Sunday 20 June 2021

Health: ಮಳೆಗಾಲದಲ್ಲಿ ಆರೋಗ್ಯದ ಕಡೆ ತುಸು ಗಮನ, ತಿಂಡಿ ತಿನಿಸು ಹೀಗಿರಲಿ...

ಚಿತ್ರದುರ್ಗ : ಹೇಳಿಕೇಳಿ ಮಳೆಗಾಲ ಬಂದಿದೆ. ಮಳೆಗಾಲ ಎಲ್ಲರಿಗೂ ಇಷ್ಟ. ಆದರೇನು ಮಾಡುವುದು. ಮಳೆಗಾಲ ರೋಗಗಳಿಗೆ ಆಹ್ವಾನ ನೀಡುತ್ತಲೇ ಕಾಲಿಡುತ್ತದೆ. ಹೀಗಿರುವಾಗ ಕರೋನಾ ಮತ್ತು ಮಳೆಗಾಲ ಒಟ್ಟಿಗೆ ಆರ್ಭಟಿಸುತ್ತಿರುವಾಗ ನಮ್ಮ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವುದು ಹೇಗೆ..? ಇಲ್ಲಿದೆ ಟಿಪ್ಸ್. 

1. ಏಕದಳ ಧಾನ್ಯಗಳನ್ನು ಹೆಚ್ಚಿಗೆ ತಿನ್ನಿ 
ಯಾಕೆಂದರೆ, ಜೋಳ, ಮೆಕ್ಕೆಜೋಳ, ಹೆಸರು ಕಾಳು ಮೊದಲಾದ ಧಾನ್ಯಗಳಲ್ಲಿ ಪ್ರೊಟೀನ್, ಮೆಗ್ನೇಶಿಯಂ ಸಾಕಷ್ಟು ಪ್ರಮಾಣದಲ್ಲಿರುತ್ತವೆ.  ಫೈಬರ್ ಕೂಡಾ ಬೇಕಾದಷ್ಟಿವೆ.  ಹಾಗಾಗಿ ಮಳೆಗಾಲದಲ್ಲಿ ಇಮ್ಯೂನಿಟಿಗಾಗಿ ಏಕದಳ ಧಾನ್ಯಗಳನ್ನು ಹೆಚ್ಚಿಗೆ ತಿನ್ನಿ.


2. ಊಟದಲ್ಲಿ ತರಕಾರಿ ಹೆಚ್ಚಿಗೆ ಇರಲಿ
ಮಳೆಗಾಲದಲ್ಲಿ ತರಕಾರಿ ಹೆಚ್ಚಿಗೆ ತಿನ್ನಬೇಕು ಯಾಕೆಂದರೆ, ಅದ್ರಿಂದ ಇಮ್ಯೂನಿಟಿ ಹೆಚ್ಚುತ್ತದೆ. ಬೆಂಡೆ, ಬೀನ್ಸ್, ಹೀರೆಕಾಯಿ, ಮೊದಲಾದ ತರಕಾರಿಗಳನ್ನು ಹೆಚ್ಚಿಗೆ ತಿನ್ನಿ.  ಹಾಗಲಕಾಯಿ, ಮೂಲಂಗಿ, ಮೆಂತೆ ಸೊಪ್ಪು ಕೂಡಾ ತಿಂದರೆ ಒಳ್ಳೆಯದು.

3. ಹಣ್ಣು ಬೇಕಾದಷ್ಟು ತಿನ್ನಿ.
ನಿಮ್ಮ ದೈನಂದಿನ ಡಯಟ್ ನಲ್ಲಿ ಬಾಳೆಹಣ್ಣು, ಸೇಬು, ದಾಳಿಂಬೆ, ಪ್ಪಾಯ, ನೆಲ್ಲಿಕಾಯಿ ಸಾಕಷ್ಟು ಇರಲಿ.  ಇದರಲ್ಲಿರುವ ಪೋಷಕಾಂಶಗಳು ನಿಮಗೆ ಶಕ್ತಿನೀಡುತ್ತದೆಯಲ್ಲದೆ, ದೇಹದಲ್ಲಿರುವ ಹಾನಿಕಾರಕ ಅಂಶಗಳನ್ನು ಹೊರಗೆ ಹಾಕುತ್ತದೆ. ಜೊತೆಗೆ ಇಮ್ಯುನಿಟಿ ಹೆಚ್ಚಿಸುತ್ತದೆ. 

4. ರಿಶಿಣ ಹಾಕಿದ ಹಾಲು ಕುಡಿಯಿರಿ
ರಿಶಿ ಪ್ರಾಕೃತಿಕ ಆಂಟಿಸೆಪ್ಟಿಕ್ ಮತ್ತು ಆಂಟಿಬಯೋಟಿಕ್ ಏಜೆಂಟ್ ಆಗಿದೆ. ಹಳದಿಯುಕ್ತ ಹಾಲು ಕೆಮ್ಮು, ಜ್ವರ ಮುಂತಾದ ಕಾಯಿಲೆಗಳಿಗೆ ಪ್ರಭಾವಿಯಾಗಿದೆ. ಬ್ಲಡ್ ಶುಗರ್ ನಿಯಂತ್ರಣದಲ್ಲಿಡುತ್ತದೆ. ಮಳೆಗಾಲದಲ್ಲಿ ಅರ್ಧ ಚಮಚ ಅರಿಶಿನ ಮತ್ತು ಒಂದು ಚಮಚ ಜೇನು ಹಾಕಿ ಕುಡಿಯಿರಿ.


5. ಶುಂಠಿ ಚಹಾ ಕುಡಿಯಿರಿ.
ಮಳೆಗಾಲದಲ್ಲಿ ಚಹಾ ಕುಡಿಯುವ ಆನಂದವೇ ಬೇರೆ. ಆದಷ್ಟೂ ಶುಂಠಿ ಹಾಕಿದ ಟೀ ಕುಡಿಯಿರಿ.  ಅದಕ್ಕೆ ಜೇನು ಹಾಕಿದರೆ ಇನ್ನೂ ಒಳ್ಳೆಯದು. ಶುಂಠಿ ಚಹಾ ಖಂಡಿತವಾಗಿ ರೋಗನಿರೋಧಕ ಶಕ್ತಿ ಬೆಳೆಸುತ್ತದೆ. 

No comments:

Post a Comment