ಟ್ವಿಟರ್ಗೆ ಪರ್ಯಾಯವಾಗಿ ನಿರ್ಮಾಣವಾದ ಸ್ವದೇಶಿ ನಿರ್ಮಿತ ʼಕೂʼ ಅಪ್ಲಿಕೇಶನ್ 10 ಮಿಲಿಯನ್ ಚಂದಾದಾರರನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ಕೂ ಅಪ್ಲಿಕೇಶನ್ ಬಳಕೆಗೆ 16 ತಿಂಗಳ ಅವಧಿ ಕಳೆದಿದೆ.
ಇದು ಕೂಡ ಟ್ವಿಟರ್ನಂತೆ ಕೆಲಸ ಮಾಡುವ ಸಾಮಾಜಿಕ ಮಾಧ್ಯಮದ ವೇದಿಕೆಯಾಗಿದ್ದು ಇದರಲ್ಲಿ
ಇಂಗ್ಲೀಷ್, ಹಿಂದಿ, ಕನ್ನಡ ಸೇರಿಂತೆ 7 ಭಾರತೀಯ ಭಾಷೆಯಲ್ಲಿ ಸಂವಹನ ನಡೆಸಬಹುದಾಗಿದೆ. ಮೋದಿ
ಸರ್ಕಾರದ ಜೊತೆ ಟ್ವಿಟರ್ ಇಂಡಿಯಾ ಜಟಾಪಟಿ ಮುಂದುವರಿದ ಬೆನ್ನಲ್ಲೇ ಫೆಬ್ರವರಿ ತಿಂಗಳಿನಂದ 85 ಪ್ರತಿಶತಕ್ಕೂ ಅಧಿಕ ಮಂದಿ ಕೂ ಅಪ್ಲಿಕೇಶನ್ನತ್ತ ವಾಲುತ್ತಿದ್ದಾರೆ.
ಸರ್ಕಾರಿ ಸಚಿವರು, ವಿರೋಧ
ಪಕ್ಷದ ನಾಯಕರು, ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್
ಸೆಲೆಬ್ರಿಟಿಗಳು ಸೇರಿದಂತೆ ಘಟಾನುಘಟಿಗಳೇ ಭಾರತೀಯ ಭಾಷೆಗಳಲ್ಲಿ ಕೂ ಅಪ್ಲಿಕೇಶನ್ ಬಳಕೆ
ಮಾಡುತ್ತಿದ್ದಾರೆ.
Comments
Post a Comment