Wednesday 16 June 2021

ಕರ್ನಾಟಕದಲ್ಲಿ 3ನೇ ಕೊರೋನಾ ಅಲೆಯ ಬಗ್ಗೆ ತಜ್ಞರಿಂದ ಮಹತ್ವದ ಸೂಚನೆ!!

CORONA NEWS ಬೆಂಗಳೂರು : ಕೊರೋನಾ 2ನೇ ಅಲೆಯು ಕಡಿಮೆಯಾಗುತ್ತಿದೆ ಎನ್ನುವಾಗಲೇಕೊರೋನಾ 3ನೇ ಅಲೆ ರಾಜ್ಯದಲ್ಲಿ ಆರಂಭಗೊಳ್ಳಲಿದೆ. 

ಕೊರೋನಾ ಮೂರನೇ ಅಲೆಯಲ್ಲಿ ಸಾವು ನೋವುಗಳು ಹೆಚ್ಚಾಗಲಿದ್ದುಅದನ್ನು ಎದುರಿಸೋದಕ್ಕೆ ಸೂಕ್ತ ಐಸಿಯು ಬೆಡ್ ವ್ಯವಸ್ಥೆ ಮಾಡಿಕೊಳ್ಳುವಂತೆ ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡ ಕಾರಣದಿಂದಾಗಿ ಜೂನ್.14ರಿಂದ 19 ಜಿಲ್ಲೆಗಳಲ್ಲಿ ಅನ್ ಲಾಕ್ ನಿಯಮವನ್ನು ಸರ್ಕಾರ ಜಾರಿಗೊಳಿಸಿದೆ. ಇನ್ನುಳಿದಂತೆ 11 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ದರ ಕಡಿಮೆಯಾಗದ ಕಾರಣದಿಂದಾಗಿಲಾಕ್ ಡೌನ್ ನಿಯಮಗಳನ್ನು ಜೂನ್.21ರವರೆಗೆ ಮುಂದುವರೆಸಲಾಗಿದೆ.

ಈಗಾಗಲೇ ತಜ್ಞರು ಕೊರೋನಾ 3ನೇ ಅಲೆಯ ಸೂಚನೆ ಕೂಡ ನೀಡಲಾಗಿದ್ದುಈ ಸಂದರ್ಭದಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ರಾಜ್ಯದ ಜಿಲ್ಲಾಸ್ಪತ್ರೆಗಳು ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿಯೂ ಮಕ್ಕಳ ಆರೈಕೆಗಾಗಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳುವಂತೆಯೂ ಸರ್ಕಾರ ಸೂಚನೆ ನೀಡಿದೆ.

ಇದರ ನಡುವೆ ರಾಜ್ಯದಲ್ಲಿ ಕೊರೋನಾ 3ನೇ ಅಲೆ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಶುರುವಾಗಲಿದೆ. ಇದಕ್ಕಾಗಿ ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ತಜ್ಞರು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಈಗ ಕೇವಲ 1,300 ಐಸಿಯು ಬೆಡ್ ಗಳ ವ್ಯವಸ್ಥೆ ರಾಜ್ಯದಲ್ಲಿ ಇದೆ. ಇವುಗಳನ್ನು 4,500ಕ್ಕೆ ಹೆಚ್ಚಿಸುವಂತೆಯೂ ಸೂಚನೆ ನೀಡಿದೆ.

ಇನ್ನೂ ಕೊರೋನಾ 2ನೇ ಅಲೆಗಿಂತ 3ನೇ ಅಲೆಯಲ್ಲಿ ಹೆಚ್ಚು ಸಾವು-ನೋವುಗಳು ಉಂಟಾಗಲಿವೆ. ಇದನ್ನು ತಡೆಯೋದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೂಡ ತಜ್ಞರ ಸಲಹೆ-ಸೂಚನೆಗಳಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸಂಬಂಧ ಪಟ್ಟಂತ ಅಧಿಕಾರಿಗಳಿಗೆ ಸೂಚಿಸಿದೆ.


No comments:

Post a Comment