Friday 20 August 2021

ವ್ಯಾಕ್ಸಿನೇಷನ್ ಪಡೆಯುವ ಮೊದಲು ಮತ್ತು ನಂತ್ರ ಏನು ತಿನ್ನಬೇಕು, ಏನು ತಿನ್ನಬಾರದು? ಇಲ್ಲಿದೆ ತಜ್ಞರ ಸಲಹೆ!

 

ಕೇಂದ್ರ ಸರ್ಕಾರವು ವ್ಯಾಕ್ಸಿನೇಷನ್(Vaccination) ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ. ದೇಶಾದ್ಯಂತ ಕೋಟ್ಯಂತರ ಜನರು ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ ಮತ್ತು ಲಕ್ಷಾಂತರ ಜನರು ಲಸಿಕೆ ಕೇಂದ್ರಗಳಿಗೆ ಹೋಗುತ್ತಿದ್ದಾರೆ. ಲಸಿಕೆ ಪಡೆದ ನಂತರ, ನೀವು ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗದಂತೆ ತಡೆಯಲು ನೀವು ಸೇವಿಸುವ ಆಹಾರವು ಸಹ ಪ್ರಮುಖ ಪಾತ್ರ ವಹಿಸುತ್ತದೆ.

ಲಸಿಕೆ ಪಡೆಯುವ ಮೊದಲು ಕುಡಿಯಿರಿ ಸಾಕಷ್ಟು ನೀರು: 
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಕರೋನಾ ವ್ಯಾಕ್ಸಿನ್ ಪಡೆಯುವ ಮೊದಲು ಮತ್ತು ನಂತರ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದರ ಬಗ್ಗೆ ವರದಿ ಮಾಡಿದೆ. ನೀವು ಲಸಿಕೆ ಹಾಕಿಸಿಕೊಳ್ಳುವ ಮೊದಲು ಸಾಕಷ್ಟು ನೀರು ಕುಡಿಯಿರಿ, ಕಲ್ಲಂಗಡಿ, ಸೌತೆಕಾಯಿ ಮತ್ತು ಹಣ್ಣುಗಳನ್ನು ಸೇವಿಸಿ. ಇದರಿಂದ ಲಸಿಕೆಯಿಂದ ಉಂಟಾಗುವ ಅಡ್ಡಪರಿಣಾಮಗಳು ಉನ್ನತಾಗುತ್ತವೆ ಎಂಬ  ಭಯ ಕಡಿಮೆಯಾಗುತ್ತದೆ. 

ಮದ್ಯಪಾನದಿಂದ ದೂರವಿರಿ:
ಲಸಿಕೆಯ ನಂತರ ಆಲ್ಕೋಹಾಲ್ ಅನ್ನು ಸೇವಿಸಬೇಡಿ ಏಕೆಂದರೆ ಇದು ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡುತ್ತದೆ, ಇದರಿಂದಾಗಿ ಲಸಿಕೆಯ ಅಡ್ಡಪರಿಣಾಮಗಳು ಹೆಚ್ಚಾಗಬಹುದು. ಆಲ್ಕೊಹಾಲ್ ರಿಸರ್ಚ್ ಎಂಬ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಲಸಿಕೆ ಹಾಕಿದ ನಂತರ ಆಲ್ಕೊಹಾಲ್ ಕುಡಿಯುವುದರಿಂದ ನಿಮ್ಮಲ್ಲಿರುವ ರೋಗ ನಿರೋಧಕ ಶಕ್ತಿ ಕುಂಟಿತಗೊಳ್ಳುತ್ತದೆ.

ಸಕ್ಕರೆ ಮಿಶ್ರಿತ ಆಹಾರಗಳಿಂದ ದೂರವಿರಿ: 
ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೋವಿಡ್ ಲಸಿಕೆ ಪಡೆದ  ನಂತರ ನೀವು ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುವ ಸಂಸ್ಕರಿಸಿದ ಆಹಾರಗಳಿಂದ ದೂರವಿರಬೇಕು. ಜರ್ನಲ್ ಆಫ್ ಕ್ಲಿನಿಕಲ್ ಸ್ಲೀಪ್ ಮೆಡಿಸಿನ್‌ನ ಅಧ್ಯಯನದ ಪ್ರಕಾರ, ಕರೋನಾ ಲಸಿಕೆ ಪಡೆದ ನಂತರ ಅತಿಯಾದ ಸಕ್ಕರೆ ಮಿಶ್ರಿತ ಆಹಾರದಿಂದ ದೂರವಿರಬೇಕು, ಇಲ್ಲದಿದ್ದರೆ ಒತ್ತಡ ಮತ್ತು ಆತಂಕ ಉಂಟಾಗುತ್ತದೆ ಮತ್ತು ನಿದ್ರೆಗೆ ಇದು ಅಡ್ಡಪರಿಣಾಮವಾಗುತ್ತದೆ.

ಧಾನ್ಯಗಳು ಮತ್ತು ನಾರಿನಂಶವಿರುವ ಆಹಾರ ಸೇವಿಸಿ: 
ಕರೋನಾ(Corona) ಲಸಿಕೆ ಪಡೆದ ನಂತರ, ಸಾಧ್ಯವಾದಷ್ಟು ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ. ಇದಕ್ಕೆ ಧಾನ್ಯಗಳು ಮತ್ತು ಫೈಬರ್ ಭರಿತ ಆಹಾರ ಸವಿಸುವುದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಮೆರಿಕದ ಸಿಡಿಸಿ (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್) ಪ್ರಕಾರ, ಲಸಿಕೆ ತೆಗೆದುಕೊಂಡ ನಂತರ ಕೆಲವರಲ್ಲಿ ಸುಂದಾಗುವ ಲಕ್ಷಣಗಳು ಕಂಡು ಬರುತ್ತವೆ. ಇಂತಹ ಸಂಧರ್ಭದಲ್ಲಿ ಸಾಕಷ್ಟು ನೀರು ಕುಡಿಯುವುದರಿಂದ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಈ ಸಮಸ್ಯೆಗಳನ್ನು ತಡೆಯಬಹುದು.

 

No comments:

Post a Comment