Saturday 21 August 2021

ಗ್ರಾಹಕರಿಗೆ ಸಿಹಿಸುದ್ದಿ : ಖಾದ್ಯ ತೈಲ ʼಆಮದು ಸುಂಕʼದಲ್ಲಿ ಭಾರಿ ಕಡಿತ : ಹಬ್ಬಕ್ಕೂ ಮೊದ್ಲು ಅಗ್ಗವಾಗಲಿದೆ ಅಡುಗೆ ಎಣ್ಣೆ!

 

ನವದೆಹಲಿ : ಸಾರ್ವಜನಿಕರಿಗೆ ದೊಡ್ಡ ಪರಿಹಾರ ಸಿಗಲಿದ್ದು, ಹಬ್ಬಗಳಿಗೆ ಮುನ್ನ ಖಾದ್ಯ ತೈಲ (Edible Oil)ವನ್ನ ಅಗ್ಗವಾಗಿಸಲು ಕೇಂದ್ರ ಸರ್ಕಾರವು ದೊಡ್ಡ ಹೆಜ್ಜೆಯನ್ನ ಇಟ್ಟಿದೆ. ತೆರಿಗೆ (TAX) ಕಡಿತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ಕಳೆದ ಹಲವು ತಿಂಗಳುಗಳಿಂದ ಖಾದ್ಯ ತೈಲದ ಬೆಲೆಗಳು ವಿಪಾರೀತ ಏರಿಕೆ ಆಗ್ತಿದ್ದು, ಕೇಂದ್ರ ಸರ್ಕಾರವು ಬೆಲೆಗಳನ್ನ ನಿಯಂತ್ರಿಸುವ ಮೂಲಕ ಸಾಮಾನ್ಯ ಜನರಿಗೆ ಪರಿಹಾರ ನೀಡುವ ದೊಡ್ಡ ನಿರ್ಧಾರಕ್ಕೆ ಬಂದಿದೆ.

ಅದ್ರಂತೆ, ಸರ್ಕಾರ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದು ಸುಂಕವನ್ನು ಕಡಿಮೆ ಮಾಡಿದೆ. ಇದನ್ನು ಶೇ.15 ರಿಂದ 7.5 ಕ್ಕೆ ಇಳಿಸಲಾಗಿದೆ. ಇದರರ್ಥ ವಿದೇಶದಿಂದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವುದು ಅಗ್ಗವಾಗುತ್ತದೆ. ಪ್ರಸ್ತುತ, ಒಂದು ವರ್ಷದಲ್ಲಿ 60,000 ರಿಂದ 70,000 ಕೋಟಿಗಳನ್ನು ಖರ್ಚು ಮಾಡುವ ಮೂಲಕ 15 ದಶಲಕ್ಷ ಟನ್ ಖಾದ್ಯ ತೈಲವನ್ನ ವಿದೇಶದಿಂದ ಖರೀದಿಸಬೇಕಾಗಿದೆ. ಯಾಕಂದ್ರೆ, ದೇಶೀಯ ಉತ್ಪಾದನೆಯು ಸುಮಾರು 70-80 ಲಕ್ಷ ಟನ್‌ಗಳು. ದೇಶವು ತನ್ನ ಜನಸಂಖ್ಯೆಗೆ ವಾರ್ಷಿಕವಾಗಿ ಸುಮಾರು 25 ಮಿಲಿಯನ್ ಟನ್ ಖಾದ್ಯ ತೈಲವನ್ನು ಬಯಸುತ್ತದೆ.

ಭಾರತವು ಕಳೆದ ವರ್ಷ ಮಲೇಷ್ಯಾ ಮತ್ತು ಇಂಡೋನೇಷಿಯಾದಿಂದ 7.2 ಮಿಲಿಯನ್ ಟನ್ ಪಾಮ್ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ 34 ಲಕ್ಷ ಟನ್ ಸೋಯಾಬೀನ್ ಎಣ್ಣೆಯನ್ನ ಆಮದು ಮಾಡಿಕೊಳ್ಳಲಾಗಿದೆ ಮತ್ತು 2.5 ಮಿಲಿಯನ್ ಟನ್ ಸೂರ್ಯಕಾಂತಿ ಎಣ್ಣೆಯನ್ನು ರಷ್ಯಾ ಮತ್ತು ಉಕ್ರೇನ್ʼನಿಂದ ಆಮದು ಮಾಡಿಕೊಳ್ಳಲಾಗಿದೆ. ತಾಳೆ ಎಣ್ಣೆಯನ್ನು ಮಲೇಷ್ಯಾ ಮತ್ತು ಇಂಡೋನೇಷ್ಯಾ ಎರಡರಿಂದಲೂ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಬೇಡಿಕೆ ಮತ್ತು ಪೂರೈಕೆಯ ಈ ಅಂತರದಿಂದಾಗಿ, ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳು ಪರಿಣಾಮ ಬೀರುತ್ತವೆ.

ಕೇಂದ್ರ ಸರ್ಕಾರವು ಇಂದು ರಾಜ್ಯಗಳಿಗೆ ತಿಳಿಸಿರುವಂತೆ, ಸೋಯಾ ಮತ್ತು ಸೂರ್ಯಕಾಂತಿ ಮೇಲಿನ ಆಮದು ಸುಂಕವನ್ನ ಶೇಕಡಾ 7.5 ರಷ್ಟು ಕಡಿತಗೊಳಿಸಿದೆ. ಆದ್ರೆ, ಸರ್ಕಾರದ ಈ ಕಡಿತ 30 ಸೆಪ್ಟೆಂಬರ್ʼವರೆಗೆ ಮಾತ್ರ ಅನ್ವಯವಾಗಲಿದೆ.

No comments:

Post a Comment