತಿಂಗಳಿಂದ ಕೆಎಂಎಫ್ ಮೇಲೆ ಒತ್ತಡ ಹೇಳುತ್ತಿವೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು ಮುಖ್ಯಮಂತ್ರಿಗಳಾದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ರೈತರ ಅನುಕೂಲಕ್ಕಾಗಿ ಶೀಘ್ರವೇ ಹಾಲು ಮಾರಾಟ ದರದಲ್ಲಿ ಲೀಟರ್ ಗೆ 3 ರೂ ಹೆಚ್ಚಳ ಮಾಡಲೇಬೇಕು. ಬೆಲೆ ಹೆಚ್ಚಳದ ಸಂಪೂರ್ಣ ಲಾಭವನ್ನು ರೈತರಿಗೆ ತಿಳಿಸುತಲುಪಿಸಬೇಕೆಂದು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬದಲಾಯಿತು ಎಂದು ಮೂಲಗಳು ಹೇಳಿವೆ.  ಈ ಕುರಿತು ಸರಕಾರದ ಅನುಮತಿ ಬಾಕಿ ಇದೆ.

ರಾಷ್ಟ್ರೀಯ ಇ-ಕಾಮರ್ಸ್ ನೀತಿಯ ಕರುಡು ಸಿದ್ಧ.

ಹೊಸದಿಲ್ಲಿ: ದೇಶದ ಇ- ಕಾಮರ್ಸ್ ವಲಯದ ಅಭಿವೃದ್ಧಿಗಾಗಿ ಸಾರ್ವಜನಿಕ ಸಲಹೆ ಆಧರಿಸಿ ರಾಷ್ಟ್ರೀಯ  ಇ-ಕಾಮರ್ಸ್ ನೀತಿಯ ಕರಡು ಸಿದ್ಧವಾಗಿದೆ. ಎಂದು ಕೇಂದ್ರ ಕೈಗಾರಿಕಾ ಉತ್ತೇಜನ ಹಾಗೂ ಆಂತರಿಕ ವ್ಯಾಪಾರ ಇಲಾಖೆಯ ಕಾರ್ಯದರ್ಶಿ ಅನುರಾಗ ಜೈನ್ ತಿಳಿಸಿದ್ದಾರೆ. 



ಇ- ಕಾಮರ್ಸ್ ವಲಯದ ಭಾಗೀದಾರರ ಜೊತೆ ಈಗಾಗಲೇ ಸುಧೀರ್ಘ ಚರ್ಚೆ ಆರಂಭವಾಗಿದ್ದು, ಅವರ ಸಲಹೆ, ಸೂಚನೆ ಆಧರಿಸಿ ನೀತಿ ರೂಪಿಸಲಾಗುವುದು. ಇದರಿಂದ ದೇಶದ ಇ-ಕಾಮರ್ಸ್ ವಲಯದ ಬೆಳವಣಿಗೆಗೆ ಅಡ್ಡಿಯಾಗಿರುವ ಅಂಶಗಳನ್ನು ಹೇಗೆ ಎದುರಿಸಬೇಕೆಂಬ ಬಗೆಗೆ ಸ್ಪಷ್ಟತೆ ದೊರಕಲಿವೆ ಎಂದು ಹೇಳಿದ್ದಾರೆ.

 ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 862 ಅಧಿಕಾರಿಗಳಿಗೆ ಈಗಾಗಲೇ ಭಾಸ್ಕರಾಚಾರ್ಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಅಪ್ಲಿಕೇಶನ್ ಆಂಡ್ ಜಿಯೊ-ಇನ್ ಫಾರ್ಮಟಿಕ್ಸ್ ನಲ್ಲಿ ತರಬೇತಿ ನೀಡಲಾಗುತ್ತಿದೆ. ಪಿಎಂ ಗತಿಶಕ್ತಿ ಯೋಜನೆ ಅಡಿ ಸುಮಾರು 500 ಕೋಟಿ ವೆಚ್ಚದಲ್ಲಿ ಇಂಟಿಗ್ರೇಟೆಡ್ ಡೇಟಾವನ್ನು ರಾಜ್ಯಗಳ ಮಾಸ್ಟರ್ ಪ್ಲಾನ್ ಪೋರ್ಟಲ್ ಗಳ ಜೊತೆಗೆ ಹಂಚಿಕೊಳ್ಳಲಾಗಿದೆ. ಇದರಿಂದ ಮೂಲಸೌಕರ್ಯ ಜಾಲ ಯೋಜನೆಯ ಸಮೂಹ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.

Monday, 30 August 2021

16 ತಿಂಗಳ ಅವಧಿಯಲ್ಲಿ 10 ಮಿಲಿಯನ್ ಬಳಕೆದಾರರನ್ನು ಸಂಪಾದಿಸಿದ 'ಕೂ' ಆಪ್...!

 ಟ್ವಿಟರ್​ಗೆ ಪರ್ಯಾಯವಾಗಿ ನಿರ್ಮಾಣವಾದ ಸ್ವದೇಶಿ ನಿರ್ಮಿತ ʼಕೂʼ ಅಪ್ಲಿಕೇಶನ್​ 10 ಮಿಲಿಯನ್​ ಚಂದಾದಾರರನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಕೂ ಅಪ್ಲಿಕೇಶನ್​ ಬಳಕೆಗೆ 16 ತಿಂಗಳ ಅವಧಿ ಕಳೆದಿದೆ. ಇದು ಕೂಡ ಟ್ವಿಟರ್​ನಂತೆ ಕೆಲಸ ಮಾಡುವ ಸಾಮಾಜಿಕ ಮಾಧ್ಯಮದ ವೇದಿಕೆಯಾಗಿದ್ದು ಇದರಲ್ಲಿ ಇಂಗ್ಲೀಷ್​, ಹಿಂದಿ, ಕನ್ನಡ ಸೇರಿಂತೆ 7 ಭಾರತೀಯ ಭಾಷೆಯಲ್ಲಿ ಸಂವಹನ ನಡೆಸಬಹುದಾಗಿದೆ. ಮೋದಿ ಸರ್ಕಾರದ ಜೊತೆ ಟ್ವಿಟರ್​ ಇಂಡಿಯಾ ಜಟಾಪಟಿ ಮುಂದುವರಿದ ಬೆನ್ನಲ್ಲೇ ಫೆಬ್ರವರಿ ತಿಂಗಳಿನಂದ 85 ಪ್ರತಿಶತಕ್ಕೂ ಅಧಿಕ ಮಂದಿ ಕೂ ಅಪ್ಲಿಕೇಶನ್​ನತ್ತ ವಾಲುತ್ತಿದ್ದಾರೆ.

ಸರ್ಕಾರಿ ಸಚಿವರು, ವಿರೋಧ ಪಕ್ಷದ ನಾಯಕರು, ಕ್ರಿಕೆಟ್​ ಆಟಗಾರರು ಹಾಗೂ ಬಾಲಿವುಡ್​ ಸೆಲೆಬ್ರಿಟಿಗಳು ಸೇರಿದಂತೆ ಘಟಾನುಘಟಿಗಳೇ ಭಾರತೀಯ ಭಾಷೆಗಳಲ್ಲಿ ಕೂ ಅಪ್ಲಿಕೇಶನ್​ ಬಳಕೆ ಮಾಡುತ್ತಿದ್ದಾರೆ.

ಟ್ವಿಟರ್​ ಹಾಗೂ ಸರ್ಕಾರದ ನಡುವೆ ಕಿತ್ತಾಟ ನಡೆಯುತ್ತಿದ್ದ ನಡುವೆಯೇ ನಮ್ಮ ಅಪ್ಲಿಕೇಶನ್​ ಬೆಳಕಿಗೆ ಬಂದಿದೆ. ಜನರಿಗೂ ತಾಯ್ನಾಡು ಭಾಷೆಯಲ್ಲಿಯೇ ಸಂವಹನ ನಡೆಸಲು ಈ ಸಾಮಾಜಿಕ ಮಾಧ್ಯಮ ವೇದಿಕೆ ಸೂಕ್ತ ಎಂದು ಎನಿಸಲು ಆರಂಭಿಸಿದೆ ಎಂದು ಕೂ ಸಹ ಸಂಸ್ಥಾಪಕ ಹಾಗೂ ಸಿಇಓ ಅಪ್ರಮೇಯ ರಾಧಾಕೃಷ್ಣನ್​ ಹೇಳಿದ್ದಾರೆ.

ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ರೇಟ್‌ ಎಷ್ಟಿದೆ ಅಂತಾ ಗೊತ್ತಾ? ತಿಳಿಯಬೇಕಾದಲ್ಲಿ ಈ ಸಂಖ್ಯೆಗೆ SMS ಮಾಡಿ, ಬೆಲೆ ತಿಳಿಯಿರಿ.!!

 


ಇಂದಿಗೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ  ಯಾವುದೇ ಬದಲಾವಣೆಯಾಗಿಲ್ಲ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಆಗಸ್ಟ್ 30 ರಂದು ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂದ್ಹಾಗೆ, ಮಂಗಳವಾರ ಪೆಟ್ರೋಲ್ ಬೆಲೆಯಲ್ಲಿ ಕಡಿತ ಮಾಡಲಾಗಿತ್ತು. ಅಂದಿನಿಂದ ಬೆಲೆಗಳು ಸ್ಥಿರವಾಗಿವೆ. ಐಒಸಿಎಲ್ (IOCL) ಪ್ರಕಾರ, ಭಾನುವಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.9 ರೂ ಮತ್ತು ಡೀಸೆಲ್ ಬೆಲೆ 88.92 ರೂಪಾಯಿ ಇದೆ.

ಮಂಗಳವಾರ, ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಇಂಧನ ಬೆಲೆಯನ್ನ 15 ಪೈಸೆಗಳಷ್ಟು ಕಡಿತಗೊಳಿಸಲಾಗಿದೆ. ಐಒಸಿಎಲ್ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರವನ್ನು ಪರಿಷ್ಕರಿಸುತ್ತದೆ.

ಪೆಟ್ರೋಲ್ ಬೆಲೆ ಹಲವು ನಗರಗಳಲ್ಲಿ ರೂ .100 ದಾಟಿದೆ ಮತ್ತು ದೇಶಾದ್ಯಂತ ಸುಮಾರು 19 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ರೂ .100 ದಾಟಿದೆ. ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಹೊರತಾಗಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನ ಮಹಾನಗರಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ.100 ದಾಟಿದೆ.

ಪೆಟ್ರೋಲ್ ಡೀಸೆಲ್ ಬೆಲೆ 30 August 2021)
>> ದೆಹಲಿ ಪೆಟ್ರೋಲ್ ರೂ 101.49 & ಡೀಸೆಲ್ ರೂ 88.92 ಪ್ರತಿ ಲೀಟರ್
>> ಮುಂಬೈ ಪೆಟ್ರೋಲ್ ರೂ 107.52 & ಡೀಸೆಲ್ ರೂ 96.48 ಪ್ರತಿ ಲೀಟರ್
>> ಚೆನೈ ಪೆಟ್ರೋಲ್ ರೂ 99.20 & ಡೀಸೆಲ್ ರೂ 93.52 ಪ್ರತಿ ಲೀಟರ್
>> ಕೋಲ್ಕತ್ತಾ ಪೆಟ್ರೋಲ್ ರೂ .101.82 & ಡೀಸೆಲ್ ರೂ .91.98 ಪ್ರತಿ ಲೀಟರ್‌
>> ನೋಯ್ಡಾ ಪೆಟ್ರೋಲ್ ರೂ .98.79 ಮತ್ತು ಡೀಸೆಲ್ ರೂ. 89.49 ಪ್ರತಿ ಲೀಟರ್
>> ಜೈಪುರ್ ಪೆಟ್ರೋಲ್ ರೂ. 108.42 ಮತ್ತು ಡೀಸೆಲ್ ರೂ. 98.06 ಪ್ರತಿ

ಈ ರೀತಿಯಾಗಿ ನಿಮ್ಮ ನಗರದ ಬೆಲೆಯನ್ನು ಪರಿಶೀಲಿಸಿ..!
ದೇಶದ ಎಲ್ಲಾ ಮೂರು ತೈಲ ಮಾರುಕಟ್ಟೆ ಕಂಪನಿಗಳಾದ HPCL, BPCL ಮತ್ತು IOC ಬೆಳಿಗ್ಗೆ 6 ಗಂಟೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್‌ಗಳ ಹೊಸ ದರಗಳನ್ನು ಬಿಡುಗಡೆ ಮಾಡುತ್ತವೆ. ಹೊಸ ದರಗಳಿಗಾಗಿ, ನೀವು ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಅದೇ ಸಮಯದಲ್ಲಿ, ನೀವು ಮೊಬೈಲ್ ಫೋನ್‌ಗಳಲ್ಲಿ SMS ಮೂಲಕ ದರವನ್ನು ಪರಿಶೀಲಿಸಬಹುದು.

92249 92249ಗೆ SMS ಕಳುಹಿಸುವ ಮೂಲಕ ನೀವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಬಗ್ಗೆಯೂ ತಿಳಿದುಕೊಳ್ಳಬಹುದು. ನೀವು ಆರ್‌ಎಸ್‌ಪಿ <ಸ್ಪೇಸ್> ಪೆಟ್ರೋಲ್ ಪಂಪ್ ಡೀಲರ್ ಕೋಡ್ ಅನ್ನು 92249 92249 ಗೆ ಕಳುಹಿಸಬೇಕು.

Tuesday, 24 August 2021

ಪೆಟ್ರೋಲ್-ಡೀಸೆಲ್ ಬೇಡ! ಚಾರ್ಜ್ ಮಾಡೋದು ಬೇಡಾ! ಮಾರುತಿ ಸುಜುಕಿ ತಯಾರಿಸುತ್ತಿದೆ ಹೈಬ್ರಿಡ್ ಕಾರು.

 


ಜಪಾನ್ ಮೂಲದ ಟೊಯೋಟಾ ಕಂಪನಿ ಜತೆಗೂಡಿ ಮಾರುತಿ ಸುಜುಕಿ ಕಂಪನಿ ಹೈಬ್ರಿಡ್​ ಕಾರನ್ನು ತಯಾರಿಸುತ್ತಿದೆ. ಇದು ಇಂಧನ ಸಹಾಯವಿಲ್ಲ ಮತ್ತು ಚಾರ್ಜ್​ ಇಲ್ಲದೆಯೇ ಚಲಿಸಬಹುದಾದ ಕಾರು ಇದಾಗಿದೆ. ಹಾಗಾದರೆ ಮಾರುತಿ ಸುಜುಕಿ ಕಂಪನಿ ತಯಾರಿಸುತ್ತಿರುವ ನೂತನ ಕಾರು ಹೇಗೆ ಚಲಿಸುತ್ತೇ? ಎಂಬ ಪ್ರಶ್ನೆ ಮೂಡಿರಬಹುದು. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್​- ಡಿಸೇಲ್​ ವಾಹನಗಳಿವೆ. ಅಷ್ಟು ಮಾತ್ರವಲ್ಲದೆ, ಎಲೆಕ್ಟ್ರಿಕ್​ ವಾಹನವನ್ನು ಬಳಸುವವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಹಲವಾರು ಕಂಪನಿ ನಾನಾ ತಂತ್ರಗಳೊಂದಿಗೆ, ಹೊಸ ವಿಶೇಷತೆಗಳನ್ನು ಒಳಗೊಂಡ ಕಾರನ್ನು ಅಭಿವೃದ್ಧಿ ಪಡಿಸುತ್ತಿದೆ. ಅದರಂತೆ ಮಾರುತಿ ಸುಜುಕಿ ಕಂಪನಿಯು ಜಪಾನ್ ಮೂಲದ ಟಯೋಟಾ ಕಂಪನಿಯೊಂದಿಗೆ ಜತೆಗೂಡಿ ಹೈಬ್ರಿಡ್​ ಎಲೆಕ್ಟ್ರಿಕ್​ ಕಾರು ಸಿದ್ಧಪಡಿಸುತ್ತಿದೆ.

ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್​ ವಾಹನಗಳ ಸಂಖ್ಯೆ ಏರುತ್ತಿದ್ದರು ಫಾಸ್ಟ್​ ಚಾಜಿಂಗ್​ ಸ್ಟೇಷನ್​ಗಳಿಲ್ಲ ಎಂಬ ಕೊರಗು ಗ್ರಾಹಕರಲ್ಲಿದೆ. ಇವೆಲ್ಲಾವನ್ನು ಗಮನಿಸಿದ ಮಾರುತಿ ಸುಜುಕಿ ಕಂಪನಿ ಹೊಸ ಹೈಬ್ರಿಡ್​ ಕಾರನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ ಟಾಟಾ ಮೋಟಾರ್ಸ್​, ಮಹೀಮದ್ರಾ, ಹುಂಡೈ ಕಂಪನಿಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್​ ವಾಹನ ವಿಚಾರದಲ್ಲಿ ಮಾರುತಿ ಸುಜುಕಿ ಹಿಂದುಳಿದಿದೆ. ಅದಕ್ಕೆ ಉತ್ತರವೆಂಬಂತೆ ಇದೀಗ ಹ್ರೈಬ್ರಿಡ್​ ಎಲೆಕ್ಟ್ರಿಕ್​ ಕಾರನ್ನು (ಎಚ್​ಇವಿ) ನಿರ್ಮಿಸುತ್ತಿದೆ. ಈ ಕಾರಿನ ವಿಶೇಷತೆ ಎಂದರೆ ಪೆಟ್ರೋಲ್​-ಡೀಸೆಲ್ ಬೇಕಿಲ್ಲ. ಚಾರ್ಚ್​ ಕೂಡ ಮಾಡಬೇಕಿಲ್ಲ. ಈ ಕಾರು ಸ್ವಯಂ ಚಾಲಿತವಾಗಿ ಚಾರ್ಜ್​ ಆಗಲಿದೆ.

ವಾಹನ ಚಲಾಯಿಸುವಾಗ ಕಾರಿನ ಬ್ಯಾಟರಿ ಸ್ವಯಂ ಚಾಲಿತವಾಗಿ ಚಾರ್ಜ್​ ಆಗಲಿದೆ. ಚಾಜಿಂಗ್​ ಸ್ಟೇಷನ್​ಗೆ ಹೋಗದೆ ಚಲಿಸುವ ವೇಳೆ ಚಾರ್ಜ್​ ಆಗುತ್ತದೆ.

ಮಾರುತಿ ಸುಜುಕಿ ತಯಾರಿಸುವ ಹೈಬ್ರಿಟ್​ ಕಾರು ಇಂಟರ್ನಲ್​ ಕಂಬುಷ್ಟನ್​ ಎಂಜಿನ್​ ಹೊಂದಿರಲಿದೆ. ಇದು ಬ್ಯಾಟರಿಗೆ ಪವರ್ ನೀಡಲಿದೆ. ಮುಂದಿನ ತಿಂಗಳು ಎಲೆಕ್ಟ್ರಿಕ್​ ವಾಹನಗಳ ಜಂಟಿ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಈ ಕಾರನ್ನು ಟೆಸ್ಟಿಂಗ್​ ನಡೆಸಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಓಡಾಡುತ್ತಿರುವ ಕಾರುಗಳು ಒಂದಲ್ಲಾ ಒಂದು ವಿಶೇಷತೆ ಹೊಂದಿದೆ. ಅದರಂತೆ ಬ್ಯಾಟರಿ ಚಾಲಿತ ಕಾರುಗಳಲ್ಲಿ ನಾನಾ ಫೀಚರ್​ಗಳನ್ನು ಅಳವಡಿಸಿದೆ. ಆದರೆ ಮಾರುತಿ ಸುಜುಕಿ ಇದೀಗ ತನ್ನ ಗ್ರಾಹಕರಿಗೆ ಮತ್ತಷ್ಟು ಉಪಕಾರವಾಗಲೆಂದು ಹೈಬ್ರಿಡ್​ ಕಾರನ್ನು ತಯಾರಿಸುತ್ತಿದೆ. ಹೈಬ್ರಿಡ್​ ಕಾರುಗಳು ಭಾರಕ್ಕೆ ಬಂದರೆ ಹಲವು ಪ್ರಯೋಜನಗಳಿದೆ.

Sunday, 22 August 2021

ಕಚ್ಚಾ ತೈಲ ದರ ಭಾರಿ ಇಳಿಕೆ - ಪೆಟ್ರೋಲ್ ದರವೂ ಕಡಿತ ಸಾಧ್ಯತೆ.

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗಿದ್ದು, ಪೆಟ್ರೋಲ್ ದರ ಲೀಟರ್ ಗೆ 2 ರೂ. ನಷ್ಟು ಕಡಿಮೆ ಮಾಡಲು ಅವಕಾಶವಿದೆ.

ಪ್ರತಿ ಬ್ಯಾರೆಲ್ ಗೆ 70 ಡಾಲರ್ ನಿಂದ 65 ಡಾಲರ್ ಗೆ ಕಚ್ಚಾತೈಲದ ದರ ಇಳಿಕೆಯಾಗಿದೆ. ಕಳೆದ ತಿಂಗಳು ಪ್ರತಿ ಬ್ಯಾರೆಲ್ 77 ಡಾಲರ್ ಇದ್ದ ಕಚ್ಚಾತೈಲದ ತರ ಈಗ 65 ಡಾಲರ್ ಗೆ ಕುಸಿದಿದ್ದು, ದೇಶದಲ್ಲಿ ಮಾತ್ರ ಪೆಟ್ರೋಲ್ ದರ ಇಳಿಕೆ ಮಾಡಿಲ್ಲ. ಕಳೆದ 35 ದಿನಗಳಿಂದ ಪೆಟ್ರೋಲ್ ದರ ಯಥಾಸ್ಥಿತಿಯಲ್ಲಿದ್ದು, ಡೀಸೆಲ್ ದರದಲ್ಲಿ 3 ದಿನದಿಂದ 20 ರಿಂದ 25 ಪೈಸೆಯಷ್ಟು ಇಳಿಕೆ ಮಾಡಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್ ಗೆ 12 ಡಾಲರ್ ನಷ್ಟು ಇಳಿಕೆಯಾಗಿರುವುದರಿಂದ ಪೆಟ್ರೋಲ್ ದರವನ್ನು ಕೂಡ ಕಡಿಮೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದ್ದು, ಲೀಟರ್ ಗೆ 2 ರೂಪಾಯಿಯಷ್ಟು ಕಡಿಮೆ ಮಾಡಲು ಅವಕಾಶವಿದೆ ಎನ್ನಲಾಗಿದೆ

Tuesday, 13 July 2021

ಅಡುಗೆ ಎಣ್ಣೆ ದರ ಭಾರಿ ಏರಿಕೆ ಜೊತೆ, ತಾಳೆ ಎಣ್ಣೆ ದರ ಶೇ 6 ರಷ್ಟು ಹೆಚ್ಚಳ.

 


ನವದೆಹಲಿ: ದೇಶದಲ್ಲಿ ಅಡುಗೆ ಎಣ್ಣೆ ದರ ಭಾರಿ ಏರಿಕೆಯಾದ ಹಿನ್ನಲೆಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಸರ್ಕಾರ ಆಮದು ಸುಂಕ ಕಡಿತ ಮಾಡಿದೆ. ಆದರೆ, ದರ ಕಡಿಮೆಯಾಗುವ ಬದಲು ದುಬಾರಿಯಾಗಿಯೇ ಮುಂದುವರೆದಿದೆ.

ತಾಳೆ ಎಣ್ಣೆ ಆಮದು ಸುಂಕ ಕಡಿತವಾದರೂ ಕೂಡ ದೇಶದಲ್ಲಿ ದರ ಶೇಕಡ 6 ರಷ್ಟು ಜಾಸ್ತಿಯಾಗಿದೆ. ಆಮದು ದರ ಕಡಿತದ ನಂತರವೂ ಯಾವುದೇ ಪ್ರಭಾವ ಬೀರಿಲ್ಲ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಸುಂಕ ಕಡಿತಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ದೇಶದಲ್ಲಿ ಅಡುಗೆ ಎಣ್ಣೆ ದರ ಕಳೆದ ವರ್ಷದಿಂದ ಏರುಗತಿಯಲ್ಲಿ ಸಾಗುತ್ತಿದೆ. ಇದರ ಪರಿಣಾಮ ಬಡವರು, ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಇದನ್ನು ಮನಗಂಡ ಸರ್ಕಾರ ತಾಳೆ ಎಣ್ಣೆ ಆಮದು ಸುಂಕ ಇಳಿಕೆ ಮಾಡಿದೆ. ಆದರೂ ತಾಳೆ ಎಣ್ಣೆ ದರ ಏರಿಕೆಯಾಗಿದೆ. ಆಮದು ಸುಂಕ ಕಡಿತವಾದ ನಂತರ ಕೂಡ ಮಾರುಕಟ್ಟೆಯಲ್ಲಿ ಮಲೇಷ್ಯಾ ಮೂಲದ ತಾಳೆ ಎಣ್ಣೆ ದರ ಶೇಕಡ 9 ರಷ್ಟು ಹೆಚ್ಚಾಗಿದೆ. ಸರ್ಕಾರ ಆಮದು ಸುಂಕವನ್ನು ಶೇಕಡ 5 ರಷ್ಟು ಕಡಿತಗೊಳಿಸಿದ ನಂತರ ಪೂರೈಕೆದಾರರು ದರ ಏರಿಸಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಸುಂಕ ಕಡಿತಗೊಳಿಸಿದ್ದರೂ ಗ್ರಾಹಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಹೇಳಲಾಗಿದೆ.

 


Friday, 9 July 2021

ಪೇಮೆಂಟ್ ಬ್ಯಾಂಕ್ ಆರಂಭಿಸಿದ ಏರ್ಟೆಲ್: ಪೇ ಟು ಕಾಂಟ್ಯಾಕ್ಟ್ ಸೇವೆಯ ಮಾಹಿತಿಯ ವಿವರ.

 


ಏರ್ಟೆಲ್ ತನ್ನ ಗ್ರಾಹಕರಿಗೆ ನೂತನ ಸೇವೆಯೊಂದನ್ನು ಆರಂಭಿಸಿದೆ. ಹೌದು, ಇದೀಗ UPI ಪೇಮೆಂಟ್ಸ್ ಗಳಿಗಾಗಿ  ಏರ್ಟೆಲ್ ಪೇ ಟು ಕಾಂಟಾಕ್ಟ್ ಸೇವೆ ಆರಂಭಿಸಿದೆ.  ಏರ್ಟೆಲ್ ಪೇಮೆಂಟ್ ಬ್ಯಾಂಕ್ ಆರಂಭಿಸಿರುವ ಈ ಸೇವೆಯ ಸಹಾಯದಿಂದ, ಇದೀಗ ಬಳಕೆದಾರರು ಮೊಬೈಲ್ ಫೋನ್‌ನಲ್ಲಿರುವ ಸಂಪರ್ಕ ಪಟ್ಟಿಯ ಯಾವುದೇ ಸಂಖ್ಯೆಗೆ ಹಣವನ್ನು ವರ್ಗಾಯಿಸಬಹುದು. ಇದಕ್ಕಾಗಿ, ಇದೀಗ ಯಾರೂ ಯುಪಿಐ ಐಡಿ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ದಾಖಲಿಸುವ ಅಗತ್ಯವಿಲ್ಲ.

ಈ ಕುರಿತು ಕಂಪನಿ ಜಾರಿಗೊಳಿಸಿರುವ ಹೇಳಿಕೆಯ ಪ್ರಕಾರ, ಗ್ರಾಹಕರು ಪೇ ಟು ಕಾಂಟಾಕ್ಟ್ ಸೇವೆಯ ಮೂಲಕ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿದೆ. ಅಷ್ಟೇ ಅಲ್ಲ ಗ್ರಾಹಕರು ತಮ್ಮ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡದೆ ಮತ್ತು ಯುಪಿಐ ಐಡಿಯನ್ನು ನಮೂದಿಸದೆಯೇ ಹಣವನ್ನು ವರ್ಗಾಯಿಸಲು ಸಾಧ್ಯವಾಗಲಿದೆ. ಇದು ಗ್ರಾಹಕರ ಸಮಯ ಉಳಿತಾಯ ಮಾಡಲಿದೆ. ಇದಲ್ಲದೆ, ಗ್ರಾಹಕರು ಭೀಮ್ ಯುಪಿಐ ವಿಭಾಗಕ್ಕೆ ಭೇಟಿ ನೀಡುವ ಮೂಲಕ, ಪೇ ಮನಿ ಗುಂಡಿಯನ್ನು  ಕ್ಲಿಕ್ಕಿಸುವುದರ ಮೂಲಕ ಸುಲಭವಾಗಿ ಹಣವನ್ನು ಕಳುಹಿಸಲು ಸಾಧ್ಯವಾಗಲಿದೆ ಎಂದು ಏರ್ಟೆಲ್ ಹೇಳಿದೆ.

ಏರ್ಟೆಲ್ ಪೇಮೆಂಟ್ ಕಾಂಟ್ಯಾಕ್ಟ್ ಬಳಕೆ ಹೇಗೆ? 
>> ಮೊದಲು Airtel Payments Bank ಖಾತೆ ತೆರೆಯಲು ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
>> ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ.
>> ಮಾಹಿತಿಯನ್ನು ತುಂಬಲು Aadhaar Card, Voter ID, Driving License ಅಥವಾ  PAN Card ಗಳಲ್ಲಿನ ಯಾವುದಾದರೊಂದು ದಾಖಲೆ ಬಳಸಿ. 
>> ಯಾವುದೇ ಒಂದು ಐಡಿ ಕಾರ್ಡ್ ಮೂಲಕ ನೋಂದಣಿ ಮಾಡಿ.
>> ಇದಾದ ಬಳಿಕ OTP ನಮೂದಿಸಿ. 
>> OTP ಪರಿಶೀಲನೆಯ ಬಳಿಕ Airtel Account ಓಪನ್ ಮಾಡಿ.

ಏರ್ಟೆಲ್ Safe Pay
ಈ ವರ್ಷದ ಆರಂಭದಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ Safe Pay ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಏರ್ಟೆಲ್ ನ ಈ ವೈಶಿಷ್ಟ್ಯ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಲ್ಲಿ ಅತ್ಯಂತ ಸುರಕ್ಷಿತ ಎಂದು ಹೇಳಲಾಗಿದೆ. ಇದರಲ್ಲಿ ಬಳಕೆದಾರರಿಗೆ Extra Layer Security ಸಿಗುತ್ತದೆ. ಈ ಸೇವೆಯನ್ನು ಬಳಸಿ ಬ್ಯಾಂಕಿಂಗ್ ಫ್ರಾಡ್, ಫಿಶಿಂಗ್ ಹಾಗೂ ಪಾಸ್ವರ್ಡ್ ಕಳ್ಳತನದಂತಹ ಘಟನೆಗಳಿಂದ ಪಾರಾಗಬಹುದು ಎಂದು ಕಂಪನಿ ಹೇಳಿದೆ.

ಏರ್ಟೆಲ್ Safe Pay ಸೇವೆಯನ್ನು ಹೀಗೆ ಸಕ್ರೀಯಗೊಳಿಸಿ
>> Airtel Safe Pay ವೈಶಿಷ್ಟ್ಯವನ್ನು ಸಕ್ರೀಯಗೊಳಿಸಲು ಮೊದಲು Airtel Thanks Appಗೆ ಭೇಟಿ ನೀಡಿ.
>> ಅಲ್ಲಿ ಕೆಳಗಡೆ ನೀಡಲಾಗಿರುವ Banking Section ಮೇಲೆ ಕ್ಲಿಕ್ಕಿಸಿ ನಂತರ ಸೇಫ್ ಪೆ ಆಯ್ಕೆಯನ್ನು ಕ್ಲಿಕ್ಕಿಸಿ.
>> ಈಗ Toggle ಗುಂಡಿಯನ್ನೊಮ್ಮೆ ಒತ್ತಿ. ಈಗ ನಿಮ್ಮ ಏರ್ಟೆಲ್ ಸೇಫ್ ಪೆ ಸೇವೆ ಸಕ್ರೀಯಗೊಳ್ಳಲಿದೆ.

Thursday, 8 July 2021

ಶಾಕಿಂಗ್..! ಶತಕದ ನಂತರವೂ ನಾಟೌಟ್ -ಇಂದೂ ಏರಿಕೆಯಾಯ್ತು ಇಂಧನ ದರ; ಪೆಟ್ರೋಲ್ 35 ಪೈಸೆ, ಡೀಸೆಲ್ 9 ಪೈಸೆ ಹೆಚ್ಚಳ.

 


ನವದೆಹಲಿ: ಎಲ್ಲಾ ಮೆಟ್ರೋ ನಗರಗಳಲ್ಲಿ ಶತಕ ಬಾರಿಸಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಾದಿಯಲ್ಲಿಯೇ ಮುಂದುವರೆದಿದ್ದು ಇಂದು ಕೂಡ ಹೆಚ್ಚಾಗಿದೆ.

ಈ ತಿಂಗಳಲ್ಲಿ ಆರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇಂದಿನ ದರ ಪರಿಷ್ಕರಣೆ ನಂತ ಲೀಟರ್ ಪೆಟ್ರೋಲ್ 35 ಪೈಸೆ ಮತ್ತು ಡೀಸೆಲ್ 9 ಪೈಸೆಯಷ್ಟು ಏರಿಕೆಯಾಗಿದೆ.

ದರ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100.56 ರೂ. ಮತ್ತು ಡೀಸೆಲ್ ಬೆಲೆ 89.62 ರೂ., ಮುಂಬೈನಲ್ಲಿ ಲೀಟರ್ ಪೆಟ್ರೋಲ್ 106.59 ರೂ. ಮತ್ತು ಡೀಸೆಲ್ ದರ 97.18 ರೂಪಾಯಿ ಇದೆ.


Sunday, 20 June 2021

SBI ಖಾತೆದಾರರೇ, ಜುಲೈ1 ರಿಂದ ಈ ಎಲ್ಲಾ ಸೇವೆಗಳಿಗೆ ಬೀಳಲಿದೆ ದುಬಾರಿ ಸೇವಾ ಶುಲ್ಕ.

ನವದೆಹಲಿ: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದರೆ, ಈ ಸುದ್ದಿ ನಿಮಗಾಗಿ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹಲವು ಪ್ರಮುಖ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಸ್ಟೇಟ್ ಬ್ಯಾಂಕಿನಿಂದ ಪಡೆದ ಮಾಹಿತಿಯ ಪ್ರಕಾರ, ಹೊಸ ನಿಯಮಗಳ ಅನುಷ್ಠಾನದ ನಂತರ, ಎಟಿಎಂನಿಂದ ನಗದು ಹಿಂಪಡೆಯುವಿಕೆ ಮತ್ತು ಚೆಕ್ ಬುಕ್ ಅನ್ನು ಬಳಸುವುದು ದುಬಾರಿಯಾಗಿದೆ.

ಸೇವಾ ಶುಲ್ಕದಲ್ಲಿ ಬದಲಾವಣೆ: 
ಜುಲೈ 1 ರಿಂದ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಲವು ನಿಯಮಗಳು ಬದಲಾಗಲಿವೆ. ವಾಸ್ತವವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಟಿಎಂ ಮತ್ತು ಬ್ಯಾಂಕ್ ಶಾಖೆಯಿಂದ ಹಣವನ್ನು ಹಿಂಪಡೆಯಲು ವಿಧಿಸಲಾಗುವ ಸೇವಾ ಶುಲ್ಕವನ್ನು ಬದಲಾಯಿಸಿದೆ. ಈ ಮಾಹಿತಿಯನ್ನು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಅಂತೆಯೇ, ಹೊಸ ಶುಲ್ಕಗಳು ಚೆಕ್ಬುಕ್, ವರ್ಗಾವಣೆ ಮತ್ತು ಇತರ ಹಣಕಾಸೇತರ ವಹಿವಾಟುಗಳಿಗೆ ಅನ್ವಯವಾಗುತ್ತವೆ. ಹೊಸ ಸೇವಾ ಶುಲ್ಕಗಳು ಎಸ್‌ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆದಾರರಿಗೆ ಜುಲೈ 1, 2021 ರಿಂದ ಅನ್ವಯವಾಗುತ್ತವೆ ಎಂದು ಬ್ಯಾಂಕ್ ತಿಳಿಸಿದೆ.

ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವುದು ಸಹ ದುಬಾರಿಯಾಗಿದೆ:
ಎಸ್‌ಬಿಐನ ಬಿಎಸ್‌ಬಿಡಿ ಗ್ರಾಹಕರಿಗೆ ನಾಲ್ಕು ಬಾರಿ ಉಚಿತ ಕ್ಯಾಶ್ ವಿತ್ ಡ್ರಾ ಸೌಲಭ್ಯವಿದೆ. ಉಚಿತ ಮಿತಿ ಮುಗಿದ ನಂತರ, ಬ್ಯಾಂಕ್ ಗ್ರಾಹಕರಿಗೆ ಶುಲ್ಕ ವಿಧಿಸುತ್ತದೆ. ಆದರೆ ಜುಲೈ 1 ರ ನಂತರ ಬ್ಯಾಂಕ್ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು 15 ರೂ. ಶುಲ್ಕದೊಂದಿಗೆ ಜಿಎಸ್ಟಿ ಅನ್ನು ಸಹ ವಿಧಿಸುತ್ತದೆ.

ಕರೋನಾ ಬಿಕ್ಕಟ್ಟಿನಿಂದಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗದು ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸಿದ್ದು, ಅದರ ಖಾತೆದಾರರಿಗೆ ಪರಿಹಾರ ನೀಡುತ್ತದೆ. ಗ್ರಾಹಕರು  ಮತ್ತೊಂದು ಶಾಖೆಗೆ ಹೋಗುವುದರ ಮೂಲಕ ತಮ್ಮ ಉಳಿತಾಯ ಖಾತೆಯಿಂದ 25 ಸಾವಿರ ರೂ.ಗಳನ್ನು ವಾಪಸಾತಿ ಫಾರ್ಮ್ ಮೂಲಕ ಹಿಂಪಡೆಯಲು ಸಾಧ್ಯವಾಗುತ್ತದೆ ಮತ್ತು ಇನ್ನೊಂದು ಶಾಖೆಗೆ ಹೋಗುವ ಚೆಕ್‌ ಮೂಲಕ 1 ಲಕ್ಷ ರೂ.ಗಳನ್ನು ಸಹ ಹಿಂಪಡೆಯಬಹುದು.

ಸ್ಟೇಟ್ ಬ್ಯಾಂಕಿನ ಸೇವಾ ಶುಲ್ಕದಲ್ಲಿ ಈ ಬದಲಾವಣೆಗಳು:
ಎಸ್‌ಬಿಐ ಬಿಎಸ್‌ಬಿಡಿ ಖಾತೆದಾರರಿಗೆ ಹಣಕಾಸು ವರ್ಷದಲ್ಲಿ 10 ಚೆಕ್‌ಗಳ ಪ್ರತಿಯನ್ನು ನೀಡಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಈಗ ಹೊಸ ನಿಯಮದ ಪ್ರಕಾರ, ಈಗ ಗ್ರಾಹಕರು 10 ಚೆಕ್‌ಗಳನ್ನು ಹೊಂದಿರುವ ಚೆಕ್ ಪುಸ್ತಕದಲ್ಲಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈಗ ಬಿಎಸ್‌ಬಿಡಿ ಬ್ಯಾಂಕ್ ಖಾತೆದಾರರು 10 ಚೆಕ್ ಲೀವ್ಸ್ ಪಡೆಯಲು 40 ರೂ., ಮತ್ತು 25 ಚೆಕ್ ಲೀವ್ಸ್ ಪಡೆಯಲು 75 ರೂ. ಪಾವತಿಸಬೇಕಾಗುತ್ತದೆ. ಇದರೊಂದಿಗೆ ಜಿಎಸ್‌ಟಿ ಶುಲ್ಕವನ್ನು ಸಹ  ಪಾವತಿಸಬೇಕಾಗುತ್ತದೆ. ತುರ್ತು ಚೆಕ್ ಬುಕ್‌ನ 10 ಲೀವ್ಸ್ ಗಳಿಗಾಗಿ 50 ರೂ. ಜೊತೆಗೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಆದರೆ, ಹಿರಿಯ ನಾಗರಿಕರಿಗೆ ಚೆಕ್‌ಬುಕ್‌ಗಳಲ್ಲಿನ ಹೊಸ ಸೇವಾ ಶುಲ್ಕವನ್ನು ಬ್ಯಾಂಕ್ ಮನ್ನಾ ಮಾಡಿದೆ.

 

Wednesday, 16 June 2021

'ಜನ್ ಧನ್' ಖಾತೆ ತೆರೆಯಲು ಬೇಕಾಗಿರುವ ದಾಖಲೆಗಳು.

ವಾಣಿಜ್ಯ:ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಖಾತೆಯನ್ನು ಶೂನ್ಯ ಸಮತೋಲದನಲ್ಲಿ ತೆರೆಯಬಹುದು. ದೇಶದ ಬಡ ಜನತೆ ಬ್ಯಾಂಕ್, ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಶೂನ್ಯ ಸಮತೋಲನದಲ್ಲಿ ಖಾತೆ ತೆರೆಯಬಹುದಾಗಿದೆ. ಪಿಎಂಜೆಡಿವೈ ಗ್ರಾಹಕರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ.

ಜನ್ ಧನ್ ಯೋಜನೆಯಡಿ ಖಾತೆ ತೆರೆಯಲು ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಥವಾ ಚಾಲನಾ ಪರವಾನಗಿ ಅಥವಾ ಪಾನ್ ಕಾರ್ಡ್, ಮತದಾರರ ಕಾರ್ಡ್, ಎನ್ಆರ್ಇಜಿಎ ಜಾಬ್ ಕಾರ್ಡ್, ಪ್ರಾಧಿಕಾರದಿಂದ ನೀಡಲಾದ ಪತ್ರ, ಫೋಟೋ ದಾಖಲೆ ಹೊಂದಿರುವ, ಗೆಜೆಟೆಡ್ ಅಧಿಕಾರಿಗಳಿಂದ ಸಹಿ ಇರುವ ಪತ್ರ ಬೇಕಾಗುತ್ತದೆ.
ಹೊಸ ಜನ್ ಧನ್ ಖಾತೆ ತೆರೆಯಲು ಹತ್ತಿರದ ಬ್ಯಾಂಕ್ಗೆ ಹೋಗಿ ಫಾರ್ಮ್ ಭರ್ತಿ ಮಾಡಬೇಕು. ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಅರ್ಜಿದಾರರ ವಿಳಾಸ, ನಾಮಿನಿ, ಉದ್ಯೋಗ,ವಾರ್ಷಿಕ ಆದಾಯ, ಎಸ್ಎಸ್ಎ ಕೋಡ್ ಅಥವಾ ವಾರ್ಡ್ ಸಂಖ್ಯೆ, ಗ್ರಾಮದ ಕೋಡ್ ಅಥವಾ ಟೌನ್ ಕೋಡ್ ಮುಂತಾದ ವಿವರವಾದ ಮಾಹಿತಿಯನ್ನು ನೀಡಬೇಕಾಗುತ್ತದೆ.
ಹಳೆಯ ಬ್ಯಾಂಕ್ ಖಾತೆಯನ್ನು ಜನ್ ಧನ್ ಖಾತೆಗೆ ವರ್ಗಾಯಿಸಬಹುದು. ಬ್ಯಾಂಕ್ ಶಾಖೆಗೆ ಭೇಟಿ ನೀಡಿ ರೂಪೆ ಕಾರ್ಡ್ಗೆ ಅರ್ಜಿ ಸಲ್ಲಿಸಬೇಕು. ಈ ಫಾರ್ಮ್ ಗೆ ಒಪ್ಪಿಗೆ ಸಿಕ್ಕ ನಂತರ ಬ್ಯಾಂಕ್ ಖಾತೆಯನ್ನು ಜನ ಧನ್ ಯೋಜನೆಗೆ ವರ್ಗಾಯಿಸಲಾಗುತ್ತದೆ.
ಈ ಖಾತೆಯನ್ನು ತೆರೆದ 6 ತಿಂಗಳ ನಂತರ ಓವರ್ಡ್ರಾಫ್ಟ್ ಸೌಲಭ್ಯ ಸಿಗಲಿದೆ. 2 ಲಕ್ಷ ರೂಪಾಯಿವರೆಗೆ ಆಕಸ್ಮಿಕ ವಿಮೆ ಸಿಗಲಿದೆ. 30,000 ರೂಪಾಯಿವರೆಗೆ ಲೈಫ್ ಕವರ್ ಸಿಗಲಿದೆ. ಠೇವಣಿ ಮೇಲಿನ ಬಡ್ಡಿ ಹಾಗೂ ಖಾತೆಯೊಂದಿಗೆ ಉಚಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಸಿಗಲಿದೆ. ಪಿಎಂ ಕಿಸಾನ್ ನಂತಹ ಯೋಜನೆಗಳಲ್ಲಿ ಪಿಂಚಣಿಗಾಗಿ ಖಾತೆ ತೆರೆಯುವುದು ಸುಲಭವಾಗಲಿದೆ.

Tuesday, 8 June 2021

ಎಚ್ಚರ: ಸಿಮ್ KYC ಹೆಸರಿನಲ್ಲಿ ನಡೆಯುತ್ತಿದೆ ವಂಚನೆ.

ದೇಶ ಒಂದು ಕಡೆ ಡಿಜಿಟಲ್ ಆಗ್ತಿದೆ. ಇನ್ನೊಂದು ಕಡೆ ನಿರುದ್ಯೋಗ ಹೆಚ್ಚಾಗ್ತಿದೆ. ಮತ್ತೊಂದು ಕಡೆ ಸೈಬರ್ ವಂಚನೆ ಜಾಸ್ತಿಯಾಗ್ತಿದೆ. ಜನರನ್ನು ಮೋಸ ಮಾಡಲು ಸೈಬರ್ ವಂಚಕರು ದಿನಕ್ಕೊಂದು ದಾರಿ ಹುಡುಕುತ್ತಿದ್ದಾರೆ.

ಇಲ್ಲಿಯವರೆಗೆ ಯುಪಿಐ ಮೂಲಕ, ಬ್ಯಾಂಕಿನ ಉದ್ಯೋಗಿಯಾಗಿ ಕೆವೈಸಿ ಮೂಲಕ ಮೋಸ ಮಾಡ್ತಿದ್ದರು. ಈಗ ಮೊಬೈಲ್ ಸಿಮ್‌ ಕೆವೈಸಿ ಪೂರ್ಣಗೊಳಿಸುವ ಹೆಸರಿನಲ್ಲಿ ಮೋಸ ಮಾಡ್ತಿದ್ದಾರೆ. ಇತ್ತೀಚೆಗಷ್ಟೆ ಸಿಮ್ ಪೊರ್ಟಲ್ ಮಾಡಿದವರನ್ನು ಗುರಿಯಾಗಿಸಿಕೊಳ್ತಿದ್ದಾರೆ. 
ಎಷ್ಟು ದಿನಗಳ ಹಿಂದೆ ಸಂಖ್ಯೆಯನ್ನು ಪೋರ್ಟ್ ಮಾಡಿದ್ದೀರಿ, ಹಿಂದೆ ಯಾವ ಕಂಪನಿಯ ಸಿಮ್ ಹೊಂದಿದ್ದಿರಿ ಎಂಬೆಲ್ಲ ಮಾಹಿತಿ ಅವರ ಬಳಿಯಿರುತ್ತದೆ. ನಿಧಾನವಾಗಿ ಗ್ರಾಹಕರನ್ನು ಮೋಸಗೊಳಿಸ್ತಾರೆ. ಮೊದಲು ಸಿಮ್ ಕೆವೈಸಿ ಬಗ್ಗೆ ಸಂದೇಶ ಕಳುಹಿಸುತ್ತಾರೆ. ಅದ್ರಲ್ಲಿ ಕೊನೆ ದಿನಾಂಕವನ್ನು ನಮೂದಿಸುತ್ತಾರೆ. ಕೊನೆ ದಿನಾಂಕದಂದು ಕರೆ ಮಾಡಿ ಮಾಹಿತಿ ಕೇಳುತ್ತಾರೆ. 
ಸಿಮ್ ಬಂದ್ ಮಾಡುವ ಭಯ ಹುಟ್ಟಿಸುತ್ತಾರೆ. ಮೊದಲು KYC ಗೆ ಅಪ್ಲಿಕೇಷನ್ ಡೌನ್ಲೋಡ್ ಮಾಡುವಂತೆ ಕೇಳುತ್ತಾರೆ. ನಂತ್ರ ಅಲ್ಲಿರುವ ಎಲ್ಲ ಷರತ್ತುಗಳಿಗೆ ಅಲೋ ನೀಡುವಂತೆ ಹೇಳ್ತಾರೆ. ಹೀಗೆ ಅವರು ಹೇಳಿದಂತೆಲ್ಲ ಮಾಡ್ತಾ ಹೋದಾಗ ಗ್ರಾಹಕರ ಎಲ್ಲ ವೈಯಕ್ತಿಕ ಮಾಹಿತಿ ಸಂಗ್ರಹ ಮಾಡ್ತಾರೆ. ಸಿಮ್ ಕೆವೈಸಿ ಹೆಸರಿನಲ್ಲಿ ಹಣ ಪಾವತಿ ಮಾಡುವಂತೆ ಹೇಳಿ ಬ್ಯಾಂಕ್ ಮಾಹಿತಿ ಪಡೆದು ಖಾತೆ ಖಾಲಿ ಮಾಡ್ತಾರೆ.

 

SBI ಗ್ರಾಹಕರಿಗೆ ಮಹತ್ವದ ಮಾಹಿತಿ : ಚೆಕ್ ಬುಕ್, ಎಟಿಎಮ್ ಹಣ ಡ್ರಾ ಸೇರಿದಂತೆ ಬದಲಾಗಿದೆ ಈ ಎಲ್ಲಾ ನಿಯಮಗಳು.

 ಭಾರತದ ಉನ್ನತ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ತನ್ನ ಎಟಿಎಂಗಳು ಮತ್ತು ಬ್ಯಾಂಕ್ ಶಾಖೆಗಳಿಂದ ನಗದು ಹಿಂಪಡೆಯುವಿಕೆಯ ನಿಯಮಗಳು ಮತ್ತು ಶುಲ್ಕಗಳನ್ನು ಬದಲಾಯಿಸಲು ಸಜ್ಜಾಗಿದೆ. ಹೊಸ ನಿಯಮವು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು SBI ಈ ಹಿಂದೆ ತಿಳಿಸಿದ್ದಾರೆ.

 ಹೊಸ ಶುಲ್ಕಗಳು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್ ಬಿಡಿ) ಖಾತೆದಾರರಿಗೆ ಅನ್ವಯವಾಗುತ್ತವೆ. ಎಟಿಎಂ ನಗದು ಹಿಂಪಡೆಯುವಿಕೆಯ ಮೇಲಿನ ಶುಲ್ಕಗಳಿಂದ ಹಿಡಿದು ಚೆಕ್ ಬುಕ್ ಗಳು ಮತ್ತು ಹಣಕಾಸು-ಅಲ್ಲದ ಟ್ಯಾನ್ ಕ್ರಿಯೆಗಳವರೆಗೆ, ಹೊಸ ನಿಬಂಧನೆಗಳ ಬಗ್ಗೆ ತಿಳಿಯಿರಿ…

SBI ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆ ಎಂದರೇನು?
ಎಸ್ ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆಯು ಸಮಾಜದ ಬಡ ವರ್ಗಗಳಿಗೆ ಯಾವುದೇ ಶುಲ್ಕ ಗಳು ಅಥವಾ ಶುಲ್ಕಗಳ ಹೊರೆಯಿಲ್ಲದೆ ಉಳಿತಾಯವನ್ನು ಪ್ರಾರಂಭಿಸಲು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ ಎಂದು ಕರೆಯಲ್ಪಡುವ, ಬಿಎಸ್ ಬಿಡಿ ಖಾತೆದಾರರಿಗೆ ಕನಿಷ್ಠ ಬ್ಯಾಲೆನ್ಸ್ ಅಥವಾ ಗರಿಷ್ಠ ಬ್ಯಾಲೆನ್ಸ್ ಅವಶ್ಯಕತೆ ಇಲ್ಲ. ಬಿಎಸ್ ಬಿಡಿ ಖಾತೆದಾರರಿಗೆ ಎಸ್ ಬಿಐ ಮೂಲ ರೂಪೇ ಎಟಿಎಂ ಮತ್ತು ಡೆಬಿಟ್ ಕಾರ್ಡ್ ನೀಡುತ್ತದೆ. ಮಾನ್ಯ ಕೆವೈಸಿ ದಾಖಲೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯು, ಎಸ್ ಬಿಐನಲ್ಲಿ ಬಿಬಿಎಸ್ ಡಿ ಖಾತೆಯನ್ನು ತೆರೆಯಬಹುದು.

SBI ಎಟಿಎಂಗಳಲ್ಲಿ ನಗದು ಹಿಂಪಡೆಯುವ ನಿಯಮಗಳು:


ಬಿಎಸ್ ಬಿಡಿ ಖಾತೆದಾರರಿಗೆ, ಪ್ರತಿ ತಿಂಗಳು ಎಟಿಎಂಗಳು ಮತ್ತು ಬ್ಯಾಂಕ್ ಶಾಖೆಗಳು ಸೇರಿದಂತೆ ನಾಲ್ಕು ಉಚಿತ ನಗದು ಹಿಂಪಡೆಯುವಿಕೆಗಳು ಲಭ್ಯವಿವೆ. ಉಚಿತ ಮಿತಿಯನ್ನು ಮೀರಿದ ಪ್ರತಿ ವಹಿವಾಟಿಗೆ ಬ್ಯಾಂಕ್ ೧೫ ರೂ. ಮತ್ತು ಜಿಎಸ್ಟಿ ಶುಲ್ಕವನ್ನು ವಿಧಿಸುತ್ತದೆ. ನಗದು ಹಿಂಪಡೆಯುವಿಕೆಯ ಶುಲ್ಕಗಳು ಗೃಹ ಶಾಖೆ ಮತ್ತು ಎಟಿಎಂಗಳು ಮತ್ತು ಎಸ್ ಬಿಐ ಅಲ್ಲದ ಎಟಿಎಂಗಳಲ್ಲಿ ಅನ್ವಯವಾಗುತ್ತವೆ.

ಚೆಕ್ ಬುಕ್ ಶುಲ್ಕಗಳು:

ಬಿಬಿಎಸ್ ಡಿ ಖಾತೆದಾರರಿಗೆ ಬ್ಯಾಂಕ್ ಒಂದು ಆರ್ಥಿಕ ವರ್ಷದಲ್ಲಿ 10 ಚೆಕ್ ಲೀವ್ ಗಳನ್ನು ಒದಗಿಸಲಿದೆ. ಅದರ ನಂತರ, ಚೆಕ್ ಗಳನ್ನು ಒದಗಿಸಲು ಎಸ್ ಬಿಐ ಸೆರ್ಟೈಲ್ ಮೊತ್ತವನ್ನು ವಿಧಿಸುತ್ತದೆ.

1) 10 ಚೆಕ್ ಲೀವ್ ಗಳಿಗೆ, ಬ್ಯಾಂಕ್ ರೂ 40 ಮತ್ತು ಜಿಎಸ್ಟಿ ಯನ್ನು ವಿಧಿಸುತ್ತದೆ.

2) 25 ಚೆಕ್ ಲೀವ್ ಗಳಿಗೆ, ಬ್ಯಾಂಕ್ ರೂ 75 ಮತ್ತು ಜಿಎಸ್ಟಿ ಯನ್ನು ವಿಧಿಸುತ್ತದೆ.

3) ತುರ್ತು ಚೆಕ್ ಬುಕ್ ಗೆ ರೂ 50 ಮತ್ತು 10 ಲೀವ್ , ಜಿಎಸ್ಟಿ ವೆಚ್ಚವಾಗಲಿದೆ.

ಆದಾಗ್ಯೂ, ಹಿರಿಯ ನಾಗರಿಕರಿಗೆ ಚೆಕ್ ಪುಸ್ತಕದ ಮೇಲೆ ಈ ಹೊಸ ಸೇವಾ ಶುಲ್ಕಗಳಿಂದ ವಿನಾಯಿತಿ ನೀಡಲಾಗುವುದು

ಮನೆ ಮತ್ತು ಗೃಹೇತರ ಶಾಖೆಗಳಲ್ಲಿ ಬಿಬಿಎಸ್ ಡಿ ಖಾತೆದಾರರು ಹಣಕಾಸುಯೇತರ ವಹಿವಾಟುಗಳಿಗೆ ಬ್ಯಾಂಕ್ ಯಾವುದೇ ಶುಲ್ಕಗಳನ್ನು ವಿಧಿಸುವುದಿಲ್ಲ. ಬಿಎಸ್ ಬಿಡಿ ಖಾತೆದಾರರಿಗೆ ಶಾಖೆ ಮತ್ತು ಪರ್ಯಾಯ ಚಾನೆಲ್ ಗಳಲ್ಲಿ ವರ್ಗಾವಣೆ ವಹಿವಾಟುಗಳು ಉಚಿತವಾಗಿರುತ್ತವೆ ಎಂದು SBI ತಿಳಿಸಿದ್ದಾರೆ.


ಇತರ ಶಾಖೆಗಳಲ್ಲಿ ಗ್ರಾಹಕರು ನಗದು ಹಿಂಪಡೆಯುವ ಮಿತಿಯನ್ನು ಬ್ಯಾಂಕ್ ಹೆಚ್ಚಿಸಿದೆ. 'ಈ ಸಾಂಕ್ರಾಮಿಕ ರೋಗದಲ್ಲಿ ನಮ್ಮ ಗ್ರಾಹಕರಿಗೆ ಬೆಂಬಲ ನೀಡಲು, ಎಸ್ ಬಿಐ ಚೆಕ್ ಮತ್ತು ವಿತ್ ಡ್ರಾ ಫಾರ್ಮ್ ಮೂಲಕ ಇತರ ಬ್ರಾಂಚ್ ಗಳಲ್ಲಿ ನಗದು ಹಿಂಪಡೆಯುವ ಮಿತಿಗಳನ್ನು ಹೆಚ್ಚಿಸಿದೆ' ಎಂದು ಬ್ಯಾಂಕ್ ಟ್ವಿಟರ್ ನಲ್ಲಿ ತಿಳಿಸಿದೆ.


ಎಸ್ ಬಿಐ ಇತ್ತೀಚೆಗೆ ಚೆಕ್ ಬಳಸಿ ನಗದು ಹಿಂಪಡೆಯುವಿಕೆಯನ್ನು ದಿನಕ್ಕೆ ₹೧ ಲಕ್ಷಕ್ಕೆ ಹೆಚ್ಚಿಸಿದೆ. ಉಳಿತಾಯ ಬ್ಯಾಂಕ್ ಪಾಸ್ ಬುಕ್ ಜೊತೆಗೆ ವಿತ್ ಡ್ರಾ ಫಾರ್ಮ್ ಬಳಸಿ ನಗದು ಹಿಂಪಡೆಯುವಿಕೆಯನ್ನು ದಿನಕ್ಕೆ ₹25,000 ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ, ಮೂರನೇ ಪಕ್ಷದ ನಗದು ಹಿಂಪಡೆಯುವಿಕೆಯನ್ನು ತಿಂಗಳಿಗೆ ₹50,000 ಕ್ಕೆ ನಿಗದಿಪಡಿಸಲಾಗಿದೆ (ಚೆಕ್ ಬಳಸಿ ಮಾತ್ರ).

'ಹಿಂಪಡೆಯುವ ನಮೂನೆಗಳ ಮೂಲಕ ಥರ್ಡ್ ಪಾರ್ಟಿ ಗೆ ಯಾವುದೇ ನಗದು ಪಾವತಿಗಳನ್ನು ಅನುಮತಿಸಲಾಗುವುದಿಲ್ಲ,' ಎಂದು ಬ್ಯಾಂಕ್ ಹೇಳಿದೆ. ಪರಿಷ್ಕೃತ ಮಿತಿಗಳು ಸೆಪ್ಟೆಂಬರ್ ೩೦ ರವರೆಗೆ ಮಾನ್ಯವಾಗಿರುತ್ತವೆ.

ಸಾರ್ವಜನಿಕರೇ ಗಮನಿಸಿ: ಕೊರೊನಾ ಲಸಿಕೆ ಪಡೆದಿಲ್ಲವೆಂದ್ರೆ ಸಿಗಲ್ಲ ಈ ಪಾಲಿಸಿ.


 ಕೊರೊನಾ ಲಸಿಕೆ ಈಗ ಅನಿವಾರ್ಯವಾಗಿದೆ. ಲಸಿಕೆ ಪಡೆಯದೆ ವಿದೇಶಿ ಪ್ರವಾಸ ಸಾಧ್ಯವಾಗ್ತಿಲ್ಲ. ಇದ್ರ ಜೊತೆಗೆ ಕೆಲ ಟರ್ಮ್ ಪಾಲಿಸಿ ಪಡೆಯಲು ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಮ್ಯಾಕ್ಸ್ ಲೈಫ್ ಮತ್ತು ಟಾಟಾ ಎಐಎಯಂತಹ ಕಂಪನಿಗಳು ಈಗ ಟರ್ಮ್ ಲೈಫ್ ಇನ್ಶುರೆನ್ಸ್ ಮತ್ತು ಇತರ ವಿಮೆಯನ್ನು ಖರೀದಿಸುವವರಿಗೆ ಕೋವಿಡ್ -19 ಲಸಿಕೆ ಪ್ರಮಾಣಪತ್ರಗಳನ್ನು ಕೇಳುತ್ತಿವೆ.

ಇನ್ನೂ ಅನೇಕ ಕಂಪನಿಗಳು ಕೊರೊನಾ ಲಸಿಕೆ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಿವೆ. ಮ್ಯಾಕ್ಸ್ ಲೈಫ್, 45 ವರ್ಷ ಮೇಲ್ಪಟ್ಟವರಿಗೆ ಟರ್ಮ್ ಪಾಲಿಸಿ ನೀಡಲು ಕೊರೊನಾ ಲಸಿಕೆ ಪ್ರಮಾಣಪತ್ರವನ್ನು ಅನಿವಾರ್ಯ ಮಾಡಿದೆ. ಇನ್ನು ಟಾಟಾ ಎಐಎ, ವಯಸ್ಸಿನ ಮಿತಿ ವಿಧಿಸಿಲ್ಲ. ಎಲ್ಲ ವಯಸ್ಸಿನವರೂ ಪಾಲಿಸಿ ಪಡೆಯುವ ಮೊದಲು ಮೊದಲ ಡೋಸ್ ಪ್ರಮಾಣಪತ್ರ ತೋರಿಸಬೇಕಾಗಿದೆ.


ಐಸಿಐಸಿಐ ಪ್ರುಡೆನ್ಶಿಯಲ್, ಟಾಟಾ ಎಐಎ ಮತ್ತು ಏಗಾನ್ ಲೈಫ್‌ನಂತಹ ಕೆಲವು ವಿಮೆ ಕಂಪನಿಗಳು 7 ರಿಂದ 15 ದಿನಗಳ ಕೂಲಿಂಗ್ ಆಫ್ ಪೀರಿಯಡ್ ಪೋಸ್ಟ್ ವ್ಯಾಕ್ಸಿನೇಷನ್ ಅನ್ನು ಪರಿಚಯಿಸಿವೆ. ಕೊರೊನಾದಿಂದಾಗಿ ಆರೋಗ್ಯ ವಿಮೆಗಳು ದುಬಾರಿಯಾಗಿವೆ. ಮಾತ್ರೆಗಳ ಬೆಲೆ ಹೆಚ್ಚಾದಂತೆ ಪ್ರೀಮಿಯಂಗಳು ಏರಿಕೆ ಕಂಡಿವೆ.

Monday, 7 June 2021

ವಿಲೀನಗೊಂಡ ಈ ಬ್ಯಾಂಕ್ ಗ್ರಾಹಕರಿಗೆ IFSC ಕೋಡ್, ಚೆಕ್ ಬುಕ್ ಬದಲಾವಣೆ ಬಗ್ಗೆ ಮುಖ್ಯ ಮಾಹಿತಿ.

ನವದೆಹಲಿ: ಕೆನರಾ ಬ್ಯಾಂಕ್ ನೊಂದಿಗೆ ವಿಲೀನಗೊಂಡ ಸಿಂಡಿಕೇಟ್ ಬ್ಯಾಂಕಿನ ಎಲ್ಲಾ ಖಾತೆದಾರರು ಭಾರತೀಯ ಹಣಕಾಸು ವ್ಯವಸ್ಥೆ ಕೋಡ್(ಐಎಫ್‌ಎಸ್) ಸ್ವಿಫ್ಟ್ ಕೋಡ್ ಮತ್ತು ಚೆಕ್ ಬುಕ್ ಗಳನ್ನು ಜುಲೈ 1 ರೊಳಗೆ ಬದಲಾವಣೆ ಮಾಡಿಕೊಳ್ಳಬೇಕಿದೆ.

ವಿಲೀನದ ಕಾರಣದಿಂದಾಗಿ ಈ ಬದಲಾವಣೆಯಾಗಿದೆ. SYNB ಯಿಂದ ಪ್ರಾರಂಭವಾಗುವ ಸಿಂಡಿಕೇಟ್ ಬ್ಯಾಂಕ್ ಖಾತೆದಾರರ ಎಲ್ಲಾ ಐಎಫ್‌ಎಸ್‌ಸಿ ಕೋಡ್‌ಗಳನ್ನು ಈಗ CNRB ಗೆ ಬದಲಾಯಿಸಲಾಗುವುದು ಎಂದು ಕೆನರಾ ಬ್ಯಾಂಕ್ ತಿಳಿಸಿದೆ.


ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿದ ನಂತರ, SYNB ಯಿಂದ ಪ್ರಾರಂಭವಾಗುವ ಎಲ್ಲಾ ಇ-ಸಿಂಡಿಕೇಟ್ ಐಎಫ್‌ಎಸ್‌ಸಿ ಕೋಡ್‌ಗಳನ್ನು ಬದಲಾಯಿಸಲಾಗಿದೆ. SYNB ಯಿಂದ ಆರಂಭವಾಗುವ ಎಲ್ಲಾ IFSC ಅನ್ನು 01.07.2021 ರಂದು ನಿಷ್ಕ್ರಿಯಗೊಳಿಸಲಾಗುತ್ತದೆ. ಈಗಿನಿಂದಲೇ NEFT / RTGS / IMPS ಕಳುಹಿಸುವಾಗ "ಸಿಎನ್‌ಆರ್‌ಬಿ" ಯಿಂದ ಪ್ರಾರಂಭವಾಗುವ ನಿಮ್ಮ ಹೊಸ ಐಎಫ್‌ಎಸ್‌ಸಿ ಕೋಡ್ ಅನ್ನು ಮಾತ್ರ ಬಳಸಲು ತಿಳಿಸಲಾಗಿದೆ.

ನಿಮ್ಮ ಐಎಫ್‌ಎಸ್‌ಸಿ ಕೋಡ್ ಮತ್ತು ಸ್ವಿಫ್ಟ್ ಕೋಡ್ ಹೇಗೆ ಬದಲಾಯಿಸುವುದು?


ಹೊಸ ಐಎಫ್‌ಎಸ್‌ಸಿ ಕೋಡ್ ಈಗ ಎಸ್‌ವೈಎನ್‌ಬಿ ಬದಲಿಗೆ ಸಿಎನ್‌ಆರ್‌ಬಿಯಿಂದ ಪ್ರಾರಂಭವಾಗಲಿದೆ. ತಮ್ಮ ಅಸ್ತಿತ್ವದಲ್ಲಿರುವ ಐಎಫ್‌ಎಸ್‌ಸಿ ಕೋಡ್ ಸಂಖ್ಯೆಗೆ 10000 ಅನ್ನು ಸೇರಿಸುವ ಅಗತ್ಯವಿದೆ. ಉದಾಹರಣೆಗೆ, ಹಿಂದಿನ ಐಎಫ್‌ಎಸ್‌ಸಿ ಕೋಡ್ ಎಸ್‌ವೈಎನ್‌ಬಿ 0003687 ಆಗಿದ್ದರೆ, ಈಗ ಬದಲಾದ ಐಎಫ್‌ಎಸ್‌ಸಿ ಕೋಡ್ ಸಿಎನ್‌ಆರ್‌ಬಿ 0013687 ಆಗಿರುತ್ತದೆ.


ಕೆನರಾ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ(www.canarabank.com.) ಹೋಮ್ ಪೇಜ್ ನಲ್ಲಿ ಹೊಸತೇನಿದೆ ಎಂಬ ವಿಭಾಗಕ್ಕೆ ಹೋಗಿ KIND ATTN: E SYNDICATE CUSTOMERS: ನಿಮ್ಮ ಹೊಸ IFSC ಕೋಡ್ ತಿಳಿದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಶಾಖೆಗೆ ಭೇಟಿ ನೀಡಬಹುದು ಅಥವಾ ಕಸ್ಟಮರ್ ಕೇರ್(1800 425 0018) ಗೆ ಕರೆ ಮಾಡಬಹುದು.


ವಿದೇಶಿ ವಿನಿಮಯ ವಹಿವಾಟಿಗೆ SWIFT ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಬಳಸಲಾಗುವ ಹಿಂದಿನ ಸಿಂಡಿಕೇಟ್ ಬ್ಯಾಂಕಿನ (SYNBINBBXXX) SWIFT ಕೋಡ್ ಅನ್ನು ಜುಲೈ 1, 2021 ರಿಂದ ನಿಲ್ಲಿಸಲಾಗುವುದು. ಎಲ್ಲಾ ಗ್ರಾಹಕರು ತಮ್ಮ ಯಾವುದೇ ವಿದೇಶಿ ವಿನಿಮಯ ಅಗತ್ಯಗಳಿಗಾಗಿ SWIFT ಕೋಡ್ (CNRBINBBBFD) ಬಳಸಲು ಸೂಚಿಸಲಾಗಿದೆ.


ಪ್ರಸ್ತುತ ಸಿಂಡಿಕೇಟ್ ಬ್ಯಾಂಕ್ ಚೆಕ್ ಪುಸ್ತಕ 2021 ರ ಜೂನ್ 30 ರವರೆಗೆ ಮಾನ್ಯವಾಗಿದೆ. ಎಲ್ಲಾ ಹಳೆಯ ಚೆಕ್‌ ಗಳನ್ನು 2021 ರ ಜೂನ್ 30 ರ ಮೊದಲು ಹೊಸ ಚೆಕ್‌ನೊಂದಿಗೆ ಬದಲಾಯಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಭಾರತದಾದ್ಯಂತ ಇಂಧನ ಬೆಲೆ ಗಗನಕ್ಕೇರುತ್ತಿದೆ, ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 101.52 ರೂ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 93.31 ರೂ.ಗಳಷ್ಟಿದ್ದರೆ, ಮುಂಬೈನಲ್ಲಿ ಸೋಮವಾರ ಪ್ರತಿ ಲೀಟರ್‌ಗೆ 101.52 ರೂ.ಗೆ ತಲುಪಿದ್ದರಿಂದ ಇಂಧನ ಬೆಲೆ ಭಾರತದಾದ್ಯಂತ ಗಗನಕ್ಕೇರಿದೆ.

ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 86.22 ರೂ., ಮುಂಬೈಯಲ್ಲಿ ಇದು ಲೀಟರ್‌ಗೆ 93.58 ರೂ.ಇತರ ರಾಜ್ಯಗಳು ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳಕ್ಕೆ ಸಾಕ್ಷಿಯಾಗಿವೆ. ಚೆನ್ನೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 96.71 ರೂ ಮತ್ತು ಡೀಸೆಲ್ ಅನ್ನು ಲೀಟರ್ಗೆ 90.92 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 95.28 ರೂ. ಮತ್ತು ಡೀಸೆಲ್ ಲೀಟರ್‌ಗೆ 89.07 ರೂ.

ಮೌಲ್ಯವರ್ಧಿತ ತೆರಿಗೆಯನ್ನು ಅವಲಂಬಿಸಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. 

Saturday, 5 June 2021

ಭಾರತ ಸರ್ಕಾರದ ಸ್ಕಿಜೋಫ್ರೇನಿಯಾವು COVID-19 ಬಿಕ್ಕಟ್ಟಿಗೆ ಕಾರಣವಾಯಿತು: ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್

ಮುಂಬೈ: ಔಷಧಿ ಉತ್ಪಾದನಾ ಪರಾಕ್ರಮ ಮತ್ತು ಹೆಚ್ಚಿನ ರೋಗನಿರೋಧಕ ಶಕ್ತಿಯಿಂದಾಗಿ ಭಾರತವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಉತ್ತಮ ಸ್ಥಾನದಲ್ಲಿದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಶುಕ್ರವಾರ ಸಂಜೆ ರಾಷ್ಟ್ರ ಸೇವಾ ದಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

ಸಾಂಕ್ರಾಮಿಕ ರೋಗದ ಎರಡನೇ ಅಲೆ ಹಿನ್ನೆಲೆಯಲ್ಲಿ ಸೇನ್ ಅವರ ಹೇಳಿಕೆಗಳು ಬಂದಿದ್ದು, ಅಧಿಕೃತವಾಗಿ ವರದಿಯಾದ ಪ್ರಕರಣಗಳ ಸಂಖ್ಯೆ ದಿನಕ್ಕೆ 4 ಲಕ್ಷಕ್ಕೂ ಹೆಚ್ಚು ಮತ್ತು ಪ್ರತಿದಿನ 4,500 ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ, ಮತ್ತು ಕಡಿಮೆ ವರದಿ ಮಾಡುವಿಕೆಯ ಬಗ್ಗೆಯೂ ಆತಂಕವಿದೆ.

ಕೆಲವು ಪ್ರಖ್ಯಾತ ವ್ಯಕ್ತಿಗಳು ಆರಂಭಿಕ "ವಿಜಯೋತ್ಸವ" ದ ಪ್ರಜ್ಞೆಯು ಬಿಕ್ಕಟ್ಟಿಗೆ ಕಾರಣವಾಯಿತು ಎಂದು ಹೇಳಿದ್ದಾರೆ. ಸರ್ಕಾರದಲ್ಲಿನ ಗೊಂದಲದಿಂದಾಗಿ ಬಿಕ್ಕಟ್ಟಿಗೆ ಕಳಪೆ ಪ್ರತಿಕ್ರಿಯೆ ನೀಡಿದ್ದರಿಂದ ಭಾರತವು ತನ್ನ ಸಾಮರ್ಥ್ಯದ ಮೇಲೆ ಆಡಲು ಸಾಧ್ಯವಿಲ್ಲ ಎಂದು ಸೇನ್ ಹೇಳಿದರು. "ಭಾರತದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಏನು ಮಾಡುತ್ತಿದೆ ಎಂಬುದಕ್ಕೆ ಸಾಲವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ ಹೆಚ್ಚು ಉತ್ಸುಕವಾಗಿದೆ. ಇದರ ಫಲಿತಾಂಶವು ಒಂದು ನಿರ್ದಿಷ್ಟ ಪ್ರಮಾಣದ ಸ್ಕಿಜೋಫ್ರೇನಿಯಾದಾಗಿದೆ" ಎಂದು ಸೇನ್ ಹೇಳಿದರು.

ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿರುವ ಸೇನ್, 1769 ರಲ್ಲಿ ಆಡಮ್ ಸ್ಮಿತ್ ಬರೆದ ಬರಹವನ್ನು ಉಲ್ಲೇಖಿಸಿದ್ದಾರೆ, ಇದರಲ್ಲಿ ಆಧುನಿಕ ಅರ್ಥಶಾಸ್ತ್ರದ ತಂದೆ ಒಬ್ಬರು ಒಳ್ಳೆಯ ಕೆಲಸಗಳನ್ನು ಮಾಡಿದರೆ, ಅದಕ್ಕೆ ಮನ್ನಣೆ ಸಿಗುತ್ತಾರೆ ಎಂದು ವಾದಿಸುತ್ತಾರೆ.

ಭಾರತವು ಬಹುಶಃ ಜಗತ್ತನ್ನು ಉಳಿಸುತ್ತದೆ ಎಂದು ಹೆಗ್ಗಳಿಕೆಗೆ ಪಾತ್ರವಾಗಲು ಇದು (ಸರ್ಕಾರ) ಪ್ರಯತ್ನಿಸುತ್ತಿತ್ತು. ಅದೇ ಸಮಯದಲ್ಲಿ, ಸಮಸ್ಯೆಯನ್ನು ಅಭಿವೃದ್ಧಿಪಡಿಸಲು ಮತ್ತು ದೇಶಾದ್ಯಂತದ ಭಾರತೀಯರ ಜೀವನದ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುತ್ತದೆ

ಭಾರತವು ಈಗಾಗಲೇ ಸಾಮಾಜಿಕ ಅಸಮಾನತೆಗಳಿಂದ ಬಳಲುತ್ತಿದೆ, ಬೆಳವಣಿಗೆ ಮತ್ತು ನಿರುದ್ಯೋಗವನ್ನು ದಾಖಲೆಯ ಗರಿಷ್ಠ ಮಟ್ಟದಲ್ಲಿದೆ, ಇದು ಸಾಂಕ್ರಾಮಿಕ ಸಮಯದಲ್ಲಿ ಕಾಡುತ್ತಿದೆ. "ಆರ್ಥಿಕತೆಯ ವೈಫಲ್ಯ ಮತ್ತು ಸಾಮಾಜಿಕ ಒಗ್ಗಟ್ಟಿನ ವೈಫಲ್ಯವು ಸಾಂಕ್ರಾಮಿಕ ದಾಳಿಯ ವೈಫಲ್ಯದ ಆಧಾರವಾಗಿದೆ" ಎಂದು ಅವರು ಹೇಳಿದರು, ಶಿಕ್ಷಣದ ಮೇಲಿನ ಮಿತಿಗಳು ಆರಂಭಿಕ ಲಕ್ಷಣಗಳು ಮತ್ತು ಚಿಕಿತ್ಸೆಯ ಪ್ರೋಟೋಕಾಲ್‌ಗಳನ್ನು ನಿರ್ಣಯಿಸುವಲ್ಲಿ ತೊಂದರೆಗಳಿಗೆ ಕಾರಣವಾಯಿತು.

ಸಾಮಾನ್ಯವಾಗಿ ಆರ್ಥಿಕ ಮತ್ತು ಸಾಮಾಜಿಕ ನೀತಿಗಳಲ್ಲಿ,ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯ ಮತ್ತು ಶಿಕ್ಷಣದಲ್ಲಿ "ದೊಡ್ಡ ರಚನಾತ್ಮಕ ಬದಲಾವಣೆ" ಯ ಬಗ್ಗೆ ಸೇನ್ ವಾದಿಸಿದರು. 

Monday, 31 May 2021

ಭಾರತದ ಜಿಡಿಪಿ ಶೇಕಡಾ 1.6 ರಷ್ಟು ಬೆಳೆಯುವ ನೀರೀಕ್ಷೆ, 2020-21ರಲ್ಲಿ ಶೇಕಡಾ 7.3 ಕ್ಕೆ ಸೀಮಿತ.

ನವದೆಹಲಿ: 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 1.6 ರಷ್ಟು ಏರಿಕೆಯಾಗಿದ್ದು, ಪೂರ್ಣ ವರ್ಷದ ಕುಗ್ಗುವಿಕೆಯನ್ನು ಶೇಕಡಾ 7.3 ಕ್ಕೆ ಸೀಮಿತಗೊಳಿಸಿದೆ ಎಂದು ಅಧಿಕೃತ ಅಂಕಿ ಅಂಶಗಳು ಸೋಮವಾರ ತಿಳಿಸಿವೆ.

ಸಾಂಧರ್ಬಿಕ ಚಿತ್ರ

ಹಿಂದಿನ 2020-21ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 0.5 ರಷ್ಟು ವಿಸ್ತರಣೆಗಿಂತ ನಾಲ್ಕನೇ ತ್ರೈಮಾಸಿಕ ಬೆಳವಣಿಗೆ ಉತ್ತಮವಾಗಿದೆ.

ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 2019-20ರ ಜನವರಿ-ಮಾರ್ಚ್ ಅವಧಿಯಲ್ಲಿ ಶೇಕಡಾ 3 ರಷ್ಟು ವಿಸ್ತರಿಸಿದೆ.

2020-21ರಲ್ಲಿ, ಭಾರತೀಯ ಆರ್ಥಿಕತೆಯು 2019-20ರಲ್ಲಿ 4 ಶೇಕಡಾ ವಿಸ್ತರಣೆಯ ವಿರುದ್ಧ ಶೇಕಡಾ 7.3 ರಷ್ಟು ಸಂಕುಚಿತಗೊಂಡಿತು, ಇದು COVID-19 ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವನ್ನು ತೋರಿಸುತ್ತದೆ.

ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಖಾತೆಗಳ ಮೊದಲ ಮುಂಗಡ ಅಂದಾಜಿನ ಪ್ರಕಾರ ಎನ್‌ಎಸ್‌ಒ 2020-21ರಲ್ಲಿ ಜಿಡಿಪಿ ಕುಗ್ಗುವಿಕೆಯನ್ನು ಶೇಕಡಾ 7.7 ರಷ್ಟನ್ನುಹೆಚ್ಚಿಸಿತು.

ಎನ್ಎಸ್ಒ ತನ್ನ ಎರಡನೇ ಪರಿಷ್ಕೃತ ಅಂದಾಜುಗಳಲ್ಲಿ, 2020-21ರಲ್ಲಿ ಶೇಕಡಾ 8 ರಷ್ಟು ಸಂಕೋಚನವನ್ನು ಹೆಚ್ಚಿಸಿತು.

2021 ರ ಜನವರಿ-ಮಾರ್ಚ್‌ನಲ್ಲಿ ಚೀನಾ ಶೇ 18.3 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಕೋವಿಡ್-ಏರುತ್ತಿರುವ ಬೆಲೆಗಳು,ಭಾರತವನ್ನು ಜರ್ಜರಿತವಾಗಿಸಿದೆ,ಹಣಕಾಸು ಮಂತ್ರಿ.!

 ಹಣಕಾಸು ಮಂತ್ರಿ, ನಿರ್ಮಲಾ ಸೀತಾರಾಮನ್

ಏಪ್ರಿಲ್ 2021 ರ ಚಿಲ್ಲರೆ ಹಣದುಬ್ಬರವು ಸಾಧಾರಣ 4.29% ಕ್ಕೆ ಇಳಿದಾಗ, ಸುಳ್ಳು ಪರಿಹಾರವನ್ನು ತಿಳಿಸುವ ಪ್ರಯತ್ನವನ್ನು ಮಾಡಿರಬಹುದು. ನೈಜ ಚಿತ್ರಣವು ತುಂಬಾ ವಿಭಿನ್ನವಾಗಿದೆ, ಏಕೆಂದರೆ ಸರಕುಗಳ ಬೆಲೆಗಳು - ವಿಶೇಷವಾಗಿ ಕಿರಾಣಿ ವಸ್ತುಗಳು ಮತ್ತು ಎಫ್‌ಎಂಸಿಜಿ ಸರಕುಗಳ ಬೆಲೆ ಏರಿಕೆಯಿಂದ ಸ್ಪಷ್ಟವಾಗಿದೆ.



 ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮಾತ್ರವಲ್ಲದೆ,ಅಗತ್ಯ ವಸ್ತುಗಳ ಬೆಲೆಗಳು ನಿಮ್ಮನ್ನುಕೆರಳುವಂತೆ ತೋರುತ್ತದೆ. ಖಾದ್ಯ ತೈಲ, ಚಹಾ ಮತ್ತು ದ್ವಿದಳ ಧಾನ್ಯಗಳ ಬೆಲೆಗಳು ಕಳೆದ ಒಂದು ವರ್ಷದಲ್ಲಿ ಎರಡು-ಅಂಕಿಯ ಬೆಳವಣಿಗೆಯನ್ನು ಕಂಡಿದ್ದು, ಖಾದ್ಯ ತೈಲ ಬೆಲೆಗಳು 50-55% ರಷ್ಟು ಏರಿಕೆಯಾಗಿದೆ.

ಉದಾಹರಣೆಗೆ, ಸಾಬೂನು ಸೇರಿದಂತೆ ಮನೆ ಮತ್ತು ವೈಯಕ್ತಿಕ ಆರೈಕೆ ವಸ್ತುಗಳಿಗೆ ಪ್ರಮುಖ ಘಟಕಾಂಶವಾಗಿರುವ ತಾಳೆ ಎಣ್ಣೆ 50% ರಷ್ಟು ಹೆಚ್ಚು ಬೆಳೆದಿದೆ.

ಕಳೆದ ಒಂದು ವರ್ಷದಲ್ಲಿ ಉಕ್ಕು ಮತ್ತು ತಾಮ್ರದಂತಹ ಲೋಹಗಳ ಬೆಲೆಗಳು 80% ರಷ್ಟು ಹೆಚ್ಚಿದ್ದರೆ, ಸತು, ಅಲ್ಯೂಮಿನಿಯಂ ಮತ್ತು ನಿಕ್ಕಲ್ ಬೆಲೆಗಳು ಇದೇ ಅವಧಿಯಲ್ಲಿ 50% ಕ್ಕಿಂತ ಹೆಚ್ಚಾಗಿದೆ. ಇವೆಲ್ಲವೂ ಒಂದು ಶತಮಾನದಲ್ಲಿ ಒಂದು ಸಾಂಕ್ರಾಮಿಕ ರೋಗವು ನೀಡಿದ ಹೊಡೆತಗಳೊಂದಿಗೆ ಸಾಮಾನ್ಯ ಮನುಷ್ಯನ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ.

ಈಗಾಗಲೇ ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ಮಧ್ಯೆ 30-40% ರಷ್ಟು ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ 2020-21ರಲ್ಲಿ ಸರ್ಕಾರವು ಹೆಚ್ಚುವರಿಯಾಗಿ 1.8 ಲಕ್ಷ ಕೋಟಿ ರೂ.ಹಣದುಬ್ಬರದ ಒತ್ತಡವನ್ನು ಸರಿದೂಗಿಸಲು ಎಪ್ಎಂಸಿಜಿ ಕಂಪನಿಗಳು ದೈನಂದಿನ ಬಳಕೆಯ ಉತ್ಪನ್ನಗಳಾದ ಡಿಟರ್ಜೆಂಟ್‌ಗಳು, ಸಾಬೂನುಗಳು, ಕ್ರೀಮ್‌ಗಳು, ಖಾದ್ಯ ತೈಲ ಮತ್ತು ಚಹಾಗಳಿಗಾಗಿ ಮತ್ತೊಂದು ಸುತ್ತಿನ ಬೆಲೆ ಏರಿಕೆಗೆ ಸಜ್ಜಾಗುತ್ತಿರುವುದರಿಂದ ನಾವುಗಳು ಮಾನಸಿಕವಾಗಿ ಸಿದ್ದರಾಗಬೇಕಾಗಿದೆ.

ಅರ್ಥಶಾಸ್ತ್ರಜ್ಞರು ಸಹ ಈಗ ಈಗಾಗಲೇ ಕುಸಿಯುತ್ತಿರುವ ಆರ್ಥಿಕತೆಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಚಿಂತೆ ಮಾಡಲು ಪ್ರಾರಂಭಿಸಿದ್ದಾರೆ.

"ಹೆಚ್ಚುತ್ತಿರುವ ಇನ್ಪುಟ್ ಬೆಲೆಗಳ ಮೇಲೆ, ಗ್ರಾಮೀಣ ಭಾರತದಲ್ಲಿ ಎರಡನೇ ಕೋವಿಡ್ -19  ತೀವ್ರತೆಯಿಂದ ಉಂಟಾದ ಪೂರೈಕೆ ಅಡೆತಡೆಗಳು ಹಣದುಬ್ಬರ ಒತ್ತಡವನ್ನು ಹೆಚ್ಚಿಸುತ್ತಿವೆ" ಎಂದು ಧರ್ಮಕೀರ್ತಿ ಜೋಶಿ ಕ್ರಿಸಿಲ್ ವರದಿಯಲ್ಲಿ ಬರೆದಿದ್ದಾರೆ.



Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...