Wednesday 16 June 2021

'ಜನ್ ಧನ್' ಖಾತೆ ತೆರೆಯಲು ಬೇಕಾಗಿರುವ ದಾಖಲೆಗಳು.

ವಾಣಿಜ್ಯ:ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಖಾತೆಯನ್ನು ಶೂನ್ಯ ಸಮತೋಲದನಲ್ಲಿ ತೆರೆಯಬಹುದು. ದೇಶದ ಬಡ ಜನತೆ ಬ್ಯಾಂಕ್, ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಶೂನ್ಯ ಸಮತೋಲನದಲ್ಲಿ ಖಾತೆ ತೆರೆಯಬಹುದಾಗಿದೆ. ಪಿಎಂಜೆಡಿವೈ ಗ್ರಾಹಕರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ.

ಜನ್ ಧನ್ ಯೋಜನೆಯಡಿ ಖಾತೆ ತೆರೆಯಲು ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಥವಾ ಚಾಲನಾ ಪರವಾನಗಿ ಅಥವಾ ಪಾನ್ ಕಾರ್ಡ್, ಮತದಾರರ ಕಾರ್ಡ್, ಎನ್ಆರ್ಇಜಿಎ ಜಾಬ್ ಕಾರ್ಡ್, ಪ್ರಾಧಿಕಾರದಿಂದ ನೀಡಲಾದ ಪತ್ರ, ಫೋಟೋ ದಾಖಲೆ ಹೊಂದಿರುವ, ಗೆಜೆಟೆಡ್ ಅಧಿಕಾರಿಗಳಿಂದ ಸಹಿ ಇರುವ ಪತ್ರ ಬೇಕಾಗುತ್ತದೆ.
ಹೊಸ ಜನ್ ಧನ್ ಖಾತೆ ತೆರೆಯಲು ಹತ್ತಿರದ ಬ್ಯಾಂಕ್ಗೆ ಹೋಗಿ ಫಾರ್ಮ್ ಭರ್ತಿ ಮಾಡಬೇಕು. ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಅರ್ಜಿದಾರರ ವಿಳಾಸ, ನಾಮಿನಿ, ಉದ್ಯೋಗ,ವಾರ್ಷಿಕ ಆದಾಯ, ಎಸ್ಎಸ್ಎ ಕೋಡ್ ಅಥವಾ ವಾರ್ಡ್ ಸಂಖ್ಯೆ, ಗ್ರಾಮದ ಕೋಡ್ ಅಥವಾ ಟೌನ್ ಕೋಡ್ ಮುಂತಾದ ವಿವರವಾದ ಮಾಹಿತಿಯನ್ನು ನೀಡಬೇಕಾಗುತ್ತದೆ.
ಹಳೆಯ ಬ್ಯಾಂಕ್ ಖಾತೆಯನ್ನು ಜನ್ ಧನ್ ಖಾತೆಗೆ ವರ್ಗಾಯಿಸಬಹುದು. ಬ್ಯಾಂಕ್ ಶಾಖೆಗೆ ಭೇಟಿ ನೀಡಿ ರೂಪೆ ಕಾರ್ಡ್ಗೆ ಅರ್ಜಿ ಸಲ್ಲಿಸಬೇಕು. ಈ ಫಾರ್ಮ್ ಗೆ ಒಪ್ಪಿಗೆ ಸಿಕ್ಕ ನಂತರ ಬ್ಯಾಂಕ್ ಖಾತೆಯನ್ನು ಜನ ಧನ್ ಯೋಜನೆಗೆ ವರ್ಗಾಯಿಸಲಾಗುತ್ತದೆ.
ಈ ಖಾತೆಯನ್ನು ತೆರೆದ 6 ತಿಂಗಳ ನಂತರ ಓವರ್ಡ್ರಾಫ್ಟ್ ಸೌಲಭ್ಯ ಸಿಗಲಿದೆ. 2 ಲಕ್ಷ ರೂಪಾಯಿವರೆಗೆ ಆಕಸ್ಮಿಕ ವಿಮೆ ಸಿಗಲಿದೆ. 30,000 ರೂಪಾಯಿವರೆಗೆ ಲೈಫ್ ಕವರ್ ಸಿಗಲಿದೆ. ಠೇವಣಿ ಮೇಲಿನ ಬಡ್ಡಿ ಹಾಗೂ ಖಾತೆಯೊಂದಿಗೆ ಉಚಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಸಿಗಲಿದೆ. ಪಿಎಂ ಕಿಸಾನ್ ನಂತಹ ಯೋಜನೆಗಳಲ್ಲಿ ಪಿಂಚಣಿಗಾಗಿ ಖಾತೆ ತೆರೆಯುವುದು ಸುಲಭವಾಗಲಿದೆ.

No comments:

Post a Comment