Sunday 27 June 2021

ಚಿತ್ರದುರ್ಗ: ಬಿಜೆಪಿ ಜಿಲ್ಲಾ ಹಾಗೂ ಮಹಿಳಾ ಘಟಕದ ವತಿಯಿಂದ ಬೀಜದುಂಡೆ ತಯಾರಿಕೆಗೆ ಚಾಲನೆ.


 ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ 'ಮನ್‌ ಕೀ ಬಾತ್‌' ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಜಿಲ್ಲಾ ಹಾಗೂ ಮಹಿಳಾ ಘಟಕದ ವತಿಯಿಂದ ಇಲ್ಲಿನ ಅಕ್ಕಮಹಾದೇವಿ ಸಮಾಜದ ಆವರಣದಲ್ಲಿ 20 ಸಾವಿರ 'ಬೀಜದುಂಡೆ' ತಯಾರಿಕೆಗೆ ಭಾನುವಾರ ಚಾಲನೆ ನೀಡಲಾಯಿತು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, 'ಸಸಿಗಳನ್ನು ನೆಡುವುದಕ್ಕೆ ಮಾತ್ರ ಸೀಮಿತವಾಗಬಾರದು. ಅವುಗಳನ್ನು ಸರಿಯಾದ ರೀತಿಯಲ್ಲಿ ಪೋಷಣೆ ಮಾಡಿ ಬೆಳೆಸಿದಾಗ ಸುಂದರ ಪರಿಸರ ನಿರ್ಮಾಣವಾಗಲು ಸಾಧ್ಯ' ಎಂದು ಸಲಹೆ ನೀಡಿದರು.

'ಪ್ರಸ್ತುತ ದಿನಗಳಲ್ಲಿ ಹಸಿರೀಕರಣದೊಂದಿಗೆ ಅರಣ್ಯ ಪ್ರದೇಶ ಹೆಚ್ಚಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಆದರೆ, ಮಾನವನ ಅಗತ್ಯಕ್ಕೆ ಮರಗಳನ್ನು ಕಡಿಯಲಾಗುತ್ತದೆ. ಕಡಿಯುವಾಗ ಇರುವ ಅಸಕ್ತಿ, ಅವುಗಳನ್ನು ಬೆಳೆಸುವುದರಲ್ಲಿ ಇಲ್ಲ' ಎಂದು ವಿಷಾದಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, 'ಮಾನವನಿಗೆ ಆಮ್ಲಜನಕ ನೀಡುವ ಮರಗಳನ್ನು ಬೆಳೆಸುವುದಷ್ಟೇ ಅಲ್ಲದೆ, ಅವುಗಳ ರಕ್ಷಣೆಗೂ ಬದ್ಧರಾಗಬೇಕು. ಬೂತ್ ಮಟ್ಟದಲ್ಲಿ ಮನ್‌ ಕೀ ಬಾತ್ ಕಾರ್ಯಕ್ರಮ ಎಲ್ಲರೂ ಕೇಳುವಂತಾಗಬೇಕಿದೆ. ಅದಕ್ಕೆ ಬೇಕಾದ ಅಗತ್ಯ ಸಿದ್ಧತೆಯನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡಿಕೊಳ್ಳಬೇಕಿದೆ' ಎಂದು ಸಲಹೆ ನೀಡಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಮುಖಂಡರಾದ ಸಿದ್ದೇಶ್ ಯಾದವ್, ನಂದಿ ನಾಗರಾಜ್, ವೆಂಕಟೇಶ್ ಯಾದವ್, ಶೈಲಜಾ ರೆಡ್ಡಿ, ಹನುಮಂತೇಗೌಡ, ಶಶಿಧರ್, ನಾಗರಾಜ್ ಬೇದ್ರೆ ಇದ್ದರು

No comments:

Post a Comment