Tuesday 24 August 2021

ಜನ ಸೇವೆಯ ಮೂಲಕ ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಬೇಕು: ರಘು ಚಂದನ್

ನಾಯಕನಹಟ್ಟಿ: ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಆರೋಗ್ಯ ಸ್ವಯಂಸೇವಕರ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರಘು ಚಂದನ್ ಮಾತನಾಡುತ್ತಾ, ಜನಸೇವೆಯೇ ಮೂಲಕ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು ಎಂದು ಹೇಳಿದ್ದಾರೆ. 

ದೇಶವು ಎರಡು ಕೊರೋನಾ ಅಲೆಗಳನ್ನು ಎದುರಿಸಿದೆ. ಪ್ರಪಂಚದ ಇತರೆ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಕೇಂದ್ರ ಸರ್ಕಾರ ಲಾಕ್ ಡೌನ್, ಜನತಾ ಕರ್ಫ್ಯೂ, ಸಂಚಾರ ನಿರ್ಬಂಧ, ಸೇರಿದಂತೆ ಅತ್ಯಂತ ಕಠಿಣ ನಿರ್ಧಾರ ಕೈಗೊಂಡಿದ್ದರಿಂದ. ಸಾವಿನ ಪ್ರಮಾಣ ಹಾಗೂ ರೋಗ ಹರಡುವಿಕೆ ಕಡಿಮೆಯಾಗಿದೆ. ಆರೋಗ್ಯ ಸುರಕ್ಷತೆ, ಆರ್ಥಿಕ ಸುರಕ್ಷತೆ ಹಾಗೂ ಸಾಮಾಜಿಕ ಸುರಕ್ಷತೆಗೆ. ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಉಚಿತವಾದ ಪಡಿತರ, ವ್ಯಾಕ್ಸಿನ್, ಪರಿಹಾರ ನೀಡುವಿಕೆ ಯಿಂದ. ಜನರು ಕಷ್ಟಕ್ಕೆ ಒಳಗಾಗದಂತೆ ತಡೆಯಲಾಗಿದೆ.

1918ರಲ್ಲಿ ದೇಶವನ್ನು ಕಾಲರಾ ರೋಗ ಕಾಡಿತ್ತು. ಸುಮಾರು ಆರರಿಂದ ಏಳು ಕೋಟಿ ಜನರು ಮೃತಪಟ್ಟಿದ್ದರು. ಆದರೆ ಕೊರೋನಾದ ಎರಡೂ ಅಲೆಗಳಲ್ಲಿ ದೇಶಾದ್ಯಂತ ಸರಿಸುಮಾರು 4.7 ಲಕ್ಷ ಹಾಗೂ ರಾಜ್ಯದಲ್ಲಿ 36,000 ಜನರು ಸಾವಿಗೀಡಾಗಿದ್ದಾರೆ. ಅತಿ ಹೆಚ್ಚಿನ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ಹೆಚ್ಚಾಗದಂತೆ ತಡೆಯುವಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಇಂತಹ ಸಂದೇಶಗಳನ್ನು, ಕಾರ್ಯಕರ್ತರು ಜನರಿಗೆ ತಲುಪಿಸಬೇಕು. ಇದೀಗ ಯಾವುದೇ ಚುನಾವಣೆ ಗಳಿಲ್ಲ ಹೀಗಿದ್ದರೂ ಪಕ್ಷದ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಆರೋಗ್ಯ ಸಮಸ್ಯೆಗಳನ್ನು ಅರಿಯಬೇಕು. ಜೊತೆಗೆ ಲಸಿಕೆ ಪಡೆಯುವಂತೆ ಮನವೊಲಿಸಬೇಕು ಎಂದರು.

ಪಕ್ಷದ ಮುಖಂಡ ಜಯ ಪಾಲಯ್ಯ ಮಾತನಾಡಿ ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ. ಮುಂದಿನ ವಾರದಲ್ಲಿ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ಜರುಗಲಿದೆ. ಪ್ರತಿ ಬೂತ್ ಮುಖಂಡ ಮನೆಯ ಮುಂದೆ ಬೋರ್ಡ್ ಹಾಗೂ ಪಕ್ಷದ ಧ್ವಜ ಅಳವಡಿಸಿಕೊಳ್ಳಬೇಕು. ಕಾರ್ಯಕರ್ತರು ರಾಜಕೀಯ ಸಂಘಟನೆ ಜೊತೆಗೆ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ರಾಮರೆಡ್ಡಿ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಶಿವಣ್ಣ. ಪಿ. ಮಾಜಿ ಅಧ್ಯಕ್ಷ ಎಂ ವೈ ಟಿ ಸ್ವಾಮಿ.  ಡಿ ಆರ್. ಬಸವರಾಜ್. ಗೋವಿಂದ್. ಮಹಾಂತಣ್ಣ. ತ್ರಿಶೂಲ್. ಪರಮೇಶ್ವರಪ್ಪ.  ಮೋಹನ್ . ಮಲ್ಲೇಶ್. ಕೆ.ಟಿ. ಸ್ವಾಮಿ ಮತ್ತಿತರರಿದ್ದರು.

No comments:

Post a Comment