Showing posts with label States. Show all posts
Showing posts with label States. Show all posts

Monday, 12 September 2022

ಜಿಲ್ಲಾ ಕೇಂದ್ರಕ್ಕಾಗಿ ಆಗ್ರಹಿಸಿ 21 ವರ್ಷ ಗಡ್ಡಬಿಟ್ಟ ಹಠವಾದಿ.


 ರಾಯಪುರ: ಪತ್ನಿಯು ಮಗು ಹೆರಲು ಹೋದಾಗ ಗಡ್ಡ ಬಿಡುವ ಗಂಡಂದಿರನ್ನು ನೀವು ಕಂಡಿರುತ್ತೀರಿ, ಇಲ್ಲವೇ ವೈಯಕ್ತಿಕ ಆಸೆಯೊಂದು ಈಡೇರಲಿ  ಎಂದು ವರ್ಷಗಟ್ಟಲೆ ದಾಡಿ ಬಿಟ್ಟವರನ್ನು ಕೂಡ ನೀವು ನೋಡಿರುತ್ತೀರಿ. ಆದರೆ ಛತ್ತೀಸ್ಗಡದಲ್ಲಿ ವ್ಯಕ್ತಿಯೊಬ್ಬ ಹೊಸ ಜಿಲ್ಲೆಯ ರಚನೆಯಾಗಲಿ ಎಂದು ಆಗ್ರಹಿಸಿ 21 ವರ್ಷಗಳಿಂದ ಶೇವಿಂಗ್ ತ್ಯಜಿಸಿದ್ದಾರೆ! ಹೌದು, ಮನೆಯೆಂದ್ರಗಡ ಛಿರ್ಮಿರಿ  ಭರತ್ ಪುರ (ಎಂಸಿಬಿ) ಹೊಸ ಜಿಲ್ಲೆಯಾಗಿ ಘೋಷಣೆ ಆಗಬೇಕು ಎಂದು ಆಗ್ರಹಿಸಿ ಗಡ್ಡ ಬಿಟ್ಟ ಹೋರಾಟಗಾರನ ಹೆಸರು ರಾಮ ಶಂಕರ್ ಗುಪ್ತಾ. 


40 ವರ್ಷಗಳ ಮುನ್ನ ನಮ್ಮ ಪಟ್ಟಣಕ್ಕೆ ಜಿಲ್ಲೆಯ ಮಾನ್ಯತೆ ಸಿಕ್ಕು, ಸುತ್ತಲಿನ ಪ್ರದೇಶ ಅಭಿವೃದ್ಧಿ ಆಗಬೇಕು ಎಂಬ ಆಲೋಚನೆ ದೃಢವಾಗಿ ಮನಸ್ಸಿನಲ್ಲಿ ಮೂಡಿತು. ಅದಕ್ಕಾಗಿ ಆರಂಭದ ಕೆಲವು ವರ್ಷಗಳು ಸರ್ಕಾರ, ರಾಜಕಾರಣಿಗಳಿಗೆ ಅರ್ಜಿಗಳನ್ನು ನೀಡುತ್ತಾ, ದಾಖಲೆಗಳು ಸಂಗ್ರಹದ ಕೆಲಸ ಮಾಡಿದೆ. ಬಳಿಕ ಗಡ್ಡ ಬಿಟ್ಟು, ನನ್ನ ಮನಸ್ಸಿನ ಸಂಕಲ್ಪ ಈಡೇರಿಕೆಗೆ ಕಡೆಗೆ ಗಮನ ಹೆಚ್ಚು ಗಮನ ಹರಿಸಿದೆ, ಎಂದು ಗುಪ್ತಾ ತಿಳಿಸಿದ್ದಾರೆ. ಗುಪ್ತಾ ಅವರ ಅಭಿಲಾಷೆಯು ಕಳೆದ ವರ್ಷ ಆಗಸ್ಟ್ ನಲ್ಲಿ ನೆರವೇರಿದೆ. ಎಂಸಿಬಿ ಜಿಲ್ಲೆಯ ಛತ್ತೀಸ್ಗಡದ 32ನೇ ಜಿಲ್ಲೆಯಾಗಿ ರಚನೆಯಾಗಿದೆ. ಆ ಬಳಿಕ ಶೇವಿಂಗ್ ಮಾಡಿ, ಗಡ್ಡ ತೆಗೆದ ಗುಪ್ತಾ ಅವರು  ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಮೊದಲು ಮನವಿ ಮಾಡಿ ಅರ್ಜಿಯನ್ನು ಕೊಟ್ಟಿದ್ದಾರೆ. ಅದರಂತೆ ಮನೇಂದ್ರಾಗಡದಲ್ಲಿ ಜಿಲ್ಲಾ ಆಸ್ಪತ್ರೆ ತೆರೆಯಲಾಗಿದೆ. ಜೊತೆಗೆ 200 ಕೋಟಿ ರೂ, ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಭೂಪೇಶ್ ಬಘೆಲ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

Wednesday, 25 August 2021

ಪ್ರೀತಿಯ ಹೆಂಡತಿಯ ಅಗಲಿಕೆಯ ನೋವು ತಾಳದೇ ಅಂತ್ಯಕ್ರಿಯೆ ವೇಳೆ ಚಿತೆಯೇರಿದ ಪತಿ!

 

ಭವಾನಿಪಟ್ನಾ (ಒಡಿಶಾ): ಹಿಂದೆಲ್ಲಾ ಸತಿಸಹಗಮನ ಪದ್ಧತಿ ಜಾರಿಯಲ್ಲಿತ್ತು. ಪತಿ ಮೃತಪಟ್ಟ ತಕ್ಷಣ ಆತನ ಚಿತೆಯನ್ನು ಪತ್ನಿಯಾದವಳು ಏರಬೇಕಿತ್ತು! ಒತ್ತಾಯಪೂರ್ವಕವಾಗಿ ಆಕೆಯನ್ನು ಚಿತೆಯ ಮೇಲೆ ಕುಳ್ಳರಿಸಲಾಗುತ್ತಿತ್ತು. ಈ ಅನಿಷ್ಠ ಪದ್ಧತಿ ತೊಗಲಿ ಹಲವಾರು ದಶಕಗಳು ನಡೆದರೂ ಅಲ್ಲಲ್ಲಿ ಇಂಥ ಘಟನೆಗಳು ಕೇಳಿಬರುತ್ತಲೇ ಇರುತ್ತವೆ.

ಆದರೆ ಒಡಿಶಾದಲ್ಲಿ ನಡೆದದ್ದು ಮಾತ್ರ ಇದಕ್ಕೆ ವಿರುದ್ಧವಾಗಿರುವ ಘಟನೆ. ಇಲ್ಲಿ ಪತಿಯೇ ಪತ್ನಿಯ ಚಿತೆಯನ್ನು ಏರಿ ಪ್ರಾಣ ಬಿಟ್ಟಿದ್ದಾರೆ. ಪ್ರೀತಿಯ ಪತ್ನಿಯ ಅಗಲಿಕೆಯನ್ನು ಸಹಿಸದ ಅವರು, ಉರಿಯುವ ಚಿತೆಯನ್ನೇರಿದ್ದಾರೆ. ಇಂಥ ಘಟನೆ ನಡೆದಿರುವುದು ಕಾಲಹಂದಿ ಜಿಲ್ಲೆ ಗೋಲಮುಂಡ ತಾಲ್ಲೂಕಿನ ಸಿಯಾಲ್‌ಜೋಡಿ ಗ್ರಾಮದಲ್ಲಿ. ನೀಲಮಣಿ ಸಬರ್‌ (65) ಚಿತೆಗೆ ಹಾರಿದ ವ್ಯಕ್ತಿ. ಇವರು ತನ್ನ ಪತ್ನಿ ರಾಯಿಬರಿ (60) ಅವರು ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಮುಗಿಸಿದ ನಂತರ ನಾಲ್ವರು ಪುತ್ರರು ಮತ್ತು ಅಂತ್ಯಕ್ರಿಯೆಗೆ ಹೋದ ಸಂಬಂಧಿಕರು ಸಂಪ್ರದಾಯದಂತೆ ಸ್ನಾನಕ್ಕೆ ಹೋಗಿದ್ದರು. ಆ ಸಮಯದಲ್ಲಿ ಯಾರೂ ಇಲ್ಲದ್ದನ್ನು ನೋಡಿ ಚಿತೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಕುಟುಂಬಸ್ಥರು ಸ್ಥಳಕ್ಕೆ ಬಂದಾಗಲೇ ವಿಷಯ ತಿಳಿದಿದೆ.

ನೀಲಮಣಿ ಅವರು ಗ್ರಾಮ ಪಂಚಾಯಿತಿ ಸಮಿತಿಯ ಮಾಜಿ ಸದಸ್ಯರಾಗಿದ್ದರು.

 

Wednesday, 2 June 2021

ನಿಮ್ಮ ಗ್ರಾಮವನ್ನು 'ಕೊರೋನಾ ಮುಕ್ತ' ಮಾಡಿ 50 ಲಕ್ಷ ರೂ. ಗೆಲ್ಲಿ: ಮಹಾರಾಷ್ಟ್ರ ಸರ್ಕಾರದಿಂದ ವಿನೂತನ ಸ್ಪರ್ಧೆ


 ಮುಂಬೈ: ಗ್ರಾಮಗಳಿಗೆ ಕೊರೋನಾ ಹರಡುವುದನ್ನು ತಡೆಯುವ ಕ್ರಮಗಳನ್ನು ಉತ್ತೇಜಿಸುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ 'ಕೊರೋನಾ ಮುಕ್ತ ಗ್ರಾಮ' ಸ್ಪರ್ಧೆಯನ್ನು ಘೋಷಿಸಿದೆ.

ಕೊರೋನಾ ಸೋಂಕಿನ ಹರಡುವಿಕೆಯನ್ನು ತಡೆಯಲು ಕೆಲವು ಗ್ರಾಮಗಳು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇದೀಗ 'ಮೈ ವಿಲೇಜ್ ಕೊರೋನಾ ಫ್ರೀ' ಉಪಕ್ರಮವನ್ನು ಪ್ರಕಟಿಸಿದೆ.

ಕೊರೋನಾ ತಡೆಯುವ ಉದ್ದೇಶದಿಂದ 'ಕರೋನಾ ಮುಕ್ತ ಗ್ರಾಮ' ಸ್ಪರ್ಧೆಯು ಮುಖ್ಯಮಂತ್ರಿ ಘೋಷಿಸಿದ ಉಪಕ್ರಮದ ಭಾಗವಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರಿಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಕಂದಾಯ ವಿಭಾಗದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಮೂರು ಗ್ರಾಮ ಪಂಚಾಯಿತಿಗಳಿಗೆ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 50 ಲಕ್ಷ ರೂ., ದ್ವಿತೀಯ ಸ್ಥಾನಕ್ಕೆ 25 ಲಕ್ಷ ರೂ. ಮತ್ತು ತೃತೀಯ ಸ್ಥಾನಕ್ಕೆ 15 ಲಕ್ಷ ರೂ. ನೀಡಲಾಗುವುದು. ಇನ್ನು ರಾಜ್ಯದಲ್ಲಿ ಆರು ಕಂದಾಯ ವಿಭಾಗಗಳಿದ್ದು ಒಟ್ಟು 18 ಬಹುಮಾನಗಳು ನೀಡಲಾಗುವುದು.

ಒಟ್ಟು ಬಹುಮಾನದ ಮೊತ್ತ 5.4 ಕೋಟಿ ರೂ. ಆಗಲಿದೆ. ಸ್ಪರ್ಧೆಯಲ್ಲಿ ಗೆಲ್ಲುವ ಹಳ್ಳಿಗಳಿಗೆ ಬಹುಮಾನದ ಮೊತ್ತವನ್ನು ಹಂಚಲಾಗುವುದು. ಇದನ್ನು ಆ ಗ್ರಾಮಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. 22 ಮಾನದಂಡಗಳ ಮೇಲೆ ತೀರ್ಪನ್ನು ನಿರ್ಣಯಿಸಲಾಗುವುದು. ಗ್ರಾಮಗಳನ್ನು ನಿರ್ಣಯಿಸಲು ಸಮಿತಿಯನ್ನು ರಚಿಸಲಾಗುವುದು ಎಂದರು.

ಭಾನುವಾರ ವರ್ಚುವಲ್ ಭಾಷಣದಲ್ಲಿ ಠಾಕ್ರೆ, ಸೋಲಾಪುರ ಜಿಲ್ಲೆಯ ಘಾಟ್ನೆ ಗ್ರಾಮವನ್ನು ಕೊರೋನಾವೈರಸ್ ಮುಕ್ತವಾಗಿಡಲು ಶ್ರಮಿಸುತ್ತಿರುವ ಮಹಾರಾಷ್ಟ್ರದ ಕಿರಿಯ ಸರ್ಪಂಚ್ 21 ವರ್ಷದ ರುತುರಾಜ್ ದೇಶ್ಮುಖ್ ಮತ್ತು ಅವರ ಕಾರ್ಯಪಡೆಯನ್ನು ಶ್ಲಾಘಿಸಿದ್ದರು.

ಮಂಗಳವಾರ ಮಹಾರಾಷ್ಟ್ರದಲ್ಲಿ 14,123 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನ ಸಂಖ್ಯೆ 57,61,015ಕ್ಕೆ ತಲುಪಿದೆ.

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...