Sunday 27 June 2021

ರಾಜ್ಯದಲ್ಲಿ ಕೊರೋನಾ: 3604 ಪ್ರಕರಣ, 89 ಸಾವು. ಜಿಲ್ಲಾವಾರು ವಿವರ.

 

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಭಾರಿ ಇಳಿಮುಖವಾಗಿದ್ದು 3604 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 28,34,630 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 89 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 34,743 ಸೋಂಕಿತರು ಮೃತಪಟ್ಟಿದ್ದಾರೆ. ಇವತ್ತು 7699 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 26,98,822 ಜನ ಗುಣಮುಖರಾಗಿದ್ದಾರೆ. 1,01,042 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 2.18 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 788 ಜನರಿಗೆ ಸೋಂಕು ತಗುಲಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಇವತ್ತು 3301 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 63,473 ಸಕ್ರಿಯ ಪ್ರಕರಣಗಳಿವೆ.


No comments:

Post a Comment