Saturday, 26 June 2021

ಚಿತ್ರದುರ್ಗ: ಬ್ಲಾಕ್ ಫಂಗಸ್ ಗೆ ಯಶಸ್ವಿ ಶಸ್ತ್ರಚಿಕಿತ್ಸೆ.

 

ಚಿತ್ರದುರ್ಗ: ಇತ್ತೀಚೆಗೆ ಹಲ್ಲು ನೋವಿನಿಂದ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಗೆ ವಸಡಿನ ಕೆಳಭಾಗದ ಹಲ್ಲಿನ ಹತ್ತಿರ ತೀರ ಅಪರೂಪ ಎನ್ನಬಹುದಾದ ಬ್ಲಾಕ್ ಫಂಗಸ್‍ನ್ನು ಎಸ್.ಜೆ.ಎಂ. ದಂತ ಮಹಾವಿದ್ಯಾಲಯದವರು ಪತ್ತೆ ಹಚ್ಚಿ ಹೆಚ್ಚಿನ ಚಿಕಿತ್ಸೆಗಾಗಿ ಬಸವೇಶ್ವರ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಡಾ.ನಾಗರಾಜಪ್ಪ, ಡಾ.ಮಧುಮತಿ, ಡಾ. ನರಸಿಂಹಮೂರ್ತಿ, ಡಾ.ಆರ್. ಗೌರಮ್ಮ, ಡಾ. ಮೇಘ, ಡಾ.ತಿಮ್ಮಾರೆಡ್ಡಿ, ಡಾ.ಆಕಾಶ್ ಮೊದಲಾದ ವೈದ್ಯರ ತಂಡದವರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯನ್ನು ಅಪಾಯದಿಂದ ದೂರ ಮಾಡಿದ್ದಾರೆ.

ಇವರ ಸೇವೆಯನ್ನು ಪ್ರಶಂಸಿಸಿರುವ ಡಾ. ಶಿವಮೂರ್ತಿ ಮುರುಘಾ ಶರಣರು ವೈದ್ಯರ ತಂಡವನ್ನು ಅಭಿನಂದಿಸಿದ್ದಾರೆ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...