ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ
ವಿರುದ್ಧ ಖಾಸಗಿ ದೂರು ಸಂಬಂಧ ಎಫ್ ಐ ಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ
ಸಲ್ಲಿಸಲಾಗಿದ್ದಂತ ಅರ್ಜಿಯನ್ನು, ಜನಪ್ರತಿನಿಧಿಗಳ ವಿಶೇಷ ಕೋರ್ಟ್
ವಜಾಗೊಳಿಸಿದೆ. ಈ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಾಮಾಜಿಕ
ಕಾರ್ಯಕರ್ತ ಟಿ ಜೆ ಅಬ್ರಾಹಂ ಅವರು, ಮುಖ್ಯಮಂತ್ರಿ ಬಿಎಸ್
ಯಡಿಯೂರಪ್ಪ ಸೇರಿದಂತೆ 9 ಮಂದಿ ವಿರುದ್ಧದ ದಾಖಲಾಗಿದ್ದ ಖಾಸಗಿ ದೂರಿನ
ಸಂಬಂದ ಎಫ್ ಐ ಆರ್ ದಾಖಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ವಾದ ಆಲಿಸಿ ಆದೇಶ ಕಾಯ್ದಿರಿಸಿದ್ದ ಜನಪ್ರತಿನಿಧಿಗಳ
ನ್ಯಾಯಾಲಯ ನ್ಯಾಯಾಧೀಶ ಜಯಂತ್ ಕುಮಾರ್ ಅವರ ನ್ಯಾಯಪೀಠವು, ಟಿ.ಜೆ.ಅಬ್ರಾಹಂ
ಸಲ್ಲಿಸಿದ್ದ ಅರ್ಜಿಯಲನ್ನು ವಜಾಗೊಳಿಸಿದೆ.
ಅಂದಹಾಗೇ, ಈ ಮೊದಲು
ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಅಬ್ರಾಹಂ ಸಲ್ಲಿಸಿದ್ದ. ಅರ್ಜಿಗೆ
ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದರು. ಈ ಬಳಿಕ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅವರು
ಅರ್ಜಿ ಸಲ್ಲಿಸಿದ್ದರು. ಇಂತಹ ಅರ್ಜಿಯ ವಿಚಾರಣೆ ನಡೆಸಿದಂತೆ
ನ್ಯಾಯಪೀಠವು, ಇಂದು ಎಫ್ ಐ ಆರ್ ದಾಖಲಿಸುವಂತೆ ಸಲ್ಲಿಸಿದ್ದಂತ ಖಾಸಗಿ
ದೂರನ್ನು ವಜಾಗೊಳಿಸಿದೆ. ಈ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದೆ.
No comments:
Post a Comment