Showing posts with label Women' T20 WC. Show all posts
Showing posts with label Women' T20 WC. Show all posts

Sunday, 4 July 2021

ಏಕದಿನ ಸರಣಿ: ಮಿಥಾಲಿ ರಾಜ್ ಅದ್ಭುತ ಆಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್ ಜಯ, ಸರಣಿ ಇಂಗ್ಲೆಂಡ್ ಕೈವಶ!

 


ವೋರ್ಸೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿ ವೈಟ್ ವಾಶ್ ಮುಖಭಂಗದಿಂದ ತಪ್ಪಿಸಿಕೊಂಡಿದೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇಂಗ್ಲೆಂಡ್ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.

ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 219 ರನ್ ಗಳಿಗೆ ಆಲೌಟ್ ಆಯಿತು. ನಂತರ ಟೀ ಇಂಡಿಯಾಗೆ ಓವರ್ ಕಡಿತಗೊಳಿಸಿ 47 ಓವರ್ ಗಳಲ್ಲಿ 220 ರನ್ ಗೆಲುವಿನ ಗುರಿ ನೀಡಲಾಯಿತು.

ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕಿ ಮಿಥಾಲಿ ರಾಜ್ ಅಜೇಯ 75 ರನ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನು ಟೀಂ ಇಂಡಿಯಾ ಪರ ಶಫಾಲಿ ವರ್ಮಾ 19, ಸ್ಮೃತಿ ಮಂದಾನ 49 ಹಾಗೂ ನೇಹ ರಾಣಾ 24 ರನ್ ಗಳಿಸಿದ್ದಾರೆ.

ಇಂಗ್ಲೆಂಡ್ ಪರ ಲೌರೆನ್ ವಿಂಡ್ ಫೀಲ್ಡ್ ಹಿಲ್ 36, ಹೇತರ್ ನೈಟ್ 46, ನಟ್ ಸ್ಕಿವರ್ 49 ರನ್ ಸಿಡಿಸಿದ್ದಾರೆ.


Wednesday, 30 June 2021

ಮಹಿಳಾ ಏಕದಿನ ಪಂದ್ಯ: ಭಾರತದ ವನಿತೆಯರಿಗೆ, ಇಂಗ್ಲೆಂಡ್ ವನಿತೆಯರ ಸವಾಲ್.

 


ಬ್ರಿಸ್ಟಲ್‌ : ಇಂಗ್ಲೆಂಡ್‌ ಎದುರಿನ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡ ಭಾರತದ ವನಿತಾ ತಂಡ ಮತ್ತೂಂದು ಮುಖಾಮುಖೀಗೆ ಸಜ್ಜಾಗಿದೆ.

ಬುಧವಾರ ಬ್ರಿಸ್ಟಲ್‌ನಲ್ಲಿ ಈ ಸೆಣಸಾಟ ನಡೆಯಲಿದ್ದು ಈಗಾಗಲೇ 1-0 ಹಿನ್ನಡೆಯಲ್ಲಿರುವ ಮಿಥಾಲಿ ಪಡೆಗೆ ಸರಣಿಯನ್ನು ಸಮಬಲಕ್ಕೆ ತರುವ ನಿಟ್ಟಿನಲ್ಲಿ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.

ಸರಣಿ ಗೆಲುವಿನ ಕಾತರದಲ್ಲಿ ಇಂಗ್ಲೆಂಡ್‌
ಆತಿಥೇಯ ಹಾಗೂ ವಿಶ್ವ ಚಾಂಪಿಯನ್‌ ತಂಡವಾದ ಇಂಗ್ಲೆಂಡ್‌ ತನ್ನ ಖ್ಯಾತಿಗೆ ತಕ್ಕಂತೆ ಮೊದಲ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗದಲ್ಲಿಯೂ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ್ದು ಇದೇ ಪರಾಕ್ರಮವನ್ನು ಈ ಪಂದ್ಯ ದಲ್ಲಿಯೂ ಮುಂದುವರೆಸಿ ಸರಣಿ ವಶಪಡಿಸುವ ಇರಾದೆಯಲ್ಲಿದೆ ಹೀತರ್‌ ನೈಟ್‌ ಪಡೆ. ಬೌಲಿಂಗ್‌ನಲ್ಲಿ ಸ್ಪಿನ್ನರ್‌ ಎಕ್‌ ಸ್ಟೋನ್‌, ಬ್ರಂಟ್‌ ಮತ್ತು ಅನ್ಯಾ ಶ್ರಬೊàಲ್‌ ಕೂಡ ನಿಯಂತ್ರಿತ ಬೌಲಿಂಗ್‌ ಮೂಲಕ ಪ್ರವಾಸಿಗರನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ

 


Wednesday, 16 June 2021

ಸುದೀರ್ಘ 7 ವರ್ಷಗಳ ಬಳಿಕ, ಸುದೀರ್ಘ ದಿನಗಳ ಆಟ (ಟೆಸ್ಟ್) ಆಡಲಿರುವ ಮಹಿಳಾ ಕ್ರಿಕೆಟ್ ತಂಡ.

ಲಂಡನ್: ಪುರುಷರ ಕ್ರಿಕೆಟ್ ತಂಡದ ಜೊತೆಗೆ ಆಂಗ್ಲರ ನಾಡಿಗೆ ಪ್ರಯಾಣಿಸಿರುವ ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ ಇಂದಿನಿಂದ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಆಡಲಿದೆ.

2014 ರಲ್ಲಿ ದ.ಆಫ್ರಿಕಾ ವಿರುದ್ಧ ಮೈಸೂರಿನಲ್ಲಿ ಆಡಿದ್ದೇ ಭಾರತ ವನಿತೆಯರಿಗೆ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡುತ್ತಿರುವುದು ವಿಶೇಷ.

ಬ್ರಿಸ್ಟಲ್ ನಲ್ಲಿ ಈ ಐತಿಹಾಸಿಕ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ 3.30 ಕ್ಕೆ ಆರಂಭವಾಗಲಿದೆ.

 ನಾಲ್ಕು ದಿನಗಳ ಟೆಸ್ಟ್ ಪಂದ್ಯ ಇದಾಗಿದ್ದು, ಇಂಗ್ಲೆಂಡ್ ಗೆ ಹೀಥರ್ ನೈಟ್ ನಾಯಕಿ. ಭಾರತ ತಂಡಕ್ಕೆ ನಾಯಕಿ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಥನ, ಪೂನಂ ರಾವತ್, ಜೂಲನ್ ಗೋಸ್ವಾಮಿ ಶಕ್ತಿಯಾಗಿದ್ದಾರೆ.

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...