Showing posts with label Karnataka. Show all posts
Showing posts with label Karnataka. Show all posts

Tuesday, 13 December 2022

ಅಖಿಲ ಭಾರತ ಕನ್ನಡ ಸಮ್ಮೇಳನ :  ಪ್ರತಿನಿಧಿ ನೋಂದಣಿಗೆ ಡಿ.18 ಅಂತಿಮ ದಿನ

 

ಚಿತ್ರದುರ್ಗ : ಹಾವೇರಿಯಲ್ಲಿ ಜ.6 ರಿಂದ ಮೂರು ದಿನಗಳ ಜರುಗಲಿರುವ ಅಖಿಲ ಭಾರತ ಕನ್ನಡ ಸಮ್ಮೇಳನಕ್ಕೆ ಪ್ರತಿನಿಧಿ ನೊಂದಣಿಗೆ ಡಿ.18 ಅಂತಿಮ ದಿನವಾಗಿದೆ.

ಗೂಗಲ್ ಪ್ಲೇಸ್ಟೋರ್ ನಲ್ಲಿ ಕಸಾಪ ಎಂದು ಟೈಪ್ ಮಾಡಿದರೆ ಆಪ್ ತೆರೆದುಕೊಳ್ಳುತ್ತದೆ. ನಂತರ ಆನ್ ಲೈನ್ ನಲ್ಲಿ 500 ರೂಗಳನ್ನು ಪಾವತಿಸಿ ಪ್ರತಿನಿಧಿಯಾಗಲು ಅವಕಾಶವಿದೆ.

ಕಸಾಪ ಸದಸ್ಯರಾದ ನಂತರ ಪ್ರತಿನಿಧಿಯಾಗಿ ನೊಂದಾಯಿಸಬೇಕಾಗಿರುವುದು ಕಡ್ಡಾಯವಾಗಿದೆ. ಪ್ರತಿನಿಧಿಯಾಗಿ ನೊಂದಾಯಿಸಿದವರಿಗೆ ವಸತಿ, ರೈಟಿಂಗ್ ಪ್ಯಾಡ್, ಪೆನ್ನು ಸೇರಿದಂತೆ ಕಿಟ್,  ತಿಂಡಿ,ಊಟ ದ ಕೂಪನ್ ಮತ್ತು ಓಓಡಿ ಸೌಲಭ್ಯಗಳನ್ನು ನೀಡಲಾಗುವುದು.

ನೊಂದಾಯಿಸಿದವರಿಗೆ ಮಾತ್ರ ಸಮ್ಮೇಳನದಲ್ಲಿ ಭಾಗವಹಿಸಬಹುದು ಎಂಬ ಸುಳ್ಳು ವರದಿ ಹರಿದಾಡುತ್ತಿದೆ. ನೊಂದಾಯಿತ ಪ್ರತಿನಿಧಿಗಳಿಗೆ ವಸತಿ ಸೌಲಭ್ಯ ಮತ್ತು ಕೆಲವು ಸೌಲಭ್ಯಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು.  ಸಮ್ಮೇಳನದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಭಾಗವಹಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯಿದೆ.

ಆನ್‍ಲೈನ್ ನೊಂದಣಿಯಲ್ಲಿ ಸಮಸ್ಯೆಗಳು ಉಂಟಾದಲ್ಲಿ ಸಹಾಯ ವಾಣಿ ಸಂಖ್ಯೆಗಳಾದ 8123878812, 9448519073, 7795662064 ಗಳನ್ನು ಸಂಪರ್ಕಿಸಬಹುದಾಗಿದೆ.

ಹಾವೇರಿ ಚಿಕ್ಕ ನಗರವಾಗಿರುವುದರಿಂದ ಪ್ರತಿನಿಧಿಗಳಿಗೆ ವಸತಿ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ನಿಶ್ಚಿತವಾದ ಸಂಖ್ಯೆ ಅಗತ್ಯವಿದೆ. ಹಾವೇರಿಯನ್ನು ಹೊರತುಪಡಿಸಿ ಸಮೀಪದ ನಗರಗಳಲ್ಲಿಯೂ ವಸತಿಯನ್ನು ನೀಡಲಾಗುತ್ತಿದೆ.

ನೋಂದಾಯಿಸಿದ ಪ್ರತಿನಿಧಿಗಳಿಗೆ ಹಾಸ್ಟೆಲ್, ಶಾಲೆ ಸೇರಿದಂತೆ ನಾನಾ ಕಡೆಗಳಲ್ಲಿ ವಸತಿ ಒದಗಿಸಲಾಗುತ್ತದೆ.  ಮೊದಲು ಬಂದವರಿಗೆ ಮೊದಲ ಆದ್ಯತೆ ರೂಪದಲ್ಲಿ ವಸತಿ ನೀಡಲಾಗುತ್ತಿದೆ.

ಹೆಚ್ಚಿನ ಮಾಹಿತಿಗೆ  ಸಂಪರ್ಕಿಸಿ 9449510078, 9448664878, 9449759219.

The post ಅಖಿಲ ಭಾರತ ಕನ್ನಡ ಸಮ್ಮೇಳನ :  ಪ್ರತಿನಿಧಿ ನೋಂದಣಿಗೆ ಡಿ.18 ಅಂತಿಮ ದಿನ first appeared on Kannada News | suddione.



source https://suddione.com/all-india-kannada-conference-december-18-is-the-last-day-for-delegate-registration/

ಚುನಾವಣೆ ಮುಗಿಯುವ ತನಕ ಇಬ್ಬರ ಮಾತು ಮುಳುವಾಗದಿರಲಿ : ಸಿದ್ದರಾಮಯ್ಯ, ಡಿಕೆಶಿಗೆ ಕಿವಿ ಮಾತು ಹೇಳಿದರಾ ವೇಣುಗೋಪಾಲ್..?

ನವದೆಹಲಿ: ಕರ್ನಾಟಕದ ರಾಜ್ಯದ ಚುನಾವಣೆ ಸನಿಹವಾಗುತ್ತಿದ್ದಂತೆ ಮೂರು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಧಿಕಾರ ಹಿಡಿಯಲು ನಾನಾ ಕಸರತ್ತುಗಳನ್ನು ನಡೆಸುತ್ತಿವೆ. ಇದರ ನಡುವೆ ಕಾಂಗ್ರೆಸ್ ನಲ್ಲಿರುವ ಒಳ ಮುನಿಸು ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಆ ಮುನಿಸಿನಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಎಂದು ವೇಣುಗೋಪಾಲ್ ಅವರು ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಜೊತೆಗೆ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಭಾಗಿಯಾಗಿದ್ದರು.

ಈ ವೇಳೆ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ವೇಣುಗೋಪಾಲ್ ಅವರು ಕಿವಿ ಮಾತು ಹೇಳಿದ್ದಾರೆ. ನಿಮ್ಮಿಬ್ಬರ ಮಾತು, ಹೇಳಿಕೆಗಳು ವಿಭಿನ್ನವಾಗಿರುತ್ತದೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಕರ್ನಾಟಕದಲ್ಲಿನ ಕಾಂಗ್ರೆಸ್ ಗೆಲುವು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಉಳಿಸುವ ಗೆಲುವಾಗಲಿದೆ. ಮೊದಲು ಪಕ್ಷ ಆಮೇಲೆ ವ್ಯಕ್ತಿ. ಪಕ್ಷವೇ ಸೋತರೆ ಆಮೇಲೆ ಯಾರು ಏನು ಮಾಡುವುದಕ್ಕಲೆ ಆಗುವುದಿಲ್ಲ.

ಅನಗತ್ಯ ಹೇಳಿಕೆಗಳು ಬೇಡ. ಕರ್ನಾಟಕದಲ್ಲಿ ಪಕ್ಷದ ಸ್ಥಿತಿ ಉತ್ತಮವಾಗಿದೆ. ಪಕ್ಷಕ್ಕೆ ಹಿನ್ನಡೆಯಾದರೆ ಅದಕ್ಕೆ ನೀವಿಬ್ಬರೇ ಕಾರಣವಾಗಿರುತ್ತೀರಿ, ಬೇರೆ ಯಾರು ಆಗಿರುವುದಿಲ್ಲ. ಈ ನಾಲ್ಕು ತಿಂಗಳಲ್ಲಿ ನಿಮ್ಮಬ್ಬರ ಪ್ರತಿಷ್ಠೆಯ ಹೇಳಿಕೆ ಪಕ್ಷಕ್ಕೆ ಮುಳುವಾಗಬಾರದು ಎಂದು ತಿಳಿಸಿದ್ದಾರೆ.

The post ಚುನಾವಣೆ ಮುಗಿಯುವ ತನಕ ಇಬ್ಬರ ಮಾತು ಮುಳುವಾಗದಿರಲಿ : ಸಿದ್ದರಾಮಯ್ಯ, ಡಿಕೆಶಿಗೆ ಕಿವಿ ಮಾತು ಹೇಳಿದರಾ ವೇಣುಗೋಪಾಲ್..? first appeared on Kannada News | suddione.



source https://suddione.com/lets-not-talk-to-each-other-till-the-election-is-over/

Thursday, 8 December 2022

ಗುಜರಾತ್ ನಲ್ಲಿ ಬಿಜೆಪಿ ಗೆಲುವು : ರಾಜ್ಯದಲ್ಲಿ ಬದಲಾಗಬೇಕಿರುವುದರ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ..!

 

ಬೆಂಗಳೂರು: ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಏಳನೇ ಬಾರಿಗೂ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಕರ್ನಾಟಕದ ಮೇಲೂ ಗುಜರಾತ್ ಚುನಾವಣೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಗುಜರಾತ್ ನಲ್ಲಿ ಅನುಸರಿದ ಮಾದರಿಯನ್ನೇ ಕರ್ನಾಟಕದಲ್ಲೂ ಅನುಸರಿಸಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಹೇಳಿದಂತೆ ಕಾಣುತ್ತಿದೆ.

ಮುಂಬರುವ ಚುನಾವಣೆ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಅತಿ ಹೆಚ್ಚು ವಯಸ್ಸಾದ ನಾಯಕರಿಗೆ ಟಿಕೆಟ್ ಕೊಡುವ ಬಗ್ಗೆ ಚಿಂತನೆ ಮಾಡಬೇಕಿದೆ. ಹಲವು ಬಾರಿ ಗೆದ್ದಿದ್ದಾರೆ ಎಂಬ ಕಾರಣಕ್ಕೆ ಟಿಕೆಟ್ ಬೇಡ ಎಂದಿದ್ದಾರೆ. ಕರ್ನಾಟಕದಲ್ಲೂ ಹೊಸಬರಿಗೆ ಟಿಕೆಟ್ ಕೊಡುವ ಮಾದರಿ ಅನ್ವಯವಾಬೇಕಿದೆ ಎಂದು ಗುಜರಾತ್ ಮಾದರಿಯ ಬಗ್ಗೆ ಪರೋಕ್ಷವಾಗಿ ತಿಳಿಸಿದ್ದಾರೆ.

ಹಿರಿಯರಿಗೆ ಪರಿಷತ್ ನಲ್ಲಿ ಅವಕಾಶ ನೀಡದಲಿ. ಆದರೆ ಚುನಾವನೆಯಲ್ಲಿ ಯುವಕರಿಗೆ ಟಿಕೆಟ್ ನೀಡಲಿ. ಹೊಸಬರಿಗೆ ಅವಕಾಶ ನೀಡಬೇಕಿದೆ. ಇದನ್ನು ಪಕ್ಷದ ವೇದಿಕೆಯಲ್ಲೂ ಸಾಕಷ್ಟು ಸಾರಿ ಹೇಳಿದ್ದೇನೆ. ನಾವೂ ಇನ್ನೂ ಹಳೆ ಮಾದರಿಯನ್ನೇ ಅನುಸರಿಸುತ್ತಿದ್ದೇವೆ. ಅದು ಬದಲಾಗಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

The post ಗುಜರಾತ್ ನಲ್ಲಿ ಬಿಜೆಪಿ ಗೆಲುವು : ರಾಜ್ಯದಲ್ಲಿ ಬದಲಾಗಬೇಕಿರುವುದರ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ..! first appeared on Kannada News | suddione.



source https://suddione.com/sathish-jarakiholi-reacts-for-gujarath-elections/

Monday, 5 December 2022

ರಾಜ್ಯಕ್ಕೆ ಬರಬೇಡಿ ಎಂದಿದ್ದೇವೆ.. ಬಂದರೆ ಸೂಕ್ತ ಕ್ರಮ : ಮಹಾರಾಷ್ಟ್ರ ಸಚಿವರಿಗೆ ಸಿಎಂ ಬೊಮ್ಮಾಯಿ ವಾರ್ನಿಂಗ್

ಬೆಂಗಳೂರು: ಬೆಳಗಾವಿ ಜಿಲ್ಲೆಗೆ ನಾಳೆ ಮಹಾರಾಷ್ಟ್ರ ಸಚಿವರು ಬರುತ್ತಿದ್ದಾರೆ. ಆದ್ರೆ ಅವರು ಬರುವ ಅವಶ್ಯಕತೆ ಇಲ್ಲ ಎಂದು ಸಾಕಷ್ಟು ಹೋರಾಟ ನಡೆಯುತ್ತಿದೆ. ಕರ್ನಾಟಕ ಏಕೀಕರಣ ಸಮಿತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಎಂಇಎಸ್ ಪುಂಡರ ನಡೆಗೆ ಧಿಕ್ಕಾರ ಕೂಗುತ್ತಿದ್ದಾರೆ.

ಈ ಸಂಬಂಧ ಮಾತನಾಡಿರುವ ಸಿಎಂ ಬೊಮ್ಮಾಯಿ ಅವರು, ಮಹಾರಾಷ್ಟ್ರ ಮತ್ತು ಕರ್ನಾಟ ಜನರ ನಡುವೆ ಸಾಮಾರಸ್ಯವಿದೆ. ಅದೆ ಸಂದರ್ಭದಲ್ಲಿ ಗಡಿ ವಿವಾದ ಕೂಡ ಇದೆ. ಆದ್ರೆ ಪದೇ ಪಪೇ ಕೆಣಕುವಂತ ಕೆಲಸಗಳು ಆಗುತ್ತಿವೆ. ಈ ಕೇಸ್ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿದೆ. ಈ ಸಂದರ್ಭದಲ್ಲಿ ಪ್ರಚೋದನಕಾರಿಯಾದಂತ ಪ್ರವಾಸ ಮಾಡುವುದು ಅತ್ಯಂತ ಭಾವನೆ ಕೆರೆಳಿಸುವಂತ ಕೆಲಸವಾಗುತ್ತದೆ. ಹೀಗಾಗಿ ಬರುವುದು ಬೇಡ ಎಂದು ಸೂಚನೆ ನೀಡಲಾಗಿದೆ. ಅಕಸ್ಮಾತ್ ಬರುವಂತ ಕೆಲಸ ಮಾಡಿದರೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದಿದ್ದಾರೆ.

ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಕಾನೂನು ಉಲ್ಲಂಘನೆ ಹಾಗೂ ಭಾವನಾತ್ಮಕ ವಿಚಾರದಲ್ಲಿ ಕೆಣಕಿದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಬೆಳಗಾವಿ ಶಾಂತವಾಗಿದೆ. ಅದನ್ನು ಕೆಡಿಸುವುದಕ್ಕೆ ಬಿಡುವುದಿಲ್ಲ. ನೆಲ, ಜಲ ಕಾಪಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.

The post ರಾಜ್ಯಕ್ಕೆ ಬರಬೇಡಿ ಎಂದಿದ್ದೇವೆ.. ಬಂದರೆ ಸೂಕ್ತ ಕ್ರಮ : ಮಹಾರಾಷ್ಟ್ರ ಸಚಿವರಿಗೆ ಸಿಎಂ ಬೊಮ್ಮಾಯಿ ವಾರ್ನಿಂಗ್ first appeared on Kannada News | suddione.



source https://suddione.com/we-have-told-you-not-to-come-to-the-state-appropriate-action-if-you-come-cm-bommai-warns-maharashtra-ministers/

Tuesday, 29 November 2022

ಬಿಗ್ ಬಾಸ್ ಮನೆಗೆ ಬಂದ್ರು ದಿವ್ಯಾ, ರಾಕಿ ಅಮ್ಮ

ಬಿಗ್ ಬಾಸ್ ಮನೆಯಲ್ಲಿ 65 ದಿನಗಳತ್ತ ಹೆಜ್ಜೆ ಹಾಕುತ್ತಿದ್ದಾರೆ ಸ್ಪರ್ಧಿಗಳು. ಮನೆಯವರನ್ನು ಬಿಟ್ಟು, ಸ್ನೇಹಿತರನ್ನು ಬಿಟ್ಟು ಬಿಗ್ ಬಾಸ್ ಮನೆಯೊಳಗಡೆಯೇ ಸಮಯ ಕಳೆಯುತ್ತಿದ್ದಾರೆ. ಎರಡೂವರೆ ತಿಂಗಳಾಗುತ್ತಾ ಬರುತ್ತಿದೆ ಮನೆಯವರನ್ನು ನೋಡಿ, ಹೀಗಾಗಿ ಇಂದಿನಿಂದ ಬಿಗ್ ಬಾಸ್ ಫ್ಯಾಮಿಲಿ ರೌಂಡ್ ಶುರು ಮಾಡಿದೆ. ಮನೆ ಮಂದಿಗೆ ಬಿಗ್ ಸಪ್ರೈಸ್ ನೀಡಿದೆ.

ದಿವ್ಯಾ, ಇತ್ತೀಚೆಗೆ ಹೆಲ್ತ್ ಪ್ರಾಬ್ಲಮ್ ನಿಂದ ಸ್ವಲ್ಪ ಡಲ್ ಆಗಿದ್ದರು. ಫ್ಯಾಮಿಲಿಯನ್ನು ಮಿಸ್ ಮಾಡಿಕೊಳ್ಳುತ್ತಾ ಇದ್ದರು. ಮೊದಲ ದಿನವೇ ಅವರ ಅಮ್ಮನನ್ನು ಬಿಗ್ ಬಾಸ್ ಮನೆಗೆ ಕಳುಹಿಸಿದೆ. ಅಮ್ಮನನ್ನು ನೋಡಿದ ಖುಷಿಗೆ ಓಡೋಡಿ ಬಂದು ತಬ್ಬಿಕೊಂಡಿದ್ದಾರೆ. ದಿವ್ಯಾ ಅಮ್ಮ ಕೂಡ ಕಣ್ಣೀರು ಹಾಕಿ, ಮಗಳನ್ನು ತಬ್ಬಿ ಭಾವುಕರಾಗಿದ್ದಾರೆ.

ಬಳಿಕ ಮನೆಯೊಳಗೆ ರಾಕೇಶ್ ಅಮ್ಮ ಬಂದಿದ್ದಾರೆ. ಬಂದೊಡನೆ ನಗು ನಗುತ್ತಾ ಮಗನನ್ನು ತಬ್ಬಿ, ಕ್ಯಾಪ್ಟನ್ ಆಗಿದ್ದು ತುಂಬಾ ಖುಷಿ ಆಯ್ತು. ಯಾವಾಗ ಆಗ್ತೀಯಾ ಅಂತ ಕಾಯ್ತಾ ಇದ್ದೆ. ನೋಡಿದಾಗೆಲ್ಲಾ ಈ ನನ್ ಮಗನದ್ದು ಇಷ್ಟೆ ಅಂತ ಅನ್ನಿಸ್ತಾ ಇತ್ತು ಎಂದಿದ್ದಾರೆ. ಇಬ್ಬರ ಅಮ್ಮಂದಿರನ್ನು ನೋಡಿದ ಮನೆ ಮಂದಿಗೆ ಫುಲ್ ಖುಷಿಯಾಗಿದೆ. ತಮ್ಮ ಮನೆಯಿಂದಾನು ಯಾರಾದ್ರೂ ಬರಬಹುದು ಎಂದು ಕಾಯುತ್ತಿದ್ದಾರೆ.

The post ಬಿಗ್ ಬಾಸ್ ಮನೆಗೆ ಬಂದ್ರು ದಿವ್ಯಾ, ರಾಕಿ ಅಮ್ಮ first appeared on Kannada News | suddione.



source https://suddione.com/divya-rocky-amma-came-to-the-bigg-boss-house/

Saturday, 26 November 2022

ಕಣ್ಣು ಬಿಟ್ಟು ಕಣ್ಣು ಮುಚ್ಚಿದ ಶಿವಲಿಂಗ : ಮಾಗಡಿಯಲ್ಲಿ ಶಿವನನ್ನು ನೋಡಲು ಬಂದ ಜನ..!

 

 

ರಾಮನಗರ: ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಅಣ್ಣಾವ್ರು ಶಿವನಿಗೆ ಕಣ್ಣು ಬರಿಸಿದ್ದನ್ನು ನೋಡಿದ್ದೇವೆ. ಆದ್ರೆ ಈ ಕಾಲದಲ್ಲೂ ಶಿವನಿಗೆ ಕಣ್ಣು ಬರುತ್ತೆ ಎಂದರೆ ನೀವೂ ನಂಬುತ್ತೀರಾ..? ನಂಬಲೇಬೇಕಾದಂತ ಘಟನೆಯೊಂದು ರಾಮನಗರದಲ್ಲಿ ನಡೆದಿದೆ.

ರಾಮನಗರ ಜಿಲ್ಲೆಯಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಒಂದು ಪುರಾತನ ಕಾಲದ ಶಿವನ ದೇವಸ್ಥಾನವಿದೆ. ಉಮಾಮಹೇಶ್ವರಿ ದೇವಾಲಯ. ಈ ದೇವಾಲಯದಲ್ಲಿ ದೇವರ ಪೂಜೆ ನಡೆದಿದೆ. ಪೂಜೆಯ ವೇಳೆ ಸಂಜೆ 6.30ರ ಸಮಯಕ್ಕೆ ಅಚ್ಚರಿ ಎಂಬಂತೆ ಶಿವ ಕಣ್ಣು ಬಿಟ್ಟಿದ್ದಾನೆ. ಇದನ್ನು ಕಂಡು ಎಲ್ಲರೂ ದಂಗಾಗಿದ್ದಾರೆ.

ಶಿವ ಕಣ್ಣು ಬಿಟ್ಟು ಕಣ್ಣು ಬಿಟ್ಟ ಅಂತ ಎಲ್ಲೆಡೆಯೂ ಸುದ್ದಿ ಹಬ್ಬಿದೆ. ತಕ್ಷಣ ಊರಿನ ಜನರೆಲ್ಲಾ ಶಿವನನ್ನು ನೋಡಲು ಓಡೋಡಿ ಬಂದಿದ್ದಾರೆ. ಮೊಬೈಲ್ ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಭಕ್ತಿಯಿಂದ ಕೈ ಮುಗಿದಿದ್ದಾರೆ, ವಿಶೇಷ ಪೂಜೆಯನ್ನು ಮಾಡಿಸಿದ್ದಾರೆ. ಆದ್ರೆ ರಾತ್ರಿ 9ರ ಸುಮಾರಿಗೆ ಶಿವ ಕಣ್ಣು ಮುಚ್ಚಿದ್ದಾನೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

The post ಕಣ್ಣು ಬಿಟ್ಟು ಕಣ್ಣು ಮುಚ್ಚಿದ ಶಿವಲಿಂಗ : ಮಾಗಡಿಯಲ್ಲಿ ಶಿವನನ್ನು ನೋಡಲು ಬಂದ ಜನ..! first appeared on Kannada News | suddione.



source https://suddione.com/%e0%b2%95%e0%b2%a3%e0%b3%8d%e0%b2%a3%e0%b3%81-%e0%b2%ac%e0%b2%bf%e0%b2%9f%e0%b3%8d%e0%b2%9f%e0%b3%81-%e0%b2%95%e0%b2%a3%e0%b3%8d%e0%b2%a3%e0%b3%81-%e0%b2%ae%e0%b3%81%e0%b2%9a%e0%b3%8d%e0%b2%9a/

Thursday, 24 November 2022

ಉಗ್ರ ಸಂಘಟನೆಯ ಟಾರ್ಗೆಟ್ ದೇವಸ್ಥಾನಗಳಂತೆ : ಹೊರ ಬಿತ್ತು ಭಯಾನಕ ಸತ್ಯ

 

ಬೆಂಗಳೂರು: ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ. ಇದೀಗ ಈ ಬ್ಲಾಸ್ಟ್ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ವೆನ್ಸ್ ಕೌನ್ಸಿಲ್ ಸಂಘಟನೆ ಹೊಣೆ ಹೊತ್ತುಕೊಂಡಿದ್ದು, ಹಿಂದೂ ದೇವಾಲಯಗಳೇ ನಮ್ಮ ಟಾರ್ಗೆಟ್ ಆಗಿದ್ದವು ಎಂದಿದೆ. ಈ ವಿಚಾರ ಈಗ ಕೇಳಿದವರಿಗೆ ಮೈಝುಮ್ಮೆನಿಸುವಂತೆ ಮಾಡಿದೆ.

ಇಸ್ಲಾಮಿಕ್ ರೆಸಿಸ್ವೆನ್ಸ್ ಕೌನ್ಸಿಲ್ ಹೆಸರು ಬರೆಯಲಾಗಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಾರ್ಕ್ ವೆಬ್ ಮೂಲಕ ಅರೆಬಿಕ್ ಭಾಷೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಈ ಪೋಸ್ಟ್ ನಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ಶಂಕಿತ ಆರೋಪಿ ಶಾರಿಕ್ ಫೋಟೋಗಳನ್ನು ಸಹ ಮುದ್ರಿಸಲಾಗಿದೆ.

ಪೋಸ್ಟ್ ನಲ್ಲಿ, ಕೇಸರಿ ಉಗ್ರರನ್ನು ಗುರಿಯಾಗಿಸಿಕೊಂಡು ನಮ್ಮ ಸಹೋದರ ಮೊಹಮ್ಮದ್ ಶಾರೀಕ್ ಕದ್ರಿ ದೇವಸ್ಥಾನವನ್ನು ಟಾರ್ಗೆಟ್ ಮಾಡಿದ್ದನು. ಆದರೆ ಅದರ ಉದ್ದೇಶ ಪೂರೈಸದೆ ಇದ್ದರು ನಾವೂ ವ್ಯಾಪಾರ ಮತ್ತು ತಂತ್ರಗಳನ್ನು ದೃಷ್ಟಿಕೋನದಿಂದ ಯಶಸ್ವಿಯಾಗಿದ್ದೇವೆ. ಸಹೋದರನ ಬಂಧನಕ್ಕೆ ಸಂತಸಪಡುತ್ತಿರುವ ಅದರಲ್ಲೂ ಎಡಿಜಿಪಿ ಅಲೋಕ್ ಕುಮಾರ್ ಅಂತವರ ಸಂತೋಷವೂ ಅಲ್ಪಕಾಲಿಕವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದೆ.

The post ಉಗ್ರ ಸಂಘಟನೆಯ ಟಾರ್ಗೆಟ್ ದೇವಸ್ಥಾನಗಳಂತೆ : ಹೊರ ಬಿತ್ತು ಭಯಾನಕ ಸತ್ಯ first appeared on Kannada News | suddione.



source https://suddione.com/temples-are-the-target-of-terrorist-organizations-the-shocking-truth-has-come-out/

Sunday, 20 November 2022

ಚಿಕ್ಕಬಳ್ಳಾಪುರದಲ್ಲಿ ಬಸ್ ಅಪಘಾತ.. 30ಕ್ಕೂ ಹೆಚ್ಚು ಮಂದಿಗೆ ಗಾಯ..!

 

ಚಿಕ್ಕಬಳ್ಳಾಪುರ: ಚಾಲಕನ ಯಡವಟ್ಟಿನಿಂದಾಗಿ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಪರಿಣಾಮ ಬಸ್ ನಲ್ಲಿದ್ದ 30ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ಚಿಂತಾಮಣಿ ತಾಲೂಕಿನ ಅಮಿಟಗಾಹಳ್ಳಿಯಲ್ಲಿ ನಡೆದಿದೆ.

ಭಾರತಿ ಎಂಬ ಖಾಸಗಿ ಬಸ್ ಹಿಂದೂಪುರದಿಂದ ತಿರುಪತಿಗೆ ತೆರಳುತ್ತಿತ್ತು. ಈ ವೇಳೆ ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತ ಬಸ್ ಚಲಾಯಿಸುತ್ತಿದ್ದ. ಬಸ್ ನಲ್ಲಿ 45ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. ಚಾಲಕನ ಮೊಬೈಲ್ ಬಳಕೆಯಿಂದ ನಿಯಂತ್ರಣ ತಪ್ಪಿ, ಬಸ್ ರಸ್ತೆ ಬದಿ ಉರುಳಿಬಿದ್ದಿದೆ.

ಪರಿಣಾಮ ಬಸ್ ನಲ್ಲಿದ್ದ 30 ಜನರಿಗೆ ಗಾಯಗಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇನ್ನು ಕೆಲವರಿಗೆ ಕಣ್ಣು, ಬೆನ್ನುಮೂಳೆ, ಕೈ ಕಾಲು ಪೆಟ್ಟಾಗಿದೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

The post ಚಿಕ್ಕಬಳ್ಳಾಪುರದಲ್ಲಿ ಬಸ್ ಅಪಘಾತ.. 30ಕ್ಕೂ ಹೆಚ್ಚು ಮಂದಿಗೆ ಗಾಯ..! first appeared on Kannada News | suddione.



source https://suddione.com/bus-accident-in-chikkaballapur-more-than-30-people-injured/

Saturday, 19 November 2022

ಸಂಪೂರ್ಣ ಮಾಹಿತಿ ನೀಡದೆ ಇದ್ದರೆ ಕೂಡಿ ಬೀಗ ಹಾಕ್ತೀನಿ : ಅಧಿಕಾರಿಗೆ ಎಚ್ಚರಿಕೆ ಕೊಟ್ಟ ಸಚಿವ ಸೋಮಣ್ಣ..!

 

ಚಾಮರಾಜನಗರ: ರೈತರ ವಿಚಾರವಾಗಿ, ಅವರ ಭೂಮಿ ವಿಚಾರವಾಗಿ ಸಚಿವ ವಿ ಸೋಮಣ್ಣ ಅಧಿಕಾರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸಂಪೂರ್ಣ ಮಾಹಿತಿ ನೀಡದೆ ಹೋದರೆ ಇಲ್ಲೆ ರೂಮಿನೊಳಗೆ ಕೂಡಿ ಹಾಕಿ, ಬೀಗ ಹಾಕಿ ಹೋಗುತ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಸಭಾಂಗಣದಲ್ಲಿ ರೈತರಿಗೆ ಸಂಬಂಧಿಸಿದ ವಿಷಯಗಳು ಹಾಗೂ ಕೆರೆಗಳಿಗೆ ನೀರು ತುಂಬಿಸುವ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಲಾಗಿತ್ತು. ಈ ವೇಳೆ ರೈತರು ಕೂಡ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ರೈತರ ಸಮಸ್ಯೆ ಕೇಳಿದ ಸಚಿವ ಸೋಮಣ್ಣ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತರ ಭೂಮಿ, ರಸ್ತೆಗಳು ಈ ಅಕ್ರಮ ಗಣಿಗಾರಿಕೆಯಿಂದ ಹಾಳಾಗುತ್ತಿದೆ. ಸ್ಥಗಿತಗೊಂಡ ಗಣಿಗಳಲ್ಲೂ ಗಣಿಗಾರಿಕೆ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳು ಯಾರು ಸ್ಪಂದಿಸುತ್ತಿಲ್ಲ ಎಂದು ರೈತರು ತಮ್ಮ ಸ್ಥಳೀಯವಾದ ಸಮಸ್ಯೆಗಳನ್ನು ಸಚಿವರ ಮುಂದೆ ತೋಡಿಕೊಂಡಿದ್ದಾರೆ.

ಈ ವೇಳೆ ಸಚಿವ ಸೋಮಣ್ಣ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನನಗೆ ಗೊತ್ತಿದೆ. ಈತ ಬಹಳ ಖತರ್ನಾಕ್. ಕೋರ್ಟ್ ನಲ್ಲಿ ಸ್ಟೇ ತಂದು ನೀವೆ ಗಣಿಗಾರಿಕೆ ಆರಂಭಿಸಿದ್ದೀರಾ..? ಏಜೆಂಟ್ ರೀತಿ ಕೆಲಸ ಮಾಡುತ್ತೀರಾ..? ಇವತ್ತು ಎಷ್ಟೊತ್ತೇ ಆಗಲಿ. ರೈತರಿಗೆ ಸಂಬಂಧಪಟ್ಟಂತ ಎಲ್ಲಾ ಮಾಹಿತಿ ನೀಡಬೇಕು. ಇಲ್ಲವಾದರೇ ರೂಮಿನಲ್ಲಿ ಕೂಡಿ ಹಾಕಿ ಲಾಕ್ ಮಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ.

The post ಸಂಪೂರ್ಣ ಮಾಹಿತಿ ನೀಡದೆ ಇದ್ದರೆ ಕೂಡಿ ಬೀಗ ಹಾಕ್ತೀನಿ : ಅಧಿಕಾರಿಗೆ ಎಚ್ಚರಿಕೆ ಕೊಟ್ಟ ಸಚಿವ ಸೋಮಣ್ಣ..! first appeared on Kannada News | suddione.



source https://suddione.com/if-you-do-not-give-complete-information-you-will-be-locked-up-minister-somanna-warned-the-officer/

Saturday, 5 November 2022

ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಾ 3 ಅಮಾನುಷ ಸಾವಿನ ಬಗ್ಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ? : ಸುಧಾಕರ್ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಕಾರ್ಡ್ ಇಲ್ಲ ಅಂತ ತುಂಬು ಗರ್ಭೀಣಿಯನ್ನು ಮನೆಗೆ ಕಳುಹಿಸಿ ಮೇಲೆ ಮನೆಯಲ್ಲಿಯೇ ಹೆರಿಗೆಯಾಗಿ ಮಕ್ಕಳು ಮತ್ತು ತಾಯಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ, ಸಚಿವ ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾನ್ಯ @mla_sudhakar ಅವರೇ; ಸಾವು, ಕ್ರೌರ್ಯವನ್ನೇ ಸಂಭ್ರಮಿಸುವ ʼಸಾವುಗೇಡಿ ಸರಕಾರʼದ ಆಡಳಿತದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಸಾವಿನಕೂಪಗಳನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ನಿಮ್ಮದು. ತುಮಕೂರು ಆಸ್ಪತ್ರೆ ಮತ್ತು ವೈದ್ಯೆಯ ದರ್ಪದಿಂದ ಆದ 3 ಅಮಾನುಷ ಸಾವುಗಳ ಬಗ್ಗೆ ನಿಮಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ?.

ಡಾ.ಸುಧಾಕರ್ ಅವರೇ; ನಾನು ಎತ್ತಿದ ಪ್ರಶ್ನೆ ಏನು? ನೀವು ಕೊಟ್ಟ ಉತ್ತರವೇನು? ಮನುಷ್ಯತ್ವ ಇದೆಯಾ ನಿಮಗೆ? ನಿಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರೆ; ಆ ಬಾಣಂತಿ, ಆಕೆಯ ಎರಡು ನವಜಾತ ಶಿಶುಗಳ ಧಾರುಣ ಸಾವನ್ನೂ ಸಂಭ್ರಮಿಸುತ್ತಿದ್ದೀರಿ ಎಂದೇ ಅರ್ಥ. ನಿಮ್ಮ ವಿಕೃತ ಮನಃಸ್ಥಿತಿಗೆ ನನ್ನ ಧಿಕ್ಕಾರವಿದೆ.

ತುಮಕೂರು ಆಸ್ಪತ್ರೆಯಲ್ಲಿ ನಡೆದದ್ದೇನು? ಆ ವೈದ್ಯೆ & ಸಿಬ್ಬಂದಿಯ ನಿರ್ದಯ, ಕ್ರೌರ್ಯದ ವರ್ತನೆ, ಆಕೆಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆಗೆ ಈಗ ಪೊಲೀಸರಿಂದ ಬೆದರಿಕೆ ಹಾಕಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡಬಹುದಾ? ಇನ್ನು ಆರೇ ತಿಂಗಳು, ನಿಮ್ಮ ಅಧಿಕಾರದ ಅಮಲು ಇಳಿಯುತ್ತದೆ

ಇಂಥ ಧಾರುಣ ಸಾವುಗಳಾದ ಮೇಲೆಯಾದರೂ ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಬದಲು ಅದನ್ನೇ ಸಮರ್ಥಿಸಿಕೊಳ್ಳುವುದು ಎಂದರೆ ವಿಕಾರವಲ್ಲದೆ ಮತ್ತೇನು? ಜಿಲ್ಲಾಸ್ಪತ್ರೆಯಲ್ಲೇ ಇಂಥ ದುಃಸ್ಥಿತಿ ಇದ್ದರೆ ತಾಲೂಕು, ಅದಕ್ಕೂ ಕೆಳಹಂತದ ಆರೋಗ್ಯ ಕೇಂದ್ರಗಳ ಪಾಡೇನು? ಹೇಳಿ ಸಚಿವರೇ?

ಆಸ್ಪತ್ರೆಯಿಂದ ನಿರ್ದಯವಾಗಿ ಹೊರಹಾಕಲ್ಪಟ್ಟ ಆ ತಾಯಿ, ನಾಲ್ಕು ಗೋಡೆಗಳ ನಡುವೆ ಇಡೀ ರಾತ್ರಿಯೆಲ್ಲಾ ನರಳಿ ಜೀವ ಚೆಲ್ಲಿದ್ದಾರೆ. ಜನಿಸಿದ ಕ್ಷಣದಲ್ಲೇ ಉಸಿರುಬಿಟ್ಟ ಆ ಎರಡು ಕಂದಮ್ಮಗಳ ಮರಣ ನಿಮ್ಮ ಆತಃಕರಣವನ್ನು ಕಲಕಿಲ್ಲವೇ ಸಚಿವರೇ? ಕರ್ನಾಟಕ ಕಂಡ ಅತ್ಯಂತ ಕರಾಳ ಕ್ರೌರ್ಯವಿದು. ಅದನ್ನು ನಾನು ಪ್ರಶ್ನಿಸಿದ್ದೇ ತಪ್ಪಾ?

ನನ್ನ ಸರಕಾರವಿದ್ದಾಗ ಚಾಮರಾಜನಗರದ ಸುಳವಾಡಿಯ ದೇಗುಲದಲ್ಲಿ ನಡೆದ ವಿಷಪ್ರಸಾದ ಪ್ರಕರಣಕ್ಕೂ ಇದಕ್ಕೂ ಸಂಬಂಧವೇನು? ಆ ಘಟನೆ ನಡೆದಾಗ ನಾನು ಚೆನ್ನೈನಲ್ಲಿ ಅಧಿಕೃತ ಪ್ರವಾಸದಲ್ಲಿದ್ದೆ. ವಿಷಯ ಗೊತ್ತಾದ ಕೂಡಲೇ ಹಿಂದಿರುಗಿ ಸ್ಥಳಕ್ಕೆ ಭೇಟಿ ನೀಡಿದ್ದೆ. ಅದಕ್ಕೂ ಇದಕ್ಕೂ ಸಂಬಂಧವೇನು? ಅಲ್ಲಿ ನಡೆದಿದ್ದು ಷಡ್ಯಂತ್ರ,ಇಲ್ಲಿ ನಡೆದದ್ದು ಕ್ರೌರ್ಯ.

ಅದೇ ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಿಂದ 36 ಜನರ ಸಾವಿಗೆ ಕಾರಣರಾಗಿದ್ದು ಯಾರು? ನಿಮ್ಮ ವೈಫಲ್ಯವಲ್ಲವೇ? ರಾಜ್ಯದ ಉದ್ದಗಲಕ್ಕೂ ನಡೆದ ಸಾವುಗಳ ರಣಕೇಕೆ ನಿಮ್ಮ ಕಿವಿಗೆ ಇಂಪಾಗಿತ್ತಾ? ಕೋವಿಡ್ ಹೆಸರಿನಲ್ಲಿ ನಡೆದ ಕೊಳ್ಳೆ ಬಗ್ಗೆ ನನಗಿಂತ ನಿಮ್ಮ ಪಕ್ಷದವರಿಗೇ ಚೆನ್ನಾಗಿ ಗೊತ್ತು

ಕಾಸಿಗಾಗಿ ಹುದ್ದೆ; ಇದು ನಿಮ್ಮ ಸುಲಿಗೆ ನೀತಿ. ವೈದ್ಯರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಬಿಕರಿಗಿಟ್ಟಿದ್ದೀರಿ. ಅವರ ಒಂದು ವರ್ಷದ ವೇತನ ನೀವು ನಿಗದಿ ಮಾಡಿರುವ ದರ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುತ್ತಿದೆ ಎಂದರೆ ಲೋಕಕ್ಕೆ ಕಾಣುವುದಿಲ್ಲವೇ? ಕಳ್ಳಬೆಕ್ಕಿನ ಆಟ ಕಾಲದುದ್ದಕ್ಕೂ ನಡೆಯುವುದಿಲ್ಲ, ನೆನಪಿರಲಿ ಸಚಿವರೇ!

ನಿಮ್ಮ ಪರ್ಸಂಟೇಜ್ ವ್ಯವಹಾರದ ಬಗ್ಗೆ ಮಾತನಾಡಿದ ಗುತ್ತಿಗೆದಾರರಾದ ಕೆಂಪಣ್ಣ ಅವರು ಚಿಕ್ಕಬಳ್ಳಾಪುರದ ಕಾರ್ಯಕ್ರಮ ಒಂದಕ್ಕೆ ಬರಬೇಕಿತ್ತು. ಅವರನ್ನು ಬರದಂತೆ ತಡೆಯಲು ಏನೆಲ್ಲಾ ಹೈಡ್ರಾಮಾ ನಡೆಸಿದರಿ, ಯಾರ ಕಾಲು ಹಿಡಿದಿರಿ ಎನ್ನುವ ಮಾಹಿತಿ ನನಗೂ ಇದೆ. ʼಗಾಜಿನ ಮನೆಯಲ್ಲಿ ಕೂತು ಗೋಲಿಯಾಟ ಆಡುವುದು ಕ್ಷೇಮವಲ್ಲʼ ಸಚಿವರೇ.

ಸಚಿವರೇ, ತುಮಕೂರು ಘಟನೆಗೆ ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ನೀಡಲೇಬೇಕು. ಆ ನೈತಿಕತೆ ನಿಮಗೆ ಇಲ್ಲದಿದ್ದರೆ, ಅದನ್ನು ಕೊನೆಪಕ್ಷ ನಿಮ್ಮ ಮುಖ್ಯಮಂತ್ರಿ @BSBommai ಅವರಾದರೂ ಪ್ರದರ್ಶಿಸಬೇಕು. ನಿಮ್ಮನ್ನು ಸಂಪುಟದಿಂದ ಕಿತ್ತೊಗೆಯಲೇಬೇಕು. ನಿಮ್ಮ ಪಕ್ಷಕ್ಕೂ ಅಂಥ ನೈತಿಕತೆ @BJP4Karnataka ಸರಕಾರಕ್ಕೆ ಇದೆಯಾ? ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

The post ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಾ 3 ಅಮಾನುಷ ಸಾವಿನ ಬಗ್ಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ? : ಸುಧಾಕರ್ ವಿರುದ್ಧ ಕುಮಾರಸ್ವಾಮಿ ಆಕ್ರೋಶ first appeared on Kannada News | suddione.



source https://suddione.com/h-d-kumaraswamy-outraged-against-minister-k-sudhakar/

ರಾಜ್ಯದಲ್ಲಿ ಇನ್ನು 2 ದಿನ ಮಳೆ ಮುಂದುವರಿಕೆ : ಎಲ್ಲೆಲ್ಲಿ ಹೆಚ್ಚಿನ ಮಳೆ ಸಾಧ್ಯತೆ ಮಾಹಿತಿ ಇಲ್ಲಿದೆ

ಬೆಂಗಳೂರು: ಬಂಗಾಳಕೊಲ್ಲಿಯ ಮೇಲ್ಮೈನಲ್ಲಿ ಸುಳಿಗಾಳಿ ಉಂಟಾಗಿರುವ ಹಿನ್ನೆಲೆ ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇನ್ನು ಎರಡು ದಿನಗಳ ಕಾಲ ಜೋರು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಮಾನ ಇಲಾಖೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಕರಾವಳಿ, ಮಲೆನಾಡು, ಉತ್ತರ ಒಳನಾಡು, ಬೆಂಗಳೂರು ಭಾಗದಲ್ಲಿ ಭಾರೀ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೊಡಗು ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವೆಡೆ ಮಳೆ ಮುಂದುವರೆಯಲಿದೆ.

The post ರಾಜ್ಯದಲ್ಲಿ ಇನ್ನು 2 ದಿನ ಮಳೆ ಮುಂದುವರಿಕೆ : ಎಲ್ಲೆಲ್ಲಿ ಹೆಚ್ಚಿನ ಮಳೆ ಸಾಧ್ಯತೆ ಮಾಹಿತಿ ಇಲ್ಲಿದೆ first appeared on Kannada News | suddione.



source https://suddione.com/rain-will-continue-for-2-more-days-in-the-state-here-is-the-information/

Tuesday, 1 November 2022

ಎರಡು ವರ್ಷದ ಬಳಿಕ ಮಲೆಮಹದೇಶ್ವರ ಬೆಟ್ಟದ ಅದ್ದೂರಿ ರಥೋತ್ಸವದಲ್ಲಿ 1 ಕೋಟಿ ಸಂಗ್ರಹ..!

ಚಾಮರಾಜನಗರ: ಶ್ರೀಮಂತ ದೇವರ ಪಟ್ಟಿಯಲ್ಲಿ ಮಲೆಮಹದೇಶ್ವರ ಕೂಡ ಸೇರುತ್ತದೆ. ಸದ್ಯ ಕೊರೊನಾ ಕಾರಣ ಕಳೆದ ಎರಡು ವರ್ಷದಿಂದ ಬೆಟ್ಟಕ್ಕೆ ಬರುವವರ ಸಂಖ್ಯೆ ಕಡಿಮೆ ಇತ್ತು. ದೇವರಿಗೆ ಸಲ್ಲಬೇಕಾಗಿದ್ದ ಕಾಣಿಕೆ ಹುಂಡಿಯಲ್ಲಿ ಇಳಿಕೆ ಕಂಡಿತ್ತು. ಇದೀಗ ಎಲ್ಲವೂ ಸಹಜ ಸ್ಥಿತಿಯಲ್ಲಿದ್ದು, ಇದೀಗ ಮತ್ತೆ ಮಹದೇಶ್ವರನಿಗೆ ಭಕ್ತರು ಮನಸ್ಸಾರೆ ಕಾಣಿಕೆಯನ್ನು ಅರ್ಪಿಸಿದ್ದಾರೆ.

ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಸಲುವಾಗಿ ರಥೋತ್ಸವ ನಡೆದಿದೆ. ಈ ರಥೋತ್ಸವದಲ್ಲಿ ಭಕ್ತಾಧಿಗಳು ಮಿಂದೆದ್ದಿದ್ದಾರೆ. ಎರಡು ವರ್ಷದ ಬಳಿಕ ಸಾಗಿದ ಅದ್ದೂರಿ ಜಾತ್ರೆಯಲ್ಲಿ ಭಕ್ತಾಧಿಗಳು ಆಗಮಿಸಿ, ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಹರಕೆ ಹೊತ್ತಿದ್ದ ಕಾಣಿಕೆಯನ್ನು ಹುಂಡಿಗೆ ಹಾಕಿದ್ದಾರೆ.

ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ಮಾದಪ್ಪನಿಗೆ ಭಕ್ತರು ಒಂದು ಕೋಟಿ ರೂಪಾಯಿ ಕಾಣಿಕೆಯಾಗಿ ಅರ್ಪಿಸಿದ್ದಾರೆ. ರಥೋತ್ಸವದಲ್ಲಿ ಲಾಡು ಪ್ರಸಾದ ಹಾಗೂ ಚಿನ್ನದ ತೇರು ಎಳೆಯುವ ಮೂಲಕ ಹರಕೆಯನ್ನು ತೀರಿಸಿದ್ದಾರೆ. ಈ ಬಾರಿ 2.44 ಲಕ್ಷದ ಲಾಡು ಮಾರಾಟವಾಗಿದೆ. ಇನ್ನು ಚಿನ್ನದ ತೇರು ಎಳೆಯುವ ಹರಕೆಯನ್ನು ಹೊತ್ತಿದ್ದು, ಆ ಮೂಲಕ 50 ಲಕ್ಷ ಕಾಣಿಕೆ ಕಲೆಕ್ಟ್ ಆಗಿದೆ. ಒಟ್ಟು ಮಾದಪ್ಪನ ಹುಂಡಿಯಲ್ಲಿ 1 ಕೋಟಿ ಕಾಣಿಕೆ ಸಂಗ್ರಹವಾಗಿದೆ.

The post ಎರಡು ವರ್ಷದ ಬಳಿಕ ಮಲೆಮಹದೇಶ್ವರ ಬೆಟ್ಟದ ಅದ್ದೂರಿ ರಥೋತ್ಸವದಲ್ಲಿ 1 ಕೋಟಿ ಸಂಗ್ರಹ..! first appeared on Kannada News | suddione.



source https://suddione.com/after-two-years-1-crore-was-collected-in-the-grand-chariot-festival-of-malemahadeshwar-hill/

Sunday, 23 October 2022

ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ. ಸೋಮಣ್ಣ

 

ಚಾಮರಾಜನಗರ : ಸಚಿವ ವಿ. ಸೋಮಣ್ಣ ಜಮೀನಿನ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಿವೇಶನ ಹಕ್ಕುಪತ್ರ ವಿತರಿಸಲು ಆಗಮಿಸಿದ್ದ ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಬಿಜೆಪಿಯ ವಿ.ಸೋಮಣ್ಣ ಅವರಿಗೆ ನಿವೇಶನ ಹಕ್ಕುಪತ್ರ ಸಿಗದ ಮಹಿಳೆಯೊಬ್ಬರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಚಿವರ ಬಳಿ ತೆರಳಿದರು. ಸಮಸ್ಯೆ ಹೇಳಿಕೊಳ್ಳಲು ತೆರಳಿದ ಮಹಿಳೆಗೆ ಸೋಮಣ್ಣ ಅವರು ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ನಂತರ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸೋಮಣ್ಣ ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 94 ಸಿ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಭೂ ಸಕ್ರಮಕ್ಕಾಗಿ ಸುಮಾರು 175 ಜನರು ಹಕ್ಕು ಪತ್ರಗಳಿಗೆ ಅರ್ಹರಾಗಿದ್ದರು. ಮಹಿಳೆಯ ಪ್ರಕಾರ, ಕಂದಾಯ ಇಲಾಖೆಯಡಿಯಲ್ಲಿ ವಸತಿ ಮಂಜೂರು ಮಾಡದ ತನ್ನ ಸಂಕಷ್ಟವನ್ನು ಹೇಳಿಕೊಳ್ಳಲು ಸಚಿವರ ಬಳಿ ತೆರಳಿದಾಗ ಸಚಿವ ಸೋಮಣ್ಣ ಅವರು ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ.

ಕಾರ್ಯಕ್ರಮಕ್ಕೆ ಸೋಮಣ್ಣ ಅವರು ಮಧ್ಯಾಹ್ನ 3.30ಕ್ಕೆ ಬರಬೇಕಿತ್ತು, ಆದರೆ ಎರಡು ಗಂಟೆ ತಡವಾಗಿ ಆಗಮಿಸಿದರು.

ಬಿಜೆಪಿಯ ಸಚಿವರು ಸಾರ್ವಜನಿಕರೊಂದಿಗೆ ಈ ರೀತಿಯ ದುರ್ನಡತೆ ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ರೈತ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಎಸಗಿದ್ದರು.

ತೀರಾ ಇತ್ತೀಚೆಗೆ, ಸೆಪ್ಟೆಂಬರ್ 3 ರಂದು, ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಅವರು ಮಹಿಳೆಗೆ ಬೆದರಿಸಿ ಮತ್ತು ಮಾತಿನ ಮೂಲಕ ನಿಂದಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದಕ್ಕೆ ಕಾರಣವಾಗಿತ್ತು.

ಈ ಹಿಂದೆ, ಜನತಾ ದಳ (ಜಾತ್ಯತೀತ) ಮುಖಂಡರೊಬ್ಬರು ಕರ್ನಾಟಕದ ಕಾಲೇಜಿನ ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ರಾಜಕಾರಣಿ ಎಂ ಶ್ರೀನಿವಾಸ್ ಕಾಲೇಜಿಗೆ ಭೇಟಿ ನೀಡಿದಾಗ ಕಂಪ್ಯೂಟರ್ ಲ್ಯಾಬ್‌ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಾಂಶುಪಾಲರು ಸ್ಪಷ್ಟ ಉತ್ತರವನ್ನು ನೀಡಲು ಸಾಧ್ಯವಾಗದ ಕಾರಣ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದರು ಎಂದು ವರದಿಯಾಗಿದೆ.

The post ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ. ಸೋಮಣ್ಣ first appeared on Kannada News | suddione.



source https://suddione.com/the-woman-was-slapped-by-minister-v-somanna/

Wednesday, 19 October 2022

ಬಿಜೆಪಿಗೆ ಸಿದ್ದರಾಮಯ್ಯ ಟಾರ್ಗೆಟ್.. ಎಲ್ಲೆ ನಿಂತರೂ ಅಲ್ಲಿ ಟಕ್ಕರ್ ಗೆ ಸಿದ್ಧ..!

 

ಬೆಂಗಳೂರು: ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನವಾಣೆ ನಡೆಯಲಿದೆ. ಚುನಾವಣೆಗೆ ಈಗಾಗಲೇ ಪಕ್ಷಗಳು ರಣತಂತ್ರ ರೂಪಿಸಲು ಸಿದ್ದವಾಗಿವೆ. ಆದರೆ ಇದರ ನಡುವೆ, ಬಿಜೆಪಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎನ್ನಲಾಗಿದೆ. ಅದರಲ್ಲೂ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ಶತಾಯಗತಾಯ ಶ್ರಮ ಹಾಕುತ್ತಿದೆ ಎನ್ನಲಾಗಿದೆ.

ಹೀಗಾಗಿ ಸಿದ್ದರಾಮಯ್ಯ ಎಲ್ಲಿ ನಿಲ್ಲುತ್ತಾರೋ ಅಲ್ಲಿ ಸ್ಟಾರ್ ಅಂಡ್ ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕುವುದಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಈ ಬಾರಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂಬ ಸುಳಿವನ್ನು ಇನ್ನು ಬಿಟ್ಟುಕೊಟ್ಟಿಲ್ಲ. ಜೊತೆಗೆ ಹಲವು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರಿಗೆ ಡಿಮ್ಯಾಂಡ್ ಇದೆ. ನಮ್ಮಲ್ಲಿ ಬಂದು ನಿಂತುಕೊಳ್ಳಿ ಗೆಲ್ಲಿಸುತ್ತೀವಿ ಎಂಬ ಮಾತು ಇದೆ. ಆದರೆ ಸಿದ್ದರಾಮಯ್ಯ ತಮ್ಮ ಕ್ಷೇತ್ರದ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ.

ಈ ನಡುವೆ ಟಾರ್ಗೆಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಒಂದು ವೇಳೆ ವರುಣಾದಲ್ಲಿ ನಿಂತರೆ ವಿಜಯೇಂದ್ರ ಅವರನ್ನು ಶಿಕಾರಿಪುರದ ಜೊತೆಗೆ ವರುಣಾದಲ್ಲಿಯೂ ನಿಲ್ಲಿಸಲಿದ್ದಾರೆ. ಇನ್ನು ಬಾದಾಮಿ ಕ್ಷೇತ್ರಕ್ಕೆ ಹೆಜ್ಜೆ ಇಟ್ಟರೆ ಶ್ರೀರಾಮುಲು ಕಡೆಯಿಂದಾನೇ ಟಕ್ಕರ್ ಕೊಡಿಸಲು ಸಿದ್ಧವಾಗಿದೆ.

The post ಬಿಜೆಪಿಗೆ ಸಿದ್ದರಾಮಯ್ಯ ಟಾರ್ಗೆಟ್.. ಎಲ್ಲೆ ನಿಂತರೂ ಅಲ್ಲಿ ಟಕ್ಕರ್ ಗೆ ಸಿದ್ಧ..! first appeared on Kannada News | suddione.



source https://suddione.com/siddaramaiah-is-a-target-for-bjp-ready-for-wherever-he-stands/

Tuesday, 18 October 2022

ತ್ರಯಂಬೇಕೇಶ್ವರ ದೇವಾಲಯದಲ್ಲಿ ಅವಳಿ ಹಸುಗಳಿಗೆ ಅದ್ದೂರಿ ನಾಮಕರಣ

ಬಾಗಲಕೋಟೆ: ಮನೆಯಲ್ಲಿರುವ ಪ್ರಾಣಿಗಳನ್ನು ಜನ ತುಂಬಾ ಪ್ರೀತಿಸುತ್ತಾರೆ. ಹಸುಗಳಿದ್ದರೆ ಅವುಗಳನ್ನು ಲಕ್ಷ್ಮೀ ಎಂದೇ ಭಾವಿಸುತ್ತಾರೆ. ಇದೀಗ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ತ್ರಯಂಬಕೇಶ್ವರ ದೇವಸ್ಥಾನದ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಈ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

ಗಂಡು ಕರುಗಳಿಗೆ ಅದ್ದೂರಿ ತೊಟ್ಟಿಲೋತ್ಸವ ಮಾಡಿದ್ದು, ನಾಮಕರಣದ ಕಾರ್ಯಕ್ರಮಕ್ಕೆ ಭಕ್ತಾಧಿಗಳ ದಂಡೇ ಬಂದಿತ್ತು. ಕರುಗಳಿಗೆ ನಾಮಕರಣ ಮಾಡಿರುವ ಭಕ್ತರು ರಾಮ-ಲಕ್ಷ್ಮಣ ಎಂದು ಹೆಸರಿಟ್ಟಿದ್ದಾರೆ. ಅವಳಿ ಕರುಗಳಿಗೆ ಜನ್ಮ ಕೊಟ್ಟಿರುವುದಕ್ಕೆ ಭಕ್ತಾಧಿಗಳ ಮೊಗದಲ್ಲಿ ಸಂತಸ ಅರಳಿ ನಿಂತಿದೆ.

ಅವಳಿ ಕರುಗಳಿಗೆ ಜನ್ಮ ನೀಡಿದ ಆಕಳನ್ನು ದೇವರ ಹೆಸರಲ್ಲಿ ಬಿಡಲಾಗಿತ್ತು. ಐದು ದಿನಗಳ ಹಿಂದೆ ಎರಡು ಕರುಗಳಿಗೆ ಜನ್ಮ ನೀಡಿದೆ ಈ ಆಕಳು. ಹೀಗಾಗಿ ಐದನೇ ದಿನಕ್ಕೆ ನಾಮಕರಣ ಮಾಡಿ, ಕಾರ್ಯಕ್ರಮಕ್ಕೆ ಬಂದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಿದ್ದಾರೆ.

The post ತ್ರಯಂಬೇಕೇಶ್ವರ ದೇವಾಲಯದಲ್ಲಿ ಅವಳಿ ಹಸುಗಳಿಗೆ ಅದ್ದೂರಿ ನಾಮಕರಣ first appeared on Kannada News | suddione.



source https://suddione.com/elaborate-naming-of-twin-cows-at-trimbakeshwar-temple/

Friday, 14 October 2022

ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆಯ ಆರ್ಭಟ

 

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆರಾಯನ ಅಬ್ಬರ ಜೋರಾಗಿದೆ. ಇನ್ನು ಐದು ದಿನಗಳ ಕಾಲ ಮಳೆ ಇದೇ ರೀತಿ ಅಬ್ಬರಿಸಲಿದ್ದಾನೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.

ಬೆಂಗಳೂರು ಸೇರಿದಂತೆ ಕರ್ನಾಟದ ಹಲವೆಡೆ ಇನ್ನು ಐದು ದಿನ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಬೆಳಗಾವಿ, ಹಾವೇರಿ, ಕಲಬುರಗಿ, ಕೊಪ್ಪಳ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾತ್ರಿ ಸುರಿದ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ಬಸ್ ನಿಲ್ದಾಣ ಕೆರೆಯಂತಾಗಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ಡಿಪೋಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಈ ವರ್ಷವೇ ನಾಲ್ಕೈದು ಬಾರಿ ಬಸ್ ಡಿಪೋ ಜಲಾವೃತವಾಗಿದೆ ಎನ್ನಲಾಗಿದೆ. ಮಂಡ್ಯದ ಕೆ ಆರ್ ಪೇಟೆ ಬಸ್ ನಿಲ್ದಾಣವೂ ಜಲಾವೃತಗೊಂಡಿದೆ. ಇದಕ್ಕೆಲ್ಲಾ ಕೆರೆಗಳನ್ನು ಮುಚ್ಚಿ ಬಸ್ ನಿಲ್ದಾಣ ಮಾಡಿರುವುದೇ ಕಾರಣ ಎನ್ನಲಾಗಿದೆ.

The post ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆಯ ಆರ್ಭಟ first appeared on Kannada News | suddione.



source https://suddione.com/rain-is-expected-in-the-state-for-the-next-five-days/

Wednesday, 12 October 2022

ಜನಸಂಕಲ್ಪ ಯಾತ್ರೆಯ ನಡುವೆ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಸಿಎಂ ಬೊಮ್ಮಾಯಿ & ಬಿಎಸ್ವೈ

ವಿಜಯನಗರ: ಇತ್ತಿಚೆಗೆ SC/ST ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದ ಸಿಎಂ ಬಸವಾರಜ್ ಬೊಮ್ಮಾಯಿ ಅವರು ಇಂದು ದಲಿತರ ಮನೆಗೆ ಹೋಗಿ ಉಪಹಾರ ಸೇವಿಸಿದ್ದಾರೆ. ಕಮಲಾಪುರದ ದಲಿತ ಮುಖಂಡರ ಮನೆಯಲ್ಲಿ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಉಪಹಾರ ಸೇವಿಸಿದ್ದಾರೆ.

ಬಿಜೆಪಿ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಇಂದು ಹೊಸಪೇಟೆಟ ಹಾಗೂ ಕೊಪ್ಪಳದಲ್ಲಿ ನಡೆಯುತ್ತಿದೆ. ಈ ವೇಳೆ ಕಮಲಾಪುರದ ದಲಿತ ಮುಖಂಡ ಕೊಲ್ಲಾರಪ್ಪ ಅವರ ಮನೆಗೆ ಸಿಎಂ ಮತ್ತು ಬಿಎಸ್ವೈ ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳೀಯರು ಪಟಾಕಿ ಸಿಡಿಸಿ, ಸ್ವಾಗತ ಕೋರಿದ್ದಾರೆ. ಅಲ್ಲಿಯೇ ಇದ್ದ ಈಶ್ವರ ದೇವಸ್ಥಾನಕ್ಕೂ ಸಿಎಂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಕೊಲ್ಲಾರಪ್ಪ ಮನೆಗೆ ಹೋಗಿ ಉಪ್ಪಿಟ್ಟು, ಒಗ್ಗರಣೆ ಮಿರ್ಚಿ, ಕೇಸರಿ ಬಾತ್ ಸವಿದಿದ್ದಾರೆ.

ಈ ಬಗ್ಗೆ ಯಲ್ಲಮ್ಮ ಮಾತನಾಡಿದ್ದು, ಸಿಎಂ ನಮ್ಮ ಮನೆಗೆ ಬಂದಿದ್ದು ತುಂಬಾ ಖುಷಿ ಕೊಟ್ಟಿದೆ. ನಾವೂ ಬಡವರು ಸಿಎಂ ಬಳಿ ಏನನ್ನು ಕೇಳಿಲ್ಲ. ಅವರಿಗೆ ಎಲ್ಲವೂ ಅರ್ಥವಾಗುತ್ತದೆ. ಅವರೇ ಸಹಾಯ ಮಾಡುತ್ತಾರೆ ಎಂದಿದ್ದಾರೆ.

ಇನ್ನು ಈ ಬಗ್ಗೆ ಸಿಎಂ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದು, ಬಿಜೆಪಿ ಕರ್ನಾಟಕ #JanaSankaplaYatreಯ ಅಂಗವಾಗಿ ಇಂದು ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದ ದಲಿತ ಕುಟುಂಬ ಹಿರಾಳ ಕೊಲ್ಲಾರಪ್ಪ ಅವರ ಮನೆಗೆ ತೆರಳಿ ಉಪಹಾರ ಸೇವಿಸಿ, ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದೆನು. ಈ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಇತರರು ಉಪಸ್ಥಿತರಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

The post ಜನಸಂಕಲ್ಪ ಯಾತ್ರೆಯ ನಡುವೆ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಸಿಎಂ ಬೊಮ್ಮಾಯಿ & ಬಿಎಸ್ವೈ first appeared on Kannada News | suddione.



source https://suddione.com/cm-bommai-bsy-had-breakfast-at-dalits-home-during-janasankalpa-yatra/

ಕುಂಭಮೇಳ ಮಾಡಿ ಕಾಂಗ್ರೆಸ್ ಪಾದಯಾತ್ರೆಗೆ ಟಕ್ಕರ್ ಕೊಡಲು ರೆಡಿಯಾಯ್ತಾ ಬಿಜೆಪಿ..?

ಮಂಡ್ಯ: ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕೀಯ ಪಕ್ಷಗಳು ಆಕ್ಟೀವ್ ಆಗುತ್ತಿವೆ. ಜನರನ್ನು ಸೆಳೆಯಲು ಹೊಸ ಹೊಸ ತಂತ್ರ ರೂಪಿಸುತ್ತಿದೆ. ಈಗಾಗಲೇ ಪಕ್ಷದ ರಾಹುಲ್ ಗಾಂಧಿ ಜನರಿರುವಲ್ಲಿಗೆ ಪಾದಯಾತ್ರೆ ಮೂಲಕ ಸಾಗುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಇದೀಗ ಕುಂಭಮೇಳ ಮಾಡಲು ಹೊರಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಇದೇ ತಿಂಗಳು ದೊಡ್ಡ ಮಟ್ಟದಲ್ಲಿ ಕುಂಭಮೇಳ ಮಾಡುವುದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೆ ಆರ್ ಪೇಟೆ ತಾಲೂಕಿನ ಅಂಬಿಗರಹಳ್ಳಿ ಬಳಿ ಇರುವ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ 16ರವರೆಗೆ ಕುಂಭಮೇಳ ನಡೆಯಲಿದೆ. ಅದರ ಜೊತೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ್ ಅವರನ್ನು ಕರೆತರುತ್ತಿರುವುದು ಬಿಜೆಪಿ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎನ್ನಲಾಗಿದೆ. ಯಾಕೆಂದರೆ ಯೋಗಿ ಆದಿತ್ಯಾನಾಥ್ ಹಿಂದೂಗಳ ಫೈಯರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿದ್ದಾರೆ.

ಅಕ್ಟೋಬರ್ 13ರಿಂದ ಕುಂಭಮೇಳ ಆರಂಭವಾಗುತ್ತದೆ. 14ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾ ವೀರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಲಿದ್ದಾರೆ. ಈ ಕುಂಭಮೇಳಕ್ಕೆ ಲಕ್ಷಾಂತರ ಜನರನ್ನು ಕರೆತರುವ ಜವಬ್ದಾರಿಯನ್ನು ಬಿಜೆಪಿ ನಾಯಕರಿಗೆ ವಹಿಸಲಾಗಿದೆ.

ಇನ್ನು ನಾಳೆ ಜನಪದ ತಂಡಗಳ ಮೆರವಣಿಗೆ ನಡೆಯಲಿದ್ದು, ಇದಕ್ಕೆ ಗೋಪಾಲಯ್ಯ ಚಾಲನೆ ನೀಡಲಿದ್ದಾರೆ. ಸಂಜೆ 6.30ಕ್ಕೆ ಜಿಲ್ಲಾ ಉತ್ಸವ ಕೂಡ ನಡೆಯಲಿದ್ದು ಅದಕ್ಕೆ ಸುನಿಲ್ ಕುಮಾರ್ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ 14ರಂದು ವಿವಿಧ ಮಠಾಧೀಶರಿಂದ ಕುಂಭಮೇಳ ಉದ್ಘಾಟನೆಯಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ನಿರ್ಮಲಾನಂದ ಸ್ವಾಮೀಜಿ ಕೂಡ ಇರಲಿದ್ದಾರೆ. ಸುತ್ತೂರು ಶಿವರಾತ್ರಿ ದೇಶಿಕೇಂದ್ರಶ್ರೀ, ಮಹಾಂತ ಶಿವಯೋಗಿಶ್ರೀ, ಶಿವಾನಂದ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ವೀರೇಂದ್ರ ಹೆಗ್ಗಡೆ ಅವರು ಉಪಸ್ಥಿತರಾಗಲಿದ್ದಾರೆ.

The post ಕುಂಭಮೇಳ ಮಾಡಿ ಕಾಂಗ್ರೆಸ್ ಪಾದಯಾತ್ರೆಗೆ ಟಕ್ಕರ್ ಕೊಡಲು ರೆಡಿಯಾಯ್ತಾ ಬಿಜೆಪಿ..? first appeared on Kannada News | suddione.



source https://suddione.com/is-the-bjp-ready-to-hold-a-kumbh-mela-and-clash-with-the-congress-padayatra/

Tuesday, 11 October 2022

ಹಿಂದಿ ಹೇರಿಕೆಗೆ ಕುಮಾರಸ್ವಾಮಿ ಗರಂ : ಸಾಲು ಸಾಲು ಟ್ವೀಟ್ ಮಾಡಿ ಕ್ಲಾಸ್

 

ಬೆಂಗಳೂರು: ಹಿಂದಿ ಹೇರಿಕೆ ವಿಚಾರದಲ್ಲಿ ಯಾವಾಗಲೂ ವಿರೋಧ ವ್ಯಕ್ತವಾಗುತ್ತಲೇ ಇದೆ. ಇದೀಗ ಕುಮಾರಸ್ವಾಮಿ ಸಾಲು ಸಾಲು ಟ್ವೀಟ್ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರ ಬಿಜೆಪಿ ಸರಕಾರ ತನ್ನ ಚಾಳಿ ಮುಂದುವರಿಸಿದೆ. ಇಡೀ ಭಾರತವನ್ನು ಹಿಡೆನ್ ಅಜೆಂಡಾ ಮೂಲಕ ಹಿಡಿದಿಟ್ಟುಕೊಳ್ಳುವ ಕಪಟಯತ್ನ ಮಾಡುತ್ತಿದೆ. ಅಮಿತ್ ಶಾ ನೇತೃತ್ವದ ಸಮಿತಿ, ಹಿಂದಿ ಹೇರಿಕೆ ಬಗ್ಗೆ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿ ಆಘಾತಕಾರಿ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ವಿನಾಶಕ್ಕೆ ದಾರಿ.

ವರದಿಯ ಶಿಫಾರಸುಗಳನ್ನು ಓದಿ ನನಗೆ ದೊಡ್ಡ ಆಘಾತವೇ ಆಯಿತು. ಸರ್ವಾಧಿಕಾರಿ ಮನಃಸ್ಥಿತಿಯಿಂದ ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳನ್ನು ಹೊಸಕಿ ಹಾಕಿ ಇಡೀ ದೇಶದ ಮೇಲೆ ಹಿಂದಿ ಹೇರಿ ಬಹುತ್ವದ ಭಾರತವನ್ನು ‘ಹಿಂದಿಸ್ತಾನ್ ‘ ಮಾಡುವ ಹುನ್ನಾರ ಇದರ ಹಿಂದಿದೆ. ವರದಿಯಲ್ಲಿರುವ ಅನೇಕ ಶಿಫಾರಸುಗಳು ಭಾರತೀಯ ಒಕ್ಕೂಟ ವ್ಯವಸ್ಥೆಯನ್ನು ಸೀಳಿ, ಛಿದ್ರ ಮಾಡುವಂತಿವೆ.

ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎನ್ನುವ ವಿಚ್ಛಿದ್ರಕಾರಿ ನೀತಿಯ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ನಿರ್ನಾಮ ಮಾಡುವುದೇ ಅಮಿತಾ ಶಾ ಸಮಿತಿಯ ಅಮಿತೋದ್ದೇಶ. ಏಕಭಾಷೆಯ ಅಧಿಪತ್ಯವನ್ನು ಭಾರತ ಒಪ್ಪುವುದಿಲ್ಲ. ಬಹುತ್ವದಲ್ಲಿ ಏಕತೆಯ ಮೂಲಕ ಅಖಂಡವಾಗಿರುವ ಭಾರತವನ್ನು ಒಡೆದು ಆಳುವ ನೀತಿ ರಾಷ್ಟ್ರದ ಒಡಕಿಗೆ ಕಾರಣವೂ ಆಗಬಹುದು. ಕೇಂದ್ರ ಸರಕಾರ ಕೂಡಲೇ ಈ ವರದಿಯನ್ನು ಹಿಂಪಡೆದು, ಎಲ್ಲ ಭಾಷೆಗಳನ್ನೂ ಸಮಾನವಾಗಿ ನೋಡುವ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು.

ಹಿಂದಿ ಪ್ರದೇಶಗಳಲ್ಲಿಯೂ ಹಿಂದಿ ಮಾತನಾಡುವವರ ಸಂಖ್ಯೆ ಕಡಿಮೆ ಇದೆ. ಹಿಂದಿಗಿಂತ ಇತರೆ ಭಾಷೆಗಳನ್ನು ಮಾತನಾಡುವ ಜನರೇ ದೇಶದಲ್ಲಿ ಹೆಚ್ಚಿದ್ದಾರೆ. ಸತ್ಯಸ್ಥಿತಿ ಹೀಗಿದ್ದರೂ ಬಿಜೆಪಿ ಹಿಂದಿ ಹೇರಿಕೆ ಮಾಡುತ್ತಿದೆ. ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ನೀಡುವ ಹುನ್ನಾರ ಇದು. ಆರ್ಯ ಸಂಸ್ಕೃತಿಯ ತುಷ್ಟೀಕರಣವನ್ನು ಸಹಿಸುವ ಪ್ರಶ್ನೆ ಇಲ್ಲ

ದಕ್ಷಿಣ ಭಾರತದಲ್ಲಿ ಆಟ ನಡೆಯುವುದಿಲ್ಲ ಎನ್ನುವ ಕಾರಣಕ್ಕೇ ಬಿಜೆಪಿ ಅಡ್ಡದಾರಿಯಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಿತು. ಅದರ ಪರಿಣಾಮ ಹೆಜ್ಜೆಹೆಜ್ಜೆಗೂ ಕನ್ನಡಕ್ಕೆ ಕಂಟಕ ಎದುರಾಯಿತು. ಈಗ ಕನ್ನಡ ಸೇರಿ ತೆಲುಗು, ತಮಿಳು, ಮಲೆಯಾಳಂ, ಮರಾಠಿ, ಒರಿಯಾ ಸೇರಿ ಎಲ್ಲ ಅನ್ಯಭಾಷೆಗಳ ಅವಸಾನಕ್ಕೆ ಕೇಂದ್ರ ಸರಕಾರ ಮಹೂರ್ತ ಇಟ್ಟಿದೆ.

ಯಾವುದೇ ಕಾರಣಕ್ಕೂ ಈ ವರದಿಯ ಶಿಫಾರಸುಗಳ ಜಾರಿಗೆ ಅವಕಾಶ ನೀಡಬಾರದು. ಎಲ್ಲ ರಾಜ್ಯಗಳೂ, ಅದರಲ್ಲೂ ದಕ್ಷಿಣದ ರಾಜ್ಯಗಳು ಒಗ್ಗಟ್ಟಾಗಿ ವಿರೋಧಿಸಬೇಕು. ಎಲ್ಲ ಭಾಷೆಗಳಲ್ಲಿ ಒಂದಷ್ಟೇ ಆಗಿರುವ ಹಿಂದಿ ಭಾಷೆಯ ಹೇರಿಕೆ ಎಂದರೆ, ಒಕ್ಕೂಟ ವ್ಯವಸ್ಥೆಗೆ ಹೆಡೆಮುರಿ ಕಟ್ಟುವ ದುಸ್ಸಾಹಸ ಎಂದೇ ಭಾವಿಸಬೇಕಾಗುತ್ತದೆ. ಬಾಯಿಮಾತಿನಲ್ಲಿ ಸ್ಥಳೀಯ ಭಾಷೆಯ ಜಪ ಮಾಡುವ ಬಿಜೆಪಿ, ಆಂತರ್ಯದಲ್ಲಿ ಹಿಂದಿಯನ್ನೇ ಹೇರುತ್ತಿದೆ, ಇದು ಸತ್ಯ. ಕೂಡಲೇ ಕೇಂದ್ರದ ಬಿಜೆಪಿ ಸರಕಾರವು ಈ ವರದಿಯನ್ನು ವಾಪಸ್ ಪಡೆಯಬೇಕು. ಸರ್ವ ಭಾಷೆಗಳೂ ಸಮಾನ ಎನ್ನುವ ನೀತಿಗೆ ಬದ್ಧವಾಗಿರಬೇಕು.

ಐಐಐಟಿ, ಐಐಎಂ, ಏಮ್ಸ್, ಕೇಂದ್ರೀಯ – ನವೋದಯ ವಿದ್ಯಾಲಯಗಳಲ್ಲಿ ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿ ಬೋಧನೆ ಮಾಡಿ ಎನ್ನುವ ವರದಿ, ಅದೇ ಸ್ಥಳೀಯ ಭಾಷೆಗಳ ಸಂಹಾರಕ್ಕೆ ಅನೇಕ ಆಯುಧಗಳನ್ನು ಒಳಗೊಳಗೇ ಸನ್ನದ್ಧಗೊಳಿಸಿದೆ. ಹೀಗಾಗಿ ಪ್ರಾದೇಶಿಕ ಭಾಷೆಗಳ ಬಗ್ಗೆ ಬಿಜೆಪಿ ಎಷ್ಟೇ ಬೊಬ್ಬೆ ಹಾಕಿದರೂ ನಂಬುವ ಸ್ಥಿತಿ ಇಲ್ಲ.

ಸ್ಥಳೀಯ ಭಾಷೆಗಳ ಉದ್ಧಾರದ ನೆಪ ಹೇಳುತ್ತಾ ವಾಮಮಾರ್ಗದಲ್ಲಿ ಇಡೀ ದೇಶದ ಮೇಲೆ ಹಿಂದಿ ಹೇರಿಕೆ ಮಾಡುವುದೇ ಕೇಂದ್ರದ ದುರುದ್ದೇಶ ಎನ್ನುವುದು ಸ್ಪಷ್ಟ. ಕನ್ನಡದ ಮೇಲೆ ಈವರೆಗೂ ಕೇಂದ್ರ ಸರಕಾರ ನಡೆಸಿರುವ ದಬ್ಬಾಳಿಕೆಯೇ ಇದಕ್ಕೆ ಸಾಕ್ಷಿ. ಬಹುಮತ ಇದೆ ಎನ್ನವ ಕಾರಣಕ್ಕೆ ಹಿಂದಿ ಹೇರಿಕೆ ರಾಜಕೀಯ ಮಾಡಿದರೆ ಭಾರತವು ಭಾಷಾ ದಳ್ಳುರಿಯಲ್ಲಿ ಬೇಯುವುದು ಖಚಿತ. ಬಾರತ ಎಂದರೆ ಹಿಂದು, ಹಿಂದಿ ಅಷ್ಟೇ ಅಲ್ಲ. ಭಾರತ ನಮ್ಮೆಲ್ಲರದು ಎಂದಿದ್ದಾರೆ.

The post ಹಿಂದಿ ಹೇರಿಕೆಗೆ ಕುಮಾರಸ್ವಾಮಿ ಗರಂ : ಸಾಲು ಸಾಲು ಟ್ವೀಟ್ ಮಾಡಿ ಕ್ಲಾಸ್ first appeared on Kannada News | suddione.



source https://suddione.com/kumaraswamy-fired-for-hindi-imposition-class-tweet-row-row/

Monday, 10 October 2022

ಇಂದು ಮತ್ತು ನಾಳೆ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದ ಹವಮಾನ ಇಲಾಖೆ

 

ಬೆಂಗಳೂರು: ಕಳೆದ ಒಂದು ವಾರದಿಂದ ಮತ್ತೆ ಮಳೆರಾಯ ಎಲ್ಲೆಡೆ ತನ್ನ ಅಬ್ಬರ ಆರಂಭಿಸಿದ್ದಾನೆ. ರಾಜ್ಯಾದ್ಯಂತ ಸೋಮವಾರ ಮತ್ತು ಮಂಗಳವಾರ ಮಳೆಯಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಸೂಚನೆ ನೀಡಿದೆ.

ರಾಜ್ಯ ರಾಜಧಾನಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ತುಮಕೂರು, ಬಳ್ಳಾರಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಗುಡುಗು ಸಹಿತ ಬಾರೀ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಯಾದಗಿರಿ, ರಾಯಚೂರು, ಚಿತ್ರದುರ್ಗ, ಮಂಡ್ಯ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

The post ಇಂದು ಮತ್ತು ನಾಳೆ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದ ಹವಮಾನ ಇಲಾಖೆ first appeared on Kannada News | suddione.



source https://suddione.com/the-weather-department-has-predicted-rain-in-the-state-today-and-tomorrow/

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...