ವೋರ್ಸೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ
ಇಂಡಿಯಾ ಮಹಿಳಾ ತಂಡ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿ ವೈಟ್ ವಾಶ್ ಮುಖಭಂಗದಿಂದ
ತಪ್ಪಿಸಿಕೊಂಡಿದೆ.
ಮೂರು
ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಸರಣಿಯನ್ನು ಕೈವಶ
ಮಾಡಿಕೊಂಡಿದೆ. ಇಂಗ್ಲೆಂಡ್ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.
ಮೂರನೇ
ಹಾಗೂ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 219 ರನ್ ಗಳಿಗೆ ಆಲೌಟ್ ಆಯಿತು. ನಂತರ ಟೀ
ಇಂಡಿಯಾಗೆ ಓವರ್ ಕಡಿತಗೊಳಿಸಿ 47 ಓವರ್ ಗಳಲ್ಲಿ 220 ರನ್ ಗೆಲುವಿನ ಗುರಿ ನೀಡಲಾಯಿತು.
ಈ ಗುರಿ
ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕಿ ಮಿಥಾಲಿ ರಾಜ್ ಅಜೇಯ 75 ರನ್ ಸಿಡಿಸುವ ಮೂಲಕ ತಂಡಕ್ಕೆ
ಗೆಲುವು ತಂದುಕೊಟ್ಟರು. ಇನ್ನು ಟೀಂ ಇಂಡಿಯಾ ಪರ ಶಫಾಲಿ ವರ್ಮಾ 19, ಸ್ಮೃತಿ ಮಂದಾನ 49 ಹಾಗೂ ನೇಹ ರಾಣಾ 24 ರನ್ ಗಳಿಸಿದ್ದಾರೆ.
ಇಂಗ್ಲೆಂಡ್
ಪರ ಲೌರೆನ್ ವಿಂಡ್ ಫೀಲ್ಡ್ ಹಿಲ್ 36, ಹೇತರ್ ನೈಟ್ 46, ನಟ್ ಸ್ಕಿವರ್ 49 ರನ್ ಸಿಡಿಸಿದ್ದಾರೆ.
No comments:
Post a Comment