Friday 20 August 2021

ಐಪಿಎಲ್ ಸೆಕೆಂಡ್ ಸೀಸನ್ನಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ?

 


ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಸೆಪ್ಟಂಬರ್ 19ರಂದು ಯುಎಇನಲ್ಲಿ ಆರಂಭವಾಗಲಿದೆ. ಇದರಲ್ಲಿ ಪ್ರಮುಖವಾಗಿ ಆರ್​​​ಸಿಬಿ ತಂಡವು ಅಗ್ರ ಆಟಗಾರರನ್ನೊಳಗೊಂಡಿದ್ದು, ಹೆಚ್ಚು ಅಭಿಮಾನಿಗಳಿದ್ದಾರೆ. ಇದೀಗ ಆಸ್ಟ್ರೇಲಿಯಾ ತಂಡದ ವೇಗಿ ಕೇನ್‌ ರಿಚರ್ಡ್‌ಸನ್‌ ಆರ್​ಸಿಬಿ ತಂಡಕ್ಕೆ ಅಲಭ್ಯರಾಗಿದ್ದಾರೆ ಮತ್ತು ಸ್ಪಿನ್ನರ್‌ ಆಡಂ ಝಾಂಪ ತಂಡಕ್ಕೆ ಮರಳುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಿಲ್ಲ.

ಸೆಪ್ಟಂಬರ್ 19ರಿಂದ ಆರಂಭವಾಗಲಿರುವ 2021ರ ಐಪಿಎಲ್‌ ಟೂರ್ನಿಯ ಎರಡನೇ ಅವಧಿಯಲ್ಲಿ ಕೊಹ್ಲಿ ನಾಯಕತ್ವದ ಆರ್‌ಸಿಬಿಯಲ್ಲಿ ಭಾಗವಹಿಸಲು ನಿರಾಕರಿಸಿರುವ ಕೇನ್‌ ರಿಚರ್ಡ್‌ಸನ್‌, ಮನೆಯಲ್ಲಿಯೇ ಉಳಿಯುವುದಾಗಿ ತಿಳಿಸಿದ್ದಾರೆಂದು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಮತ್ತೊಂದಡೆ ಆಡಂ ಝಾಂಪ ಅವರು ಕೂಡ, ಭಾಗವಹಿಸುವುದು ಕೂಡ ಬಹುತೇಕ ಅನುಮಾನವಾಗಿದೆ.ಕೇನ್‌ ರಿಚರ್ಡ್‌ಸನ್‌ ಅವರನ್ನು 2021ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ 4 ಕೋಟಿ ರೂ. ಗಳಿಗೆ ಖರೀದಿಸಿತ್ತು. ಅವರು ಮೊದಲ ಅವಧಿಯಲ್ಲಿಯೂ ಆರಂಭಿಕ ಕೆಲವೇ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಬಯೋಬಬಲ್‌ ಒಳಗಡೆ ಕೋವಿಡ್‌ ಪ್ರಕರಣಗಳು ಕಾಣಿಸಿಕೊಳ್ಳುವುದಕ್ಕೂ ಮೊದಲೇ, ರಿಚರ್ಡ್‌ಸನ್‌ ಹಾಗೂ ಝಾಂಪ ಟೂರ್ನಿಯಿಂದ ತವರಿಗೆ ವಾಪಸ್‌ ಆಗಿದ್ದರು.

ಇನ್ನುಳಿದಂತೆ ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಟಗಾರರು 2021ರ ಐಪಿಎಲ್‌ ಸೆಕೆಂಡ್‌ ಆಫ್‌ನಲ್ಲಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಡೇವಿಡ್‌ ವಾರ್ನರ್‌, ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಜಾಶ್‌ ಹೇಝಲ್‌ವುಡ್‌ ಸೇರಿದಂತೆ ಹಲವು ಆಟಗಾರರು ಆಯಾ ಫ್ರಾಂಚೈಸಿಗಳಿಗೆ ಲಭ್ಯರಾಗಲಿದ್ದಾರೆ. ಇಂದು ಎಲ್ಲಾ ಫ್ರಾಂಚೈಸಿಗಳಿಗೂ ತಂಡದ ಆಟಗಾರರ ಪಟ್ಟಿಯನ್ನು ಕೇಳಲಾಗಿದೆ. ಬಹುತೇಕ ತಂಡಗಳಲ್ಲಿ ವಿದೇಶಿ ಆಟಗಾರರ ಲಭ್ಯತೆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ.

ಯುಎಇಯಲ್ಲಿ ಮುಂದುವರಿಯಲಿರುವ ಐಪಿಎಲ್‌ ಟೂರ್ನಿಯ ಸೆಕೆಂಡ್‌ ಆಫ್‌ಗೆ ಆರ್‌ಸಿಬಿಯ ಕೇನ್ ರಿಚರ್ಡ್‌ಸನ್‌ ಮಾತ್ರವಲ್ಲದೆ, ಕೆಕೆಆರ್ ತಂಡದ ಸ್ಟಾರ್‌ ವೇಗಿ ಪ್ಯಾಟ್ ಕಮಿನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ವೇಗಿ ಜೇ ರಿಚರ್ಡ್‌ಸನ್‌ ಮತ್ತು ರಿಲೆ ಮೆರೆಡಿತ್ ಕೂಡ ಟೂರ್ನಿಗೆ ಅಲಭ್ಯರಾಗಲಿದ್ದಾರೆ. ಪ್ಯಾಟ್‌ ಕಮಿನ್ಸ್ ದಿನಗಳ ಹಿಂದೆಯೇ ಟೂರ್ನಿಯ ಸೆಕೆಂಡ್‌ ಆಫ್‌ಗೆ ಅಲಭ್ಯರಾಗುತ್ತಿರುವುದಾಗಿ ಹೇಳಿದ್ದರು. 14ನೇ ಆವೃತ್ತಿಯ ಐಪಿಎಲ್​ನಲ್ಲಿ ಸೆಕೆಂಡ್‌ ಆಫ್‌ನಲ್ಲಿ ಆರ್​ಸಿಬಿಯಲ್ಲಿ ಮಾತ್ರವಲ್ಲದೆ, ಇನ್ನುಳಿದ ಟೀಂ ಗಳಲ್ಲಿರುವ ವಿದೇಶಿ ಆಟಗಾರರು ಕಣಕ್ಕೆ ಇಳಿಯುವ ಸಾಧ್ಯತೆಗಳು ಕಡಿಮೆಯಿದೆ.

No comments:

Post a Comment