Friday 20 August 2021

ಶೀಘ್ರದಲ್ಲೇ ರಾಜ್ಯದಲ್ಲಿ 'ಪ್ರಾಥಮಿಕ ಶಾಲೆ' ಆರಂಭ : ವಿದ್ಯಾರ್ಥಿಗಳಿಗೆ 'ಕೋವಿಡ್ ನೆಗೇಟಿವ್ ವರದಿ' ಕಡ್ಡಾಯವಲ್ಲ : ಶಿಕ್ಷಣ ಸಚಿವ ನಾಗೇಶ್

 

ಬೆಂಗಳೂರು: ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳ ಆರಂಭದ ಕುರಿತು ಶೀಘ್ರವೇ ತೀರ್ಮಾನ ಕೈಗೊಳ ಲಾಗುತ್ತದೆವಿದ್ಯಾರ್ಥಿಗಳಿಗೆ ಕೋವಿಡ್ ನೆಗೇಟಿವ್ ವರದಿ ಕಡ್ಡಾಯವಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಸ್ಯಾನಿಟೈಸ್ ಮಾಡಿದ ನಂತರ ಮತ್ತೆ ತರಗತಿಗಳನ್ನು ಆರಂಭಿಸಲಾಗುವುದು, ಶಾಲೆ ಆರಂಭ ಮಾಡುವುದರಲ್ಲಿ ರಿಸ್ಕ್ ಇದೆ , ತಜ್ಞರ ಅಭಿಪ್ರಾಯದಂತೆ ಶಾಲೆಗಳನ್ನು ಆರಂಭ ಮಾಡಲಾಗುತ್ತದೆ ಎಂದರು.

ಕೊರೊನಾ ಮಕ್ಕಳ ಮೇಲೆ ಅಂತಹ ಪರಿಣಾಮ ಬೀರಲ್ಲ, ಒಂದರಿಂದ ಎಂಟನೇ ತರಗತಿಯನ್ನು ಕೂಡ ಶೀಘ್ರದಲ್ಲೇ ಆರಂಭಿಸಲಾಗುವುದು, ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು, ಕೊರೊನಾ ಪಾಸಿಟಿವ್ ದರ ಶೇ. 2 ಕ್ಕಿಂತ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭ ಮಾಡುವುದಿಲ್ಲ ಎಂದು ಹೇಳಿದರು.

ಸೋಮವಾರದಿಂದ 9,10 ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭವಾಗಲಿದೆ, ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳ ಆರಂಭದ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

No comments:

Post a Comment