Sunday 27 June 2021

ಶಿವನಿಗೆ ಶ್ರೇಷ್ಠವಾದ 'ತುಂಬೆ ಹೂ'ವಿನಲ್ಲಿದೆ ನಾನಾ ರೋಗ ವಾಸಿ ಮಾಡುವ ಶಕ್ತಿ!

 


ತುಂಬೆ ಹೂ ಯಾರು ನೋಡಿಲ್ಲ ಹೇಳಿ? ಆ ಪುಟ್ಟ ಪುಟ್ಟ ಬಿಳಿಯ ಹೂಗಳನ್ನ ನೋಡಿದ್ರೆ ಅದೆಷ್ಟೋ ಖುಷಿ. ಜೊತೆಗೆ ಎಲ್ಲಾ ದೇವರಿಗೂ ಈ ಹೂಗಳಿಂದ ಪೂಜೆ ಮಾಡುತ್ತಾರೆ. ಜೊತೆಗೆ ತುಂಬೆ ಹೂ ಶಿವನಿಗೆ ತುಂಬಾ ಶ್ರೇಷ್ಠ. ಆದ್ರೆ ಈ ತುಂಬೆ ಹೂನಲ್ಲಿ ಸಾಕಷ್ಟು ಕಾಯಿಲೆ ವಾಸಿ ಮಾಡುವ ಗುಣವು ಅಡಗಿದೆ.

ಕೀಟನಾಶಕ ಮತ್ತು ಜ್ವರ ನಿವಾರಣೆಗಾಗಿ ಇದರ ಎಲೆಯ ರಸವನ್ನು ಬಳಸಬಹುದಾಗಿದೆ. ಎಲೆಗಳನ್ನು ಬಹಳ ಕಾಲದವರೆಗೆ ಹಾವು ಕಡಿತಕ್ಕೆ ಔಷಧವಾಗಿ ಬಳಸುವುದೂ ವಾಡಿಕೆಯಲ್ಲಿತ್ತು.

ಸಂಧಿವಾತ, ಚರ್ಮರೋಗ, ಕೆಮ್ಮು, ಗಂಟಲುಬೇನೆ, ನೆಗಡಿ ಮುಂತಾದವುಗಳಿಗೆ ಮನೆಮದ್ದಾಗಿ ಬಳಸುವ ವಾಡಿಕೆ ಇಂದಿಗೂ ಇದೆ.

ಕೆಂಪು ಹಾಗೂ ಬಿಳಿ ಬಣ್ಣಗಳ ಹೂವುಗಳಿಂದ ಆಕರ್ಷಿಸುವ ತುಂಬೆಯ ಗಿಡ, ಅದರ ಎಲೆ, ಕಾಂಡ ಎಲ್ಲವೂ ಅಪಾರ ಔಷಧ ಗುಣಗಳನ್ನು ಹೊಂದಿವೆ.
ಒಂದು ಭಾಗ ತುಂಬೆ ಗಿಡದ ಎಲೆಗೆ ಕಾಲು ಭಾಗ ಬೆಲ್ಲ ಸೇರಿಸಿ ಅರೆದು ಮಂಗನ ಬಾವು ಉಂಟಾದ ಸ್ಥಳದಲ್ಲಿ ಹಚ್ಚಿದರೆ ಅದು ಕಡಿಮೆಯಾಗುತ್ತದೆ.

10-15 ಹನಿ ಹೂವಿನ ರಸಕ್ಕೆ 20-30 ಹನಿ ಜೇನುತುಪ್ಪ ಬೆರೆಸಿ 3-4 ಬಾರಿ ಆಹಾರಕ್ಕೆ ಮುಂಚೆ ಸೇವಿಸಿದರೆ ಶೀತ ಕಮ್ಮಿಯಾಗುತ್ತದೆ.

ತುಂಬೆ ಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆ ತೆಗೆದುಕೊಂಡರೆ ತಲೆನೋವು, ತಲೆಭಾರ ಕಡಿಮೆಯಾಗುತ್ತದೆ. 10 ಮಿಲಿ ತುಂಬೆ ಗಿಡದ ರಸದ ಜತೆ 5ಗ್ರಾಂ ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಿದರೆ ವಿಷಮ ಜ್ವರವು ಕಡಿಮೆಯಾಗುತ್ತದೆ.


No comments:

Post a Comment