ಕೊರೊನಾ ಲಸಿಕೆ ಈಗ ಅನಿವಾರ್ಯವಾಗಿದೆ. ಲಸಿಕೆ ಪಡೆಯದೆ ವಿದೇಶಿ ಪ್ರವಾಸ ಸಾಧ್ಯವಾಗ್ತಿಲ್ಲ. ಇದ್ರ ಜೊತೆಗೆ ಕೆಲ ಟರ್ಮ್ ಪಾಲಿಸಿ ಪಡೆಯಲು ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಮ್ಯಾಕ್ಸ್ ಲೈಫ್ ಮತ್ತು ಟಾಟಾ ಎಐಎಯಂತಹ ಕಂಪನಿಗಳು ಈಗ ಟರ್ಮ್ ಲೈಫ್ ಇನ್ಶುರೆನ್ಸ್ ಮತ್ತು ಇತರ ವಿಮೆಯನ್ನು ಖರೀದಿಸುವವರಿಗೆ ಕೋವಿಡ್ -19 ಲಸಿಕೆ ಪ್ರಮಾಣಪತ್ರಗಳನ್ನು ಕೇಳುತ್ತಿವೆ.
ಇನ್ನೂ ಅನೇಕ ಕಂಪನಿಗಳು ಕೊರೊನಾ ಲಸಿಕೆ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಿವೆ. ಮ್ಯಾಕ್ಸ್ ಲೈಫ್, 45 ವರ್ಷ ಮೇಲ್ಪಟ್ಟವರಿಗೆ ಟರ್ಮ್ ಪಾಲಿಸಿ ನೀಡಲು ಕೊರೊನಾ ಲಸಿಕೆ ಪ್ರಮಾಣಪತ್ರವನ್ನು ಅನಿವಾರ್ಯ ಮಾಡಿದೆ. ಇನ್ನು ಟಾಟಾ ಎಐಎ, ವಯಸ್ಸಿನ ಮಿತಿ ವಿಧಿಸಿಲ್ಲ. ಎಲ್ಲ ವಯಸ್ಸಿನವರೂ ಪಾಲಿಸಿ ಪಡೆಯುವ ಮೊದಲು ಮೊದಲ ಡೋಸ್ ಪ್ರಮಾಣಪತ್ರ ತೋರಿಸಬೇಕಾಗಿದೆ.
ಐಸಿಐಸಿಐ ಪ್ರುಡೆನ್ಶಿಯಲ್, ಟಾಟಾ ಎಐಎ ಮತ್ತು ಏಗಾನ್ ಲೈಫ್‌ನಂತಹ ಕೆಲವು ವಿಮೆ ಕಂಪನಿಗಳು 7 ರಿಂದ 15 ದಿನಗಳ ಕೂಲಿಂಗ್ ಆಫ್ ಪೀರಿಯಡ್ ಪೋಸ್ಟ್ ವ್ಯಾಕ್ಸಿನೇಷನ್ ಅನ್ನು ಪರಿಚಯಿಸಿವೆ. ಕೊರೊನಾದಿಂದಾಗಿ ಆರೋಗ್ಯ ವಿಮೆಗಳು ದುಬಾರಿಯಾಗಿವೆ. ಮಾತ್ರೆಗಳ ಬೆಲೆ ಹೆಚ್ಚಾದಂತೆ ಪ್ರೀಮಿಯಂಗಳು ಏರಿಕೆ ಕಂಡಿವೆ.
No comments:
Post a Comment