Thursday 17 June 2021

Health:ವೀಳ್ಯದೆಲೆಯಲ್ಲಿರುವ ನಾಲ್ಕು ಆರೋಗ್ಯಕರ ಅಂಶಗಳು.

ವೀಳ್ಯದೆಲೆಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಪಾನ್ ಪ್ರಿಯರಿಗೆ ವೀಳ್ಯದೆಲೆ ತುಂಬಾ ಇಷ್ಟ. ಹಿಂದೂ ಧರ್ಮದಲ್ಲಿ ಪೂಜೆಗೂ ವೀಳ್ಯದೆಲೆ ಬೇಕು. ಒಳ್ಳೆ ಕೆಲಸಕ್ಕೆ ವೀಳ್ಯ ಬೇಕೇ ಬೇಕು. ನಿಮಗೆ ಗೊತ್ತಾ. ವೀಳ್ಯದೆಲೆ ಆರೋಗ್ಯಕ್ಕೂ ಬಹಳ ಒಳ್ಳೆಯದು. 

ಚಿತ್ರದುರ್ಗ :  ವೀಳ್ಯದೆಲೆಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಪಾನ್ ಪ್ರಿಯರಿಗೆ ವೀಳ್ಯದೆಲೆ ತುಂಬಾ ಇಷ್ಟ. ಹಿಂದೂ ಧರ್ಮದಲ್ಲಿ ಪೂಜೆಗೂ ವೀಳ್ಯದೆಲೆ ಬೇಕು. ಒಳ್ಳೆ ಕೆಲಸಕ್ಕೆ ವೀಳ್ಯ ಬೇಕೇ ಬೇಕು. ನಿಮಗೆ ಗೊತ್ತಾ. ವೀಳ್ಯದೆಲೆ ಆರೋಗ್ಯಕ್ಕೂ ಬಹಳ  ಒಳ್ಳೆಯದು.  ವೀಳ್ಯದಲ್ಲಿ ಪ್ರೊಟೀನ್, ಮಿನರಲ್, ಫೈಬರ್, ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಶಿಯಂ ಮತ್ತು ಅಯೋಡಿನ್ ಮೊದಲಾದ ಪೋಷಕಾಂಶಗಳು ಬೇಕಾದಷ್ಟಿರುತ್ತವೆ.  ಇದು ದೇಹವನ್ನು ಹಲವು ರೋಗಗಳಿಂದ ರಕ್ಷಿಸುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್, ಅಂಟಿ ಡಯಾಬಿಟಿಕ್, ಆಂಟಿ ಇನ್ ಫ್ಲೇಮೇಟರಿ ಗುಣಗಳಿರುತ್ತವೆ.  ವೀಳ್ಯದೆಲೆ ಅತ್ಯಂತ ಒಳ್ಳೆಯ ಡಿಟಾಕ್ಸಿಫೈಯರ್. ಅಂದರೆ ದೇಹದಲ್ಲಿರುವ ವಿಷ ಹೊರಗೆ ಹಾಕಿಸುವ ಆಹಾರ. ವೀಳ್ಯದೆಲೆ ತಿಂದರೆ ಆರೋಗ್ಯದ ಮೇಲಾಗುವ ಲಾಭಗಳು.


ವೀಳ್ಯ ತಿಂದರೆ ಆಗುವ ಆರೋಗ್ಯ ಲಾಭ:
1. ಮಲಬದ್ದತೆ:
ಮಲಬದ್ದತೆಯಿಂದ ಸಮಸ್ಯೆ ಎದುರಿಸುತಿದ್ದರೆ ವೀಳ್ಯದೆಲೆ ತಿನ್ನಬೇಕು. ಇದರಿಂದ ನೈಸರ್ಗಿಕವಾಗಿ ಜೀರ್ಣಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತದೆ.  ಫ್ರೀ ರ್ಯಾಡಿಕಲ್ ಗಳಿಂದ ಆಗುವ ಸಮಸ್ಯೆಗಳನ್ನು ವೀಳೈದೆಲೆ ನಿವಾರಿಸುತ್ತದೆ.  

2.  ತಲೆನೋವು ಕಡಿಮೆ ಮಾಡುತ್ತದೆ: ನಿಮಗೆ ತಲೆ ನೋವು ಸದಾ ಬಾಧಿಸುತ್ತಿದ್ದರೆ, ಅದಕ್ಕೆ ವೀಳೈದೆಲೆ ರಾಮಬಾಣ. ವೀಳ್ಯದಲ್ಲಿ ಆನಾಲ್ಜೆಸಿಕ್ ಗುಣವಿದೆ.  ಇದು ತಲೆನೋವು ನಿವಾರಿಸಲು ನೆರವಾಗುತ್ತದೆ.

3. ಬಾಯಿಯ ದುರ್ವಾಸನೆ: ವೀಳ್ಯ ಮೌತ್ ಫ್ರೆಶ್ನರ್ ರೂಪದಲ್ಲಿಯೂ ಕಾರ್ಯನಿರ್ವಹಿಸುತ್ತದೆ.  ಬಾಯಿಯಲ್ಲಿ ಬ್ಯಾಕ್ಟೀರಿಯ ಕಾರಣದಿಂದಾಗಿ ಉಂಟಾಗುವ ದುರ್ವಾಸನೆಯನ್ನು ವೀಳ್ಯದೆಲೆ ನಿವಾರಿಸುತ್ತದೆ.

4. ನೋವು ನಿವಾರಕ:ದೇಹದ ನೋವು ನಿವಾರಿಸಿ ರಿಲ್ಯಾಕ್ಸ್ ಮೂಡಿಗೆ ತರುತ್ತದೆ ವೀಳ್ಯ. ಅದರಲ್ಲಿರುವ ಅಂಟಿ ಇನ್ ಫ್ಲಮೇಟರಿ ಗುಣ ದೇಹಾಯಾಸ ಕಡಿಮೆ ಮಾಡುತ್ತದೆ.












 

No comments:

Post a Comment