ಚಿತ್ರದುರ್ಗ : ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ ಮೆದೇಹಳ್ಳಿ ಚಿತ್ರದುರ್ಗ ತಾಲೂಕಿನ ಶಾಲೆಯಲ್ಲಿ, ‘ಶಾಲಾ ಪ್ರಾರಂಭೋತ್ಸವ ಸಮಾರಂಭ'ವನ್ನು
ಹಮ್ಮಿಕೊಳ್ಳಲಾಗಿತ್ತು.
ಸುಮಾರು ತಿಂಗಳುಗಳ ನಂತರ ಸಂತಸದಿಂದ ಆಗಮಿಸಿದ ಮಕ್ಕಳನ್ನು. ಶಿಕ್ಷಕರು, SDMC ಸದಸ್ಯರು,
ಊರಿನ ಮುಖಂಡರು. ಮಕ್ಕಳಿಗೆ ಹೂ ವೃಷ್ಠಿ ಸುರಿಸುವುದರ
ಮೂಲಕ ಸ್ವಾಗತಿಸಲಾಯ್ತು.
ಶಾಲಗೆ ಆಗಮಿಸಿ ಮಕ್ಕಳಿಗೆ 21- 22 ನೇ ಸಾಲಿನ ಉಚಿತ
ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ ಎಮ್.ಸಿ ಅಧ್ಯಕ್ಷ ಶ್ರೀ ಮಾರೇಶ್ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್
ಮತ್ತು SDMC ಸದಸ್ಯರಾದ ಶ್ರೀ ದೇವರಾಜ್, CRP ಜಲಜಾಕ್ಷಿ, ಬಡ್ತಿ ಮುಖ್ಯ ಶಿಕ್ಷಕ ಶ್ರೀ ಟಿ. ಷಣ್ಮುಖಪ್ಪ 'ಶಿಕ್ಷಕರಾದ ಅಜ್ಜಪ್ಪ. ಜಿ. ಎನ್. . ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ
ಕಾರ್ಯದರ್ಶಿ ನವೀನ್ ಪಿ. ಮುಂತಾದ ಶಿಕ್ಷಕರಿದ್ದರು.
ಎ.ಸಾವಿತ್ರಮ್ಮ ಪ್ರಾರ್ಥಿಸಿದರು, ಜಿ.ಎನ್. ಅಜ್ಜಪ್ಪ ಸ್ವಾಗತಿಸಿದರು, ನವೀನ್ .ಪಿ.
ನಿರೂಪಿಸಿದರು, ಹೆಚ್. ಬಿ. ಜಯಮಾಲಾ ವಂದಿಸಿದರು.
No comments:
Post a Comment