Saturday 26 June 2021

‘ಟೆಲಿಗ್ರಾಂ ಆಪ್’ ಬಳಸುತ್ತಿದ್ದಲ್ಲಿ, ನಿಮಗೊಂದು ಸಿಹಿ ಸುದ್ದಿ.!!


ಟೆಲಿಗ್ರಾಂ ಬಳಕೆದಾರರ ಬೇಡಿಕೆಯಂತೆ ಕೊನೆಗೂ ವಿಡಿಯೋ ಕಾಲ್​ ಸೌಲಭ್ಯವನ್ನ ಪರಿಚಯಿಸಿದೆ. ವಿಡಿಯೋ ಕಾಲ್​ ಸೌಲಭ್ಯವನ್ನ ತರಲಿದ್ದೇವೆ ಎಂದು ಕಂಪನಿ ಹೇಳಿದ 1 ವರ್ಷದ ಬಳಿಕ ಇದು ಬಳಕೆದಾರರಿಗೆ ಲಭ್ಯವಾಗಲಿದೆ. ಮೊಬೈಲ್​, ಟ್ಯಾಬ್ಲೆಟ್​, ಡೆಸ್ಕ್​ಟಾಪ್​ನಲ್ಲಿ ವಿಡಿಯೋ ಕಾಲ್​ ಸೌಲಭ್ಯವನ್ನ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಯಲ್ಲಿ ಆನಿಮೇಟೆಡ್​​ ಬ್ಯಾಕ್​ಗ್ರೌಂಡ್​, ಮೆಸೇಜ್​​ ಸೆಂಡಿಂಗ್​ ಆನಿಮೇಷನ್​, ಹೊಸ ಆನಿಮೇಟೆಡ್​ ಇಮೋಜಿ ಸೇರಿದಂತೆ ಇನ್ನೂ ಹಲವು ಆಯ್ಕೆಗಳನ್ನ ಬಳಕೆದಾರರಿಗೆ ಪರಿಚಯಿಸಿದೆ.

ವಿಡಿಯೋ ಕಾಲ್​ನ ಜೊತೆಯಲ್ಲಿ ಟೆಲಿಗ್ರಾಂ ಇನ್ನೊಂದು ಮಹತ್ವದ ಸೌಲಭ್ಯವನ್ನ ನೀಡಿದೆ. ಇದರ ಪ್ರಕಾರ ಆಡಿಯೋ ಕಾಲ್​ಗಳನ್ನ ವಿಡಿಯೋ ಕಾಲ್​ಗಳಾಗಿ ಪರಿವರ್ತನೆ ಮಾಡಬಹುದಾಗಿದೆ. ಇದಕ್ಕಾಗಿ ಬಳಕೆದಾರರು ಕ್ಯಾಮರಾ ಆಯ್ಕೆ ಮೇಲೆ ಕ್ಲಿಕ್​ ಮಾಡಬೇಕು. ಒಮ್ಮೆ ವಿಡಿಯೋ ಕಾಲ್​ ಆರಂಭವಾದ ಬಳಿಕ ಪರದೆಯ ಮೇಲೆ ಸದಸ್ಯರ ಮುಖ ಕಾಣಲಿದೆ. ಅಲ್ಲದೇ ಕ್ಯಾಮರಾ ಹಾಗೂ ಸ್ಕ್ರೀನ್​ ಎರಡನ್ನೂ ಒಮ್ಮೆಲೆ ತೋರಿಸಲು ಕೂಡ ಆಯ್ಕೆ ನೀಡಲಾಗಿದೆ.


ಇನ್ನು ಟ್ಯಾಬ್ಲೆಟ್​ ಹಾಗೂ ಡೆಸ್ಕ್​ ಟಾಪ್​ನಲ್ಲಿ ವಿಡಿಯೋ ಕಾಲ್​ ಮಾಡುವವರಿಗೆ ಇನ್ನೊಂದು ಹೆಚ್ಚಿನ ಸೌಲಭ್ಯ ನೀಡಲಾಗಿದೆ. ಇಲ್ಲಿ ವಿಡಿಯೋ ಕಾಲ್​ ವೇಳೆ ಸ್ಪ್ಲಿಟ್​ ಸ್ಕ್ರೀನ್​ ಸೌಕರ್ಯ ಬಳಕೆ ಮಾಡಬಹುದು ಎಂದು ಟೆಲಿಗ್ರಾಂ ಹೇಳಿದೆ.


No comments:

Post a Comment