Monday 28 June 2021

ಚಿತ್ರದುರ್ಗ:15ರ ಪೋರನೀಗ “ಇಂಡಿಯಾ ಬಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಮಾಡಿದ ವೀರ.

v    ಕಿರು ನಾಲಗೆ ಹಿಂದಕ್ಕೆನಾಲಗೆ ತುದಿಯನ್ನು ಅಡಗಿಸುವ ಅದ್ಭುತ ಕೌಶಲ ತೋರುವ ಮೂಲಕ ಇಂಡಿಯಾ ಬಕ್ ಆಫ್ ರೆಕಾರ್ಡ್ ಮಾಡಿದ ಹೆಗ್ಗಳಿಕೆಗೆ ಪಾತ್ರನಾದ  9ನೇ ತರಗತಿ ವಿದ್ಯಾರ್ಥಿ.

Ø ಚಿತ್ರದುರ್ಗ: ಸಾಧನೆ ಅನ್ನೋದು ಸಾಧಕನ ಸ್ವತ್ತೇ ಹೊರತು, ಸೋಮಾರಿಯ ಸ್ವತ್ತಲ್ಲ ಎನ್ನುವ ನಾಣ್ನುಡಿಯನ್ನು ನಾವೆಲ್ಲರೂ ಕೇಳಿರುತ್ತೇವೆ. ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರೂ ಕಡಿಮೆಯೇನಿಲ್ಲ. ಆದರೆ, ಚಿತ್ರದುರ್ಗದ ಬಾಲಕ ಮಾಡಿದ ಸಾಧನೆ ಕೇಳಿದರೆ ನೀವು ಬೆರಗಾಗೋದು ಗ್ಯಾರಂಟಿ.

Ø ಬಾಯಿಯಿಂದ ನಾಲಗೆಯನ್ನು ಮುಂದಕ್ಕೆ ಚಾಚುವುದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ, ಹಿಂದಕ್ಕೆಳೆದು ಕಿರು ನಾಲಗೆಯ ಹಿಂಭಾಗಕ್ಕೆ ಅಡಗಿಸುವುದನ್ನು ನೀವೆಂದೂ ಕೇಳಿಲ್ಲ, ನೋಡಿಲ್ಲ. ಆದರೆ, ಚಿತ್ರದುರ್ಗದ ಬಾಲಕ ಎಚ್.ವೈ.ಶ್ರೀಹರ್ಷ ಮಾತ್ರ ತನ್ನ ಬಾಯಲ್ಲಿರುವ ನಾಲಗೆಯ ತುದಿಯನ್ನು ಕಿರು ನಾಲಗೆಯ ಹಿಂದಕ್ಕೆ ಹೆಚ್ಚು ಹೊತ್ತು(1 ನಿಮಿಷ 22 ಸೆಕೆಂಡ್) ಅಡಗಿಸುವ ಕೌಶಲದೊಂದಿಗೆ ‘2021ರ ಇಂಡಿಯಾ ಬುಕ್ ಆಫ್ ರೆಕಾರ್ಡ್ಮಾಡಿದ ಸಾಧಕನಾಗಿದ್ದಾನೆ ಎಂದರೆ ನೀವು ನಂಬಲೇಬೇಕಿದೆ.

Ø ಚಿತ್ರದುರ್ಗದಲ್ಲಿ ನೆಲೆಸಿರುವ ಎನ್.ಉಪ್ಪಾರಹಟ್ಟಿ ಗ್ರಾಮದ ಯರಿಸ್ವಾಮಿ ಮತ್ತು ಮಮತಾರಾಣಿ ದಂಪತಿಯ ಪುತ್ರ ಶ್ರೀಹರ್ಷ, 14 ವರ್ಷದ ಪೋರ. ಚಿತ್ರದುರ್ಗದ ಡಾನ್ ಬಾಸ್ಕೋ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೂ ಹೌದು.

Ø ನಾಲಗೆಯನ್ನು ಹಿಂದಕ್ಕೆ ಎಳೆದುಕೊಳ್ಳುವುದನ್ನು ಬಾಲಕ ಶ್ರೀಹರ್ಷ ಆರು ವರ್ಷಗಳಿಂದ ಅಭ್ಯಾಸ ಮಾಡಿದ್ದಾನೆ. ಇದು ಅಪ್ಪ, ಅಮ್ಮನಿಗೆ ಗೊತ್ತಾಗದಂತೆ ಎರಡ್ಮೂರು ವರ್ಷ ಮಾಡಿದ್ದಾನೆ. ಆ ನಂತರ ಈ ವಿಷಯವನ್ನು ತನ್ನ ಅಮ್ಮನ ಬಳಿ ಹೇಳಿಕೊಂಡಿದ್ದಾನೆ. ಮೊದ ಮೊದಲು ಈ ಅಭ್ಯಾಸ ಒಳ್ಳೆಯದೋ? ಕೆಟ್ಟದ್ದೋ? ಎನ್ನುವ ಆಲೋಚನೆಯನ್ನೂ ಶ್ರೀಹರ್ಷನ ಪಾಲಕರು ಮಾಡಿದ್ದಾರೆ.



·        ಕೊನೆಗೆ, ಇದೂ ಒಂದು ಕೌಶಲ ಅಂದುಕೊಂಡ ಪಾಲಕರು, ಶ್ರೀಹರ್ಷನಿಗೆ ಪ್ರೋತ್ಸಾಹ ನೀಡಿದ್ದಾರೆ. ಇದರಿಂದ ಇನ್ನಷ್ಟು ಉತ್ಸಾಹಿತನಾದ ಶ್ರೀಹರ್ಷ, ನಾಲಗೆಯ ತುದಿಯನ್ನು ಕಿರುನಾಲಗೆಯ ಹಿಂದಕ್ಕೆ ಅಡಗಿಸುವಂಥ ಅಭ್ಯಾಸವನ್ನು ನಿರಂತರವಾಗಿ ಮಾಡಿದ್ದಾನೆ. ಹೀಗೆ, ನಾಲಗೆಯನ್ನು ಮುಂದಕ್ಕೆ, ಹಿಂದಕ್ಕೆ ಎಳೆಯುತ್ತಾ ಕಿರುನಾಲಗೆಯ ಹಿಂಬದಿಗೆ ಅಡಗಿಸುವುದನ್ನು ತಮ್ಮ ಮೊಬೈಲ್ ನಲ್ಲಿ ಸಮಯ ನಿಗದಿಗೊಳಿಸಿ ಕೌಶಲವನ್ನು ಪ್ರದರ್ಶಿಸಿದ್ದಾರೆ.

·        ಹೀಗೆ, ಪ್ರದರ್ಶಿಸಿದ ಕೌಶಲವನ್ನು ಯಾರಾದರೂ ಮಾಡಿರಬಹುದೆಂದು ಅಂತರ್ಜಾಲದಲ್ಲಿ ಪರಿಶೋಧನೆ ನಡೆಸಿದ್ದಾರೆ. ದೇಶದಲ್ಲಿ ಯಾರೂ ಈ ಸಾಧನೆ ಮಾಡಿಲ್ಲ ಎನ್ನುವುದನ್ನು ತಿಳಿದು, ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ 1ನಿಮಿಷ 22 ಸೆಕೆಂಡ್ ಗಳ ವಿಡಿಯೋವನ್ನು ಶ್ರೀಹರ್ಷನ ಪಾಲಕರು ಕಳುಹಿಸಿದ್ದಾರೆ. ಎಲ್ಲಾ ರೀತಿಯ ಪರೀಕ್ಷೆಗೊಳಪಡಿಸಿದ ನಂತರ ನಾಲಗೆಯ ತುದಿಯನ್ನು ಕಿರುನಾಲಗೆಯ ಹಿಂದೆ ಹೆಚ್ಚು ಹೊತ್ತು ಅಡಗಿಸುವುದು ದಾಖಲೆಯ ವಿಷಯಎಂದು ಮೇ.15ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಗೊಳಿಸಲಾಗಿದೆ. ಅದರಂತೆ, ಈ ಸಾಧಕನಿಗೆ ಪ್ರಮಾಣ ಪತ್ರ ಮತ್ತು ಪಾರಿತೋಷಕವನ್ನು ಮನೆಗೆ ಕಳುಹಿಸಲಾಗಿದೆ.

·        ಒಟ್ಟಿನಲ್ಲಿ, ಸಾಧನೆ ಮಾಡುವುದಕ್ಕೆ ಇಂಥದ್ದೇ ವಿಷಯ ಅನ್ನೋ ನಿಯಮವಿಲ್ಲ ಎನ್ನುವುದನ್ನು ಬಾಲಕ ಶ್ರೀಹರ್ಷ ತೋರಿಸಿಕೊಟ್ಟಿರುವುದು ಅವರ ಪಾಲಕರಿಗೆ ಹೆಮ್ಮೆಯ ಸಂಗತಿಯೇ ಸರಿ.

Ø ಏನಾದರೊಂದು ಸಾಧನೆ ಮಾಡಬೇಕು, ವಿಜ್ಞಾನಿಯಾಗಬೇಕು ಎನ್ನುವ ಕನಸಿದೆ. ಅದರಲ್ಲಿ ಈಗ ಒಂದು ಹಂತಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಗಿನ್ನಿಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ಮಾಡುವ ಆಸೆ ಇದೆ. ನನ್ನ ಸಾಧನೆಗೆ ನಮ್ಮ ಪಾಲಕರ ಪ್ರೋತ್ಸಾಹವೇ ಕಾರಣ.
·         ಎಚ್.ವೈ.ಶ್ರೀಹರ್ಷ, ವಿದ್ಯಾರ್ಥಿ.
****************
Ø ತಮ್ಮ ಪುತ್ರ ಈ ಚಿಕ್ಕ ವಯಸ್ಸಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡುತ್ತಾನೆ ಅಂದುಕೊಂಡಿರಲಿಲ್ಲ. ಏನೋ ಒಂದು ಹವ್ಯಾಸವನ್ನು ನಿರಂತರ ಅಭ್ಯಾಸ ಮಾಡಿದ್ದು ಈ ಸಾಧನೆ ಮಾಡಲು ಸಾಧ್ಯವಾಗಿದೆ.

·         ಮಮತಾರಾಣಿ,
ಚಿತ್ರದುರ್ಗ.

No comments:

Post a Comment