Saturday 21 August 2021

ಸೆ.27 ಮತ್ತು 29ರ SSLC ಪೂರಕ ಪರೀಕ್ಷೆಯ ಕುರಿತಂತೆ: ಬಹುಮುಖ್ಯ ಮಾಹಿತಿ

 

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಡೆದಂತ ಎಸ್‌ಎಸ್‌ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿತ್ತು. ಈ ಬಳಿಕ ಸೆಪ್ಟೆಂಬರ್ 27 ಮತ್ತು 29ರಂದು ಪೂರಕ ಪರೀಕ್ಷೆಯನ್ನು ನಿಗದಿ ಪಡಿಸಲಾಗಿದೆ. ಈ ಪರೀಕ್ಷೆಗೆ ನೋಂದಾಯಿಸಿರುವ ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಶಗಳನ್ನು ಆನ್ ಲೈನ್ ನಲ್ಲಿ ನಮೂದಿಸುವ ಕುರಿತಂತೆ ಪ್ರೌಢ ಶಾಲಾ ಮುಖ್ಯಸ್ಥರಿಗೆ ಮಹತ್ವದ ಸೂಚನೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನೀಡಿದೆ.

ಈ ಕುರಿತಂತೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಮಂಗಲ.ವಿ ಅವರು ರಾಜ್ಯದ ಎಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರ್ಕಾರಿ, ಅನುದಾನಿತ ಹಾಗೂ ಮಾನ್ಯತೆ ಪಡೆದಿರುವ ಖಾಸಗಿ ಅನುದಾನರಹಿತ ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದು, ಕೋವಿಡ್-19 ಮತ್ತು ಇತರೆ ಅನಾರೋಗ್ಯದ ಕಾರಣದಿಂದ ಜುಲೈ.2021ರ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ನೋಂದಾಯಿಸಿದ ಶಾಲಾ ವಿದ್ಯಾರ್ಥಿಗಳಿಗೆ ( CCERF ) ದಿನಾಂಕ 19-08-2021 ರಿಂದ ಮಂಡಳಿಯ ಶಾಲಾ ಲಾಗಿನ್ ನಲ್ಲಿ 2021ರ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.

ಈ ರೀತಿ ನೋಂದಾಯಿಸಲಾಗುವ CCERF ವಿದ್ಯಾರ್ಥಿಗಳಿಗೆ ಪರೀಕ್ಷಾ ನೋಂದಣಿ ಕಾರ್ಯ ಮುಗಿದ ನಂತ್ರ ಮಂಡಳಿಯ ಶಾಲಾ ಲಾಗಿನ್ ನಲ್ಲಿ ಆಂತರಿಕ ಅಂಕಗಳನ್ನು ನಮೂದು ಮಾಡಲು ಅವಕಾಶ ನೀಡಲಾಗುವುದು ಎಂಬುದಾಗಿ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.



 

No comments:

Post a Comment