Sunday 27 June 2021

ಅಡಿಗೆ ಅನಿಲ ಬೆಲೆಯಲ್ಲಿ ಶೇ.60 ರಷ್ಟು ಏರಿಕೆ ಸಾಧ್ಯತೆ??

 

ಎಲ್ ಪಿ ಜಿ ಬೆಲೆಯಲ್ಲಿ ಏರಿಕೆ - ಕೇಂದ್ರ ಸರ್ಕಾರ ಅಕ್ಟೋಬರ್ 1 ರಿಂದ ಅಡುಗೆ ಅನಿಲದ ದರ ಪರಿಷ್ಕರಣೆ ಮಾಡಲಿದೆ.  ವಿಶೇಷ ಎಂದರೆ, ಈ ಬಾರಿ ಎಲ್ ಪಿ ಜಿ ಬೆಲೆಯಲ್ಲಿ ಶೇ.60 ರಷ್ಟು ಏರಿಕೆಯಾಗುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.

ನವದೆಹಲಿ: ಎಲ್ ಪಿ ಜಿ ಬೆಲೆಯಲ್ಲಿ ಏರಿಕೆಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲ ಬೆಲೆ ಏರಿಕೆಯ ಪ್ರವೃತ್ತಿ ಮುಂದುವರೆದಿದೆ. ದೇಶೀಯ ಗಣಿಗಾರಿಕೆ ಕ್ಷೇತ್ರಗಳಿಂದ ಉತ್ಪತ್ತಿಯಾಗುವ ಅನಿಲದ ಮೇಲೆ ಇದರ ಪರಿಣಾಮವು ಶೀಘ್ರದಲ್ಲೇ ಕಂಡುಬರಲಿದೆ. ದೇಶೀಯ ಅನಿಲದ ಹೊಸ ಬೆಲೆಗಳನ್ನು ಅಕ್ಟೋಬರ್ 1 ರಂದು ಸರ್ಕಾರ ಬಿಡುಗಡೆ ಮಾಡಲಿದೆ. ವಿಶೇಷವೆಂದರೆ ಈ ಬಾರಿ ಎಲ್‌ಪಿಜಿಯ  ಬೆಲೆ ಶೇಕಡಾ 60 ರಷ್ಟು ಹೆಚ್ಚಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ

ಎಲ್ ಪಿ ಜಿ ಬೆಲೆ ಹೆಚ್ಚಾಗುವ ಸಾಧ್ಯತೆ:
ಭಾರತದ ತೈಲ ಅನಿಲ ಗಣಿಗಾರಿಕೆ ಕ್ಷೇತ್ರದಲ್ಲಿ ಅತಿದೊಡ್ಡ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಈ ಬಾರಿ ನೈಸರ್ಗಿಕ ಅನಿಲ ಬೆಲೆಯಲ್ಲಿ ಶೇ .60 ರಷ್ಟು ಹೆಚ್ಚಿಸುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ಬೆಲೆಗಳ ಹೆಚ್ಚಳದಿಂದಾಗಿ, ತೈಲ ಕಂಪನಿಗಳ ಆದಾಯದ ಮೇಲೂ ಇದರ ಪರಿಣಾಮ ಗೋಚರಿಸುತ್ತದೆ. ಎಲ್‌ಪಿಜಿ ಅನಿಲದ ಮೇಲಿನ ಸಬ್ಸಿಡಿಯನ್ನು ಕೂಡ ಸರ್ಕಾರ ಕೆಲ ದಿನಗಳ ಹಿಂದೆ ಸ್ಥಗಿತಗೊಳಿಸಿದೆ. ಹೀಗಾಗಿ ಇದೀಗ ಎಲ್ ಪಿ ಜಿ  ಮೇಲೆ ಸರ್ಕಾರ ನೀಡುತ್ತಿದ್ದ ಸಬ್ಸಿಡಿಯ ಭಾರ ಕೂಡ ತೈಲೋತ್ಮನ್ನ ಕಂಪನಿಗಳ ಮೇಲೆಯೇ ಬೀಳುತ್ತಿದೆ

ಸಬ್ಸಿಡಿ ಸ್ಥಗಿತಗೊಂಡ ಕಾರಣ ಒ ಎನ್ ಜಿ ಸಿ ಗೆ ಲಾಭ
ಕಂಪನಿಯ ವಾರ್ಷಿಯ ಆರ್ಥಿಕ ಪರಿಣಾಮಗಳ ಕುರಿತು ಹೇಳಿಕೆ ನೀಡಿರುವ ಒ ಎನ್ ಜಿ ಸಿ ಕಂಪನಿಯ ಸಿ ಎಮ್ ಡಿ ಸುಭಾಶ್ ಕುಮಾರ್, ಜನವರಿ-ಮಾರ್ಚ್ 2021 ರಲ್ಲಿ, ತೈಲ ಕಂಪನಿ ಕಚ್ಚಾ ತೈಲವನ್ನು 58.05 ಡಾಲರ್ ಪ್ರತಿ ಬ್ಯಾರೆಲ್‌ ದರದಲ್ಲಿ ಮಾರಾಟ ಮಾಡಿದೆ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಗ್ರಾಹಕರಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ರದ್ದುಗೊಳಿಸಿದ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರೂ ಕಂಪನಿಯು 6,734 ಕೋಟಿ ರೂ. ಗಳಿಕೆ ಮಾಡಿದೆ. ಇದಲ್ಲದೆ ಕಂಪನಿಯು ಈ ವರ್ಷ 29,500 ಕೋಟಿ ರೂ.ಗಳಲ್ಲಿ ಹೂಡಿಕೆ ಮಾಡಲಿದೆ ಎಂದು ಸುಭಾಷ್ ಕುಮಾರ್ ಹೇಳಿದ್ದಾರೆ.


No comments:

Post a Comment