Wednesday 18 August 2021

ಕೊರೋನಾದಿಂದ ಗುಣಮುಖರಾದವರಿಗೆ 'TB ಟೆಸ್ಟ್' ಗೆ ಒಳಗಾಗುವಂತೆ ರಾಜ್ಯ ಸರ್ಕಾರ ಒತ್ತಾಯ!

ಬೆಂಗಳೂರು : ಕೋವಿಡ್ -19 ನಿಂದ ಚೇತರಿಸಿಕೊಂಡವರಲ್ಲಿ ಕ್ಷಯರೋಗ (TB) ರೋಗವು ಹೆಚ್ಚಾಗುತ್ತಿರುವುದರಿಂದ ಜನರಿಗೆ ಸ್ವಯಂಪ್ರೇರಣೆಯಿಂದ ಕ್ಷಯರೋಗ (ಟಿಬಿ) ಟೆಸ್ಟ್ ಮಾಡಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.

ಇದಕ್ಕಾಗಿ ರಾಜ್ಯ ಸರ್ಕಾರವು 'ಸ್ಪೆಷಲ್ ಟಿಬಿ ಟೆಸ್ಟ್ ಡ್ರೈವ್ಅನ್ನು ಸಹ ಪ್ರಾರಂಭಿಸಿದೆ, ಇದು ಆಗಸ್ಟ್ 31 ರವರೆಗೆ ಜಾರಿ ಇರಲಿದೆ.

ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಕೋವಿಡ್ -19 ರಿಂದ ಚೇತರಿಸಿಕೊಂಡವರು ಸ್ವಯಂಪ್ರೇರಣೆಯಿಂದ ಕ್ಷಯರೋಗ ಟೆಸ್ಟ್ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿ ರೋಗ ಪತ್ತೆಯಾದರೆ ಚಿಕಿತ್ಸೆ ಸುಲಭವಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ 28 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್ -19 ಮತ್ತು ಟಿಬಿ ಎರಡೂ ಶ್ವಾಸಕೋಶಗಳಿಗೆ ಸೋಂಕು ತಗುಲಿರುವ ಕಾರಣ ನಾವು ಈ ವಿಶೇಷ ಡ್ರೈವ್ ಅನ್ನು ಪ್ರಾರಂಭಿಸಿದ್ದೇವೆ, ಇದು ಕೊರೋನಾದಿಂದ ಚೇತರಿಸಿಕೊಂಡ ಜನರಲ್ಲಿ ಕ್ಷಯರೋಗವನ್ನು ಮೊದಲೇ ಪತ್ತೆ ಮಾಡುತ್ತದೆ ಹೇಳಿದ್ದಾರೆ.

ಕೋವಿಡ್ -19 ರಿಂದ ಚೇತರಿಸಿಕೊಂಡ ಎಲ್ಲ ರೋಗಿಗಳಿಗೆ ಟಿಬಿ(Tuberculosis) ಬರುತ್ತದೆ ಎಂದಲ್ಲ, ಆದರೆ ಕೋವಿಡ್ -19 ಮತ್ತು ಟಿಬಿ ಎರಡೂ ಪ್ರಾಥಮಿಕವಾಗಿ ಶ್ವಾಸಕೋಶಗಳಿಗೆ ಸೋಂಕು ತಗುಲುವುದರಿಂದ, ಚೇತರಿಸಿಕೊಂಡ ರೋಗಿಗಳು ಸ್ವಯಂಪ್ರೇರಣೆಯಿಂದ ಟಿಬಿ ಟೆಸ್ಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ ಹೇಳಿದರು.

ಕೊರೋನಾದಿಂದಾಗಿ ರಾಜ್ಯದಲ್ಲಿ ಕ್ಷಯರೋಗ ಪತ್ತೆ ಮಾಡಲಾಗಿದೆ. 2017 ರಿಂದ 75 ಲಕ್ಷ ಶಂಕಿತ ಪ್ರಕರಣಗಳನ್ನು ಗುರುತಿಸಲಾಗಿದೆ ಮತ್ತು ಅವುಗಳಲ್ಲಿ ಶೇ.88 ಪರೀಕ್ಷೆ ಮಾಡಲಾಗಿದೆ ಅವರಲ್ಲಿ ಸುಮಾರು 3.9% ಜನರು ಟಿಬಿಯಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕೊರೋನಾ ಮೂರನೆ ಅಲೆ ಬಗ್ಗೆ ಹೆಚ್ಚುತ್ತಿರುವ ಆತಂಕಗಳ ನಡುವೆ 'ಆರೋಗ್ಯ ನಂದನ' ಎಂಬ ಹೊಸ ಯೋಜನೆ ಒಂದಕ್ಕೆ ಚಾಲನೆ ನೀಡಿದ ಮಾತನಾಡಿದ ಸಚಿವ ಸುಧಾಕರ್, ಈ ಯೋಜನೆಯ ಅಡಿಯಲ್ಲಿ, ಕಡಿಮೆ ರೋಗನಿರೋಧಕ ಶಕ್ತಿ ಮತ್ತು ಇತರ ಸಹವರ್ತಿಗಳನ್ನು ಹೊಂದಿರುವ ಮಕ್ಕಳನ್ನು ಗುರುತಿಸಲಾಗುವುದು ಮತ್ತು ಅವರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೌಷ್ಟಿಕ ಆಹಾರ ಮತ್ತು ಪೂರಕಗಳನ್ನು ನೀಡಲಾಗುವುದು. ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

 

No comments:

Post a Comment