Wednesday 18 August 2021

ಬೆಳಗ್ಗೆ ಎದ್ದ ಕೂಡಲೇ ಸಾಮಾನ್ಯವಾಗಿ ಈ ತಪ್ಪುಗಳನ್ನು ಮಾಡಿವಿರಾದರೆ ಇಂದೇ ಬಿಟ್ಟು ಬಿಡಿ.

 ಕೆಲವರಿ ರಾತ್ರಿ ಮಲಗುವುದಕ್ಕೆ ಮೊದಲೇ ಮಾರನೆ ದಿನದ ಎಲ್ಲ ಕೆಲಸಗಳನ್ನ ಪಟ್ಟಿ ಮಾಡಿಟ್ಟುಕೊಳ್ಳುತ್ತಾರೆ. ಆ ಟೈಮ್ ಟೇಬಲ್ ಪ್ರಕಾರ ಕೆಲಸ ನಡೆದರೆ ಆ ದಿನ ಪೂರ್ತಿ ಆರಾಮಾಗಿ ಕಳೆದುಹೋಗುತ್ತದೆ.  ಆದರೆ ಇನ್ನು ಕೆಲವರು ಬೆಳಗ್ಗೆ ಎದ್ದ ಕೂಡಲೇ ಆ ದಿನದ ದಿನಚರಿ ಬಗ್ಗೆ ಯೋಚನೆ ಮಾಡಲು ಆರಂಭಿಸುತ್ತಾರೆ. ಅಂದರೆ ತಮ್ಮ ದಿನವನ್ನೇ ಸ್ಟ್ರೆಸ್ ಮೂಲಕವೇ ಶುರು ಮಾಡಿಕೊಳ್ಳುತ್ತಾರೆ. 

ಈ ತಪ್ಪುಗಳ ಮೂಲಕ ನಿಮ್ಮ ದಿನ ಆರಂಭಿಸಬೇಡಿ : 
ನಿಮ್ಮ ಇಡೀ ದಿನವನ್ನು ಫ್ರೆಶ್ ಆಗಿ ಆಕ್ಟಿವ್ ಆಗಿ ಕಳೆಯಬೇಕಾದರೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಲೈಫ್ ಸ್ಟೈಲ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ಇಡೀ ದಿನವನ್ನು ಉತ್ತಮವಾಗಿ ಕಳೆಯಬಹುದು.  ಸ್ಟ್ರೆಸ್ ಯಿಲ್ಲದೆ ದಿನ ಕಳೆಯುವುದು ಎಂದರೆ ಉತ್ತಮ ಆರೋಗ್ಯದತ್ತ ಹೆಜ್ಜೆ ಇಡುವುದು ಎಂದು ಕೂಡಾ . ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ನಾವು ಸಾಮಾನ್ಯವಾಗಿ ಮಾಡುವ ಕೆಲವು ತಪ್ಪುಗಳನ್ನು ಸುಧಾರಿಸಿಕೊಂಡರೆ ನಿಮ್ಮ ಇಡೀ ದಿನ ಲವಲವಿಕೆಯಿಂದ ಕಳೆದುಹೋಗುತ್ತದೆ. 

1. ನಮ್ಮಲ್ಲಿ ಹೆಚ್ಚಿನವರಿಗೆ ಬೆಳಿಗ್ಗೆ ಬೇಗ ಎದ್ದೇಳುವುದೆ ಓದುದೊಡ್ಡ ಟಾಸ್ಕ್ ಆಗಿರುತ್ತದೆ. ಅದಕ್ಕಾಗಿಯೇ ಅಲಾರಂಗಳನ್ನು ಬಳಸುತ್ತೇವೆ. ಆದರೆ ಅಲರಾಂ ಅದೆಷ್ಟು ಹೊದೆದುಕೊಲ್ಲುತ್ತಿದ್ದರು ಮತೆ ಮತ್ತೆ ಅದನ್ನ ಸ್ನೂಜ್ ಮಾಡಿ ಹಾಗೇ ನಿದ್ದೆಗೆ ಜಾರುವವರ ಸಂಖ್ಯೆಯೂ ಬಹಳಷ್ಟಿದೆ. ಹೀಗೆ ಬೆಳೆಗ್ಗೆ ಏಳುವುದೇ ತಡವಾದರೆ ಎಲ್ಲಾ ಕೆಲಸವೂ ತಡವಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿದಿಲ್ಲ ಎಂದರೆ ಮತ್ತೆ ಟೆನ್ಶನ್ ಶುರುವಾಗುತ್ತದೆ.   

2. ಬೆಳಿಗ್ಗೆ ಎದ್ದ ಕೂಡಲೇ ಸ್ಮಾರ್ಟ್‌ಫೋನ್ ಕೈಗೆ ತೆಗೆದುಕೊಳ್ಳುವ ಅಭ್ಯಾಸವನ್ನು ಮೊದಲು ಬಿಡಬೇಕು. ಬೆಳಿಗ್ಗೆ ಎದ್ದ ಕೂಡಲೇ ಫೋನ್ ನೋಡಲು ಶುರು ಮಾಡಿದರೆ ನೆಗೆಟಿವ್ ಸುದ್ದಿಗಳು ಕಣ್ಣು ಕಿವಿಗೆ ಬೀಳುತ್ತದೆ. ಅಲ್ಲಿಗೆ ದಿನದ ಆರಂಭವೇ ನಕಾರಾತ್ಮಕತೆಯಿಂದ ಆರಂಭವಾದಂತಾಗುತ್ತದೆ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುವ ಅಭ್ಯಾಸ ಮೊದಲು ಬಿಡಿ. 

3. ನೀವು ನೆಗೆಟಿವ್ ಎನರ್ಜಿಯನ್ನು ತಪ್ಪಿಸಬೇಕಾದರೆ, ಎದ್ದ ಕೂಡಲೇ ಹಾಸಿಗೆಯನ್ನು ಸರಿಮಾಡಿಕೊಳ್ಳಿ. ಅಲ್ಲದೆ ಹಾಸಿಗೆ ಮೇಲೆ ಬಿದ್ದಿರುವ ಬೇಡದ ವಸ್ತುಗಳನ್ನು ತೆಗೆದು ಹಾಕಿ.

4. ನಿಮ್ಮ ದಿನವನ್ನು ಚಹಾ ಅಥವಾ ಕಾಫಿ ಗಳೊಂದಿಗೆ ಪ್ರಾರಂಭಿಸಬೇಡಿ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಆಸಿಡಿಟಿಯಂಥಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೆಳೆಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಇದು ನಿಮ್ಮ ಆರೋಗ್ಯಕ್ಕೆ ಬಹಳ ಸಹಾಯವಾಗುತ್ತದೆ.   

5. ಇನ್ನು ಮೊಬೈಲ್ ನಂತಯೇ ಬೆಳಿಗ್ಗೆ ಎದ್ದ ಕೂಡಲೇ ಟಿವಿ ನೋಡುವ ಬದಲು ಉತ್ತಮ ಸಂಗೀತವನ್ನು ಕೇಳಿ. ಯೋಗ / ಧ್ಯಾನ ಮಾಡಿ. ಇದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ ಮತ್ತು ದಿನವಿಡೀ ತುಂಬಾ ಆಕ್ಟಿವ್ ಆಗಿಡುತ್ತದೆ. 

 

No comments:

Post a Comment