Saturday, 28 August 2021

ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ 'ಎರಡು ಪೀಸ್ ಬೆಳ್ಳುಳ್ಳಿ' ಮಿಸ್ ಮಾಡದೇ ಸೇವಿಸಿ!

 


ನಿಮ್ಮನ್ನು ಹೃದಯ ರೋಗದಿಂದ ರಕ್ಷಿಸಲು ಬೇಕು ಬೆಳ್ಳುಳ್ಳಿ

·         ಮಲಬದ್ಧತೆ ಸಮಸ್ಯೆ ಅನುಭವಿಸುತ್ತಿರುವವರು ಬೆಳ್ಳುಳ್ಳಿ ಸೇವನೆ

·         ನಿಮ್ಮನ್ನು ಹೃದಯ ರೋಗದಿಂದ ರಕ್ಷಿಸಲು ಬೇಕು ಬೆಳ್ಳುಳ್ಳಿ

·         ನಿಮ್ಮ ಮೆದುಳು ವೇಗವಾಗಿ ಕೆಲಸ ಮಾಡಲು ಬೆಳ್ಳುಳ್ಳಿ ಸೇವಿಸಿ

ನಮ್ಮ ಅಡುಗೆಮನೆಯಲ್ಲಿ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾದ ಅನೇಕ ಔಷಧಿ ಗಿಡಮೂಲಿಕೆಗಳಿವೆ. ಇಂದು ನಾವು ನಿಮಗೆ ನಮ್ಮ ಆರೋಗ್ಯದ ಗುಟ್ಟು ನಮ್ಮ ಅಡುಗೆ ಮನೆಯಲಿದೆ ಎಂಬುದರ ಕುರಿತು ಹೇಳುತ್ತಿದ್ದೇವೆ. ನಮ್ಮ ಆರೋಗ್ಯ ಚೆನ್ನಾಗಿರಲು ನಾವು ಏನು ಬೇಕಾದ್ರು ಮಾಡಲು ಸಿದ್ದರಿದ್ದೇವೆ. ನಮ್ಮ ಅಡುಗೆ ಮನೆಯಲಿ ನಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲ ರೀತಿಯ ವಸ್ತುಗಳಿವೆ. ಹೌದ ನಾವು ಇಂದು ಅಡುಗೆಗೆ ಬಳಸುವ ಬೆಳ್ಳುಳ್ಳಿಯ ಬಗ್ಗೆ ಮಾತನಾಡುತ್ತಿದ್ದೇವೆ.

 ಅನೇಕ ರೋಗಗಳಿಗೆ ರಾಮಬಾಣ ಬೆಳ್ಳುಳ್ಳಿ: 

ಬೆಳ್ಳುಳ್ಳಿ ಕೆಲವು ರೋಗ ನಿರೋಧಕ ಅಂಶಗಳನ್ನು ಒಳಗೊಂಡಿದೆ, ಅದು ನಿಮ್ಮನ್ನು ಅನೇಕ ರೋಗಗಳಿಂದ ದೂರವಿರುಸುತ್ತದೆ. ಆರೋಗ್ಯಕ್ಕಾಗಿ ಬೆಳ್ಳುಳ್ಳಿಯನ್ನು ನಾವು ಹಲವು ಮಾರ್ಗಗಳ ಮೂಲಕ ಸೇವಿಸಬಹುದು, ಅದನ್ನು ಹುರಿದು ತಿನ್ನಬಹುದು, ನಿಮಗೆ ಶೀತ ಕೆಮ್ಮು ಇದ್ದಾಗ ಮಾತ್ರ ಅದನ್ನು ಹಸಿಯಾಗೆ ಸೇವಿಸಬೇಕು ನೀವು ಇದನ್ನು ಬಿಸಿನೀರಿನಲ್ಲಿ ಬೆರೆಸಿ ತಿನ್ನುವುದು ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಬೆಳ್ಳುಳ್ಳಿಯನ್ನು ಹೆಚ್ಚಾಗಿ ಅಡುಗೆಗೆ ಬಳಸಲಾಗುತ್ತದೆ, ಇದು ಸಾಂಬಾರ್ ಅನ್ನು ಮೃದುಗೊಳಿಸುತ್ತದೆ. ಪಲ್ಯಾ ಅಥವಾ ಸಾಂಬಾರ್ ನಲ್ಲಿ ಈರುಳ್ಳಿ ಜೊತೆ ಸೇರಿಸಿ ಹಾಕಲಾಗುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ನಿಮ್ಮನ್ನು ಹೃದಯ ರೋಗದಿಂದ ರಕ್ಷಿಸಲು ಬೇಕು ಬೆಳ್ಳುಳ್ಳಿ:

ಬೆಳ್ಳುಳ್ಳಿ ನಿಮ್ಮನ್ನು ಹೃದಯ ರೋಗದಿಂದ ರಕ್ಷಿಸಲು ತುಂಬಾ ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿ ಜೊತೆ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಿಮ್ಮ ದೇಹದ ರಕ್ತ ಪರಿಚಲನೆ ಕಾಪಾಡುತ್ತದೆ ಮತ್ತು ನೀವು ಈ ಸಮಸ್ಯೆಗಳಿಂದ ದೂರವಿರಬಹುದು.

ಮಲಬದ್ಧತೆ ನಿವಾರಿಸಿ ಬೆಳ್ಳುಳ್ಳಿ: 

ಮಲಬದ್ಧತೆ ಸಮಸ್ಯೆ ಅನುಭವಿಸುತ್ತಿರುವವರು ಬೆಳ್ಳುಳ್ಳಿ ಸೇವನೆ ಮಾಡಬಹುದು. ಇದಕ್ಕಾಗಿ ನೀವು ಕಚ್ಚಾ ಬೆಳ್ಳುಳ್ಳಿಯನ್ನು ಬಿಸಿ ನೀರಿನಲ್ಲಿ ಸೇರಿಸಿ ತಿನ್ನಬೇಕು. ಹೀಗೆ ಮಾಡುವುದರಿಂದ ನಿಮ್ಮ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ನೀವು ಅದನ್ನು ಸ್ವಲ್ಪ ಸಮಯದವರೆಗೆ ಸೇವಿಸಬೇಕು.

ನಿಮ್ಮ ಮೆದುಳು ತೀಕ್ಷ್ಣಗೊಳಿಸುತ್ತದೆ ಬೆಳ್ಳುಳ್ಳಿ: 

ನಿಮ್ಮ ಮೆದುಳು ವೇಗವಾಗಿ ಕೆಲಸ ಮಾಡಲು ಬೆಳ್ಳುಳ್ಳಿ ಸೇವಿಸಿ. ಬೆಳ್ಳುಳ್ಳಿಯನ್ನ ಬೆಚ್ಚಗಿನ ನೀರಿನಲ್ಲಿ ಬೆಳ್ಳುಳ್ಳಿ ಹಾಕಿಕೊಂಡು ತಿನ್ನುವುದರಿಂದ ನಿಮ್ಮ ಮೆದುಳಿನ ಕೆಲಸ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಸ್ಮರಣ ಶಕ್ತಿಯನ್ನ ಹೆಚ್ಚಿಸುತ್ತದೆ. ನಿಯಮಿತವಾಗಿ ನೀವು ಸುಮಾರು ಎರಡು ವಾರಗಳ ಕಾಲ ಬಿಸಿ ನೀರಿನಲ್ಲಿ ಬೆಳ್ಳುಳ್ಳಿಯನ್ನು ಬಳಸಿದರೆ, ಅದರ ಪ್ರಯೋಜನ ನೀವು ಪಡೆಯಬಹುದು.

No comments:

Post a Comment