Friday 9 July 2021

ಮೆದೇಹಳ್ಳಿಯಲ್ಲಿ: ವಿಶೇಷ ದಾಖಲಾತಿ ಆಂದೋಲನ.


ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲಾ ಘಟಕ, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೆದೇಹಳ್ಳಿ  ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ದಾಖಲಾತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.


ಡಯಟ್‌ ಪ್ರಾಂಶುಪಾಲರಾದ ಶ್ರೀ ಎಸ್.ಕೆ.ಬಿ.ಪ್ರಸಾದ್‌ ಅವರು ಮಾತನಾಡಿ  ಸರ್ಕಾರಿ ಶಾಲೆಗಳ ಬಲವರ್ಧನೆಗೆ ಎಲ್ಲರೂ ಶ್ರಮಪಡಬೇಕು ಈ ನಿಟ್ಟಿನಲ್ಲಿ ನೌಕರರ ಸಂಘಟನೆ ಮತ್ತು ಶಿಕ್ಷಕರ ಸಂಘಗಳು ಮತ್ತು ಶಿಕ್ಷಣ ಇಲಾಖೆಯವರು ಮಾಡುತ್ತಿರುವ ವಿಶೇಷ ದಾಖಲಾತಿ ಅಂದೋಲನವು ತುಂಬಾ ಅನುಕೂಲಕಾರಿ ಎಂದರು. ಕೋವಿಡ್‌ ಸಂದರ್ಭದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಎಲ್ಲರಿಗೂ ಮುಕ್ತ ಶಿಕ್ಷಣ ದೊರೆಯಬೇಕು. ಅದಕ್ಕೆ ಸಾಕಷ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ.



ಎಲ್ಲಾ ಪೋಷಕರು ಕೋವಿಡ್‌ ಹೊಡೆತದಿಂದ ಹಿಂಜರಿತ ಹೊಂದಿದ್ದಾರೆ ಇಂತಹವರು ಖಾಸಗಿ ಶಾಲೆಗಳ ಶುಲ್ಕ ತುಂಬಲು ಸಾಧ್ಯವಾಗದ ಸಂದರ್ಭದಲ್ಲಿ ಸರ್ಕಾರಿ ಶಾಲೆಗೆ ಎಲ್ಲರೂ ದಾಖಲಾತಿ ಮಾಡಿಸುತ್ತಿದ್ದಾರೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಆನ್‌ಲೈನ್‌ ಮತ್ತು ಆಫ್‌ಲೈನ್‌ ಶಿಕ್ಷಣ ನೀಡಲಾಗುತ್ತಿದೆ. ದೂರದರ್ಶನ ಮತ್ತು ರೇಡಿಯೊ ಪಾಠಗಳನ್ನು ಪ್ರಸಾರ ಮಾಡಲಾಗುತ್ತಿದ್ದು ಅದರ ಸದುಪಯೋಗ ಪಡೆಯಲು ತಿಳಿಸಿದರು. ಈ ಬಗ್ಗೆ ಪ್ರತಿ ಮಗುವಿಗೂ ದೂರದರ್ಶನ ಸಂವೇದ ತರಗತಿಗಳ ವೇಳಾಪಟ್ಟಿಯನ್ನು ತಲುಪಿಸಲಾಗಿದೆ ಎಂದು ತಾಲ್ಲೂಕು ಶಿಕ್ಷಕ ಸಂಘದ ಅಧ್ಯಕ್ಷೆ ಬಿ.ಟಿ.ಲೋಲಾಕ್ಷಮ್ಮ ತಿಳಿಸಿದರು.


ಕಾರ್ಯಕ್ರಮದಲ್ಲಿ ಮೆದೇಹಳ್ಳಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶ್ರೀಮತಿ ಭಾಗ್ಯಮ್ಮಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀ ಈ . ಮಾರೇಶ್‌,ಉಪಾಧ್ಯಕ್ಷೆ ಪವಿತ್ರ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಈಶ್ವರಪ್ಪ ಟಿಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್‌ ಸದಸ್ಯ ಕೆ.ಟಿ.ತಿಮ್ಮಾರೆಡ್ಡಿ, ಖಜಾಂಚಿ ಶ್ರಿ ಬಿ.ವೀರೇಶ್‌ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅ‍ಧ್ಯಕ್ಷೆ ಶ್ರೀಮತಿ ಬಿ.ಟಿ,ಲೋಲಾಕ್ಷಮ್ಮ, ಪ್ರಧಾನ ಕಾರ್ಯದರ್ಶಿ ಎಸ್.ಟಿ. ರಂಗಸ್ವಾಮಿ, ಸಹ ಕಾರ್ಯದರ್ಶಿ ನವೀನ್‌, ಬಿ.ಎಚ್‌.ತಿಪ್ಪೇಸ್ವಾಮಿ   ಉಪಸ್ಥಿತರಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹೇಶ್‌, ಇ.ಸಿ.ಓ, ಇನಾಯತ್‌, ಸರ್ಕಾರಿ ಪ್ರಾಥಮಿಕ ಶಿಕ್ಷಕ ಸಂಘದ ಎ.ಮಲ್ಲಿಕಾರ್ಜುನ, ಜಿಬಿ ಮಹಂತೇಶ್‌, ಕೃಷ್ಣಪ್ಪ, ಕೆಂಚಪ್ಪ, ಬಿ.ಕೆ.ಹನುಮಂತಪ್ಪ, ತಿಪ್ಪೇರುದ್ರಪ್ಪ, ವಾಸಂತಿ, ಕಮಲಮ್ಮ, ಮಲ್ಲಿಕಾರ್ಜುನಯ್ಯ.ಬಿ,  ಬಿ.ಆರ್.ಪಿ ಸಾವಿತ್ರಮ್ಮ ಇಸಿಓ ನಾಗರಾಜ್‌ ಎಂಆರ್‌, ಸಿ.ಅರ್ ಪಿ  ಜಲಜಾಕ್ಷಮ್ಮ,ಉಷಾ, ರೂಪ , ಸುಧಾ ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾII ಎಚ್.ಕೆ.ಎಸ್.ಸ್ವಾಮಿ ಅವರ ಸ್ಫೂರ್ತಿ ಭಾಷಣ ಎಲ್ಲರ ಗಮನ ಸೆಳೆಯಿತು.

Ø *1ನೇ ತರಗತಿಗರ ದಾಖಲಾಗುವ ಮಕ್ಕಳನ್ನು ಸ್ಥಳದಲ್ಲಿಯೇ ಆನ್ ಲೈನ್  ಮೂಲಕ SATSನಲ್ಲಿ ದಾಖಲು ಮಾಡಿಕೊಂಡಿದ್ದು ವಿಶೇಷವಾಗಿತ್ತು.

Ø  *150 ಅಡಿ ಉದ್ದದ ಬೃಹತ್ ಬ್ಯಾನರ್ ನ್ನು ಬಳಸಿ ವಿಶೇಷ ದಾಖಲಾತಿ ಆಂದೋಲನಕ್ಕೆ ಬಳಸಿರುವುದು ಮತ್ತೊಂದು ವಿಶೇಷ.

Ø  *ವಿಶೇಷ ದಾಖಲಾತಿ ಆಂದೋಲನದ ಅಂಗವಾಗಿ ಮೆದೇಹಳ್ಳಿ ಶಾಲೆಗೆ 52 ಮಕ್ಕಳು ದಾಖಲಾಗಿರುವುದು ವಿಶೇಷತೆಯಲ್ಲಿ ವಿಶೇಷ.

Ø  *ದಾಖಲಾತಿ ಆಂದೋಲನದಲ್ಲಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೆದೇಹಳ್ಳಿಯ ಮುಖ್ಯ ಶಿಕ್ಷಕ ಟಿ. ಷಣ್ಮುಕಪ್ಪ, ನವೀನ್ ಪಿ ಆಚಾರ್ ಇತರ  ಶಿಕ್ಷಕ ವರ್ಗದ ಪಾತ್ರ ಗಣನೀಯವಾಗಿತ್ತು.


ಮೆದೇಹಳ್ಳಿಯ ಗ್ರಾಮ ಪಂಚಾಯಿತಿಯ ಸದಸ್ಯರಾದ ದುಗ್ಗಣ್ಣ, ರಮೇಶ್, ನಿಂಗಪ್ಪ,ಎಮ್ ಸಿ ಶಂಕರ್, ವಿಜಯ್ ಕುಮಾರ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಮೆದೇಹಳ್ಳಿ, ಶಾಲೆಯಲ್ಲಿ ದೊರೆಯುವ ಸೌಲಭ್ಯಗಳು.





1 comment:

  1. Very Nice Programme.... and Report also...... Thank U Upgraded GHPS Medehalli HM & Staff, SDMC President & all Members, CRPJayajakshamma... Especially Naveen. P. Sir & News publisher / Reporter NGT for Samarasuddi...... Tq one & all....By BRP Mahesha. CN , CTA

    ReplyDelete