Tuesday 24 August 2021

ದ್ರಾಕ್ಷಿ ತಿನ್ನುವುದರಿಂದಾಗುವ ಏಳು ಆರೋಗ್ಯಕರ ಲಾಭಗಳು.


 ಈ ಹೊತ್ತಿನಲ್ಲಿ ದೇಹಕ್ಕೆ ಹೆಚ್ಚಿಗೆ ವಿಟಮಿನ್, ಕ್ಯಾಲ್ಸಿಯಂ ಹಾಗೂ ಗ್ಲುಕೋಸ್ ಅಗತ್ಯವಿರುತ್ತದೆ ಒಂದು ಕಪ್ ದ್ರಾಕ್ಷಿ  ತಿನ್ನುವುದು ಉತ್ತಮ ಎಂದು ತಜ್ಞರು ಸಲಹೆ ಮಾಡುತ್ತಾರೆ. ಒಂದು ಕಪ್ ದ್ರಾಕ್ಷಿಯಿಂದ ಏನೇನು ಲಾಭ  ಇದೆ ತಿಳಿದುಕೊಳ್ಳೋಣ. 

1.  ಇಮ್ಯೂನಿಟಿ ಬೂಸ್ಟರ್ :
ದ್ರಾಕ್ಷಿ ಉತ್ತಮ ಇಮ್ಯೂನಿಟಿ ಬೂಸ್ಟರ್.ಇದನ್ನು ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಂತಹ ಸತ್ವ ದ್ರಾಕ್ಷಿಯಲ್ಲಿ ಅಡಗಿದೆ. ಹಾಗಾಗಿ ದ್ರಾಕ್ಷಿ ಸೇವನೆ ಅತ್ಯಂತ ಮುಖ್ಯ.

2. ಬಿಪಿ ನಿಯಂತ್ರಿಸುತ್ತದೆ :
ಶರೀರದಲ್ಲಿ ಪೊಟ್ಯಾಶಿಯಂ ಸತ್ವದ ಕೊರತೆ ಉಂಟಾದಾಗ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತದೆ. ದ್ರಾಕ್ಷಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಶಿಯಂ ಸಿಗುತ್ತದೆ. ಹಾಗಾಗಿ, ಬಿಪಿ ಇರುವವರು ವಾರಕ್ಕೆ ಕನಿಷ್ಠ ಮೂರು ಸಲ ದ್ರಾಕ್ಷಿ ತಿಂದರೆ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. 

3. ದೇಹದಲ್ಲಿ ರಕ್ತ ಪ್ರಮಾಣ ಹೆಚ್ಚಿಸುತ್ತದೆ:
ಏಕೆಂದರೆ ದ್ರಾಕ್ಷಿಯಲ್ಲಿ  ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಕ್ಲೋರಾಯ್ಡ್, ಪೊಟ್ಯಾಸಿಯಮ್ ಸಲ್ಫೇಟ್, ಮೆಗ್ನೀಸಿಯಮ್ ಮತ್ತು ಅಲ್ಯೂಮಿನ್ ಮುಂತಾದ ಪ್ರಮುಖ ಅಂಶಗಳು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತವೆ.  ಇಂಥಹ ಸತ್ವಗಳಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. 

4. ದಾಹ ಕಡಿಮೆ ಮಾಡುತ್ತದೆ :
ದ್ರಾಕ್ಷಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಅಂಶ ಕೂಡಾ ಇರುತ್ತದೆ.  ಇದರೊಂದಿಗೆ ಅಗತ್ಯ ವಿಟಮಿನ್ ಗಳು ಕೂಡಾ ಸಮೃದ್ದವಾಗಿರುತ್ತದೆ. ಹಾಗಾಗಿ, ತಕ್ಷಣದ ದಾಹ ನಿವಾರಣೆಯಲ್ಲೂ ದ್ರಾಕ್ಷಿ ಉತ್ತಮ ಕಾರ್ಯ ನಿರ್ವಹಿಸುತ್ತದೆ. ಮಾಣ ಹೆಚ್ಚಾಗುತ್ತದೆ. 

5. ಹೃದ್ರೋಗಕ್ಕೆ ರಕ್ಷಾ ಕವಚ:
ದ್ರಾಕ್ಷಿಯಲ್ಲಿರುವ ಜೀವ ಸತ್ವಗಳು ದೇಹದಲ್ಲಿ ರಕ್ತ ಸಂಚಾರವನ್ನು  ಸರಾಗಗೊಳಿಸುತ್ತದೆ. ಬಿಪಿ ನಿಯಂತ್ರಿಸುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.  ಇವು  ಹ್ರದ್ರೋಗಕ್ಕೆ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ. 

6. ಸ್ತನ ಕ್ಯಾನ್ಸರ್ ತಡೆಯಬಲ್ಲದು:
ಇತ್ತೀಚಿಗೆ ನಡೆದ ಒಂದು ವೈದ್ಯಕೀಯ ಸಂಶೋಧನೆಯ ಪ್ರಕಾರ ದ್ರಾಕ್ಷಿಯಲ್ಲಿ ಸ್ತನ ಕ್ಯಾನ್ಸರ್ ತಡೆಯಬಲ್ಲ ಗುಣ ವಿಶೇಷ  ಇದೆ. ಇದು ಸ್ತನ ಕ್ಯಾನ್ಸರ ನ್ನು ಬಹುತೇಕ ಮಟ್ಟಿಗೆ ತಡೆಯಬಲ್ಲದು ಎಂದು ಸಂಶೋಧನೆ  ಹೇಳಿದೆ.

7. ಗ್ಯಾಸ್ ಮತ್ತು ಆಸಿಡಿಟಿಗೆ ರಾಮಬಾಣ:
 ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಗ್ಯಾಸ್ ಮತ್ತು ಅಸಿಡಿಟಿ ವಿರುದ್ದ ದ್ರಾಕ್ಷಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಶರೀರದ ತೂಕ ಹೆಚ್ಚಿಸುವಲ್ಲಿ ಆಸಕ್ತಿ ಉಳ್ಳವರಿಗೆ ದ್ರಾಕ್ಷಿ ವರದಾನವಾಗಿದೆ. 

No comments:

Post a Comment