Tuesday, 8 June 2021

ಮಾರಣಾಂತಿಕ ಕಾಯಿಲೆಯಿಂದ ಬಚಾವಾಗಲು ಭಾರತೀಯರು ನೆನಪಿನಲ್ಲಿಡಬೇಕಿದೆ ಈ ಅಂಶ.

ಕೊರೊನಾ 2ನೇ ಅಲೆಯ ಸಂಕಷ್ಟದಲ್ಲಿರುವ ಭಾರತ ಕೋವಿಡ್​ ಹೋಗಲಾಡಿಸಲು ಇನ್ನಿಲ್ಲದ ಹೋರಾಟವನ್ನ ನಡೆಸುತ್ತಿದೆ. ಈ ನಡುವೆ ಕಳೆದ ಎರಡು ದಶಕಗಳಿಂದ ದೇಶದಲ್ಲಿ ಅನೇಕರ ಸಾವಿಗೆ ಕಾರಣವಾಗಿರುವ ಡೆಡ್ಲಿ ಕಿಲ್ಲರ್​ನ್ನೂ ನಾವು ಮರೆಯುವಂತಿಲ್ಲ. ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಯಂತಹ ಕಾಯಿಲೆಗಳಿಂದಲೂ ದೇಶದಲ್ಲಿ ಪ್ರತಿ ವರ್ಷ 5.8 ದಶಲಕ್ಷಕ್ಕೂ ಅಧಿಕ ಮಂದಿ ಸಾಯುತ್ತಿದ್ದಾರೆ.


ಕೆಲವೊಂದು ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡೋದು ಕೂಡ ತುಂಬಾನೇ ಕಷ್ಟದ ವಿಚಾರ. ಆದರೆ ನಮ್ಮ ಆಹಾರ ಕ್ರಮವನ್ನ ಕಟ್ಟುನಿಟ್ಟಾಗಿ ಪಾಲಿಸಿದ್ರೆ ಈ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ದೂರ ಇರಬಹುದಾಗಿದೆ. ಅತಿಯಾದ ಸಕ್ಕರೆ ಅಂಶ, ಅತಿಯಾದ ಉಪ್ಪು ಹಾಗೂ ಕೆಟ್ಟ ಕೊಬ್ಬು ಇವುಗಳನ್ನ ಹೊಂದಿರುವ ಆಹಾರಗಳಿಂದ ನೀವು ದೂರ ಇರೋದನ್ನ ಅಭ್ಯಾಸ ಮಾಡಿಕೊಂಡಲ್ಲಿ ಮಾರಣಾಂತಿಕ ಕಾಯಿಲೆಗಳು ನಿಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ.


ಸಾಂಕ್ರಾಮಿಕವಲ್ಲ ಮಾರಣಾಂತಿಕ ಕಾಯಿಲೆಗಳಿಂದ ದೂರ ಇರಲು ನೀವು ಈ ಮೂರು ಮಾರಣಾಂತಿಕ ಪದಾರ್ಥಗಳನ್ನ ಆಹಾರಕ್ಕೆ ಸೇರಿಸದೇ ಇರೋ ತರ ನೋಡಿಕೊಳ್ಳೋದು ಅತ್ಯಂತ ಅವಶ್ಯಕವಾಗಿದೆ.ಬಿಪಿಎನ್​ಐ, ಎನ್​ಎಪಿಐ ಮತ್ತು ಇಎಫ್​ಐ ಜಂಟಿಯಾಗಿ ಆಯೋಜಿಸಿದ್ದ ವೆಬಿನಾರ್​​​ನಲ್ಲಿ ಭಾರತದಲ್ಲಿ ಸಂಸ್ಕರಿಸಿದ ಆಹಾರ ಪದಾರ್ಥಗಳ ಬಳಕೆ ವಿಚಾರವಾಗಿ ಚರ್ಚೆ ನಡೆಸಲಾಗಿದೆ.


ಆಹಾರ ತಜ್ಞರು, ವೈದ್ಯರು ಹಾಗೂ ಹಿರಿಯ ವಿಜ್ಞಾನಿಗಳು ನಡೆಸಿದ ಚರ್ಚೆಯಲ್ಲಿ ಸಂಸ್ಕರಿಸಿದ ಆಹಾರದ ವಿಚಾರವಾಗಿ ಸರ್ಕಾರವು ವಿಧಿಸಬಹುದಾದ ಮಿತಿಗಳ ಬಗ್ಗೆ ಚರ್ಚೆ ನಡೆಸಿದ್ರು. ಬ್ರೆಜಿಲ್​, ಮೆಕ್ಸಿಕೋ ಹಾಗೂ ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳಲ್ಲಿ ಆಹಾರದಲ್ಲಿ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನ ಬಳಕೆಗೆ ಮಿತಿ ಹಾಕಲಾಗಿದ್ದು ಇದರಿಂದಾಗಿ ದೇಶದ ಜನರ ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯದಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ.


ನ್ಯೂಟ್ರಿಷನ್​ ಪ್ರೊಫೈಲ್​ ಮಾಡೆಲ್ಸ್​ ಆಹಾರದಲ್ಲಿ ಇಂತಹ ಮಾಪನಗಳನ್ನ ಅಳೆಯಲು ಸಹಾಯಕವಾಗಿದೆ. ಇದರಿಂದ ಆಹಾರದಲ್ಲಿರುವ ಅನಾರೋಗ್ಯಕರ ಅಂಶಗಳಾದ ಅತಿಯಾದ ಉಪ್ಪಿನಂಶ, ಸಕ್ಕರೆ ಹಾಗೂ ಕೆಟ್ಟ ಕೊಬ್ಬುಗಳಿಗೆ ಮಿತಿ ಹೇರಲಿದೆ.

No comments:

Post a Comment