Thursday 17 June 2021

Bus News: ಜೂನ್ 21 ರಿಂದ ಬಿ,ಎಂ,ಟಿ,ಸಿ Bus ಸಂಚಾರ?

ಜೂನ್.21ರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡಲಿದೆ ಎನ್ನಲಾಗುತ್ತಿದೆ.

ಬೆಂಗಳೂರು : ಕೊರೋನಾ ಪಾಸಿಟಿವಿಟಿ ದರ ಕಡಿಮೆಯಾಗುತ್ತಿರುವ ಸಿಲಿಕಾನ್ ಸಿಟಿಯಲ್ಲಿ ಅನ್ ಲಾಕ್ ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಸಾರಿಗೆ ಸಂಚಾರಕ್ಕೆ ರಾಜ್ಯ ಸರ್ಕಾರ ಅವಕಾಶ ಕೊಟ್ಟಿಲ್ಲ. ಇದರ ಮಧ್ಯೆ ಜೂನ್.21ರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡಲಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದೆ. ಆದರೆ 3ನೇ ಅಲೆಯ ಭೀತಿ ಮಾತ್ರ ಮುಂದುವರೆದಿದೆ. ಕೊರೋನಾ ಸೋಂಕಿನ ಪಾಸಿಟಿವಿಟಿ ದರ ಕಡಿಮೆಗೊಂಡಂತೆ 19 ಜಿಲ್ಲೆಗಳಲ್ಲಿ ಸರ್ಕಾರ ಅನ್ ಲಾಕ್ ಜಾರಿಗೊಳಿಸಿತ್ತು. ಬೆಂಗಳೂರಿನಲ್ಲಿಯೂ ಈಗ ಅನ್ ಲಾಕ್ ಮಾರ್ಗಸೂಚಿ ಕ್ರಮಗಳು ಮುಂದುವರೆಯುತ್ತಿವೆ.

ಇದರ ಮಧ್ಯೆ ಅಗತ್ಯ ಸೇವೆಗಳ ಪೂರೈಕೆಗೆ, ಕೈಗಾರಿಕೆಗಳಿಗೆ, ಗಾರ್ಮೆಂಟ್ಸ್ ಗಳ ಆರಂಭಕ್ಕೂ ಬೆಂಗಳೂರಿನಲ್ಲಿ ಸರ್ಕಾರ ಅವಕಾಶ ನೀಡಿದೆ. ಹೀಗೆ ಆರಂಭಗೊಂಡಿರುವ,ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಮಾತ್ರ ಸಾರಿಗೆ ಬಸ್ ಸಂಚಾರ ಇಲ್ಲದೇ ಕಷ್ಟ ಅನುಭವಿಸುವಂತಾಗಿದೆ. ಇಂತಹ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಜೂನ್.21ರ ನಂತ ಸರ್ಕಾರ ಸಾರಿಗೆ ಸಂಚಾರ ಆರಂಭಿಸೋದಕ್ಕೆ ಗ್ರೀನ್ ಸಿಗ್ನಲ್ ನೀಡಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಸದ್ಯದಲ್ಲೇ ಸರ್ಕಾರದಿಂದ ಮಾಹಿತಿ ಹೊರಬೀಳಲಿದ್ದು, ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಗಲಿದೆ.

No comments:

Post a Comment