ಬೆಂಗಳೂರು,ಜು.9- ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಪೋಷಕರು ಮತ್ತು ಮಕ್ಕಳಿಂದ ಬೆಂಬಲ ವ್ಯಕ್ತವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ
ಉದ್ದೇಶದಿಂದ ಬನ್ನಿ ವಿದ್ಯಾರ್ಥಿಗಳೇ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ
ಬರೆಯೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಮಕ್ಕಳೊಂದಿಗೆ ಸಂವಾದ ನಡೆಸಲಾಯಿತು. ಆ ಸಂವಾದದಲ್ಲಿ
ಪರೀಕ್ಷೆ ನಡೆಸಲು ವಿದ್ಯಾಥಿಗಳಿಂದ ಬೆಂಬಲ ವ್ಯಕ್ತವಾಯಿತು ಎಂದರು.
ಜುಲೈ 19 ಮತ್ತು 22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ 5,100
ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 90 ವಿದ್ಯಾರ್ಥಿಗಳು
ಚರ್ಚೆಯಲ್ಲಿ ಭಾಗವಹಿಸಿದ್ದರು. ಹಲವು ಪ್ರಶ್ನೆ ಹಾಗೂ ಸಮಸ್ಯೆಗಳಿಗೆ ಸಂವಾದದ ಸಂದರ್ಭದಲ್ಲಿ
ಪರಿಹಾರವನ್ನು ಪಡೆದಿದ್ದಾರೆ ಎಂದರು.
ಒಂದು ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದೆ ಗ್ರೇಡ್
ಕೊಟ್ಟಿದ್ದರೆ ನಮ್ಮನ್ನು ಕೋವಿಡ್ ಬ್ಯಾಚ್ ಎಂದು ಕರೆಯುತ್ತಿದ್ದರು. ಪರೀಕ್ಷೆ ನಡೆಸುವುದು
ಒಳ್ಳೆಯದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಆರು ದಿನಗಳ ಕಾಲ
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ ಎರಡು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಕಳೆದ
ವರ್ಷ ಜುಲೈನಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.13.2ರಷ್ಟಿತ್ತು.
ಇವತ್ತು ಶೇ.1.7ರಷ್ಟಿದೆ.
ನಾವು ಮೊದಲೇ ಹೇಳಿದಂತೆ ಕೋವಿಡ್ ತಹಬಂದಿ ನಂತರ ಪರೀಕ್ಷೆ ನಡೆಸುತ್ತಿದ್ದೇವೆ. ಅನ್‍ಲಾಕ್
ಆರಂಭವಾಗಿದ್ದು, ಎಲ್ಲಾ ವಹಿವಾಟುಗಳು ನಡೆಯುತ್ತಿವೆ. ಹೀಗಾಗಿ
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ತಯಾರಿ ನಡೆಸಿದ್ದೇವೆ ಎಂದು ಹೇಳಿದರು.
ಕಳೆದ ವರ್ಷ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಕಾರ್ಯಕರ್ತರು
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್, ಸಾನಿಟೈಸರ್,
ಸಾಮಾಜಿಕ ಅಂತರ ಕಾಪಾಡುವುದು, ಪರೀಕ್ಷಾ ಕೇಂದ್ರದ
ಮುಂದೆ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಂಡಿದ್ದರು. ಈ ವರ್ಷವೂ ನಮ್ಮ ಜೊತೆಗಿರುವ ಭರವಸೆಯನ್ನು
ಭಾರತ್ ಮತ್ತು ಸ್ಕೌಟ್ಸ್‍ನ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಅವರು ಭರವಸೆ ನೀಡಿದ್ದಾರೆ.
ಯಾರು ಎಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಪಟ್ಟಿಯನ್ನೇ
ಸಿದ್ದಪಡಿಸಿಕೊಂಡಿದ್ದಾರೆ. ಅಲ್ಲದೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್‍ನ್ನು, ಪರೀಕ್ಷಾ ಸಿಬ್ಬಂದಿಗೆ ಎನ್95
ಮಾಸ್ಕ್‍ನ್ನು ಉಚಿತವಾಗಿ ಒದಗಿಸಲಾಗಿದ್ದಾರೆ. ರೋಟರಿ ಇಂಟರ್‍ನ್ಯಾಷನಲ್ ಸಂಘಟನೆ 1.34 ಲಕ್ಷ ಫೇಸ್ ಮಾಸ್ಕ್ ಹಾಗೂ ಇತರೆ ಸಂಘಟನೆ 1.10 ಲಕ್ಷ ಫೇಸ್
ಮಾಸ್ಕ್‍ನ್ನು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಒದಗಿಸಲು ಒಪ್ಪಿ ಇಂದು ಸಾಂಕೇತಿಕವಾಗಿ
ನೀಡುತ್ತಿದ್ದಾರೆ ಎಂದರು.
ಅಡ್ವಾನ್ಸ್ ಎಜುಕೇಷನ್ ಸರ್ವೀಸ್, ರೈನ್‍ಬೋ ಚಿಲ್ಡ್ರನ್ ಆಸ್ಪತ್ರೆ ವತಿಯಿಂದ ಒಂದು ಲಕ್ಷ
ಸರ್ಜಿಕಲ್ ಮಾಸ್ಕ್‍ನ್ನು ಉಚಿತವಾಗಿ ನೀಡುತ್ತಿದ್ದಾರೆ. ಕಳೆದ ವರ್ಷದಂತೆ ಎಂಬೆಸ್ಸಿ ಗ್ರೂಪ್‍ನವರ
8,76,595 ಮಕ್ಕಳಿಗೆ ಪರೀಕ್ಷೆ ನಿರ್ವಹಣೆ ಮಾಡುವ 1.30 ಲಕ್ಷ ಸಿಬ್ಬಂದಿಗೆ ಸ್ಯಾನಿಟೈಸರ್ ಒದಗಿಸುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ
ಶ್ರೇಯೋಭಿವೃದ್ಧಿಗಾಗಿ ಮುಂದೆ ಬಂದ ಸಂಘಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.
No comments:
Post a Comment