Thursday 26 August 2021

ತಮಿಳುನಾಡು: ಸರ್ಕಾರಿ ಶಾಲೆಗಳಲ್ಲಿ ಕಲಿತವರಿಗೆ ಶೇ 7.5 ಪ್ರಾಶಸ್ತ್ಯ ಕೋಟಾ.

 

ಚೆನ್ನೈ  : ಸರ್ಕಾರಿ ಶಾಲೆಯಲ್ಲಿ 6 ರಿಂದ 12ನೇ ತರಗತಿವರೆಗೆ ಕಲಿತ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಶೇ 7.5ರಷ್ಟು ಪ್ರಾಶಸ್ತ್ಯ ಕೋಟಾವನ್ನು ತಮಿಳುನಾಡು ಸರ್ಕಾರ ನಿಗದಿಪಡಿಸಿದೆ.

ಎಂಜಿನಿಯರಿಂಗ್, ಕೃಷಿ, ಪಶುಸಂಗೋಪನೆ, ಕಾನೂನು ಮತ್ತು ಇತರೆ ವೃತ್ತಿಪರ ಪದವಿ ಕೋರ್ಸ್‌ಗಳಿಗೆ ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಈ ಮೀಸಲು ಪ್ರಮಾಣ ಅವಕಾಶ ಕಲ್ಪಿಸಲಿದೆ.

ವಿಧಾನಸಭೆಯಲ್ಲಿ ಈ ಬಗ್ಗೆ ಮಸೂದೆ ಮಂಡಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು, 'ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಮುರುಗೇಶನ್‌ ನೇತೃತ್ವದ ಆಯೋಗದ ಶಿಫಾರಸು ಆಧರಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದರು.

ಕಳೆದ ಹಲವು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದ ಕೆಲವರಷ್ಟೇ ವೃತ್ತಿಪರಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. 2021ರಲ್ಲಿ ಅಣ್ಣಾ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಪ್ರಮಾಣ ಕೇವಲ ಶೇ 0.83. ಅಂತೆಯೇ, ಸರ್ಕಾರಿ ಶಾಲೆಗಳಲ್ಲಿ ಕಲಿತ ಶೇ 6.31ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಸಂಸ್ಥೆಗಳಿಗೆ, 0.44ರಷ್ಟು ವಿದ್ಯಾರ್ಥಿಗಳು ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳು, ಶೇ 3ರಷ್ಟು ವಿದ್ಯಾರ್ಥಿಗಳು ಪಶುಸಂಗೋಪನಾ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ ಎಂದು ಮುಖ್ಯಮಂತ್ರಿ ಮಸೂದೆ ಮಂಡಿಸಿ ಅಂಕಿ ಅಂಶ ನೀಡಿದರು.

No comments:

Post a Comment