Tuesday, 8 June 2021

ಎಚ್ಚರ: ಸಿಮ್ KYC ಹೆಸರಿನಲ್ಲಿ ನಡೆಯುತ್ತಿದೆ ವಂಚನೆ.

ದೇಶ ಒಂದು ಕಡೆ ಡಿಜಿಟಲ್ ಆಗ್ತಿದೆ. ಇನ್ನೊಂದು ಕಡೆ ನಿರುದ್ಯೋಗ ಹೆಚ್ಚಾಗ್ತಿದೆ. ಮತ್ತೊಂದು ಕಡೆ ಸೈಬರ್ ವಂಚನೆ ಜಾಸ್ತಿಯಾಗ್ತಿದೆ. ಜನರನ್ನು ಮೋಸ ಮಾಡಲು ಸೈಬರ್ ವಂಚಕರು ದಿನಕ್ಕೊಂದು ದಾರಿ ಹುಡುಕುತ್ತಿದ್ದಾರೆ.

ಇಲ್ಲಿಯವರೆಗೆ ಯುಪಿಐ ಮೂಲಕ, ಬ್ಯಾಂಕಿನ ಉದ್ಯೋಗಿಯಾಗಿ ಕೆವೈಸಿ ಮೂಲಕ ಮೋಸ ಮಾಡ್ತಿದ್ದರು. ಈಗ ಮೊಬೈಲ್ ಸಿಮ್‌ ಕೆವೈಸಿ ಪೂರ್ಣಗೊಳಿಸುವ ಹೆಸರಿನಲ್ಲಿ ಮೋಸ ಮಾಡ್ತಿದ್ದಾರೆ. ಇತ್ತೀಚೆಗಷ್ಟೆ ಸಿಮ್ ಪೊರ್ಟಲ್ ಮಾಡಿದವರನ್ನು ಗುರಿಯಾಗಿಸಿಕೊಳ್ತಿದ್ದಾರೆ. 
ಎಷ್ಟು ದಿನಗಳ ಹಿಂದೆ ಸಂಖ್ಯೆಯನ್ನು ಪೋರ್ಟ್ ಮಾಡಿದ್ದೀರಿ, ಹಿಂದೆ ಯಾವ ಕಂಪನಿಯ ಸಿಮ್ ಹೊಂದಿದ್ದಿರಿ ಎಂಬೆಲ್ಲ ಮಾಹಿತಿ ಅವರ ಬಳಿಯಿರುತ್ತದೆ. ನಿಧಾನವಾಗಿ ಗ್ರಾಹಕರನ್ನು ಮೋಸಗೊಳಿಸ್ತಾರೆ. ಮೊದಲು ಸಿಮ್ ಕೆವೈಸಿ ಬಗ್ಗೆ ಸಂದೇಶ ಕಳುಹಿಸುತ್ತಾರೆ. ಅದ್ರಲ್ಲಿ ಕೊನೆ ದಿನಾಂಕವನ್ನು ನಮೂದಿಸುತ್ತಾರೆ. ಕೊನೆ ದಿನಾಂಕದಂದು ಕರೆ ಮಾಡಿ ಮಾಹಿತಿ ಕೇಳುತ್ತಾರೆ. 
ಸಿಮ್ ಬಂದ್ ಮಾಡುವ ಭಯ ಹುಟ್ಟಿಸುತ್ತಾರೆ. ಮೊದಲು KYC ಗೆ ಅಪ್ಲಿಕೇಷನ್ ಡೌನ್ಲೋಡ್ ಮಾಡುವಂತೆ ಕೇಳುತ್ತಾರೆ. ನಂತ್ರ ಅಲ್ಲಿರುವ ಎಲ್ಲ ಷರತ್ತುಗಳಿಗೆ ಅಲೋ ನೀಡುವಂತೆ ಹೇಳ್ತಾರೆ. ಹೀಗೆ ಅವರು ಹೇಳಿದಂತೆಲ್ಲ ಮಾಡ್ತಾ ಹೋದಾಗ ಗ್ರಾಹಕರ ಎಲ್ಲ ವೈಯಕ್ತಿಕ ಮಾಹಿತಿ ಸಂಗ್ರಹ ಮಾಡ್ತಾರೆ. ಸಿಮ್ ಕೆವೈಸಿ ಹೆಸರಿನಲ್ಲಿ ಹಣ ಪಾವತಿ ಮಾಡುವಂತೆ ಹೇಳಿ ಬ್ಯಾಂಕ್ ಮಾಹಿತಿ ಪಡೆದು ಖಾತೆ ಖಾಲಿ ಮಾಡ್ತಾರೆ.

 

No comments:

Post a Comment