ರಾಯಪುರ: ಪತ್ನಿಯು ಮಗು ಹೆರಲು ಹೋದಾಗ ಗಡ್ಡ ಬಿಡುವ ಗಂಡಂದಿರನ್ನು ನೀವು ಕಂಡಿರುತ್ತೀರಿ, ಇಲ್ಲವೇ ವೈಯಕ್ತಿಕ ಆಸೆಯೊಂದು ಈಡೇರಲಿ ಎಂದು ವರ್ಷಗಟ್ಟಲೆ ದಾಡಿ ಬಿಟ್ಟವರನ್ನು ಕೂಡ ನೀವು ನೋಡಿರುತ್ತೀರಿ. ಆದರೆ ಛತ್ತೀಸ್ಗಡದಲ್ಲಿ ವ್ಯಕ್ತಿಯೊಬ್ಬ ಹೊಸ ಜಿಲ್ಲೆಯ ರಚನೆಯಾಗಲಿ ಎಂದು ಆಗ್ರಹಿಸಿ 21 ವರ್ಷಗಳಿಂದ ಶೇವಿಂಗ್ ತ್ಯಜಿಸಿದ್ದಾರೆ! ಹೌದು, ಮನೆಯೆಂದ್ರಗಡ ಛಿರ್ಮಿರಿ ಭರತ್ ಪುರ (ಎಂಸಿಬಿ) ಹೊಸ ಜಿಲ್ಲೆಯಾಗಿ ಘೋಷಣೆ ಆಗಬೇಕು ಎಂದು ಆಗ್ರಹಿಸಿ ಗಡ್ಡ ಬಿಟ್ಟ ಹೋರಾಟಗಾರನ ಹೆಸರು ರಾಮ ಶಂಕರ್ ಗುಪ್ತಾ.
40 ವರ್ಷಗಳ ಮುನ್ನ ನಮ್ಮ ಪಟ್ಟಣಕ್ಕೆ ಜಿಲ್ಲೆಯ ಮಾನ್ಯತೆ ಸಿಕ್ಕು, ಸುತ್ತಲಿನ ಪ್ರದೇಶ ಅಭಿವೃದ್ಧಿ ಆಗಬೇಕು ಎಂಬ ಆಲೋಚನೆ ದೃಢವಾಗಿ ಮನಸ್ಸಿನಲ್ಲಿ ಮೂಡಿತು. ಅದಕ್ಕಾಗಿ ಆರಂಭದ ಕೆಲವು ವರ್ಷಗಳು ಸರ್ಕಾರ, ರಾಜಕಾರಣಿಗಳಿಗೆ ಅರ್ಜಿಗಳನ್ನು ನೀಡುತ್ತಾ, ದಾಖಲೆಗಳು ಸಂಗ್ರಹದ ಕೆಲಸ ಮಾಡಿದೆ. ಬಳಿಕ ಗಡ್ಡ ಬಿಟ್ಟು, ನನ್ನ ಮನಸ್ಸಿನ ಸಂಕಲ್ಪ ಈಡೇರಿಕೆಗೆ ಕಡೆಗೆ ಗಮನ ಹೆಚ್ಚು ಗಮನ ಹರಿಸಿದೆ, ಎಂದು ಗುಪ್ತಾ ತಿಳಿಸಿದ್ದಾರೆ. ಗುಪ್ತಾ ಅವರ ಅಭಿಲಾಷೆಯು ಕಳೆದ ವರ್ಷ ಆಗಸ್ಟ್ ನಲ್ಲಿ ನೆರವೇರಿದೆ. ಎಂಸಿಬಿ ಜಿಲ್ಲೆಯ ಛತ್ತೀಸ್ಗಡದ 32ನೇ ಜಿಲ್ಲೆಯಾಗಿ ರಚನೆಯಾಗಿದೆ. ಆ ಬಳಿಕ ಶೇವಿಂಗ್ ಮಾಡಿ, ಗಡ್ಡ ತೆಗೆದ ಗುಪ್ತಾ ಅವರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಮೊದಲು ಮನವಿ ಮಾಡಿ ಅರ್ಜಿಯನ್ನು ಕೊಟ್ಟಿದ್ದಾರೆ. ಅದರಂತೆ ಮನೇಂದ್ರಾಗಡದಲ್ಲಿ ಜಿಲ್ಲಾ ಆಸ್ಪತ್ರೆ ತೆರೆಯಲಾಗಿದೆ. ಜೊತೆಗೆ 200 ಕೋಟಿ ರೂ, ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಭೂಪೇಶ್ ಬಘೆಲ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
No comments:
Post a Comment