ಹೊಸದಿಲ್ಲಿ: ದೇಶದ ಇ- ಕಾಮರ್ಸ್ ವಲಯದ ಅಭಿವೃದ್ಧಿಗಾಗಿ ಸಾರ್ವಜನಿಕ ಸಲಹೆ ಆಧರಿಸಿ ರಾಷ್ಟ್ರೀಯ ಇ-ಕಾಮರ್ಸ್ ನೀತಿಯ ಕರಡು ಸಿದ್ಧವಾಗಿದೆ. ಎಂದು ಕೇಂದ್ರ ಕೈಗಾರಿಕಾ ಉತ್ತೇಜನ ಹಾಗೂ ಆಂತರಿಕ ವ್ಯಾಪಾರ ಇಲಾಖೆಯ ಕಾರ್ಯದರ್ಶಿ ಅನುರಾಗ ಜೈನ್ ತಿಳಿಸಿದ್ದಾರೆ.
ಇ- ಕಾಮರ್ಸ್ ವಲಯದ ಭಾಗೀದಾರರ ಜೊತೆ ಈಗಾಗಲೇ ಸುಧೀರ್ಘ ಚರ್ಚೆ ಆರಂಭವಾಗಿದ್ದು, ಅವರ ಸಲಹೆ, ಸೂಚನೆ ಆಧರಿಸಿ ನೀತಿ ರೂಪಿಸಲಾಗುವುದು. ಇದರಿಂದ ದೇಶದ ಇ-ಕಾಮರ್ಸ್ ವಲಯದ ಬೆಳವಣಿಗೆಗೆ ಅಡ್ಡಿಯಾಗಿರುವ ಅಂಶಗಳನ್ನು ಹೇಗೆ ಎದುರಿಸಬೇಕೆಂಬ ಬಗೆಗೆ ಸ್ಪಷ್ಟತೆ ದೊರಕಲಿವೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 862 ಅಧಿಕಾರಿಗಳಿಗೆ ಈಗಾಗಲೇ ಭಾಸ್ಕರಾಚಾರ್ಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಅಪ್ಲಿಕೇಶನ್ ಆಂಡ್ ಜಿಯೊ-ಇನ್ ಫಾರ್ಮಟಿಕ್ಸ್ ನಲ್ಲಿ ತರಬೇತಿ ನೀಡಲಾಗುತ್ತಿದೆ. ಪಿಎಂ ಗತಿಶಕ್ತಿ ಯೋಜನೆ ಅಡಿ ಸುಮಾರು 500 ಕೋಟಿ ವೆಚ್ಚದಲ್ಲಿ ಇಂಟಿಗ್ರೇಟೆಡ್ ಡೇಟಾವನ್ನು ರಾಜ್ಯಗಳ ಮಾಸ್ಟರ್ ಪ್ಲಾನ್ ಪೋರ್ಟಲ್ ಗಳ ಜೊತೆಗೆ ಹಂಚಿಕೊಳ್ಳಲಾಗಿದೆ. ಇದರಿಂದ ಮೂಲಸೌಕರ್ಯ ಜಾಲ ಯೋಜನೆಯ ಸಮೂಹ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.
No comments:
Post a Comment