Saturday 26 June 2021

ದೇಶದ 12 ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿಯ 51 ಪ್ರಕರಣಗಳು, 8 ರಾಜ್ಯಗಳಿಗೆ ಪ್ರತ್ಯೇಕ ನಿರ್ದೇಶನ.

 ಗರಿಷ್ಠ 22 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದಿವೆ. ತಮಿಳುನಾಡಿನಲ್ಲಿ ಡೆಲ್ಟಾ ಪ್ಲಸ್‌ನ 9 ಪ್ರಕರಣಗಳು ದಾಖಲಾಗಿವೆ. ಮಧ್ಯಪ್ರದೇಶದಲ್ಲಿ ಏಳುಕೇರಳದಲ್ಲಿ ಮೂರುಪಂಜಾಬ್ ಮತ್ತು ಗುಜರಾತ್‌ನಲ್ಲಿ ತಲಾ ಎರಡುಆಂಧ್ರಪ್ರದೇಶಒಡಿಶಾರಾಜಸ್ಥಾನಜಮ್ಮು ಮತ್ತು ಕಾಶ್ಮೀರಹರಿಯಾಣಕರ್ನಾಟಕದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.


ನವದೆಹಲಿ: ದೇಶಾದ್ಯಂತ ಕರೋನಾದ ಡೆಲ್ಟಾ ಪ್ಲಸ್ ರೂಪಾಂತರಿಯ 51 ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳನ್ನು ಒಟ್ಟು 12 ರಾಜ್ಯಗಳಿಂದ ವರದಿಯಾಗಿವೆ. ಈ ಪೈಕಿ ಗರಿಷ್ಠ 22 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದಿವೆ. ತಮಿಳುನಾಡಿನಲ್ಲಿ ಡೆಲ್ಟಾ ಪ್ಲಸ್‌ನ 9 ಪ್ರಕರಣಗಳು ದಾಖಲಾಗಿವೆ. ಮಧ್ಯಪ್ರದೇಶದಲ್ಲಿ ಏಳು, ಕೇರಳದಲ್ಲಿ ಮೂರು, ಪಂಜಾಬ್ ಮತ್ತು ಗುಜರಾತ್‌ನಲ್ಲಿ ತಲಾ ಎರಡು, ಆಂಧ್ರಪ್ರದೇಶ, ಒಡಿಶಾ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಕರ್ನಾಟಕದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

NCDC ಸೇರಿದಂತೆ ಹತ್ತು ಸಂಸ್ಥೆಗಳು ದೇಶದಲ್ಲಿ ಕರೋನಾ ವೈರಸ್‌ನ ಜೀನೋಮ್ ಸಿಕ್ವೆನ್ಸಿಂಗ್ ಅಧ್ಯಯನದಲ್ಲಿ ತೊಡಗಿವೆ. ಎನ್‌ಸಿಡಿಸಿ ನಿರ್ದೇಶಕ ಸುಜಿತ್ ಸಿಂಗ್ ಹೇಳುವ ಪ್ರಕಾರ, “ಈ ಡೆಲ್ಟಾ ಪ್ಲಸ್‌ನ ಪ್ರಕರಣಗಳು ಬಹಳ ಸೀಮಿತವಾಗಿವೆ. 12 ಜಿಲ್ಲೆಗಳಲ್ಲಿ ಸುಮಾರು 50 ಪ್ರಕರಣಗಳು ವರದಿಯಾಗಿವೆ ಮತ್ತು ಇದು ಕಳೆದ ಮೂರು ತಿಂಗಳಲ್ಲಿ ಸಂಭವಿಸಿದೆ. ಯಾವುದೇ ಜಿಲ್ಲೆ ಅಥವಾ ರಾಜ್ಯಗಳಲ್ಲಿ ಇದು ಬೆಳೆಯುವ ಪ್ರವೃತ್ತಿಯನ್ನು ಹೊಂದಿದೆ ಎಂದು ಹೇಳಲಾಗುವುದಿಲ್ಲ" ಎಂದಿದ್ದಾರೆ.

8 ರಾಜ್ಯಗಳಿಗೆ ವಿಶೇಷ ನಿರ್ದೇಶನ ನೀಡಿದ ಸರ್ಕಾರ
ಜನಸಂದಣಿ ನಿಯಂತ್ರಣ, ವ್ಯಾಪಕ ಪರೀಕ್ಷೆಯಂತಹ ಕಟ್ಟುನಿಟ್ಟಿನ ತಡೆಗಟ್ಟುವ ಕ್ರಮಗಳ ಜೊತೆಗೆ ನಾವೆಲ್ ಕರೋನವೈರಸ್‌ನ ಡೆಲ್ಟಾ ಪ್ಲಸ್ ರೂಪಾಂತರಗಳು ಪತ್ತೆಯಾದ ಜಿಲ್ಲೆಗಳಲ್ಲಿ ಆದ್ಯತೆಯ ಆಧಾರದ ಮೇಲೆ ಲಸಿಕೆ ಹೆಚ್ಚಿಸಲು ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಒತ್ತಾಯಿಸಿದೆ.  ತಮಿಳುನಾಡು, ರಾಜಸ್ಥಾನ, ಕರ್ನಾಟಕ, ಪಂಜಾಬ್, ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್ ಮತ್ತು ಹರಿಯಾಣಗಳಿಗೆ ಈ ಕುರಿತು ಪತ್ರ ಬರೆದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್  ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.

ಕ್ಲಿನಿಕಲ್ ಸಾಂಕ್ರಾಮಿಕ ರೋಗ ಸಂಬಂಧಗಳನ್ನು ಸ್ಥಾಪಿಸಲುಸೋಂಕಿಗೆ ಒಳಗಾದ ಜನರ ಸಾಕಷ್ಟು ಮಾದರಿಗಳನ್ನು ತಕ್ಷಣವೆ ಭಾರತೀಯ SARS-CoV-2 ಜೀನೋಮಿಕ್ ಕನ್ಸೋರ್ಟಿಯಾದ ನಿರ್ಧಿಷ್ಟ ಲ್ಯಾಬ್ ಗಳಿಗೆ ಕಳುಹಿಸುವುದನ್ನು ಸುನಿಶ್ಚಿತಗೊಳಿಸಬೇಕು ಎಂದು ಅವರು ಹೇಳಿದ್ದಾರೆ.

SARS-CoV-2ನ ಡೆಲ್ಟಾ ಪ್ಲಸ್ ರೂಪಾಂತರಿ ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆ, ಗುಜರಾತ್ ನ ಸೂರತ್, ಹರಿಯಾಣಾದ ಫಾರಿದಾಬಾದ್, ಜಮ್ಮು ಮತ್ತು ಕಾಶ್ಮೀರದ ಕಟರಾ, ರಾಜಸ್ಥಾನದ  ಬಿಕಾನೆರ್, ಪಂಜಾಬ್ ನ ಪಟಿಯಾಲಾ, ಕರ್ನಾಟಕದ ಮೈಸೂರು ಹಾಗೂ ತಮಿಳುನಾಡಿನ ಚೆನ್ನೈ, ಮದುರೈ ಹಾಗೂ ಕಾಂಚಿಪುರಂನಲ್ಲಿ ಪತ್ತೆಯಾಗಿವೆ ಎಂದು ಭೂಷಣ್ ಮಾಹಿತಿ ನೀಡಿದ್ದಾರೆ. 

ಇನ್ನೊಂದೆಡೆ ಆಂಧ್ರ ಪ್ರದೇಶ, ದೆಹಲಿ, ಹರಿಯಾಣಾ, ಕೇರಳ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸಂಗ್ರಹಿಸಲಾಗಿರುವ ನಮೂನೆಗಳಲ್ಲಿ ಶೇ.50 ಕ್ಕಿಂತ ಹೆಚ್ಚು ಪ್ರಕರಣ ಗಳು ಡೆಲ್ಟಾ ವೇರಿಯಂಟ್ ಪ್ರಕರಣಗಳಾಗಿವೆ. ಭಾರತದಲ್ಲಿ ಶೇ.90 ರಷ್ಟು ಪ್ರಕರಣಗಳು ಬಿ.1.617.2  ಪ್ರಕರಣಗಳಾಗಿವೆ. ದೇಶದ ಒಟ್ಟು 35 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಟ್ಟು 174 ಜಿಲ್ಲೆಗಳಲ್ಲಿ ಅಪಾಯಕಾರಿ ಕೊವಿಡ್-19 ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ.

 


No comments:

Post a Comment