ಬೆಂಗಳೂರು: ಬೆಳಗಾವಿ ಜಿಲ್ಲೆಗೆ ನಾಳೆ ಮಹಾರಾಷ್ಟ್ರ ಸಚಿವರು ಬರುತ್ತಿದ್ದಾರೆ. ಆದ್ರೆ ಅವರು ಬರುವ ಅವಶ್ಯಕತೆ ಇಲ್ಲ ಎಂದು ಸಾಕಷ್ಟು ಹೋರಾಟ ನಡೆಯುತ್ತಿದೆ. ಕರ್ನಾಟಕ ಏಕೀಕರಣ ಸಮಿತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಎಂಇಎಸ್ ಪುಂಡರ ನಡೆಗೆ ಧಿಕ್ಕಾರ ಕೂಗುತ್ತಿದ್ದಾರೆ.
ಈ ಸಂಬಂಧ ಮಾತನಾಡಿರುವ ಸಿಎಂ ಬೊಮ್ಮಾಯಿ ಅವರು, ಮಹಾರಾಷ್ಟ್ರ ಮತ್ತು ಕರ್ನಾಟ ಜನರ ನಡುವೆ ಸಾಮಾರಸ್ಯವಿದೆ. ಅದೆ ಸಂದರ್ಭದಲ್ಲಿ ಗಡಿ ವಿವಾದ ಕೂಡ ಇದೆ. ಆದ್ರೆ ಪದೇ ಪಪೇ ಕೆಣಕುವಂತ ಕೆಲಸಗಳು ಆಗುತ್ತಿವೆ. ಈ ಕೇಸ್ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿದೆ. ಈ ಸಂದರ್ಭದಲ್ಲಿ ಪ್ರಚೋದನಕಾರಿಯಾದಂತ ಪ್ರವಾಸ ಮಾಡುವುದು ಅತ್ಯಂತ ಭಾವನೆ ಕೆರೆಳಿಸುವಂತ ಕೆಲಸವಾಗುತ್ತದೆ. ಹೀಗಾಗಿ ಬರುವುದು ಬೇಡ ಎಂದು ಸೂಚನೆ ನೀಡಲಾಗಿದೆ. ಅಕಸ್ಮಾತ್ ಬರುವಂತ ಕೆಲಸ ಮಾಡಿದರೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಕಾನೂನು ಉಲ್ಲಂಘನೆ ಹಾಗೂ ಭಾವನಾತ್ಮಕ ವಿಚಾರದಲ್ಲಿ ಕೆಣಕಿದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಬೆಳಗಾವಿ ಶಾಂತವಾಗಿದೆ. ಅದನ್ನು ಕೆಡಿಸುವುದಕ್ಕೆ ಬಿಡುವುದಿಲ್ಲ. ನೆಲ, ಜಲ ಕಾಪಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.
The post ರಾಜ್ಯಕ್ಕೆ ಬರಬೇಡಿ ಎಂದಿದ್ದೇವೆ.. ಬಂದರೆ ಸೂಕ್ತ ಕ್ರಮ : ಮಹಾರಾಷ್ಟ್ರ ಸಚಿವರಿಗೆ ಸಿಎಂ ಬೊಮ್ಮಾಯಿ ವಾರ್ನಿಂಗ್ first appeared on Kannada News | suddione.
source https://suddione.com/we-have-told-you-not-to-come-to-the-state-appropriate-action-if-you-come-cm-bommai-warns-maharashtra-ministers/
No comments:
Post a Comment