Thursday 15 July 2021

ಭಾರತೀಯ ಕ್ರಿಕೆಟ್ ಆಟಗಾರನಿಗೆ ಕೊರೋನಾ ಸೋಂಕು, ಕೊಹ್ಲಿ ಟೀಮ್ ಗೆ ಹೆಚ್ಚಿದ ಆತಂಕ.

 


ಲಂಡನ್: ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎನ್ನಲಾಗಿದೆ. ಕ್ರಿಕೆಟ್‌ ಬಜ್‌ ವರದಿಯ ಪ್ರಕಾರ, ಟೀಮ್‌ ಇಂಡಿಯಾದ ಕನಿಷ್ಠ ಒಬ್ಬ ಆಟಗಾರನಾದರೂ ಮಾರಕ ಕೊರೊನಾವೈರಸ್‌ಗೆ ತುತ್ತಾಗಿದ್ದಾನೆ. ಶೀಘ್ರದಲ್ಲೇ ಆಟಗಾರನ ಹೆಸರನ್ನು ಪ್ರಕಟಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಇನ್ನೂ ಕ್ರಿಕೆಟ್‌ ಬಜ್‌ ವರದಿಯ ಪ್ರಕಾರ, ಕೋವಿಡ್ -19 ಗೆ ಈಡಾಗಿರುವ ಆಟಗಾರನನ್ನು ಪ್ರತ್ಯೇಕಿಸಲಾಗಿದೆ ಮತ್ತು ಮುಂಬರುವ ಮೂರು ದಿನಗಳ ಅಭ್ಯಾಸ ಪಂದ್ಯಕ್ಕಾಗಿ ತಂಡದೊಂದಿಗೆ ಡರ್ಹಾಮ್‌ಗೆ ಪ್ರಯಾಣಿಸುವುದಿಲ್ಲ ಅಂತ ತಿಳಿಸಿದೆ.

ಈಗಿನಂತೆ, ಈ ಅಂಕಿ ಅಂಶವು ಒಂದಾಗಿದೆ, ಆದರೆ ಹೆಚ್ಚಿನ ಆಟಗಾರರು ಸೋಂಕಿಗೆ ಒಳಗಾಗಬಹುದು ಎನ್ನಲಾಗಿದ್ದು ಇದರಿಂದ ತಂಡದಲ್ಲಿ ಆತಂಕದ ವಾತವಾರಣ ನಿರ್ಮಾಣವಾಗಿದೆ. ಕರೋನ ಪರೀಕ್ಷೆಗಳನ್ನು ನಡೆಸುತ್ತಿರುವ ಸಂಸ್ಥೆಯಾದ ಇಂಗ್ಲೆಂಡ್‌ನ ರಾಷ್ಟ್ರೀಯ ಆರೋಗ್ಯ ಸೇವೆ ಶೀಘ್ರದಲ್ಲೇ ಆಟಗಾರನ ಹೆಸರನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಅದೇ ರೀತಿ ಮಾಧ್ಯಮಗಳ ವರದಿಯ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ನಂತರ ಮೂರು ವಾರಗಳ ವಿರಾಮದ ಸಮಯದಲ್ಲಿ ಸೊಂಕಿಗೆ ಈಡಾಗಿರುವ ಆಟಗಾರ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು ಎನ್ನಲಾಗಿದೆ. ಡರ್ಹಾಮ್ ತಲುಪಿದ ನಂತರ ಆಟಗಾರರನ್ನು ಮತ್ತೆ ಪರೀಕ್ಷಿಸಲಾಗುವುದು ಎಂದು ವರದಿಯಾಗಿದೆ. ಮೊದಲ ಸುತ್ತಿನ ಪರೀಕ್ಷೆ ಕಳೆದ ಶನಿವಾರ (ಜುಲೈ 10) ಮತ್ತು ಮತ್ತೆ ಬುಧವಾರ (ಜುಲೈ 14) ಮತ್ತೊಂದು ಸುತ್ತಿನ ಪರೀಕ್ಷೆ ನಡೆಯಿತು. ಸೋಂಕಿತ ಆಟಗಾರನು ಮೊದಲ ಸುತ್ತಿನ ಪರೀಕ್ಷೆಗಳ ನಂತರ ಸೊಂಕು ಇರೋದು ಪತ್ತೆಯಾಗಿದೆ.

ಈ ಬೆಳವಣಿಗೆಯು ಇಂಗ್ಲೆಂಡ್ ವಿರುದ್ಧದ ಬಹುನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಯ ಮುನ್ನ ಭಾರತೀಯ ತಂಡದ ಮೇಲೆ ಆಘಾತ ಬೀರಬಹುದು. ಇತ್ತೀಚೆಗೆ, ಯುನೈಟೆಡ್ ಕಿಂಗ್‌ಡಂನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ ಮತ್ತು ಡೆಲ್ಟಾ ರೂಪಾಂತರ ಪತ್ತೆಯಾಗಿದೆ ಎಂಬ ವರದಿಗಳಿವೆ. ವಿಂಬಲ್ಡನ್ ಮತ್ತು ಯುರೋದಲ್ಲಿ ಇತ್ತೀಚೆಗೆ ಹೆಚ್ಚಿನ ಜನಸಂದಣಿಯು ಕೂಡ ಕರೋನ ಸೊಂಕನ್ನು ಹೆಚ್ಚಳ ಮಾಡುವುದಕ್ಕೆ ಸಹಕಾರಿಯಾಗಿದೆಯಂತೆ.

 


No comments:

Post a Comment