Monday 16 August 2021

ಉಗುರು ಕಚ್ಚುವ ಅಭ್ಯಾಸ ನಿಮ್ಮದಾಗಿದ್ದಲ್ಲಿ, ಆರೋಗ್ಯದ ಮೇಲಾಗುವ ಪರಿಣಾಮ ತಿಳಿಯಿರಿ.

ವರ್ಷಗಳಿಂದ ಉಗುರುಗಳನ್ನು ಅಗಿಯುವ ಅಭ್ಯಾಸದಿಂದ, ದೇಹದ ಒಳಗೆ  ಪರೋನಿಚಿಯಾದಂತಹ ಅನೇಕ ಬ್ಯಾಕ್ಟೀರಿಯಾಗಳು ಸೇರಲು ಕಾರಣವಾಗುತ್ತದೆ.  ಈ ಬ್ಯಾಕ್ಟೀರಿಯಾಗಳು ಕೈಕಾಲುಗಳ ಸಂಧಿಗಳ ಮೇಲೆ ಪ್ರಭಾವ ಬೀರುತ್ತದೆ.

·         ಕೆಲವರಿಗೆ ಉಗುರುಗಳನ್ನು ಕಚ್ಚುವ ಅಭ್ಯಾಸವಿರುತ್ತದೆ.

·         ಈ ಅಭ್ಯಾಸವು ಹಲ್ಲುಗಳ ಆಕಾರವನ್ನು ಹಾಳು ಮಾಡುತ್ತದೆ

·         ಸಂಧಿವಾತಕ್ಕೂ ಕಾರಣವಾಗಬಹುದು ಈ ಕೆಟ್ಟ ಅಭ್ಯಾಸ

ಕೆಲವರಿಗೆ ಯಾವಾಗ ನೋಡಿದರೂ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಈ ಪೈಕಿ  ಕೆಲವರಿಗೆ ಇದು ಒಳ್ಳೆಯ ಅಭ್ಯಾಸವಲ್ಲ ಎಂದು ಗೊತ್ತಿದ್ದರೂ ಮತ್ತೆ ಮತ್ತೆ ಅದನ್ನೇ ಮಾಡುತ್ತಿರುತ್ತಾರೆ.  ನಿಮಗೂ ಈ ಕೆಟ್ಟ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಇದರಿಂದ ಬಹಳಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.  ಉಗುರುಗಳನ್ನು ಅಗಿಯುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈ ಕೆಟ್ಟ ಅಭ್ಯಾಸವು ಚರ್ಮದಿಂದ ಹಿಡಿದು ಹಲ್ಲುಗಳ ಆಕಾರವನ್ನು ಕೂಡಾ ಹಾಳು ಮಾಡುತ್ತದೆ. 

1. ಸಂಧಿವಾತಕ್ಕೆ ಕಾರಣವಾಗಬಹುದು : 
ವರ್ಷಗಳಿಂದ ಉಗುರುಗಳನ್ನು ಅಗಿಯುವ ಅಭ್ಯಾಸದಿಂದ, ದೇಹದ ಒಳಗೆ  ಪರೋನಿಚಿಯಾದಂತಹ ಅನೇಕ ಬ್ಯಾಕ್ಟೀರಿಯಾಗಳು ಸೇರಲು ಕಾರಣವಾಗುತ್ತದೆ.  ಈ ಬ್ಯಾಕ್ಟೀರಿಯಾಗಳು ಕೈಕಾಲುಗಳ ಸಂಧಿಗಳ ಮೇಲೆ ಪ್ರಭಾವ ಬೀರುತ್ತದೆ.  ಇದನ್ನು ಸೆಪ್ಟಿಕ್ ಆರ್ಥರೈಟಿಸ್ ಎಂದು ಕರೆಯುತ್ತಾರೆ. ಈ ರೋಗಕ್ಕೆ  ಚಿಕಿತ್ಸೆ ಅಷ್ಟು ಸುಲಭವಲ್ಲ. ಇದು ಶಾಶ್ವತ ಅಂಗವೈಕಲ್ಯಕ್ಕೂ ಕಾರಣವಾಗಬಹುದು.

2. ಚರ್ಮದ ಹಾನಿ ಸಂಭವಿಸಬಹುದು:
ಉಗುರು ಕಚ್ಚುವ ಅಭ್ಯಾಸ ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗಬಹುದು. ಇದು ಮುಖದ ಮೇಲೆ ಕೆಂಪು ಕಲೆ ಮತ್ತು ಊತಕ್ಕೆ ಕಾರಣವಾಗಬಹುದು.  ಉಗುರುಗಳ ಕೆಳಗೆ ಬ್ಯಾಕ್ಟೀರಿಯಾದ ಸೋಂಕು  ಕಂಡು ಬರಬಹುದು. ಈ ಕಾರಣದಿಂದಾಗಿ, ಕೀವು ಕಾಣಿಸಿಕೊಳ್ಳುತ್ತದೆ. ಹೀಗಾದರೆ ಸಹಿಸಲು ಸಾಧ್ಯವಾಗದ ನೋವು ಕಾಣಿಸಿಕೊಳ್ಳುತ್ತದೆ. 

3. ಹಲ್ಲುಗಳ ಆಕಾರ ಹದಗೆಡಬಹುದು:  
ಉಗುರು ಕಚ್ಚುವ ಅಭ್ಯಾಸದಿಂದ ಬಳಲುತ್ತಿರುವ ಜನರ ಹಲ್ಲುಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು. ಈ ಕಾರಣದಿಂದಾಗಿ, ಹಲ್ಲುಗಳು ಮುರಿಯಬಹುದು. ಹಲ್ಲುಗಳು ಬಿರುಕು ಬಿಡಬಹುದು. ಹಲ್ಲುಗಳ ಮಧ್ಯೆ ಕಲೆಗಳು ಕೂಡ ರೂಪುಗೊಳ್ಳಬಹುದು.   ಇದು  ಒಸಡುಗಳು ದುರ್ಬಲಗೊಳ್ಳಲು ಕೂಡಾ ಕಾರಣವಾಗುತ್ತದೆ. 

4. ಉಗುರು ಬೆಳವಣಿಗೆ ನಿಲ್ಲಬಹುದು:
 ವರ್ಷಗಳಿಂದ ಉಗುರುಗಳನ್ನು ಅಗಿಯುತ್ತಿದ್ದರೆ, ಅದನ್ನು ದೀರ್ಘಕಾಲದ ಅಭ್ಯಾಸ ಎಂದು ಪರಿಗಣಿಸಬೇಕಾಗುತ್ತದೆ.  ಇದರಿಂದ  ಉಗುರಿನೊಳಗಿನ ಟಿಶ್ಯೂ ಹಾಳಾಗಬಹುದು. ಇದು ಶಾಶ್ವತ ಹಾನಿಯನ್ನುಂಟುಮಾಡುತ್ತದೆ. ಉಗುರುಗಳನ್ನು ಅಗಿಯುವ ಅಭ್ಯಾಸದಿಂದ ಉಗುರುಗಳ ಬೆಳವಣಿಗೆ ನಿಂತು ಹೋಗುತ್ತದೆ. 

 

No comments:

Post a Comment