Wednesday 25 August 2021

ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಚರಂಡಿಯಲ್ಲಿ ಅಡಗಿ ಕುಳಿತು ವಿಮಾನದ ನಿರೀಕ್ಷೆಯಲ್ಲಿದ್ದಾರೆ ಜನ

 

ಅಫ್ಘಾನಿಸ್ತಾನವು ತಾಲಿಬಾನ್ ಉಗ್ರರ ಕೈವಶವಾದ ಕೂಡಲೇ ದೇಶ ತೊರೆಯುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ.

ಇಸ್ಲಾಂ ಧರ್ಮದ ಹೆಸರಿನಲ್ಲಿ ತಾಲಿಬಾನಿಗಳು ನಡೆಸುವ ಕ್ರೌರ್ಯ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಿಂದ ಭಯಭೀತರಾದ ಆಫ್ಘನ್‍ನಲ್ಲಿನ ಕುಟುಂಬಗಳು, ರಾಷ್ಟ್ರ ತೊರೆಯಲು ಇರುವ ಏಕೈಕ ಮಾರ್ಗವಾದ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಿನ ಚರಂಡಿಗಳಲ್ಲಿ ದಿನಗಟ್ಟಲೆ ಕಾದುನಿಲ್ಲುತ್ತಿದ್ದಾರೆ.

ಬ್ರಿಟನ್, ಭಾರತ, ಯುರೋಪ್ ರಾಷ್ಟ್ರಗಳ ಯಾವುದಾದರೂ ರಕ್ಷಣಾ ವಿಮಾನವು ತನ್ನ ನಾಗರಿಕ ತೆರವು ಕಾರ್ಯಾಚರಣೆ ವೇಳೆ, ತಮ್ಮನ್ನು ಕೂಡ ಒಯ್ಯಬಹುದು ಎಂಬ ಆಶಾಕಿರಣ ಅವರಲ್ಲಿದೆ.

ಆ. 31ರೊಳಗೆ ದೇಶ ತೊರೆಯಬೇಕಿರುವ ಅನಿವಾರ್ಯತೆ ಅವರಿಗಿದೆ. ಇಲ್ಲವಾದರೆ ತಾಲಿಬಾನಿಗಳ ನರಕ 'ಅಫ್ಘಾನಿಸ್ತಾನ'ದಲ್ಲೇ ಹಿಂಸೆ ಅನುಭವಿಸಿಕೊಂಡು ಬದುಕಬೇಕಾಗುತ್ತದೆ. ಸದ್ಯದ ಆಫ್ಘನ್ ಪರಿಸ್ಥಿತಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಸೇನಾಪಡೆ ಹಿಂದಕ್ಕೆ ಕರೆಸಿಕೊಳ್ಳುವ ದುಡುಕಿನ ನಿರ್ಧಾರವೇ ಕಾರಣ ಎಂದು ದೂರಲಾಗುತ್ತಿದೆ.

 

No comments:

Post a Comment