Sunday, 20 June 2021

Cricket: ಭಾರತದ ಮಹಾಗೋಡೆ ದ್ರಾವಿಡ್ ಕುರಿತ ಬಯೊಪಿಕ್, ಬರಲಿದೆ ಬೆಳ್ಳಿತೆರೆಗೆ.

ಇತ್ತೀಚಿಗೆ ಬಂದಿರುವ ಸುದ್ದಿಯ ಪ್ರಕಾರ ಭಾರತದ ಕ್ರಿಕೆಟ್ ಗೋಡೆ ಎಂದೇ ಖ್ಯಾತಿಯಾದ ರಾಹುಲ್ ದ್ರಾವಿಡ್ ಕುರಿತಾದ ಸಿನಿಮಾ ತೆರೆಗೆ ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 

ನವದೆಹಲಿ: ಚಲನಚಿತ್ರವು ಮಾನವನ ಜೀವನದ ಆಂತರಿಕ ಪ್ರಪಂಚಗಳನ್ನು ಅನ್ವೇಷಿಸಲು ಅನನ್ಯವಾಗಿ ಅನುಮತಿಸುವ ಒಂದು ಮಾಧ್ಯಮವಾಗಿದೆ.ಅದರಲ್ಲೂ ಬಯೋಪಿಕ್ ಗಳು ವ್ಯಕ್ತಿ ಜೀವನ ಚರಿತ್ರೆಯ ವಿವಿಧ ಆಯಾಮಗಳ ಮೂಲಕ ಸಂಪೂರ್ಣ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತವೆ.

ಈಗಾಗಲೇ ತೆಲುಗು ಫಿಲಂ ಇಂಡಸ್ಟ್ರಿ ಹಲವು ಬಯೋಪಿಕ್ ಗಳನ್ನು ನಿರ್ಮಿಸಿ ಗಮನ ಸೆಳೆದಿದೆ.ಅದರಲ್ಲೂ ಮುಖ್ಯವಾಗಿ ಯಾತ್ರಾ, ಎನ್‌ಟಿಆರ್, ಸೈ ರಾ ನರಸಿಂಹ ರೆಡ್ಡಿ, ಜಾರ್ಜ್ ರೆಡ್ಡಿ ಮತ್ತು ಮಲ್ಲೆಸಮ್‌ರಂತಹ ಬಯೋಪಿಕ್ ಚಿತ್ರಗಳು ಜನರ ಮೆಚ್ಚುಗೆಯನ್ನು ಗಳಿಸಿವೆ.

ಇತ್ತೀಚಿಗೆ ಬಂದಿರುವ ಸುದ್ದಿಯ ಪ್ರಕಾರ ಭಾರತದ ಕ್ರಿಕೆಟ್ ಗೋಡೆ ಎಂದೇ ಖ್ಯಾತಿಯಾದ ರಾಹುಲ್ ದ್ರಾವಿಡ್ ಕುರಿತಾದ ಸಿನಿಮಾ ತೆರೆಗೆ ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.ರಾಹುಲ್ ದ್ರಾವಿಡ್ ಅವರ ಪಾತ್ರದಲ್ಲಿ ಸಿದ್ಧಾರ್ಥ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಚಿತ್ರದ ನಿರ್ದೇಶಕರು ಕಥೆಯನ್ನು ಸಿದ್ಧಪಡಿಸಿ ಅದನ್ನು ರಾಹುಲ್ ದ್ರಾವಿಡ್ ಅವರಿಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ನಿರ್ದೇಶಕರು ಬರೆದ ಕಥೆಗೆ ರಾಹುಲ್ ಅಚ್ಚರಿ ವ್ಯಕ್ತಪಡಿಸಿ ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿದೆ.


No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...