ಸುದ್ದಿಒನ್ ನ್ಯೂಸ್ ಡೆಸ್ಕ್
ಇಂಡೋನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದಲ್ಲಿ ಫುಟ್‌ಬಾಲ್ ಪಂದ್ಯದ ವೇಳೆ ಶನಿವಾರ ರಾತ್ರಿಯಿಡೀ ನಡೆದ ಗಲಭೆಯಲ್ಲಿ ಕಾಲ್ತುಳಿತಕ್ಕೆ ಕನಿಷ್ಠ 127 ಜನರು ಸಾವನ್ನಪ್ಪಿದ್ದಾರೆ ಮತ್ತು 180 ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪೂರ್ವ ಜಾವಾದ ಮಲಾಂಗ್ ರೀಜೆನ್ಸಿಯಲ್ಲಿ ನಡೆದ ಪಂದ್ಯದಲ್ಲಿ ಜಾವಾನೀಸ್ ಕ್ಲಬ್ ಅರೆಮಾ ಮತ್ತು ಪರ್ಸೆಬಯಾ ಸುರಬಯಾ ಅವರ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ವಿಡಿಯೋ ನೋಡಿ…
NEW – Over 100 people were killed tonight in riots that broke out at a football match in Indonesia.pic.twitter.com/hGZEwQyHmL
— Disclose.tv (@disclosetv) October 1, 2022
ಅರೆಮಾ ತಂಡವು 3-2 ಅಂತರದಿಂದ ಪರ್ಸೆಬಯಾ ಸುರಬಯಾ ವಿರುದ್ಧ ಸೋಲನ್ನಪ್ಪಿದ ಕಾರಣದಿಂದಾಗಿ ರೊಚ್ಚಿಗೆದ್ದ ಸಾವಿರಾರು ಅಭಿಮಾನಿಗಳು ಏಕಾಏಕಿ ಮೈದಾನಕ್ಕೆ ಧಾವಿಸಿ ಪರಸ್ಪರ ಕಾದಾಟಕ್ಕೆ ಮುಂದಾದರು. ಅಭಿಮಾನಿಗಳನ್ನು ವೀಕ್ಷಕರ ಗ್ಯಾಲರಿಗೆ ಮರಳಲು ಮನವೊಲಿಸಲು ಪ್ರಯತ್ನಿಸಿದರು. ಅಷ್ಟೊತ್ತಿಗಾಗಲೇ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಈ ವೇಳೆ
ಉಂಟಾದ ನೂಕು ನುಗ್ಗಲಿನಿಂದ ಮತ್ತು ಕಾಲ್ತುಳಿತದಿಂದ ಉಸಿರುಗಟ್ಟಿ ಒಟ್ಟು 129 ಜನರು ಸಾವನ್ನಪ್ಪಿದರು. ಅವರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು. ಮೂವತ್ತನಾಲ್ಕು ಜನರು ಕ್ರೀಡಾಂಗಣದೊಳಗೆ ಸಾವನ್ನಪ್ಪಿದರು ಮತ್ತು ಉಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ವರದಿಯಾಗಿದೆ.
The post ಫುಟ್‌ಬಾಲ್ ಪಂದ್ಯದ ವೇಳೆ ಕಾಲ್ತುಳಿತ : 127 ಮಂದಿ ಸಾವು : ವಿಡಿಯೋ ನೋಡಿ… first appeared on Kannada News | suddione.
source https://suddione.com/at-least-129-dead-after-riot-at-indonesia-football-match/
No comments:
Post a Comment