Showing posts with label Kannada. Show all posts
Showing posts with label Kannada. Show all posts

Sunday, 2 January 2022

ಫುಡ್ ಡೆಲಿವರಿ ಹುಡುಗಿಯಾಗಿ ಗ್ರಾಹಕರ ಮನೆಗಳಿಗೆ ಹೋದ ರಶ್ಮಿಕಾ..!!

 

ಫುಡ್ ಡೆಲಿವರಿ ಹುಡುಗಿಯಾಗಿ ಗ್ರಾಹಕರ ಮನೆಗಳಿಗೆ ಹೋದ ರಶ್ಮಿಕಾ..!!

ಹೈದರಾಬಾದ್: ರಶ್ಮಿಕಾ ಮಂದಣ್ಣ ಸದ್ಯ ಕನ್ನಡದಿಂದ ಹೋಗಿ ಟಾಲಿವುಡ್ ನಲ್ಲಿ ನೆಲೆಯೂರಿದ್ದಾರೆ.. ಬಾಲಿವುಡ್ ನಲ್ಲಿ ನೆಲೆಯೂರಲ್ಲಿ ಟ್ರೈ ಮಾಡ್ತಿದ್ದಾರೆ..

ಅದೃಷ್ಟದಿಂದಲೇ ಯಶಸ್ಸಿನ ಶಿಖರವೇರಿರುವ ರಶ್ಮಿಕಾ , ಜಾಹಿರಾತುಗಳಲ್ಲೂ ಬ್ಯುಸಿಯಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.. ಅಷ್ಟೇ ಅಲ್ದೇ ವಿಶ್ವ ಪ್ರಸಿದ್ಧ ಫುಡ್ ಫ್ರಾಂಚೈಸಿ ಮೆಕ್ ಡೊನಾಲ್ಡ್ ನ ಭಾರತೀಯ ರಾಯಭಾರಿಯೂ ಆಗಿರುವ ಕ್ರಶ್ಮಿಕಾ ಆಗಾಗ ಮೆಕ್ ಡೊನಾಲ್ಡ್ಸ್ ಮೀಲ್ ನ ಪ್ರಮೋಟ್ ಮಾಡೋ ವಿಡಿಯೋಗಳನ್ನ ಹಂಚಿಕೊಳ್ತಾ ಇರುತ್ತಾರೆ..

ಅದ್ರಲ್ಲೂ ಮೆಕ್ ಡೊನಾಲ್ಡ್ಸ್ ರಶ್ಮಿಕಾ ಹೆಸರಲ್ಲೇ ಮೀಲ್ ಕೂಡ ಪರಿಚಯ ಮಾಡಿಸಿರುವುದು ಗೊತ್ತಿಲ್ದೇ ಇರೋ ವಿಚಾರವೇನಲ್ಲಾ.. ಸದ್ಯ ರಶ್ಮಿಕಾ ನಟನೆಯ ಪುಷ್ಪ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿದೆ.. ಇತ್ತೀಚೆಗೆ ರಶ್ಮಿಕಾ ಫುಡ್ ಡೆಲಿವರಿ ಹುಡುಗಿಯಂತೆ ಬಟ್ಟೆ ಧರಿಸಿ , ಅಂತೆಯೇ ತಯಾರಾಗಿ ಮಾಸ್ಕ್ ಧರಿಸಿ ಮೆಕ್ ಡೊನಾಲ್ಡ್ಸ್ ನಲ್ಲಿ ಫುಡ್ ಆರ್ಡರ್ ಮಾಡಿದ್ದ ಕೆಲ ಗ್ರಾಹಕರ ಮನೆಗಳಿಗೆ ತೆರಳಿ ಅವರಿಗೆ ಸರ್ಪ್ರೈಸ್ ನೀ ಈ ಸಂಬಂಧಿತ ವಿಡಿಯೋವನ್ನ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು , ಇದರಲ್ಲಿ ಅವರು ಮೆಕ್ ಡೊನಾಲ್ಡ್ ಕಂಪನಿಯದ್ದೇ ಬಟ್ಟೆ ಧರಿಸಿ ಅದೇ ಕಂಪನಿಯದ್ದೇ ಹೆಲ್ಮೆಟ್ ಧರಿಸಿ , ಕಂಪನಿಯ ದ್ವಿಚಕ್ರ ವಾಹಹನ ೋಡಿಸಿಕೊಂಡು ಬಂದಿರುವುದನ್ನ ನೋಡಬಹುದು.. ಸ್ವತಃ ಈ ವೀಡಿಯೋವನ್ನು ಮೆಕ್ ಡೋನಾಲ್ಡ್ ತನ್ನ ಇನ್‌ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದು, ರಶ್ಮಿಕಾ ಕೂಡ ಅದನ್ನು ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

ರಶ್ಮಿಕಾ ಒಂದು ಮನೆಗೆ ತೆರಳಿ ಫುಡ್ ನೀಡುವ ಸಂದರ್ಭದಲ್ಲಿ ನೀವು ರಶ್ಮಿಕಾ ಮಂದಣ್ಣ ಅಲ್ಲವಾ ಎಂದು ಗ್ರಾಹಕರು ಕೇಳುವ ಮೂಲಕ ರಶ್ಮಿಕಾರನ್ನು ಕಂಡು ಹಿಡಿದ್ದಿದ್ದಾರೆ. ನಂತರ ಆ ಮನೆಯವರು ಶಾಕ್ ಆಗಿ ಬಳಿಕ ಖುಷಿಯಿಂದ ರಶ್ಮಿಕಾ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. ಅವರೊಂದಿಗೆ ರಶ್ಮಿಕಾ ಮಂದಣ್ಣ ಕೂಡ ಮಾತನಾಡಿದ್ದು, ದಿ ರಶ್ಮಿಕಾ ಮೀಲ್ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.. ಬಳಿಕ ಈ ಬಗ್ಗೆ ಮಾಹಿತಿ ನೀಡಿರುವ ರಶ್ಮಿಕಾ ಇದು ಒಂಥರಾ ಫನ್ ಆಗಿತ್ತು, ಗ್ರಾಹಕರಿಂದ ಈ ರೀತಿಯ ಪ್ರತಿಕ್ರಿಯೆಯನ್ನು ನಾನು ಊಹಿಸಿರಲಿಲ್ಲ ಎಂದಿದ್ದಾರೆ..

ಡಿದ್ದಾರೆ.. ಕೆಲವರಂತೂ ರಶ್ಮಿಕಾ ಜೊತೆಗೆ ಸಖತ್ ಹ್ಯಾಪಿಯಾಗಿ ಸೆಲ್ಫಿಗಳನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ..

Sunday, 29 August 2021

ಸೆಪ್ಟೆಂಬರ್ 4ರಂದು 'ಶುಗರ್ ಲೆಸ್' ಚಿತ್ರದ ಮತ್ತೊಂದು ಹಾಡು ರಿಲೀಸ್

 


ಶಶಿಧರ್ ಕೆ ಎಂ ನಿರ್ದೇಶಿಸಿ ನಿರ್ಮಾಣ ಮಾಡಿರುವ 'ಶುಗರ್ ಲೆಸ್' ಚಿತ್ರದ ಟೈಟಲ್ ಸಾಂಗ್ ವೊಂದನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು, ಇದೀಗ 'ನಮ್ ತಾಯಾಣೆ ಲವ್ ಯು ಬಂಗಾರಿ' ಎಂಬ ಎರಡನೇ ಹಾಡು ಸೆಪ್ಟೆಂಬರ್ 4ರಂದು ರಿಲೀಸ್ ಆಗಲಿದೆ. ಈ ಕುರಿತು ಪ್ರಿಯಾಂಕ ತಿಮ್ಮೇಶ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕನಾಗಿ ನಟಿಸಿದ್ದು ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೀಗ ಮತ್ತೊಂದು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಸಂಜಿತ್ ಹೆಗ್ಡೆ ಈ ಹಾಡಿಗೆ ಧ್ವನಿಗೂಡಿಸಿದ್ದು ಅನೂಪ್ ಸಂಗೀತ ಸಂಯೋಜನೆ ನೀಡಿದ್ದಾರೆ, ಡಿ ಆರ್ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.

Tuesday, 24 August 2021

'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ದುರಂತ : ಪೊಲೀಸ್ ವಿಚಾರಣೆ ಬಳಿಕ ನಟಿ 'ರಚಿತಾ ರಾಮ್' ಹೇಳಿದ್ದೇನು..?

 

ರಾಮನಗರ: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ಮೃತಪಟ್ಟ ಪ್ರಕರಣಕ್ಕೆ 

ಸಂಬಧಿಸಿದಂತೆ ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಇಂದು ಹಾಜರಾಗಿದ್ದಾರೆ.

ಡಿವೈಎಸ್ಪಿ ಮೋಹನ್ ಕುಮಾರ್ ಅವರ ಎದುರು ವಿಚಾರಣೆಗೆ ಹಾಜರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಅವರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣ ಸಂಬಂಧ ಬಿಡದಿ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆ ನಟಿ ರಚಿತಾ ರಾಮ್ ವಿಚಾರಣೆಗೆ ಹಾಜರಾಗಿದ್ದಾರೆ.

ಪೊಲೀಸ್ ವಿಚಾರಣೆ ಬಳಿಕ ನಟಿ ರಚಿತಾ ರಾಮ್ ಹೇಳಿದ್ದೇನು..?

ಪೊಲೀಸ್ ವಿಚಾರಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಚಿತಾ ರಾಮ್ ಮೊದಲು ನನಗೆ ವಿಷಯ ಗೊತ್ತಾಗಿರಲಿಲ್ಲ, ಬಳಿಕ ಮಾಧ್ಯಮಗಳ ಮೂಲಕ ವಿಷಯ ತಿಳಿದುಕೊಂಡೆ. ಘಟನೆ ನಡೆದ ವೇಳೆ ನಾನು ಸ್ಥಳದಲ್ಲಿ ಇರಲಿಲ್ಲ , ಉದ್ದೇಶಪೂರ್ವಕವಾಗಿ ನಡೆದ ಘಟನೆ ನಡೆದಿಲ್ಲ,

ಘಟನೆ ಬಗ್ಗೆ ನನಗೂ ನೋವಿದೆ. ಘಟನೆ ನಡೆದ ದಿನ ನಾನು ಸ್ಥಳದಲ್ಲಿ ಇರಲಿಲ್ಲ, ಆದ್ದರಿಂದ ಏನೂ ಹೇಳಲು ಸಾಧ್ಯವಾಗಲಿಲ್ಲ, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ನೋಡೋಣ ಎಂದು ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ವಿಚಾರಣೆ ಬಳಿಕ ನಟಿ ರಚಿತಾ ರಾಮ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಮನಗರದಲ್ಲಿ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಮೃತಪಟ್ಟಿದ್ದರು. ಪ್ರಕರಣ ಸಂಬಂಧ, ಮೂವರು ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಇಂತಹ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನವಿಧಿಸಿ ಆದೇಶಿಸಿತ್ತು. , ಆರೋಪಿಗಳಾದಂತ ನಿರ್ದೇಶಕ ಶಂಕರಯ್ಯ, ಫೈಟ್ ಮಾಸ್ಟರ್ ವಿನೋದ್ ಹಾಗೂ ಕ್ರೈನ್ ಚಾಲಕ ಮಹಾದೇವ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿತ್ತು.

Saturday, 21 August 2021

ಸೆಲ್ಫಿ ತೆಗೆಯಲು ಹೋಗಿ ದುರಂತ; ನೋಡ ನೋಡುತ್ತಿದ್ದಂತೆಯೇ ಸಮುದ್ರದಲ್ಲಿ ಕಣ್ಮರೆಯಾದ ವ್ಯಕ್ತಿ.

 

ಕಾರವಾರ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಸಿಗನೋರ್ವ ಸಮುದ್ರಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಓಂ ಬೀಚ್ ನಲ್ಲಿ ನಡೆದಿದೆ.

ಕುಮಾರ್ ಶೇಕಪ್ಪ (35) ಸಮುದ್ರಪಾಲಾಗಿರುವ ದುರ್ದೈವಿ. ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿಯಾದ ಕುಮಾರ್ ಸೇರಿದಂತೆ ಒಟ್ಟು 12 ಜನರು ಪ್ರವಾಸಕ್ಕಾಗಿ ಬಂದಿದ್ದರು ಎನ್ನಲಾಗಿದೆ.

ಓಂ ಬೀಚ್ ನಲ್ಲಿ ಸೆಲ್ಫಿಗಾಗಿ ಕಲ್ಲಿನ ಮೇಲೆ ನಿಂತಿದ್ದ ಕುಮಾರ್, ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದಂತೆ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ತಕ್ಷಣ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದಾರೆ ಆದರೆ ಅಲೆಗಳ ಅಬ್ಬರಕ್ಕೆ ಸಿಲುಕಿರುವ ವ್ಯಕ್ತಿ ಸಮುದ್ರದಲ್ಲಿ ಕಣ್ಮರೆಯಾಗಿದ್ದಾರೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, 12 July 2021

ಜುಲೈ 12, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಜನ್ಮದಿನ.

 


ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ, ವ್ಯಕ್ತಿತ್ವ ಹಾಗೂ ಹೋರಾಟಗಳಿಂದ ಭಿನ್ನವಾದ ವರ್ಚಸ್ಸನ್ನು ಹೊಂದಿರುವವರು ನಟ ಶಿವರಾಜ್​ಕುಮಾರ್. ಇಂದು ಅವರು 59ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಡಾ.ರಾಜ್​ಕುಮಾರ್ ಕುಟುಂಬದ ಕುಡಿಯಾಗಿ ಜವಾಬ್ದಾರಿಗಳನ್ನೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವ ಶಿವರಾಜ್​ಕುಮಾರ್ ಬಾಲ್ಯ, ಚಿತ್ರಂಗದ ಆರಂಭಿದ ಯಶಸ್ವೀ ದಿನಗಳು, ನಂತರದ ಸೋಲು, ಮತ್ತೆ ಮೇಲೆದ್ದು ಬಂದ ಪರಿ, ಈಗಿನ ಅವರ ಚಿತ್ರಗಳ ಗೆಲುವಿನ ಕತೆ ಮೊದಲಾದ ವಿಶೇಷ ಸಂಗತಿಗಳ ಮೆಲುಕು ನೋಟ ಇಲ್ಲಿದೆ.

ಜನನ ಮತ್ತು ವಿದ್ಯಾಭ್ಯಾಸ: ಶಿವರಾಜ್​ಕುಮಾರ್ ಅವರು 1962ರ ಜುಲೈ 12ರಂದು ಡಾ.ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಅವರ ಮೊದಲ ಪುತ್ರನಾಗಿ ಮದ್ರಾಸ್​ನಲ್ಲಿ ಜನಿಸಿದರು. ರಾಜ್​ಕುಮಾರ್ ಅವರು ತಮ್ಮ ತಂದೆ ಪುಟ್ಟಸ್ವಾಮಿಯವರ ನೆನಪಿಗಾಗಿ ಶಿವರಾಜ್ ಕುಮಾರ್ ಅವರಿಗೆ ಮೊದಲು 'ನಾಗರಾಜು ಶಿವ ಪುಟ್ಟಸ್ವಾಮಿ' ಎಂದು ಹೆಸರಿಟ್ಟಿದ್ದರು.ಶಿವರಾಜ್​ಕುಮಾರ್ ಬಾಲ್ಯವನ್ನು ತಮಿಳುನಾಡಿನ ಚೆನ್ನೈನಲ್ಲೇ ಕಳೆದರು. ಅಲ್ಲಿನ ನ್ಯೂ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ನಡೆಸಿದರು. ಇಬ್ಬರು ತಮ್ಮ(ರಾಘವೇಂದ್ರ ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್) ಹಾಗೂ ಇಬ್ಬರು ತಂಗಿಯರಿಗೆ ಪ್ರೀತಿಯ ಅಣ್ಣನಾಗಿದ್ದಾರೆ ಶಿವರಾಜ್​ಕುಮಾರ್.

ಚಿತ್ರರಂಗ ಪ್ರವೇಶ: ಚೆನ್ನೈನಲ್ಲಿರುವಾಗಲೇ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಅವರ ಮಾರ್ಗದರ್ಶನದಂತೆ ತಮ್ಮ ಪದವಿ ವಿದ್ಯಾಭ್ಯಾಸದ ನಂತರ ಶಿವರಾಜ್​ಕುಮಾರ್ ಅಭಿನಯದ ತರಗತಿಗೆ ಸೇರಿಕೊಂಡರು. ಕೂಚಿಪುಡಿ ನೃತ್ಯದಲ್ಲಿಯೂ ಪರಿಣತಿಯನ್ನು ಗಳಿಸಿದರು. ನಂತರ ತಮ್ಮ ಮೊದಲ ಚಿತ್ರ 'ಆನಂದ್' ಮೂಲಕ 1986ರಲ್ಲಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ನಂತರ ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಚಿತ್ರದಲ್ಲಿ ಅಭಿನಯಿಸಿದರು. ಈ ಮೂರೂ ಚಿತ್ರಗಳೂ ಶತದಿನೋತ್ಸವ ಪೂರೈಸುವುದರೊಂದಿಗೆ ಹ್ಯಾಟ್ರಿಕ್ ಹೀರೋ ಎಂದು ಅಭಿಮಾನಿಗಳಿಂದ ಬಿರುದಾಂಕಿತರಾದರು.

ಕಮರ್ಷಿಯಲ್ ಚಿತ್ರಗಳಲ್ಲಿ ನಡೆಸಿದ ಪ್ರಯೋಗಗಳು: ಶಿವರಾಜ್​ಕುಮಾರ್ ಉಳಿದೆಲ್ಲಾ ಸ್ಟಾರ್ ನಟರಗಳಿಗಿಂತ ಭಿನ್ನವಾಗಿ ನಿಲ್ಲುವುದು ಅವರ ಕಮರ್ಷಿಯಲ್ ಚಿತ್ರಗಳೂ ಪ್ರಯೋಗಶೀಲವಾಗಿರುತ್ತವೆ ಎಂಬುದರಿಂದ. 'ಓಂ', 'ಭೂಮಿ ತಾಯಿಯ ಚೊಚ್ಚಲಮಗ', 'ನಮ್ಮೂರ ಮಂದಾರ ಹೂವೆ', 'ಚಿಗುರಿದ ಕನಸು' ಈ ಚಿತ್ರಗಳೆಲ್ಲವೂ ವಿಭಿನ್ನ ಕಥಾ ವಸ್ತುಗಳಿಂದ ಗಮನ ಸೆಳೆಯುತ್ತವೆ. ಕಮರ್ಷಿಯಲ್ ಚಿತ್ರಗಳಲ್ಲೇ ಶಿವರಾಜ್​ಕುಮಾರ್ ಪ್ರಯೋಗಗಳನ್ನು ಗಮನಿಸಬೇಕಾದರೆ, 'ಸುಗ್ರೀವ', 'ಜೋಗಿ', 'ಚೆಲುವೆಯೇ ನಿನ್ನ ನೋಡಲು', 'ಸಂತೆಯಲ್ಲಿ ನಿಂತ ಕಬೀರ' ಮೊದಲಾದ ಚಿತ್ರಗಳನ್ನು ಗಮನಿಸಬೇಕು.

'ಸುಗ್ರೀವ' ಚಿತ್ರವು ಕೇವಲ ಹದಿನೆಂಟು ಗಂಟೆಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ ಚಿತ್ರ. 'ಜೋಗಿ' ಚಿತ್ರವು ತಾಯಿ ಮಗನ ಬಾಂಧವ್ಯವನ್ನು ಸಾರುವ ಅಪ್ಪಟ ಕನ್ನಡ ಮಣ್ಣಿನ ಚಿತ್ರ. ಚೆಲುವೆಯೇ ನಿನ್ನ ನೋಡಲು ಚಿತ್ರವನ್ನು ವಿಶ್ವದ ಏಳು ಅದ್ಭುತಗಳಿರುವ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ಸಂತೆಯಲ್ಲಿ ನಿಂತ ಕಬೀರ ಚಿತ್ರವು ಕಬೀರನ ಜೀವನ ಕತೆ. ಅದರಲ್ಲಿ ಶಿವರಾಜ್ ಕುಮಾರ್ ಅಭಿನಯ ಮನೋಜ್ಞವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಭಜರಂಗಿ, ಟಗರು, ಕಡ್ಡಿಪುಡಿ, ಕವಚ, ಮಫ್ತಿ, ಶಿವಲಿಂಗ, ಕಿಲ್ಲಿಂಗ್ ವೀರಪ್ಪನ್ ಮೊದಲಾದ ಚಿತ್ರಗಳನ್ನು ಗಮನಿಸಿದರೂ ಒಂದಕ್ಕಿಂತ ಒಂದರಲ್ಲಿ ಭಿನ್ನವಾಗಿ ಶಿವರಾಜ್ ಕುಮಾರ್ ಪಾತ್ರ ಪೋಷಣೆಯಿದೆ. ಅರವತ್ತು ಸಮೀಪಿಸುತ್ತಿದ್ದರೂ ಕತೆಗಳ ಆಯ್ಕೆಯಲ್ಲಿ ಹಾಗೂ ಸ್ಟಾರ್ ಆಗಿದ್ದರೂ ಹೊಸ ಪಾತ್ರಗಳನ್ನು ಸ್ವೀಕರಿಸುವಲ್ಲಿ ಶಿವರಾಜ್​ಕುಮಾರ್ ಉಳಿದೆಲ್ಲಾ ನಟರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಅವರ ಈ ಪ್ರಯೋಗಶೀಲತೆಯೇ ಅವರನ್ನು ಇಂದಿಗೂ ಅತ್ಯಂತ ಬೇಡಿಕೆಯುಳ್ಳ ನಟನಾಗಿ ಉಳಿಸಿದೆ ಮತ್ತು ಸೋಲುಗಳನ್ನು ಹಿಮ್ಮೆಟ್ಟಿಸಲು ಸಹಕಾರಿಯಾಗಿದೆ.

ಡಬ್ಬಿಂಗ್ ಪರ ಹೋರಾಟ: ಶಿವರಾಜ್​ಕುಮಾರ್ ಮೊದಲಿನಿಂದಲೂ ಡಬ್ಬಿಂಗ್ ಚಿತ್ರಗಳ ವಿರೋಧವಾಗಿದ್ದರು. ಕನ್ನಡದಲ್ಲಿ ಅಂತಲ್ಲ, ಭಾರತದಲ್ಲಿ ಅದರ ಅವಶ್ಯಕತೆ ಏನಿದೆ ಎಂಬುದು ಅವರ ಪ್ರಶ್ನೆಯಾಗಿತ್ತು. ಈ ಕುರಿತು ಹೋರಾಟಗಳೂ ನಡೆದಿದ್ದವು. ಆದರೆ ಸುಪ್ರೀಂ ಕೋರ್ಟ್ ಡಬ್ಬಿಂಗ್​ಗೆ ಹಸಿರು ನಿಶಾನೆ ತೋರಿದಲ್ಲಿಂದ ಶಿವರಾಜ್​ಕುಮಾರ್ ಡಬ್ಬಿಂಗ್ ಹೋರಾಟದಿಂದ ಹಿಂದೆ ಸರಿದರು. ಜನರಿಗೆ ಅದೇ ಬೇಕು ಎನ್ನುವುದಾದರೆ ಅದು ದೊರೆಯಲಿ, ನನ್ನ ಅಭ್ಯಂತರ ಏನಿಲ್ಲ ಎಂದು ಅವರು ಸುಮ್ಮನಾದರು. ಇಲ್ಲಿಯೂ ಶಿವರಾಜ್​ಕುಮಾರ್ ಅವರ ನಿಲುವು ಎಲ್ಲರಿಗೂ ಪ್ರಿಯವಾಯಿತು.

ಪ್ರಶಸ್ತಿಗಳು: ಓಂ, ಹೃದಯಾ ಹೃದಯಾ, ಚಿಗುರಿದ ಕನಸು, ಜೋಗಿ ಚಿತ್ರಗಳಲ್ಲಿನ ನಟನೆಗಾಗಿ ಶಿವರಾಜ್​ಕುಮಾರ್ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಇದಲ್ಲದೇ ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿಗಳು ಹಾಗೂ ಮೂರು ದಕ್ಷಿಣ ಭಾರತ ಮಟ್ಟದ ಪ್ರಶಸ್ತಿಗಳು ಅವರಿಗೆ ಲಭಿಸಿದೆ. ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ.

ಕುಟುಂಬ: ಶಿವರಾಜ್​ಕುಮಾರ್ ಅವರ ಪತ್ನಿ ಗೀತಾ ಶಿವರಾಜ್​ಕುಮಾರ್. ದಂಪತಿಗೆ ನಿವೇದಿತಾ ಹಾಗೂ ನಿರುಪಮಾ ಎಂಬ ಈರ್ವರು ಮಕ್ಕಳಿದ್ದಾರೆ.

ಮುಂದಿನ ಚಿತ್ರಗಳು: ಶಿವರಾಜ್​ಕುಮಾರ್ ಅವರ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ಭಜರಂಗಿ 2, ವೇದ, ಇನ್ನೂ ಹೆಸರಿಡದ ವಿಜಯ್ ಮಿಲ್ಟನ್ ನಿರ್ದೇಶನದ ಅವರ 123ನೆಯ ಚಿತ್ರಗಳಲ್ಲದೇ, ರಿಷಬ್ ಶೆಟ್ಟಿಯವರೊಂದಿಗೆ ಹೊಸ ಚಿತ್ರಕ್ಕೆ ಶಿವರಾಜ್​ಕುಮಾರ್ ಕೈಜೋಡಿಸಲಿದ್ದಾರೆ. ಅದು ಶಿವರಾಜ್​ಕುಮಾರ್ ಅವರ 126ನೇ ಚಿತ್ರವಾಗಲಿದೆ. ಹೀಗೆ ತಮ್ಮ 59ರ ವಯಸ್ಸಿನಲ್ಲೂ ಸತತವಾಗಿ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಅಭಿಮಾನಿಗಳ ನೆಚ್ಚಿನ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್.

 

Sunday, 4 July 2021

ಇಂದು ಪ್ರಜ್ವಲ್‌ ಬರ್ತ್‌ಡೇ: ಸಿನಿಮಾಗಳ ಟೈಟಲ್‌, ಟೀಸರ್‌, ಪೋಸ್ಟರ್‌ ರಿಲೀಸ್‌

ಡೈನಾಮಿಕ್‌ ಪ್ರಿನ್ಸ್‌ ನಟ ಪ್ರಜ್ವಲ್‌ ದೇವರಾಜ್‌ಗೆ ಇಂದು (ಜು.4) ಜನ್ಮದಿನದ ಸಂಭ್ರಮ. ಪ್ರತಿವರ್ಷ ಪ್ರಜ್ವಲ್‌ ದೇವರಾಜ್‌ ತಮ್ಮ ಜನ್ಮದಿನವನ್ನು ಅಭಿಮಾನಿಗಳು, ಸ್ನೇಹಿತರು ಮತ್ತುಕುಟುಂಬ ವರ್ಗದ ಜೊತೆ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದರು. ಆದರೆ ಕಳೆದ ವರ್ಷದಿಂದ ಕೊರೊನಾ ಆತಂಕ ಪ್ರಜ್ವಲ್‌ ದೇವರಾಜ್‌ ಅದ್ಧೂರಿ ಬರ್ತ್‌ಡೇ ಸೆಲೆಬ್ರೇಷನ್‌ಗೆ ಬ್ರೇಕ್‌ ಹಾಕಿದೆ.

ಕೊರೊನಾ ಲಾಕ್‌ಡೌನ್‌ನಿಂದ ಕಳೆದ ವರ್ಷ ತಮ್ಮ ಬರ್ತ್‌ಡೇಯನ್ನು ಪ್ರಜ್ವಲ್‌ ದೇವರಾಜ್‌ ಸರಳವಾಗಿ ಆಚರಿಸಿಕೊಂಡಿದ್ದರು. ಇನ್ನೂ ಈ ವರ್ಷ ಕೂಡ ಕೊರೊನಾ ಎರಡನೇ ಅಲೆಯ ಆತಂಕ ಮುಂದುವರೆದಿರುವುದರಿಂದ, ಈ ಬಾರಿಯೂ ಪ್ರಜ್ವಲ್‌ ತಮ್ಮ ಹುಟ್ಟುಹಬ್ಬದ ಅದ್ಧೂರಿ ಆಚರಣೆಯಿಂದ ದೂರವಿರುವ ನಿರ್ಧಾರಕ್ಕೆ ಬಂದಿದ್ದಾರೆ. ಅಭಿಮಾನಿಗಳು ಕೊರೊನಾ ಸಂತ್ರಸ್ಥರಿಗೆ ಸಹಾಯ ಹಸ್ತ ನೀಡುವ ಮೂಲಕ ನನ್ನ ಹುಟ್ಟು ಹಬ್ಬಕ್ಕೆ ಹರಸಿ ಹಾರೈಸಿ ಎಂದುಕೇಳಿಕೊಳ್ಳುತ್ತೇನೆಎಂದು ಪ್ರಜ್ವಲ್‌ ಅಭಿಮಾನಿಗಳಲ್ಲಿ ಪ್ರಜ್ವಲ್‌ ಮನವಿ ಮಾಡಿದ್ದಾರೆ.

ಇನ್ನು, ಬರ್ತ್‌ಡೇ ಪ್ರಯುಕ್ತ ನಟ ಪ್ರಜ್ವಲ್‌ ದೇವರಾಜ್‌ ಅಭಿನಯದ ಮುಂಬರುವ ಹಲವು ಸಿನಿಮಾ ತಂಡಗಳು ತಮ್ಮ ಸಿನಿಮಾಗಳ ಟೀಸರ್‌, ಪೋಸ್ಟರ್‌, ಫ‌ಸ್ಟ್‌ಲುಕ್‌, ಟೈಟಲ್‌ ಬಿಡುಗಡೆ ಮಾಡುವ ಮೂಲಕ ತಮ್ಮ ನಾಯಕ ನಟನಿಗೆ ಜನ್ಮದಿನದ ಶುಭಾಶಯ ಕೋರುತ್ತಿವೆ. ಸದ್ಯಕೈಯಲ್ಲಿ ಐದಕ್ಕೂ ಹೆಚ್ಚು ಸಿನಿಮಾಗಳಿವೆ.

ವೀರಂಟೀಸರ್‌ ಔಟ್‌: ಪ್ರಜ್ವಲ್‌ ದೇವರಾಜ್‌ ಆಯಕ್ಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ವೀರಂಚಿತ್ರದ ಫ‌ಸ್ಟ್‌ ಟೀಸರ್‌, ಪ್ರಜ್ವಲ್‌ ಬರ್ತ್‌ಡೇ ಪ್ರಯುಕ್ತ ಆನಂದ್‌ ಆಡಿಯೋಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಶಶಿಧರ್‌ ಸ್ಟುಡಿಯೋಸ್‌ ಪ್ರೊಡಕ್ಷನ್ಸ್‌ಬ್ಯಾನರ್‌ನಲ್ಲಿ ಶಶಿಧರಕೆ.ಎಂ ನಿರ್ಮಾಣದಲ್ಲಿ ಮೂಡಿಬರುತ್ತಿರುವ ವೀರಂಚಿತ್ರಕ್ಕೆ ಕುಮಾರ್‌ ರಾಜ್‌ (ಖದರ್‌) ನಿರ್ದೇಶನವಿದೆ. ಚಿತ್ರದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ರಚಿತಾ ರಾಮ್‌ ಜೋಡಿಯಾಗಿದ್ದಾರೆ. ಶ್ರೀನಗರ ಕಿಟ್ಟಿ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ವೀರಂಟೀಸರ್‌ ಮಾಸ್‌ ಆಡಿಯನ್ಸ್‌ ಗಮನ ಸೆಳೆಯುತ್ತಿದೆ.

ಮಾಫಿಯಾದಲ್ಲಿ ಖಡಕ್‌ ಲುಕ್‌: ಪ್ರಜ್ವಲ್‌ ದೇವರಾಜ್‌ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ಅಭಿನಯಿಸುತ್ತಿರುವ, ಗುರುದತ್‌ ಗಾಣಿಗ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ ಮಾಫಿಯಾಎಂದು ಟೈಟಲ್‌ ಇಡಲಾಗಿದೆ. ಪ್ರಜ್ವಲ್‌ ಬರ್ತ್‌ಡೆ ಪ್ರಯುಕ್ತ ಚಿತ್ರತಂಡ ಮಾಫಿಯಾಸಿನಿಮಾ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಿದೆ. ಇದುಕೂಡ ಔಟ್‌ ಆಯಂಡ್‌ ಔಟ್‌ ಆಯಕ್ಷನ್‌ ಕಥಾಹಂದರದ ಚಿತ್ರವಾಗಿದ್ದು, “ಮಾಫಿಯಾಟೈಟಲ್‌ ಪೋಸ್ಟರ್‌ ಮಾಸ್‌ ಆಡಿಯನ್ಸ್‌ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರವನ್ನು ಕುಮಾರ್‌ ಬಿ. ನಿರ್ಮಿಸುತ್ತಿದ್ದಾರೆ.

ಅಬ್ಬರ: ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ಅಭಿನಯಿಸುತ್ತಿರುವ, ಕೆ. ರಾಮನಾರಾಯಣ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ ಅಬ್ಬರಎಂದು ಹೆಸರಿಡಲಾಗಿದ್ದು, ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ. ಸಿ ಆಯಂಡ್‌ ಎಂ ಮೂವೀಸ್‌ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಬಸವರಾಜ್‌ ಮಂಚಯ್ಯ ನಿರ್ಮಾಣವಿದೆ. ಇದರ ಜತೆಗೆ ಪ್ರಜ್ವಲ್‌ ಅವರ ಹೊಸ ಸಿನಿಮಾವು ಇಂದು ಅನೌನ್ಸ್‌ ಆಗಲಿದ್ದು, ನವೀನ್‌ ಕುಮಾರ್‌ ಎನ್ನುವವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ

ನಂದಕಿಶೋರ್‌ ಜೊತೆ ಆಯಕ್ಷನ್‌ ಚಿತ್ರ: “ರಶ್ಮಿ ಫಿಲಂಸ್‌ಬ್ಯಾನರ್‌ನಲ್ಲಿ ಸುಮಂತ್‌ ಕ್ರಾಂತಿ ನಿರ್ಮಾಣದ ಎರಡನೇ ಚಿತ್ರದಲ್ಲಿ ಪ್ರಜ್ವಲ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದುಈ ಚಿತ್ರಕ್ಕೆ ಪೊಗರುಖ್ಯಾತಿಯ ನಂದಕಿಶೋರ್‌ ಆಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಪ್ರಜ್ವಲ್‌ ಬರ್ತ್‌ಡೇ ಪ್ರಯುಕ್ತ ಚಿತ್ರತಂಡ ಚಿತ್ರವನ್ನು ಘೋಷಣೆ ಮಾಡಿದ್ದು, ಸದ್ಯ ಚಿತ್ರದ ಪ್ರಿ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ. ಔಟ್‌ ಆಯಂಡ್‌ ಔಟ್‌ ಆಯಕ್ಷನ್‌ ಕಥಾಹಂದರ ಹೊಂದಿರುವ ಈ ಚಿತ್ರದ ಟೈಟಲ್‌ ಮತ್ತು ಫ‌ಸ್ಟ್‌ಲುಕ್‌ ಶೀಘ್ರದಲ್ಲೇ ರಿಲೀಸ್‌ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ರಿಲೀಸ್‌ಗೆ ರೆಡಿ ಅರ್ಜುನ್‌ ಗೌಡ: ಪ್ರಜ್ವಲ್‌ ದೇವರಾಜ್‌ ಅಭಿನಯದ ಅರ್ಜುನ್‌ ಗೌಡಶೀಘ್ರದಲ್ಲಿಯೇ ತೆರೆಗೆ ಬರಲಿದೆ. ಈಗಾಗಲೇ ಅರ್ಜುನ್‌ ಗೌಡಟೈಟಲ್‌, ಲುಕ್‌, ಟೀಸರ್‌, ಟ್ರೇಲರ್‌ ಮಾಸ್‌ಆಡಿಯನ್ಸ್‌ ಗಮನ ಸೆಳೆದಿದ್ದು, ಕೋಟಿ ನಿರ್ಮಾಪಕ ರಾಮು ನಿರ್ಮಾಣದ ಈ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಚಿತ್ರಕ್ಕೆ ಲಕ್ಕಿ ಶಂಕರ್‌ ನಿರ್ದೇಶನವಿದ್ದು, ಚಿತ್ರದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್‌ ಅಭಿನಯಸಿದ್ದಾರೆ.

 


Friday, 2 July 2021

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್

 


ಗೋಲ್ಡನ್ ಸ್ಟಾರ್ ಗಣೇಶ್ ಇಂದು ತಮ್ಮ 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.ʼಕಾಮಿಡಿ ಟೈಮ್ʼ ಮೂಲಕ ಮನೆಮಾತಾಗಿದ್ದ ಗಣೇಶ್ 2006ರಲ್ಲಿ ಎಂ ಡಿ ಶ್ರೀಧರ್ ನಿರ್ದೇಶನದ 'ಚೆಲ್ಲಾಟ' ಚಿತ್ರದಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ಗಣೇಶ್ ಗೆ ಜೋಡಿಯಾಗಿ ರೇಖಾ ಅಭಿನಯಿಸಿದ್ದರು. ಇದಕ್ಕೂ ಮುಂಚೆ ಗಣೇಶ್ ಕೆಲವು ಸಿನಿಮಾಗಳಲ್ಲಿ ಸಹ ನಟನಾ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಗಣೇಶ್ ನಂತರ ನಟಿಸಿದ 'ಮುಂಗಾರು ಮಳೆ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಹಲವು ದಾಖಲೆಗಳನ್ನು ಬರೆಯಿತು. 1 ವರ್ಷ ಪ್ರದರ್ಶನ ಕಂಡ ಈ ಸಿನಿಮಾ 75 ಕೋಟಿ ಕಲೆಕ್ಷನ್ ಮಾಡಿತ್ತು. ಈ ಚಿತ್ರದ ಮೂಲಕ ಗಣೇಶ್ ಒಬ್ಬ ಸ್ಟಾರ್ ನಟರಾದರು.
ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು. ಇಂದು ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಗಣೇಶ್ ಅಭಿನಯದ 'ಗಾಳಿಪಟ 2' ಚಿತ್ರದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಮತ್ತೊಂದೆಡೆ 'ತ್ರಿಬಲ್ ರೈಡಿಂಗ್' ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡುತ್ತಿದ್ದಾರೆ.

Thursday, 1 July 2021

ಕಾರು ಅಪಘಾತ ನಟ ಜಗ್ಗೇಶ್ ಪುತ್ರ, ಪಾರು.

 

ಚಿಕ್ಕಬಳ್ಳಾಪುರ: ಜಗ್ಗೇಶ್ ಪುತ್ರ ಯತಿರಾಜ್ ಕಾರ್ ನಾಲ್ಕು ಬಾರಿ ಪಲ್ಟಿಯಾಗಿ, ಮರಕ್ಕೆ ಡಿಕ್ಕಿ ಹೊಡೆದು ನಿಂತಿತು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಲಕ್ಷ್ಮಿಪತಿ ಹೇಳಿದ್ದಾರೆ.
ನಾವು ಹೆದ್ದಾರಿ ಬಳಿಯಲ್ಲಿಯೇ ವಿದ್ಯುತ್ ಕಂಬಗಳನ್ನು ಹಾಕ್ತಾ ಇದ್ದೀವಿ. ಕಾರ್ ವೇಗವಾಗಿ ಬರುತ್ತಿರುವಾಗ ಎಡಗಡೆಯಿಂದ ಬೈಕ್ ಬಂದಿದೆ. ಬೈಕಿಗೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಮುಂದಾದಾಗ ಕಾರ್ ಯತಿರಾಜ್ ನಿಯಂತ್ರಣ ತಪ್ಪಿದೆ. ವೇಗವಾಗಿ ಬರುತ್ತಿದ್ದರಿಂದ ಕಾರ್ ನಾಲ್ಕು ಬಾರಿ ಪಲ್ಟಿಯಾಗಿ, ನಮ್ಮ ಮುಂದೆ ಬಂದು ಮರಕ್ಕೆ ಡಿಕ್ಕಿ ಹೊಡೀತು. ಮರಕ್ಕೆ ಡಿಕ್ಕಿ ಹೊಡೆಯದಿದ್ರೆ ನಮ್ಮ ಮೇಲೆಯೇ ಕಾರ್ ಬರುತ್ತಿತ್ತು.
ಕಾರ್ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಯತಿರಾಜ್ ಅವರಿಗೆ ಪ್ರಾಣಪಾಯಕ್ಕೆ ಏನು ಅಪಾಯವಾಗಿಲ್ಲ. ಕೂಡಲೇ ಕಾರ್ ಬಾಗಿಲು ತೆಗೆದು ಯತಿರಾಜ್ ಅವರನ್ನ ಹೊರ ಕರೆ ತಂದು ನೀರು ಕುಡಿಸಿದೆವು. ನಂತರ ಸ್ವಲ್ಪ ಇಲ್ಲಿಯೇ ಓಡಾಡಿಸಿ ಏನಾದ್ರೂ ಆಗಿದೆಯಾ ಅಂತ ನೋಡಿದೇವು. ಆಟೋ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯ್ತು. ವಿಷಯ ತಿಳಿದ ಬಂದು ಅಲ್ಲಿಗೆ ಬಂದ ಗೆಳೆಯರ ಜೊತೆ ಯತಿರಾಜ್ ಹೋದರು ಎಂದು ಲಕ್ಷ್ಮಿಪತಿ ಮಾಹಿತಿ ನೀಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಹೊರವಲಯದ ಹೈದರಾಬಾದ್ ಹೆದ್ದಾರಿಯ ಅಲಗುರ್ಕಿ ಬೈ ಪಾಸ್ ಬಳಿ ಅಪಘಾತ ಸಂಭವಿಸಿದೆ. ಯತಿರಾಜ್ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವಾಗ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಬಿಎಂಡಬ್ಲ್ಯೂ ಕಾರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಏರ್ ಬ್ಯಾಗ್ ಓಪನ್ ಆಗಿದ್ದು ಮತ್ತು ಸ್ಥಳೀಯರ ರಕ್ಷಣೆಯಿಂದ ಯತಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ ಜಗ್ಗೇಶ್ ಅವರ ಹೆಸರಿನಲ್ಲಿ ನೋಂದಣಿಯಾಗಿದೆ.

Monday, 14 June 2021

BREAKING NEWS: ಪಯಣ ಅರ್ಧಕ್ಕೆ, ನಿಲ್ಲಿಸಿದ ಸಂಚಾರಿ!

ಬೆಂಗಳೂರು : ಬೈಕ್ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ನಟ ಸಂಚಾರಿ ವಿಜಯ್, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ನಟ ಸಂಚಾರಿ ವಿಜಯ್ ಇನ್ನಿಲ್ಲವಾಗಿದ್ದಾರೆ.


 

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ನಟ ಕಿಚ್ಚ ಸುದೀಪ್, ನಟ ಸಂಚಾರಿ ವಿಜಯ್ ಇನ್ನಿಲ್ಲ ಎಂಬುದನ್ನು ನೆನಪಿಸಿಕೊಳ್ಳಲು ಕೂಡ ಆಗುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಬಾರಿ ನಾನು ಅವರು ಭೇಟಿಯಾಗಿದ್ದೆವು. ಅಲ್ಲದೇ ಅವರ ಮುಂದಿನ ಚಿತ್ರದ ಬಗ್ಗೆಯೂ ಕುತೂಹಲ ಮೂಡಿತ್ತು. ಮುಂದಿನ ಚಿತ್ರ ಬಿಡುಗಡೆ ಮುನ್ನವೇ ಅವರು ಇನ್ನಿಲ್ಲವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಕೋರಿದ್ದಾರೆ.


ಅಂದಹಾಗೇ, ಶನಿವಾರ ರಾತ್ರಿ ಗೆಳೆಯ ನವೀನ್ ಜೊತೆಗೆ ಬೈಕ್ ನಲ್ಲಿ ಮನೆಗೆ ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ನಟ ಸಂಚಾರಿ ವಿಜಯ್ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಅಪಘಾತಗೊಂಡಿದ್ದರು. ತಲೆಯ ಎಡಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದು, ರಕ್ತಸ್ರಾವ ಕೂಡ ಆಗಿತ್ತು. ಕೂಡಲೇ ಅವರನ್ನು ನಟ ಸುದೀಪ್ ಮನವಿ ಮೇರೆಗೆ ಅಪೋಲೋ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ಮೂಲಕ ರಕ್ತಸ್ರಾವವನ್ನು ಸರಿ ಮಾಡಲಾಗಿತ್ತು.

ಐಸಿಯುನಲ್ಲಿ ಇಂದು ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ, ಬ್ರೈನ್ ಸ್ಟ್ರೋಕ್ ಉಂಟಾಗಿ, ಅವರು ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪಿದ್ದರು. ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬುದಾಗಿಯೂ ಅಪೋಲೋ ಆಸ್ಪತ್ರೆಯ ವೈದ್ಯ ಡಾ.ಅರುಣ್ ನಾಯ್ಕ್ ಮಾಹಿತಿ ನೀಡಿದ್ದರು. ಅಲ್ಲದೇ ಈ ಬಗ್ಗೆ ಅವರ ಕುಟುಂಬಸ್ಥರಿಗೂ ತಿಳಿಸಿದ್ದಾಗಿ ಹೇಳಿದ್ದರು.

ನಟ ಸಂಚಾರಿ ವಿಜಯ್ ಚಿಕಿತ್ಸೆಗೆ ಸ್ಪಂದಿಸದ ಕಾರಣ, ಗಂಭೀರ ಸ್ಥಿತಿಯನ್ನು ತಲುಪಿದ್ದ ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಟ ನೀನಾಸಂ ಸತೀಶ್ ನನೆದು ಕಣ್ಣೀರಿಟ್ಟರು. ಅಲ್ಲದೇ ಅವರ ಕುಟುಂಬಸ್ಥರು ನಟ ಸಂಚಾರಿ ವಿಜಯ್ ಅಂಗಾಗ ದಾನ ಮಾಡುವಂತ ನಿರ್ಧಾರವನ್ನು ಕೈಗೊಂಡಿರೋದಾಗಿ ಪ್ರಕಟಿಸಿದ್ದರು.

ಇದರ ಮಧ್ಯೆ ಸಂಚಾರಿ ವಿಜಯ್ ಅವರ ಮೆದುಳು ಕೆಲಸ ಮಾಡೋದನ್ನು ನಿಲ್ಲಿಸಿದೆ ಎಂಬುದಾಗಿ ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸುವ ಮೂಲಕ, ಸಂಚಾರಿ ವಿಜಯ್ ಅವರ ಆರೋಗ್ಯ ಸ್ಥಿತಿ ತೀರ ಗಂಭೀರವಾಗಿದೆ ಎಂಬುದಾಗಿ ತಿಳಿಸಿದ್ದರು.

ಈ ಎಲ್ಲಾ ಮಾಹಿತಿಯ ನಂತ್ರ, ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ನಟ ಸಂಚಾರಿ ವಿಜಯ್ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಮೂಲಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಟಾರಿ ವಿಜಯ್ ಇನ್ನಿಲ್ಲವಾಗಿದ್ದಾರೆ.

ನಟ ಸಂಚಾರಿ ವಿಜಯ್ ಬದುಕಿನ ಹಿನ್ನೋಟ

ಸಂಚಾರಿ ವಿಜಯ್ ಹೆಸರಿನಿಂದ ಪರಿಚಿತರಾಗಿರುವ ಬಿ. ವಿಜಯ್ ಕುಮಾರ್ ಒಬ್ಬ ಚಲನಚಿತ್ರ ಮತ್ತು ನಾಟಕ ನಟ. ಸಂಚಾರಿ ಹೆಸರಿನ ನಾಟಕ ತಂಡದಲ್ಲಿ ಇವರು ಒಬ್ಬರಾಗಿರುವುದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. 2014ರ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಆರಂಭಿಕ ಜೀವನ ಮತ್ತು ಶಿಕ್ಷಣ:ಇವರು ಹುಟ್ಟಿದ್ದು ಜುಲೈ 17, 1983ರಲ್ಲಿ ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ, ಸಿಂಗಟಗೆರೆ ಹೋಬಳಿಯ, ರಂಗಾಪುರ ಗ್ರಾಮದಲ್ಲಿ. ಇವರದ್ದು ಕಲೆಯ ಹಿನ್ನೆಲೆಯ ಕುಟುಂಬವಾಗಿದ್ದು, ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ರೇಡಿಯೋದಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದರು. ಇಂತಹ ಕುಟುಂಬದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರತಿಷ್ಠಿತ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದರು.

ನಟನಾ ವೃತ್ತಿ:ಕೆಲಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು, ತಮ್ಮ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ತಮ್ಮ ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ಥಿಯೇಟರ್‍ನ ರಂಗತಂಡದ ಹಲಾವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ, ಎರಡು ನಾಟಕಗಳನ್ನು ನಿರ್ದೇಶಿಸಿದ್ದರು.

ಸಂಗೀತ ಕ್ಷೇತ್ರ:ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿರುವ ಇವರು, ಹಲವಾರು ನಾಟಕಗಳಲ್ಲಿ ಹಾಡಿದ್ದು, ರಿಯಾಲಿಟಿ ಶೋಗಳಲ್ಲಿಯೂ ಸಹ ಭಾಗವಹಿಸಿದ್ದರು.

ನಟನಾಗಿ:ಒಬ್ಬ ಭಾರತೀಯ ರಂಗಭೂಮಿ ಮತ್ತು ಸಿನೆಮಾ ಕಲಾವಿದರಾಗಿದ್ದು ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಸಿನೆಮಾದಲ್ಲಿಯೂ ಕೆಲಸ ಮಾಡಿದ್ದರು.

೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಇವರಿಗೆ ಕನ್ನಡದ ನಾನು ಅವನಲ್ಲ…ಅವಳು ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದ್ದು, ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದಾರೆ. ಇದೇ ಪಟ್ಟಿಯಲ್ಲಿ, ಮುಖ್ಯ ಪಾತ್ರ ನಿರ್ವಹಿಸಿದ್ದ ಮತ್ತೊಂದು ಸಿನೆಮಾ ಹರಿವು, ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.

ರಂಗಭೂಮಿ ನಟನೆ ಸಾವು ಧ್ಯೇಯಕ್ಕಿಲ್ಲ, ಸಾಂಬಶಿವ ಪ್ರಹಸನ,ಸ್ಮಶಾನ ಕುರುಕ್ಷೇತ್ರ,ಸಾವಿರದವಳು, 

  1. ಪ್ಲಾಸ್ಟಿಕ್ ಭೂತ, ಶೂದ್ರ ತಪಸ್ವಿ, ಸತ್ಯಾಗ್ರಹ, ಸಂತೆಯೊಳಗೊಂದು ಮನೆಯ ಮಾಡಿ, ಮಾರ್ಗೊಸ ಮಹಲ್, ಮಹಾಕಾಲ,  ಅರಹಂತ ಕಮಲಮಣಿ ಕಾಮಿಡಿ ಕಲ್ಯಾಣ, ನರಿಗಳಿಗೇಕೆ ಕೋಡಿಲ್ಲ, ವ್ಯಾನಿಟಿ ಬ್ಯಾಗ್, ಪಿನಾಕಿಯೋ,  ಹೀಗೆರೆಡು ಕಥೆಗಳು, ಹಳ್ಳಿಯೂರ ಹಮ್ಮೀರ, ಶ್ರೀದೇವಿ ಮಹಾತ್ಮೆ

ನಿರ್ದೇಶನ. ಪಿನಾಕಿಯೋ, ಮಿಸ್ ಅಂಡರ್‌ಸ್ಟ್ಯಾಂಡಿಂಗ್

ಕಿರುತೆರೆ. ನಗುನಗುತಾ ನಲಿ, ಹೊಸ ಬಾಳಿಗೆ ನೀ ಜೊತೆಯಾದೆ, ಪಂಚರಂಗಿ ಪೋಂ..ಪೋಂ, ಪಾಂಡುರಂಗ ವಿಠಲ, ಪಾರ್ವತಿ ಪರಮೇಶ್ವರ, ಅನಾವರಣ

ಕಿರುಚಿತ್ರ. ರೌರವ, ಟಿಕೆಟ್, ಮರ್ಡರ್, ಕವಲೊಡೆದ ದಾರಿ, ಅಹಂ ಬ್ರಹ್ಮಾಸ್ಮಿ, ಅಜ್ಜಿ ಕಥೆ

ಹಿರಿತೆರೆ ಪೋಷಕ ಪಾತ್ರ. ರಂಗಪ್ಪ ಹೋಗ್ಬಿಟ್ನಾ, ರಾಮರಾಮ ರಘುರಾಮ, ವಿಲನ್, ದಾಸ್ವಾಳ, ಒಗ್ಗರಣೆ, ಹೋಂ ಸ್ಟೇ, ಸಿನೆಮಾ ಮೈ ಡಾರ್ಲಿಂಗ್, ಮಾರಿಕೊಂಡವರು, ಸಿಪಾಯಿ, ಶುದ್ಧಿ, ಗೋದಿ ಬಣ್ಣ ಸಾಧಾರಣ ಮೈಕಟ್ಟು,  ಭಲೇ ಜೋಡಿ, ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ವೈಟ್ ಹಾರ್ಸ್.

ಸಿನೆಮಾ ಬದುಕು. ರಂಗಪ್ಪ ಹೋಗ್ಬಿಟ್ನ - 2011, ದಾಸವಾಳ - 2013, ಹರಿವು - 2014, ಒಗ್ಗರಣೆ - 2014, ವುನ್ ಸಮಯಲ್ ಅರಯಿಲ್ - ತಮಿಳು, 2014, ಉಲವಚಾರು ಬಿರಿಯಾನಿ, ತಮಿಳು, 2014, ನಾನು ಅವನಲ್ಲ, ಅವಳು - ಅತ್ಯುತ್ತಮ ನಟನೆಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ - 2015, ವರ್ತಮಾನ, ರಿಕ್ತ,  ಆರ್ಯ ಮೌರ್ಯ.

  1. ಹೀಗೆ ನಾಟಕ, ರಂಗಭೂಮಿ, ಕಿರುತೆರೆ, ಹಿರಿತೆರೆಯಲ್ಲಿ ತನ್ನದೇ ಆದಂತ ವಿಶಿಷ್ಠ ಅಭಿನಯದ ಮೂಲಕ, ಗುರ್ತಿಸಿಕೊಂಡು, ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದಂತ ನಟ ಸಂಚಾರಿ ವಿಜಯ್, ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಅವರು ಚಿಕಿತ್ಸೆಗೆ ಸ್ಪಂದಿಸದೇ, ಇಂದು ನಿಧರಾಗಿದ್ದಾರೆ. ಈ ಮೂಲಕ ನಟ ಸಂಚಾರಿ ವಿಜಯ್ ಇನ್ನಿಲ್ಲವಾಗಿದ್ದಾರೆ.

Tuesday, 8 June 2021

ಕೆಜಿಎಫ್-2 ಯಾವಾಗ ಬಿಡುಗಡೆಯಾದರೂ, ಪ್ರೇಕ್ಷಕ ಸ್ವೀಕರಿಸುತ್ತಾನೆ:ಪ್ರಶಾಂತ್ ನೀಲ್,

ಕೆಜಿಎಫ್ ಅಧ್ಯಾಯ 2 ನಿಸ್ಸಂದೇಹವಾಗಿ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರ ಬಿಡುಗಡೆಯಾದ ಅನೇಕ ರಸ್ತೆ ತಡೆಗಳ ಹೊರತಾಗಿಯೂ, ನಿರ್ದೇಶಕ ಪ್ರಶಾಂತ್ ನೀಲ್ ಇನ್ನೂ ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ ಮತ್ತು ವಿಳಂಬವನ್ನು ಚಿತ್ರಕ್ಕೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಬಳಸುತ್ತಿದ್ದಾರೆ. "ನಮ್ಮಲ್ಲಿರುವ ಸಮಯವು ನಾವು ಬಯಸಿದ ಸಮಯವಲ್ಲ, ಆದರೆ ನಾವು ಅದನ್ನು ಹೊಂದಿದ್ದೇವೆ ಮತ್ತು ನಾವು ಅದನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದೇವೆ. ನಾನು ಕಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಹೇಗಾದರೂ, ನಮ್ಮಲ್ಲಿ ಏನೇ ಇರಲಿ, ಉತ್ತಮವಾದದ್ದನ್ನು ತರಲು ನಾವು ಶ್ರಮಿಸುತ್ತಿದ್ದೇವೆ ಮತ್ತು ನಮ್ಮ ನಿರ್ಮಾಣದ ನಂತರದ ಕಾರ್ಯಗಳು ಭರದಿಂದ ಸಾಗುತ್ತಿವೆ ”ಎಂದು ಜೂನ್ 4 ರಂದು ತಮ್ಮ ಜನ್ಮದಿನವನ್ನು ಆಚರಿಸಿದ ಪ್ರಶಾಂತ್ ಹೇಳುತ್ತಾರೆ.ಯಶ್ ನಟಿಸಿದ ಕೆಜಿಎಫ್ ಅಧ್ಯಾಯ 2 ರ ಹೊರತಾಗಿ, ನಿರ್ದೇಶಕರು ಸಹ ಅವರ ಮುಂದಿನ ಚಿತ್ರ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಚಿತ್ರೀಕರಣ ಪುನರಾರಂಭಿಸಲು ಸಜ್ಜಾಗಿದೆ“ಕೆಲವು ಸ್ಕ್ರಿಪ್ಟ್‌ಗಳನ್ನು ಬರೆಯಲು ನನಗೆ ಸಮಯ ಸಿಕ್ಕಿತು. ನಾವು ಹೊಂಬಲೆ ಫಿಲ್ಮ್ಸ್‌ನೊಂದಿಗೆ ಬೆರಳೆಣಿಕೆಯಷ್ಟು ಯೋಜನೆಗಳನ್ನು ಮಾಡುತ್ತಿದ್ದೇವೆ ಮತ್ತು ಚರ್ಚೆಗಳು ನಡೆಯುತ್ತಿವೆ ”ಎಂದು ಅವರು ಹೇಳುತ್ತಾರೆ

"ನಾವು ಜನರನ್ನು ಚಿತ್ರಮಂದಿರಗಳಿಗೆ ಬರಲು ಹೇಗೆ ಕೇಳಬಹುದು?" ಇಡೀ ಜಗತ್ತು ಒಟ್ಟಾಗಿ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ ಎಂದು ಪ್ರಶಾಂತ್ ಹೇಳುತ್ತಾರೆ, ಮತ್ತು ಸಾವು ಕೇಳಿದಾಗ ಮತ್ತು ಎಲ್ಲೆಡೆ ನೋಡಿದಾಗ, ವಿಳಂಬವಾಗುತ್ತಿರುವ ಚಲನಚಿತ್ರವು ನಿಖರವಾಗಿ ಮೊದಲ ಆದ್ಯತೆಯಾಗಿಲ್ಲ. "ಶೂಟಿಂಗ್ ವಿಳಂಬಗಳು, ಕಲಾವಿದರು ತಿರುಗುವುದಿಲ್ಲ, ಇತ್ಯಾದಿಗಳಿದ್ದರೆ ಅಸಮಾಧಾನ ಅಥವಾ ತಾಳ್ಮೆ ಕಳೆದುಕೊಳ್ಳುವುದು ಅರ್ಥಪೂರ್ಣವಾಗಿದೆ ... ಆದರೆ ಇದು ಅಂತಹ ಪರಿಸ್ಥಿತಿಯಲ್ಲ" ಎಂದು ನಿರ್ದೇಶಕರು ಹೇಳುತ್ತಾರೆ ಮತ್ತು ಮತ್ತಷ್ಟು ವಿವರಿಸುತ್ತಾರೆ, "ನಾವು ವಾಸಿಸುತ್ತಿದ್ದೇವೆ ಫ್ಯಾಂಟಸಿ ಜಗತ್ತು. ನಾವು ಮನರಂಜನೆಯ ಭಾಗವಾಗಿದ್ದೇವೆ ಮತ್ತು ನಾವು ಅನಿವಾರ್ಯತೆಗೆ ಬರುವುದಿಲ್ಲ. ನಾವು ಕೇವಲ ಐಷಾರಾಮಿ. ನಾವು ನಿರಾಶೆಗೊಂಡರೆ ಮತ್ತು ತಾಳ್ಮೆ ಕಳೆದುಕೊಂಡರೆ ಅದು ಯಾವುದೇ ಫಲವನ್ನು ನೀಡುವುದಿಲ್ಲ. ಜಗತ್ತು ಹೆಚ್ಚು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ, ”ಎಂದು ಅವರು ಹೇಳುತ್ತಾರೆ. “ಪ್ರತಿಯೊಬ್ಬ ವ್ಯಕ್ತಿಯಂತೆ, ನಾವು ನಮ್ಮ ಬಗ್ಗೆ ಮತ್ತು ನಮ್ಮ ಕುಟುಂಬಗಳ ಆರೋಗ್ಯವನ್ನು ಸಹ ನೋಡಿಕೊಳ್ಳುತ್ತಿದ್ದೇವೆ ಮತ್ತು ವೈರಸ್ ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಜನರನ್ನು ಚಿತ್ರಮಂದಿರಗಳಿಗೆ ಬರಲು ನಾವು ಹೇಗೆ ಕೇಳಬಹುದು? ಇದು ವಿಶ್ವದ ಪ್ರತಿಯೊಬ್ಬರಿಗೂ ಅಸಾಧಾರಣ ಪರಿಸ್ಥಿತಿ, ಮತ್ತು ಯಾರನ್ನೂ ಬಿಡಲಾಗುವುದಿಲ್ಲ. ಒಂದೋ ನಾವೆಲ್ಲರೂ ನಮ್ಮ ಜೀವನದಿಂದ 2 ವರ್ಷಗಳನ್ನು ಅಳಿಸುತ್ತೇವೆ ಅಥವಾ ನೀವು ಸಕಾರಾತ್ಮಕವಾಗಿ ಯೋಚಿಸಲು ಬಯಸಿದರೆ, ಇದನ್ನು ವಿರಾಮವೆಂದು ಪರಿಗಣಿಸಿ. ”

"ಕೆಜಿಎಫ್ ಅಧ್ಯಾಯ 2 ಬಿಡುಗಡೆಯಾದ ಯಾವುದೇ ಸಮಯದಲ್ಲಿ ತಾಜಾವಾಗಿರುತ್ತದೆ"

ಭಾರತ ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳು ಯಶ್-ನಟಿಸಿದ ಚಿತ್ರವನ್ನು ನೋಡಲು ಎದುರು ನೋಡುತ್ತಿದ್ದಾರೆ, ಮತ್ತು ಬಿಡುಗಡೆಯ ಯಾವುದೇ ಹಂತದಲ್ಲಿ ಚಿತ್ರ ಹೊಸದಾಗಿರುತ್ತದೆ ಎಂದು ಪ್ರಶಾಂತ್ ಹೇಳುತ್ತಾರೆ. ಕಥೆ ಸಾರ್ವತ್ರಿಕವಾದುದು, ಮತ್ತು ಇದು ಒಂದು ಅವಧಿಯ ಚಲನಚಿತ್ರವಾಗಿರುವುದರಿಂದ ಮತ್ತು ವರ್ತಮಾನಕ್ಕೆ ಅನುಗುಣವಾಗಿರದ ಕಾರಣ, ಅದು ಬಿಡುಗಡೆಯಾದಾಗಲೆಲ್ಲಾ ಅದು ಸ್ವಯಂಚಾಲಿತವಾಗಿ ತಾಜಾತನವನ್ನು ಅನುಭವಿಸುತ್ತದೆ.

"ಸಿನೆಮಾದ ನಿಜವಾದ ರೂಪ ಕಥೆ ಹೇಳುವಿಕೆಯಾಗಿದೆ"

ಪ್ರೊಡಕ್ಷನ್ ಹೌಸ್, ಹೊಂಬಲೆ ಫಿಲ್ಮ್ಸ್, ಅವರ ಜನ್ಮದಿನದಂದು ಅಚ್ಚರಿಯ ಟೀಸರ್ ಅನ್ನು ತಂದಿತು. ಟೀಸರ್ ನಲ್ಲಿ ಅವರನ್ನು 'ಪಯೋನೀರ್ ಫಿಲ್ಮ್ ಮೇಕರ್' ಎಂದು ಟ್ಯಾಗ್ ಮಾಡಲಾಗಿದೆ. ಕೆಜಿಎಫ್ ಎಂದೂ ಹೇಳಿದೆಕೇವಲ ಪ್ರಾರಂಭ ಮತ್ತು ಪ್ರಶಾಂತ್ ಇಲ್ಲಿಂದ ಬಹಳ ದೂರ ಹೋಗುತ್ತಾರೆ. ಅಂತಹ ಹೆಚ್ಚಿನ ಪ್ರಶಂಸೆಗೆ ಪ್ರತಿಕ್ರಿಯಿಸಿದ ಪ್ರಶಾಂತ್, “ನಾನು ಎಲ್ಲರಂತೆ ಕಥೆಗಾರನಾಗಿದ್ದೇನೆ, ಮತ್ತು ಜನರು ಇಷ್ಟಪಡುವ ವಿಭಿನ್ನ ರೀತಿಯ ಕಥೆ ಹೇಳುವಿಕೆಯನ್ನು ನಾನು ಹೊಂದಿದ್ದರೆ, ಅದು ನನಗೆ ಸಹಜವಾಗಿ ಬರುವ ಸಂಗತಿಯಾಗಿದೆ, ಮತ್ತು ಅದು ಬಲವಂತವಾಗಿರುವುದಿಲ್ಲ. ನಾನು ವಿವಿಧ ಭಾಷೆಗಳಲ್ಲಿ ನನ್ನ ಸಾಮರ್ಥ್ಯಗಳನ್ನು ಅನ್ವೇಷಿಸುತ್ತಿರುವಾಗಲೂ, ಇದು ಒಂದು ಕಥೆಯನ್ನು ಹೇಳುವುದು. ” ಪ್ರೇಕ್ಷಕರಿಗೆ ಒಂದು ಕಥೆಯನ್ನು ಹೇಳುವುದು ಚಲನಚಿತ್ರ ನಿರ್ಮಾಣದ ಏಕೈಕ ಉದ್ದೇಶವಾಗಿದೆ ಎಂದು ಅವರು ಹೇಳುತ್ತಾರೆ. “ಕಥೆ ಹೇಳುವ ಹಲವು ಪ್ರಕಾರಗಳಿವೆ, ಆದಾಗ್ಯೂ, ದೊಡ್ಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನೆಮಾ ಹೇಗಾದರೂ ಯಶಸ್ವಿಯಾಗಿದೆ. ಜನರು ಇದನ್ನು ಮನರಂಜನೆಯಾಗಿ ನೋಡುತ್ತಾರೆ, ಆದರೆ ಸಿನೆಮಾದ ನಿಜವಾದ ರೂಪವು ಕಥೆ ಹೇಳುವಿಕೆಯಾಗಿದೆ. ವೈಯಕ್ತಿಕವಾಗಿ, ನನ್ನ ಬೆಳವಣಿಗೆ ನಾನು ಹೇಳಲು ಬಯಸುವ ವಿಭಿನ್ನ ಕಥೆಗಳೊಂದಿಗೆ ಮಾತ್ರ ಇರುತ್ತದೆ, ಮತ್ತು ಯಾವುದೇ ಸಮಯದಲ್ಲಿ, ನನ್ನ ಕಥೆಯ ಕ್ಯಾನ್ವಾಸ್ ಬಗ್ಗೆ ನಾನು ಚಿಂತಿಸುವುದಿಲ್ಲ. ಇದು ದೊಡ್ಡದಾಗಿರಬಹುದು ಅಥವಾ ಸಣ್ಣದಾಗಿರಬಹುದು ”ಎಂದು ಅವರು ಹೇಳುತ್ತಾರೆ.


"ನನ್ನ ವೇತನ ಪ್ಯಾಕೇಜ್ ಅನ್ನು ಕೇಳುವುದು ಅಥವಾ ತಿಳಿದುಕೊಳ್ಳುವುದು ಯಾರೊಬ್ಬರ ಕಾಳಜಿಯಲ್ಲ"

ಪ್ರಶಾಂತ್‌ರನ್ನು ನಿರಂತರವಾಗಿ ಸುದ್ದಿಯಲ್ಲಿಟ್ಟುಕೊಳ್ಳುವ ಇನ್ನೊಂದು ಅಂಶವೆಂದರೆ ಅವರ ವೇತನ ಪ್ಯಾಕೇಜ್. “ದಿನದ ಕೊನೆಯಲ್ಲಿ, ಇದು ಬಹಳ ವೈಯಕ್ತಿಕ ವಿಷಯ. ನನ್ನ ತಂತ್ರಜ್ಞರು, ನನ್ನ ಕಲಾವಿದರು ಮತ್ತು ಚಿತ್ರದ ಬಜೆಟ್ ಸೇರಿದಂತೆ ಇಡೀ ಯೋಜನೆಯಿಂದ ಎಲ್ಲವೂ ಕೇವಲ .ಹಾಪೋಹಗಳಾಗಿರಬಹುದು. ನೀವು ಎಲ್ಲವನ್ನೂ ಬಿಟ್ಟುಕೊಟ್ಟ ಕ್ಷಣ, ನಂತರ ಬಹಳ ಕಡಿಮೆ ರಹಸ್ಯಗಳು ಉಳಿದಿವೆ. ನಾನು ಇದೀಗ ಹೆಚ್ಚು ಸಂಭಾವನೆ ಪಡೆಯುವ ಚಲನಚಿತ್ರ ನಿರ್ಮಾಪಕನೆಂದು ನಾನು ನಂಬುವುದಿಲ್ಲ, ಮತ್ತು ಹೆಚ್ಚು ಮುಖ್ಯವಾಗಿ, ಇದು ಮೊದಲಿಗೆ ಚರ್ಚಿಸಲ್ಪಟ್ಟ ವಿಷಯವಾಗಿರಬೇಕು ಎಂದು ನಾನು ಭಾವಿಸುವುದಿಲ್ಲ, ”ಎಂದು ಅವರು ಹೇಳುತ್ತಾರೆ.

"ನಾನು ಯಾರನ್ನಾದರೂ ಆಯ್ಕೆ ಮಾಡುವ ಮತ್ತು ಆಯ್ಕೆ ಮಾಡುವ ಸ್ಥಿತಿಯಲ್ಲಿಲ್ಲ"

ಪ್ರಶಾಂತ್ ತಮ್ಮ ಚೊಚ್ಚಲ ಚಿತ್ರ ಉಗ್ರಾಮ್ ನಲ್ಲಿ ಶ್ರೀಮುರಳಿ ನಿರ್ದೇಶಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ನಂತರ, ಅವರು ಕೆಜಿಎಫ್ ಚಿತ್ರಗಳಲ್ಲಿ ಯಶ್ ನಿರ್ದೇಶಿಸಿದರು ಈಗ ಅವರು ಸಲಾರ್ನಲ್ಲಿ ಪ್ರಭಾಸ್ ನಿರ್ದೇಶಿಸುತ್ತಿದ್ದಾರೆ ಮತ್ತು ಮುಂದಿನ ಎನ್ಟಿಆರ್ ಜೂನಿಯರ್ ನಿರ್ದೇಶಿಸಲು ಸಿದ್ಧರಾಗಿದ್ದಾರೆ. ಅವರು ಇದೀಗ ಭಾರತೀಯ ಚಿತ್ರರಂಗದ ಟೋಸ್ಟ್ ಎಂದು ಪರಿಗಣಿಸಿ, ಅವರು ಒಂದು ರೀತಿಯ ಬಯಕೆಪಟ್ಟಿಯನ್ನು ಹೊಂದಿದ್ದಾರೆಯೇ? “ಯಾವುದೇ ಇಚ್ l ೆಪಟ್ಟಿ ಇಲ್ಲ. ನಾನು ಯಾರನ್ನೂ ಆರಿಸಿ ಆಯ್ಕೆ ಮಾಡುವ ಸ್ಥಿತಿಯಲ್ಲಿಲ್ಲ. ಅವರೆಲ್ಲರೂ ಸ್ಥಾಪಿತ ನಟರು ಮತ್ತು ನಾನು ಬರುವ ಮೊದಲು ಕನಿಷ್ಠ ಒಂದು ದಶಕದಿಂದ ಈ ಉದ್ಯಮದಲ್ಲಿದ್ದೇನೆ. ಆದ್ದರಿಂದ ಅವರು ವೃತ್ತಿಯ ವಿಷಯದಲ್ಲಿ ನನಗೆ ಹಿರಿಯರು, ಮತ್ತು ಅಕ್ಷರಶಃ ಅವರು ಯೋಜನೆಗಳನ್ನು ನಿರ್ದೇಶಿಸುತ್ತಾರೆ. ಅವರು ನನಗೆ ಈ ಅವಕಾಶವನ್ನು ನೀಡಿದ್ದಾರೆ ಮತ್ತು ಅವರೆಲ್ಲರೂ ಉತ್ತಮ ನಟರು. ಈ ಯೋಜನೆಗಳಲ್ಲಿ ಕೆಲವು, ನಾನು ದೊಡ್ಡ ಪ್ರಮಾಣದಲ್ಲಿ ಮಾಡಲು ಬಯಸುತ್ತೇನೆ, ಈ ನಕ್ಷತ್ರಗಳೊಂದಿಗೆ ಸಹವಾಸ ಮಾಡುವುದರಿಂದ ಮಾತ್ರ ಸಾಧಿಸಬಹುದು.



Saturday, 5 June 2021

ಸಿಸಿಬಿಯಿಂದ 'ಮುಂಗಾರು ಮಳೆ-2' ಚಿತ್ರದ ನಟಿ ನೇಹಾ ಶೆಟ್ಟಿ ತಂದೆ ಅರೆಸ್ಟ್ .ಈತ ಮಾಡಿದ ಕೆಲಸ ಎಂತಹದ್ದು ಗೊತ್ತೇ..?

 ಬೆಂಗಳೂರು : ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಂಗಾರು ಮಳೆ-2' ಚಿತ್ರ ನಿಮಗೆ ಗೊತ್ತೇ ಇದೆ. ಈ ಸಿನಿಮಾದಲ್ಲಿ ನಟಿಸಿದ್ದ ನಟಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ,

ಬೆಂಗಳೂರು ನಗರದಲ್ಲಿ ಜೂಜು ಅಡ್ಡೆ ನಿರ್ಮಿಸಿ ಹಲವು ಅಕ್ರಮ ಚಟುವಟಿಕೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಪೂಲ್ ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಸ್ಕಿಲ್ ಗೇಮ್, ವೀಡಿಯೋ ಗೇಮ್ ಪಾರ್ಲರ್ ನಡೆಸುತ್ತಿದ್ದ ಆರೋಪ ಇದೆ. ಈ ಹಿನ್ನೆಲೆ ಪೊಲೀಸರು ಈತನನ್ನ ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ಸದ್ಯ ಹರಿರಾಜ ಶೆಟ್ಟಿ ವಿರುದ್ಧ ಇಲ್ಲಿತನಕ 13 ಕೇಸ್‍ಗಳು ಪತ್ತೆಯಾಗಿದೆ ಎಂದು ಹೇಳಲಾಗಿದೆ.


ಇನ್ನೂ, ಈತ ತನ್ನನ್ನ ಪೊಲೀಸರು ಹಣಕ್ಕಾಗಿ ಟಾರ್ಗೆಟ್ ಮಾಡ್ತಿದ್ದರು ಎಂದು ಆರೋಪಿಸಿದ್ದನಂತೆ. ಅದರಂತೆ ಹೈಕೋರ್ಟ್ ನಲ್ಲಿ ಸ್ಟೇ ಪಡೆದು ಹೊರಗೆ ಓಡಾಡಿಕೊಂಡಿದ್ದ. ಇದನ್ನ ಪ್ರಶ್ನಿಸಿ ಹೈಕೋರ್ಟ್‍ಗೆ ಸಿಸಿಬಿಯಿಂದ ಮಧ್ಯಂತರ ಅರ್ಜಿ ಹಾಕಲಾಗಿತ್ತು. ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಸ್ಟೇ ತೀರ್ಪುನ್ನ ಅಸಿಂಧುಗೊಳಿಸಿದೆ.

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...